Mr Ballot Box: ರಾಷ್ಟ್ರಪತಿ ಚುನಾವಣೆ ಅಂದ್ರೆ ಸುಮ್ನೇನಾ? ವಿಮಾನ ಪ್ರಯಾಣ ಮಾಡೋ ಬ್ಯಾಲಟ್​ ಬಾಕ್ಸ್​ಗೂ ಇದೆ ಟಿಕೆಟ್

Presidential Election: ರಾಷ್ಟ್ರಪತಿ ಚುನಾವಣೆಯಲ್ಲಿ ಬ್ಯಾಲಟ್ ಬಾಕ್ಸ್​ ಕೂಡಾ ವಿಮಾನದಲ್ಲಿಯೇ ಪ್ರಯಾಣ ಮಾಡುತ್ತೆ, ಬಿಟ್ಟಿಯಾಗಿ ಅಲ್ಲ, ಮಿಸ್ಟರ್ ಬ್ಯಾಲಟ್ ಬಾಕ್ಸ್​ಗೂ ಇದೆ ಟಿಕೆಟ್!

ಬ್ಯಾಲೆಟ್ ಬಾಕ್ಸ್​ಗಳಿಗೆ ಪ್ರತ್ಯೇಕ ಸೀಟ್

ಬ್ಯಾಲೆಟ್ ಬಾಕ್ಸ್​ಗಳಿಗೆ ಪ್ರತ್ಯೇಕ ಸೀಟ್

  • Share this:
ದೆಹಲಿ(ಜು.19): ರಾಷ್ಟ್ರಪತಿ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ (NDA) ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿ ಮುಚ್ಚಲಾಗಿತ್ತು. ಬ್ಯಾಲೆಟ್ ಬಾಕ್ಸ್ ರಾಜ್ಯ ರಾಜಧಾನಿಗಳಿಂದ ದೆಹಲಿಗೆ  (Delhi) ಹಿಂದಿರುಗಲು 'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಎಂಬ ಹೆಸರಿನಲ್ಲಿ ಪ್ರತ್ಯೇಕ ವಿಮಾನ ಟಿಕೆಟ್‌ಗಳನ್ನು (Ticket) ಕಾಯ್ದಿರಿಸಲಾಗಿತ್ತು. ಹೌದು, ಅಧಿಕಾರಿಗಳಿಗೆ ಅಷ್ಟೇ ಅಲ್ಲ, ಬ್ಯಾಲೆಟ್ ಬಾಕ್ಸ್​ಗಳಿಗೂ ಮಿಸ್ಟರ್ ಬ್ಯಾಲೆಟ್ ಬಾಕ್ಸ್ (Mr Ballot Box) ಎನ್ನುವ ಹೆಸರಿನಲ್ಲಿ ಮುಂಗಡ ವಿಮಾನ ಟಿಕೆಟ್​ಗಳನ್ನು ಕಾಯ್ದಿರಿಸಲಾಗಿತ್ತು. ಭಾರತೀಯ ಚುನಾವಣಾ ಆಯೋಗವು (ECI) ಮಂಗಳವಾರ ರಾಷ್ಟ್ರಪತಿ ಚುನಾವಣೆಗಾಗಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾಧಿಕಾರಿಗಳೊಂದಿಗೆ ಬ್ಯಾಲೆಟ್ ಬಾಕ್ಸ್‌ಗಳನ್ನು ಕಳುಹಿಸಿದೆ.

ಬ್ಯಾಲೆಟ್ ಬಾಕ್ಸ್‌ಗಳನ್ನು ಪ್ರಯಾಣಕ್ಕಾಗಿ 'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಎಂಬ ಹೆಸರಿನಲ್ಲಿ ಪ್ರತ್ಯೇಕ ಟೂ ಸೈಡ್ ವಿಮಾನ ಟಿಕೆಟ್‌ಗಳೊಂದಿಗೆ ಕಾಯ್ದಿರಿಸಲಾಗಿತ್ತು, ಇದನ್ನು ಮೊದಲು ಮೇಲ್ವಿಚಾರಣಾ ಅಧಿಕಾರಿಗಳ ಹ್ಯಾಂಡ್ ಬ್ಯಾಗೇಜ್‌ನಂತೆ ಮಾಡಲಾಗುತ್ತಿತ್ತು.

ಇಂದು ಮುಂಜಾನೆ, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಅವರು 'ವಿವಿಧ ರಾಜ್ಯಗಳ ಸಹಾಯಕ ಚುನಾವಣಾಧಿಕಾರಿಗಳು ಇಂದು ಸಂಜೆಯೇ ರಸ್ತೆಗಳು ಮತ್ತು ವಿಮಾನಗಳ ಮೂಲಕ ಮೊಹರು ಮಾಡಿದ ಮತಪೆಟ್ಟಿಗೆಗಳೊಂದಿಗೆ ಬರಲು ಪ್ರಾರಂಭಿಸುತ್ತಾರೆ.

ವಿಮಾನ ನಿಲ್ದಾಣದಿಂದ ಸಂಸತ್ ಭವನಕ್ಕೆ ಸುರಕ್ಷಿತ ಸಾರಿಗೆಗೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಗಮನಾರ್ಹವಾಗಿ, ಮತದಾನದ ಮತಪೆಟ್ಟಿಗೆಗಳು ಮತ್ತು ಇತರ ಸಾಮಗ್ರಿಗಳನ್ನು ರಾಜ್ಯಸಭೆಯಲ್ಲಿ ಚುನಾವಣಾ ಅಧಿಕಾರಿ (RO) ಬಳಿ ಸುಮಾರು 7 ಗಂಟೆಗೆ ಠೇವಣಿ ಮಾಡಲಾಯಿತು.

ಶೇ.99.18ರಷ್ಟು ಮತದಾನ

ಜು.18ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಶೇ.99.18ರಷ್ಟು ಮತದಾನವಾಗಿದೆ. ಮಾಧ್ಯಮಗೋಷ್ಠಿಯಲ್ಲಿ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಡಿ ಮಾತನಾಡಿ, "16ನೇ ರಾಷ್ಟ್ರಪತಿ ಚುನಾವಣೆಗೆ ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. 727 ಸಂಸತ್ ಸದಸ್ಯರು ಮತ್ತು 9 ಶಾಸಕರು ಸೇರಿದಂತೆ 736 ಮತದಾರರಿಗೆ ಚುನಾವಣಾ ಆಯೋಗವು ಅನುಮತಿ ನೀಡಿದೆ. 730 ಮಂದಿ ಮತ ಚಲಾಯಿಸಿದರು. ಶೇ.99.18ರಷ್ಟು ಮತದಾನವಾಗಿದೆ ಎಂದಿದ್ದರು.

ಇದನ್ನೂ ಓದಿ: Explained: ಮಂಕಿಪಾಕ್ಸ್ ಬರದಂತೆ ತಡೆಯೋದು ಹೇಗೆ? ಬಂದರೆ ಏನು ಮಾಡಬೇಕು?

ಒಟ್ಟು 4,796 ಮತದಾರರಲ್ಲಿ ಶೇಕಡಾ 99 ರಷ್ಟು ಜನರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ECI ಗಮನಿಸಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಶೇ 100ರಷ್ಟು ಮತದಾನವಾಗಿದೆ.

ಸ್ಟ್ರಾಂಗ್ ರೂಂನಲ್ಲಿ ಭದ್ರ

ಮಿಸ್ಟರ್ ಬ್ಯಾಲಟ್ ಬಾಕ್ಸ್ ನ್ನು ಕಟ್ಟುನಿಟ್ಟಿನ ವೀಡಿಯೋಗ್ರಫಿ ಸಹಿತ ಸ್ಟ್ರಾಂಗ್ ರೂಮ್ ಗಳಲ್ಲಿ ಇರಿಸಲಾಗುತ್ತದೆ. ಚುನಾವಣೆ ಮುಕ್ತಾಯಗೊಂಡ ಬಳಿಕ ಬ್ಯಾಲಟ್ ಬಾಕ್ಸ್ ಹಾಗೂ ಇತರ ಚುನಾವಣಾ ಸಾಮಗ್ರಿಗಳನ್ನು ರಾಜ್ಯಸಭಾ ಸಚಿವಾಲಯದ ರಿಟರ್ನಿಂಗ್ ಆಫೀಸರ್ ನ ಕಚೇರಿಗೆ ತಲುಪಿಸಲಾಗುತ್ತದೆ.

ಜು.21ರಂದು ಮತ ಎಣಿಕೆ

ರಾಷ್ಟ್ರಪತಿಗಳ ಚುನಾವಣೆಯ ಮತ ಎಣಿಕೆ ಜು.21 ರಂದು ನಡೆಯಲಿದ್ದು, ಜು.24 ಕ್ಕೆ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಪೂರ್ಣಗೊಳ್ಳಲಿದೆ. ಸಂಸದರು ಹೊಸ ರಾಷ್ಟ್ರಪತಿಗಳ ಆಯ್ಕೆಗಾಗಿ ಸಂಸತ್ ಭವನದಲ್ಲೇ ಮತ ಚಲಾಯಿಸಲಿದ್ದಾರೆ

ಇದನ್ನೂ ಓದಿ: Pakistan Goat Market: IITಯಂತೆ ಶಿಕ್ಷಣ ಸಂಸ್ಥೆ ಕಟ್ಟೋಕೆ ಹೊರಟ ಪಾಕ್, ಆಗಿದ್ದು ಮಾತ್ರ ಆಡಿನ ಮಾರ್ಕೆಟ್

ಸಂವಿಧಾನದಲ್ಲಿ ರಾಷ್ಟ್ರಪತಿ ಬಗ್ಗೆ ಉಲ್ಲೇಖ

ಭಾರತದ ಸಂವಿಧಾನದ 52ನೇ ವಿಧಿಯು ರಾಷ್ಟ್ರಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೊಂದಿರಲು ನಿರ್ದೇಶಿಸುತ್ತದೆ. ರಾಷ್ಟ್ರಪತಿಯವರು ಸಂವಿಧಾನ ಮುಖ್ಯಸ್ಥರೂ, ರಾಷ್ಟ್ರದ ಪ್ರಥಮ ಪ್ರಜೆಯೂ, ಕಾರ್ಯಾಂಗದ ಮುಖ್ಯಸ್ಥರೂ ಹಾಗೂ ಭಾರತದ ವಾಯುಪಡೆ, ಭೂಪಡೆ, ಮತ್ತು ನೌಕಾಪಡೆಯ ಮಹಾದಂಡನಾಯಕರೂ ಆಗಿರುತ್ತಾರೆ. ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು ವಿಶೇಷ ಅಧಿಕಾರಗಳನ್ನು ಹೊಂದಿದ್ದು ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ.

ರಾಷ್ಟ್ರಪತಿಯಾಗಲು ಬೇಕಾದ ಅರ್ಹತೆಗಳೇನು?

ಭಾರತೀಯ ಸಂವಿಧಾನದ 52ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ರಾಷ್ಟ್ರಪತಿಯಾಗಲು ಭಾರತೀಯ ಪ್ರಜೆಯಾಗಿರಬೇಕು. ಇನ್ನು ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು. ಇನ್ನು ಕನಿಷ್ಠ 35 ವರ್ಷ ಪೂರ್ಣವಾಗಿರುವ ವ್ಯಕ್ತಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡಬಹುದು.
Published by:Divya D
First published: