HOME » NEWS » National-international » PRESIDENT RAMNATH KOVIND NOMINATES FORMER SUPREME COURT CHIEF JUSTICE RANJANGOGOI TO RAJYA SABHA HK

ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್​​​ ಗೊಗೋಯ್​ ರಾಜ್ಯಸಭೆಗೆ ನಾಮನಿರ್ದೇಶನ

ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ನಾಮ‌ ನಿರ್ದೇಶನ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆದೇಶ ಹೊರಡಿಸಿದ್ದಾರೆ

news18-kannada
Updated:March 16, 2020, 11:03 PM IST
ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್​​​ ಗೊಗೋಯ್​ ರಾಜ್ಯಸಭೆಗೆ ನಾಮನಿರ್ದೇಶನ
ರಂಜನ್​​ ಗೊಗೋಯ್​​
  • Share this:
ನವದೆಹಲಿ(ಮಾ.16) : ಸುಪ್ರೀಂ ಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ನಾಮ‌ ನಿರ್ದೇಶನ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆದೇಶ ಹೊರಡಿಸಿದ್ದಾರೆ. 

2018 ಅಕ್ಟೋಬರ್ 3 ರಂದು ದೇಶದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯ್ ಅವರು ಅಧಿಕಾರ ಸ್ವೀಕರಿಸಿದ್ದರು. 2019ರ ನವೆಂಬರ್  17ರಂದು ನಿವೃತ್ತಿ ಹೊಂದಿದ್ದರು.ನಿವೃತ್ತ ನ್ಯಾಯಾಧೀಶರೊಬ್ಬರನ್ನು ರಾಷ್ಟ್ರಪತಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ

ಮೂಲತಃ ಅಸ್ಸಾಂನವರಾದ ರಂಜನ್ ಗೊಗೋಯ್​​ ಅವರು ಅಸ್ಸಾಂನ ಮಾಜಿ ಸಿಎಂ ಕೇಶವ್ ಚಂದ್ರ ಗೊಗೋಯ್​​ ಅವರ ಪುತ್ರರಾಗಿದ್ದು, ಈಶಾನ್ಯ ರಾಜ್ಯದ ಮೊದಲ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Youtube Video

 
First published: March 16, 2020, 10:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories