Budget Session: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ; ಇಲ್ಲಿದೆ ಪ್ರಮುಖಾಂಶಗಳು

ಇಡೀ ಜಗತ್ತನ್ನು ಕೋವಿಡ್ -19 ನಿಂದ ಮುಕ್ತಗೊಳಿಸುವಲ್ಲಿ ಮತ್ತು ಕೋಟಿಗಟ್ಟಲೆ ಜೀವಗಳನ್ನು ಉಳಿಸುವಲ್ಲಿ ಮೇಡ್ ಇನ್ ಇಂಡಿಯಾ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. 

ರಾಷ್ಟ್ರಪತಿ ರಾಮನಾಥ್​ ಕೋವಿಂದ್​​​ (ಚಿತ್ರ ಕೃಪೆ: ಎಎನ್ಐ)

ರಾಷ್ಟ್ರಪತಿ ರಾಮನಾಥ್​ ಕೋವಿಂದ್​​​ (ಚಿತ್ರ ಕೃಪೆ: ಎಎನ್ಐ)

  • Share this:
    ನವದೆಹಲಿ (ಜ. 31):  ಇಂದಿನಿಂದ ಬಜೆಟ್​ ಅಧಿವೇಶನ (Budget Session) ಪ್ರಾರಂಭವಾಗಿದ್ದು, ಮೊದಲ ದಿನವಾದ ಇಂದು ರಾಷ್ಟ್ರಪತಿಗಳು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್ (Ram Nath Kovind)​​ ಅವರು, ಮೋದಿ ಸರ್ಕಾರದ ಕೋವಿಡ್ ಲಸಿಕೆ (Covid Vaccine) ಅಭಿಯಾನದ ಸಾಧನೆಗಳನ್ನು ಶ್ಲಾಘಿಸಿದರು. ದೇಶದಲ್ಲಿ ಸುಮಾರು 150 ಕೋಟಿ ಡೋಲ್​ ಲಸಿಕೆ ನೀಡಲಾಗಿದ್ದು. ಶೇ 70 ರಷ್ಟು ಜನರು ಎರಡನೇ ಡೋಸ್​ ಲಸಿಕೆ ಪಡೆದಿದ್ದಾರೆ. 64,000 ಕೋಟಿ ರೂಪಾಯಿಗಳ ಪಿಎಂ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಮೂಲಕ ಭವಿಷ್ಯದಲ್ಲಿನ ಆರೋಗ್ಯ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ದೇಶವನ್ನು ಸಿದ್ಧಪಡಿಸುತ್ತದೆ ಎಂದು ತಿಳಿಸಿದರು.

    ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ಮೆಚ್ಚುಗೆ
    ಕೋವಿಡ್-19 ವಿರುದ್ಧ ಹೋರಾಡಲು ರಾಷ್ಟ್ರವು ಸಜ್ಜಾಗಿದೆ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದ ಸಾಮರ್ಥ್ಯ ಲಸಿಕೆ ಕಾರ್ಯಕ್ರಮದ ಮೂಲಕ ಸ್ಪಷ್ಟವಾಗಿದೆ. ಒಂದು ವರ್ಷದೊಳಗೆ, ನಾವು 150 ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡುವ ದಾಖಲೆಯನ್ನು ಮಾಡಿದ್ದೇವೆ. ಇಂದು, ನಾವು ಗರಿಷ್ಠ ಸಂಖ್ಯೆಯ ಡೋಸ್‌ಗಳನ್ನು ನೀಡುವ ಜಗತ್ತಿನ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ಇಡೀ ಜಗತ್ತನ್ನು ಕೋವಿಡ್ -19 ನಿಂದ ಮುಕ್ತಗೊಳಿಸುವಲ್ಲಿ ಮತ್ತು ಕೋಟಿಗಟ್ಟಲೆ ಜೀವಗಳನ್ನು ಉಳಿಸುವಲ್ಲಿ ಮೇಡ್ ಇನ್ ಇಂಡಿಯಾ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಫಾರ್ಮಾ ವಲಯವು 180 ದೇಶಗಳಿಗೆ ಔಷಧಿಗಳನ್ನು ಪೂರೈಸಿದೆ ಮತ್ತು ಈ ವಲಯವು ಅಪಾರ ಸಾಮರ್ಥ್ಯವನ್ನು ತೋರಿಸಿದೆ.

    ಕೇಂದ್ರ ಸರ್ಕಾರದ ಯೋಜನೆಗೆ ಶ್ಲಾಘನೆ
    ಇದೇ ವೇಳೆ ಸರ್ಕಾರ ಇತರ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವು, ಹರ್ ಘರ್ ಜಲ್ ಉಪಕ್ರಮ ಅಡಿಯಲ್ಲಿ ಆರು ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ನಲ್ಲಿ ನೀರನ್ನು ಪಡೆಯುತ್ತಿವೆ. ಭಾರತದ ಕೃಷಿ ರಫ್ತು ಕೂಡ ಮೂರು ಲಕ್ಷ ಕೋಟಿ ದಾಟಿದೆ.

    ಇದನ್ನು ಓದಿ: ಒಂದೇ ಐಡಿಯಲ್ಲಿ ಆಧಾರ್, ಪಾಸ್‌ಪೋರ್ಟ್‌ ಲಿಂಕ್, ಹೊಸ ಮಾದರಿ ಯೋಜನೆಗೆ ಸಿದ್ಧತೆ

    ಗ್ರಾಮೀಣ ಪ್ರದೇಶವನ್ನು ಸಬಲೀಕರಣಗೊಳಿಸಲು ಸರಕಾರ ಅವಿರತವಾಗಿ ಶ್ರಮಿಸುತ್ತಿದೆ. ದೇಶದ ರೈತರು 2020-21ರಲ್ಲಿ 30 ಕೋಟಿ ಟನ್ ಆಹಾರ ಧಾನ್ಯಗಳು ಮತ್ತು 33 ಕೋಟಿ ತೋಟಗಾರಿಕೆ ಉತ್ಪನ್ನಗಳನ್ನು ಉತ್ಪಾದಿಸಿದ್ದಾರೆ. ಪಿಎಂ-ಕಿಸಾನ್ ಮೂಲಕ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳು 1.80 ಲಕ್ಷ ಕೋಟಿ ರೂ.ಗಳನ್ನು ಪಡೆದಿವೆ. ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಕಂಡುಬಂದಿವೆ.

    ಸರ್ಕಾರವು 433 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸಿದೆ, ಇದು 50 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವನ್ನು ಪಡೆಯಲಿದ್ದಾರೆ.

    ಇದನ್ನು ಓದಿ: MBBS ಸೀಟು ಸಿಕ್ಕರೂ ಬಾಲ್ಯದ ಕನಸನ್ನು ತ್ಯಾಗ ಮಾಡುತ್ತಿದ್ದಾರೆ ಈ ವ್ಯಕ್ತಿ- ಇದೇ ನೋಡಿ ಕಾರಣ

    ಮಹಿಳೆಯರ ಸಬಲೀಕರಣ
    ದೇಶವನ್ನು ಸಬಲೀಕರಣಗೊಳಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸಾವಿರಾರು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಸರ್ಕಾರ ತರಬೇತಿ ನೀಡಿದೆ. ‘ಬ್ಯಾಂಕಿಂಗ್ ಸಖಿ’ ಮಹಿಳೆಯರು ಗ್ರಾಮೀಣ ಪ್ರದೇಶಕ್ಕೆ ಬ್ಯಾಂಕಿಂಗ್ ಸೇವೆಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಲಿಂಗ ಸಮಾನತೆಯನ್ನು ತರುವ ಸಲುವಾಗಿ, ಸರ್ಕಾರವು ಮಹಿಳೆಯರ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಸಿದೆ.

    ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರ ಮಹಿಳೆಯರಿಗೆ ರೂಪಿಸಿರುವ ಅನೇಕ ಯೋಜನೆಯ ಯಶಸ್ಸನ್ನು ನಾವು ನೋಡುತ್ತಿದ್ದೇವೆ. ಮುದ್ರಾ ಯೋಜನೆ ಮೂಲಕ ಮಹಿಳೆಯರ ಉದ್ಯಮಶೀಲತೆ ಮತ್ತು ಕೌಶಲ್ಯಕ್ಕೆ ಉತ್ತೇಜನ ನೀಡಲಾಗುತ್ತಿದೆ. ಬೇಟಿ ಬಚಾವೋ, ಬೇಟಿ ಪಢಾವೋ ಅಂತಹ ಅನೇಕ ಅಭಿವೃದ್ಧಿ ಯೋಜನೆಯ ಫಲಿತಾಂಶ ಅನ್ನು ಇಂದು ನಾವು ಕಾಣುತ್ತಿದ್ದೇವೆ.

    ಎಲ್ಲಾ 33 ಸೈನಿಕ ಶಾಲೆಗಳು ಈಗ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಲು ಪ್ರಾರಂಭಿಸಿರುವುದು ಸಂತೋಷದ ವಿಷಯ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಯಲ್ಲಿ ಮಹಿಳಾ ಕೆಡೆಟ್‌ಗಳ ಪ್ರವೇಶವನ್ನು ಸರ್ಕಾರ ಅನುಮೋದಿಸಿದೆ. ಮಹಿಳಾ ಕೆಡೆಟ್‌ಗಳ ಮೊದಲ ಬ್ಯಾಚ್ ಜೂನ್ 2022 ರಲ್ಲಿ ಎನ್‌ಡಿಎಗೆ ಬರಲಿದೆ ಎಂದರು.
    Published by:Seema R
    First published: