President Poll: ದೇವೇಗೌಡರು ರಾಷ್ಟ್ರಪತಿ ಆಗ್ತಾರಾ? ಮುನ್ನೆಲೆಗೆ ಬಂದಿದೆ ಹೆಸರು, ಹೆಚ್ಚಿದ ಕುತೂಹಲ

HD Deve Gowda: ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ತೃತೀಯ ರಂಗದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯ ದೇಶದ ಗಮನ ಸೆಳೆಯುತ್ತಿರುವ ವಿಷಯ. ತೃತೀಯ ರಂಗದಿಂದ ಕರ್ನಾಟಕದ ಹೆಚ್ ಡಿ ದೇವೇಗೌಡರ ಹೆಸರು ಮುನ್ನೆಲೆಗೆ ಬಂದಿದೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

 • Share this:
  ದೆಹಲಿ: ದೇಶದಲ್ಲಿ ರಾಷ್ಟ್ರಪತಿ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ಭಾರತದ ಮುಂದಿನ ರಾಷ್ಟ್ರಪತಿ (Next President Of India) ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ದೇಶದ ಜನರು ಕಾಯುತ್ತಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಜುಲೈ 18ರಂದು ಹೊಸ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇದೀಗ ಅಚ್ಚರಿಯ ನಡೆಯೊಂದರಲ್ಲಿ ಮಾಜಿ ಪ್ರಧಾನಿ, ಕರ್ನಾಟಕದ ಹೆಚ್.ಡಿ.ದೇವೇಗೌಡ (HD Deve Gowda) ಅವರು ರಾಷ್ಟ್ರಪತಿ ಆಗಲಿದ್ದಾರಾ? ಎಂಬ ಪ್ರಶ್ನೆಯೊಂದು ದೆಹಲಿಯಿಂದ  ರವಾನೆಯಾಗಿದೆ.  ಹೆಚ್ ಡಿ ದೇವೇಗೌಡ ಅವರ ಹೆಸರು ರಾಷ್ಟ್ರಪತಿ ರೇಸ್​ನಲ್ಲಿ ತೀವ್ರ ಮುನ್ನೆಲೆಗೆ ಬಂದಿದೆ. 

  ತೃಣಮೂಲ ಕಾಂಗ್ರೆಸ್​ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಹಲವು ಪಕ್ಷಗಳ ಮುಖ್ಯಸ್ಥರನ್ನು ಸಂಪರ್ಕಿಸಿರುವ ಅವರು ಎಲ್ಲರನ್ನೂ ಒಗ್ಗೂಡಿಸಿ ಒಂದು ಮೀಟಿಂಗ್ ಕರೆದಿದ್ದಾರೆ.

  ಕರ್ನಾಟಕದಿಂದ ಇವರಿಗೆ ಮಾತ್ರ ಆಹ್ವಾನ!
  ಈ ಸಭೆಗೆ ಕರ್ನಾಟಕದಿಂದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿದ್ದಾರೆ ದೀದಿ.

  ಶರದ್ ಪವಾರ್ ಸ್ಪರ್ಧಿಸಲ್ಲ
  ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿತ್ತು. ಇಷ್ಟು ದಿನ ಶರದ್ ಪವಾರ್ ರಾಷ್ಟ್ರಪತಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿತ್ತು.  

  ಆದರೆ "ನಾನು ರಾಷ್ಟ್ರಪತಿ ಚುನಾವಣೆಯ ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ" ಅಂತ 81 ವರ್ಷದ ಮಾಜಿ ರಕ್ಷಣಾ ಸಚಿವ, ಹಿರಿಯ ರಾಜಕಾರಣಿ ಶರದ್ ಪವಾರ್ ಹೇಳಿದ್ದಾರೆ. ಹೀಗಾಗಿ ಈಗ ಕರ್ನಾಟಕದ ಹೆಚ್.ಡಿ.ದೇವೇಗೌಡ ಅವರ ಹೆಸರು ತೀವ್ರವಾಗಿ ಮುನ್ನೆಲೆಗೆ ಬಂದಿದೆ.

  ದೇವೇಗೌಡರಿಗೆ ಇದೆ ಸುದೀರ್ಘ ಅನುಭವ
  ಹೆಚ್ ಡಿ ದೇವೇಗೌಡ ಅವರು ಭಾರತದ 1996ರಿಂದ 1997ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಸದ್ಯ ಲೋಕಸಭೆಯಲ್ಲಿ ಹಾಸನ  ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಆಡಳಿತದಲ್ಲಿ  ಸುದೀರ್ಘ ಅನುಭವ ಹೊಂದಿದ್ದಾರೆ. ಅಲ್ಲದೇ ಹೆಚ್.ಡಿ.ದೇವೇಗೌಡ ಅವರು ಜಾತ್ಯಾತೀಯ ಜನತಾದಳದ ರಾಷ್ಟ್ರೀಯ ಅಧ್ಯಕ್ಷರು ಹೌದು.  ಇದೀಗ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆ ಮಾಡ್ತಾರಾ ಇಲ್ವಾ ಎಂಬುದನ್ನು ಕಾದು ನೋಡಬೇಕಿದೆ. 

  ಇದನ್ನೂ ಓದಿ: Sharad Pawar: ರಾಷ್ಟ್ರಪತಿ ಚುನಾವಣೆ ರೇಸ್‌ನಿಂದ ಹಿಂದೆ ಸರಿದ ಶರದ್ ಪವಾರ್! ಹಿರಿಯ ರಾಜಕಾರಣಿ ನಿರ್ಧಾರದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ

  ಸದ್ಯ ಹೆಚ್.ಡಿ.ದೇವೇಗೌಡ ಹೆಸರಿನ ಜೊತೆಗೆ ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರಿ ಅವರ ಹೆಸರು ಸಹ ಕೇಳಿಬರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ತೃತೀಯ ರಂಗದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯ ದೇಶದ ಗಮನ ಸೆಳೆಯುತ್ತಿರುವ ವಿಷಯವಾಗಿದೆ.

  ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿ ಯಾರು?
  ಅಲ್ಲದೇ ಇತ್ತ ಬಿಜೆಪಿ ಮತ್ತು ಕಾಂಗ್ರೆಸ್ ಸಹ ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.

  ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?

  ಶರದ್ ಪವಾರ್ ಹಿಂದೆ ಸರಿಯಲು ಏನು ಕಾರಣ?
  ಶರದ್ ಪವಾರ್ ಅವರ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಇದೆ ಎಂದು ಹೇಳಲಾಗುತ್ತಿದೆ. ವಿರೋಧ ಪಕ್ಷಗಳ ಬಳಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬೇಕಾದ ಜನಪ್ರತಿನಿಧಿಗಳ ಸಂಖ್ಯೆ ಇಲ್ಲ.. ಅಥವಾ ಮತಗಳ ಸಂಖ್ಯೆಯನ್ನು ಸಂಗ್ರಹಿಸುವ ವಿಶ್ವಾಸವಿಲ್ಲ. ಯಾಕೆಂದ್ರೆ ಬಿಜೆಪಿ ಮಾತ್ರ 300 ಸದಸ್ಯರನ್ನು ಹೊಂದಿದೆ , ಅದು ದೊಡ್ಡ ಸಂಖ್ಯೆಯಾಗಿದೆ. ಇದೇ ಕಾರಣಕ್ಕಾಗಿ ಪವಾರ್ ರಾಷ್ರ್ಪಪತಿ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
  Published by:guruganesh bhat
  First published: