ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ (Term) ಜುಲೈ 24ರಂದು ಮುಕ್ತಾಯವಾಗಲಿದೆ. ಕೊನೆಯ ಅಧ್ಯಕ್ಷೀಯ ಚುನಾವಣೆಯು (Presidential Election) 17 ಜುಲೈ 2017 ರಂದು ನಡೆದಿತ್ತು. ಇದೀಗ ಮುಂದಿನ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಇಂದು ಸುದ್ದಿಗೋಷ್ಠಿ (Press meet) ನಡೆಸಿದ ಕೇಂದ್ರ ಚುನಾವಣಾ ಆಯೋಗ (Election Commission Of India), ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಅದರಂತೆ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಜುಲೈ 21ಕ್ಕೆ ಮತ ಎಣಿಕೆ ಕಾರ್ಯ (Counting) ನಡೆಯಲಿದೆ. ಇನ್ನು ರಾಮನಾಥ್ ಕೋವಿಂದ್ ನಂತರ ದೇಶದ ಮುಂದಿನ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ
ನೂತನ ರಾಷ್ಟ್ರಪತಿ ಆಯ್ಕೆ ಕುರಿತಂತೆ ಕೇಂದ್ರ ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿ ನಡೆಸಿತು. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದಾರೆ.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ
ಇದೇ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜೂನ್ 29ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಜುಲೈ 18ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಇದಾದ ಬಳಿಕ ಜುಲೈ 21ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ನೂತನ ರಾಷ್ಟ್ರಪತಿ ಯಾರಾಗಲಿದ್ದಾರೆ ಅಂತ ಘೋಷಿಸಲಾಗುತ್ತದೆ. ಜುಲೈ 25ರೊಳಗೆ ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.
ಇದನ್ನೂ ಓದಿ: HDK v/s Siddaramaiah: ಸಿದ್ದರಾಮಯ್ಯ ಪತ್ರಕ್ಕೆ ಎಚ್‌ಡಿಕೆ ಕಿಡಿಕಿಡಿ, ನಿಮಗೆ ನಾಚಿಕೆ ಆಗ್ಬೇಕು ಅಂತ ವಾಗ್ದಾಳಿ!
4880 ಮತದಾರರಿಂದ ವೋಟಿಂಗ್
ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4,880 ಮತದಾರರು ಮತ ಚಲಾಯಿಸುತ್ತಾರೆ. ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
2017ರಲ್ಲಿ ಅಧಿಕಾರ ಸ್ವೀಕರಿಸಿದ್ದ ರಾಮನಾಥ್ ಕೋವಿಂದ್
ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವಧಿ ಇದೇ ಜುಲೈಗೆ ಮುಕ್ತಾಯವಾಗಲಿದೆ. 17 ಜುಲೈ 2017 ರಂದು ಹಿಂದಿನ ಚುನಾವಣೆ ನಡೆದಿತ್ತು. 2017ರ ಚುನಾವಣೆಯಲ್ಲಿ ಸುಮಾರು ಶೇ.50 ರಷ್ಟು ಮತಗಳು ಎನ್‌ಡಿಎ ಪರವಾಗಿ ಇದ್ದವು. ಒಟ್ಟು 4,880 ಮತದಾರರಲ್ಲಿ 4,109 ಶಾಸಕರು ಮತ್ತು 771 ಸಂಸದರು ಮತ ಚಲಾಯಿಸಿದ್ದರು.
ರಾಷ್ಟ್ರಪತಿ ರೇಸ್‌ನಲ್ಲಿ ಯಾರ್ಯಾರಿದ್ದಾರೆ?
ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂದುವರಿತಾರೆ ಅಂತ ಹೇಳಲಾಗುತ್ತಿದೆ. ಜೊತೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಹೆಸರೂ ರಾಷ್ಟ್ರಪತಿ ಹುದ್ದೆಯ ರೇಸ್‌ನಲ್ಲಿ ಇದೆ. ಮತ್ತೊಂದೆಡೆ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೆಸರು ಕೇಳಿ ಬಂದಿದೆ. ಅತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: High Court Judge: ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸಿ.ಎಂ. ಪೂಣಚ್ಚ ನೇಮಕ
ಬಿಜೆಪಿ ಅಭ್ಯರ್ಥಿಗೆ ಸಿಗುತ್ತಾ ಗೆಲುವು?
ರಾಷ್ಟ್ರಪತಿಯಾಗಿ ತಾನು ಬಯಸುವ ಅಭ್ಯರ್ಥಿ ಆಯ್ಕೆ ಮಾಡುವ ಸ್ಥಿತಿಯಲ್ಲಿ ಬಿಜೆಪಿ ಇದೆ. ವಿವಿಧ ರಾಜ್ಯಗಳ ಅಂಕಿಅಂಶ ಆಧರಿಸಿದರೆ ಸದ್ಯ ಬಿಜೆಪಿ 1,431 ಶಾಸಕರು ಮತ್ತು ಕಾಂಗ್ರೆಸ್ 766 ಶಾಸಕರ ಬಲ ಹೊಂದಿವೆ. ಬಿಜೆಪಿ, ಕಾಂಗ್ರೆಸ್‌ಯೇತರ ಪಕ್ಷಗಳ ಶಾಸಕರ ಬಲ 1,923 ಆಗಿದೆ. ಎನ್‌ಡಿಎ ಲೋಕಸಭೆಯಲ್ಲಿ 334, ರಾಜ್ಯಸಭೆಯಲ್ಲಿ 115 ಸದಸ್ಯರನ್ನು ಹೊಂದಿದೆ. ಬಿಜೆಪಿಯ 9 ನಾಮಕರಣ ಸದಸ್ಯರಿದ್ದು, ಅವರಿಗೆ ಮತದಾನದ ಹಕ್ಕಿಲ್ಲ. ಸಂಸದರ ಪ್ರತಿ ಮತದ ಮೌಲ್ಯವನ್ನು 708 ಎಂದು ನಿಗದಿಪಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ