• Home
 • »
 • News
 • »
 • national-international
 • »
 • Ram Mandir: ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರಾಷ್ಟ್ರಪತಿಗಳು​

Ram Mandir: ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರಾಷ್ಟ್ರಪತಿಗಳು​

ರಾಷ್ಟ್ರಪತಿ ರಾಮನಾಥ್​ ಕೋವಿಂದ್​

ರಾಷ್ಟ್ರಪತಿ ರಾಮನಾಥ್​ ಕೋವಿಂದ್​

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆ.

 • Share this:

  ನವದೆಹಲಿ (ಜ. 15): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರಕ್ಕಾಗಿ ರಾಷ್ಟ್ರಪತಿ ರಮಾನಾಥ ಕೋವಿಂದ್​ ಐದು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆವಿಎಚ್​ಪಿ ಅಂತರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್​ ಕುಮಾರ್​, ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಖಂಜಾಚಿ ಗೋವಿಂದ ದೇವ್​ ಗಿರಿ ಮತ್ತು ಮಾಜಿ ಅಧಿಕಾರಿ ನೃಪೇಂದ್ರ ಮಿಶ್ರ ಅವರನ್ನೊಳಗೊಂಡ ನಿಯೋಗವನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲಾಗಿತ್ತು. ಈ ವೇಳೆ ರಾಷ್ಟ್ರಪತಿಗಳು ಹಣ ದೇಣಿಗೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾಗಿರುವ ವಿಎಚ್​ಪಿ, ಆಡಳಿತರೂಢ ಬಿಜೆಪಿ ಪಕ್ಷದ ಸೈದ್ದಾಂತಿಕ ನಾಯಕರು ಈ ರಾಮ ಮಂದಿರ ನಿರ್ಮಾಣ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಈ ಟ್ರಸ್ಟ್​​ ಹಣ ಸಂಗ್ರಹಿಸುವುದನ್ನು ಕಡ್ಡಾಯವಾಗಿದೆ.  ರಾಷ್ಟ್ರಪತಿಗಳೊಂದಿಗೆ ಈ ಭೇಟಿಯು ದೇಶಾದ್ಯಂತ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಪಡೆಯುವ ವಿಎಚ್​ಪಿಯ ಅಭಿಯಾನದ ಭಾಗವಾಗಿದೆ.  ಈ ಕುರಿತು ಮಾತನಾಡಿರುವ ವಿಎಚ್​ಪಿ, ದೇಣಿಗೆ ಸಂಗ್ರಹಿಸುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ, 20 ಸಾವಿರಕ್ಕಿಂತ ಹೆಚ್ಚಿನ ದೇಣಿಗೆಯನ್ನು ಚೆಕ್​ ಮೂಲಕ ಪಡೆಯಲಾಗುವುದು ಎಂದರು.


  ದೇಣಿಗೆ ಸಂಗ್ರಹಿಸುವ ಅಭಿಯಾನವು 5 ಲಕ್ಷದ 25 ಸಾವಿರ ಹಳ್ಳಿಗಳಲ್ಲಿ ನಡೆಸಲಾಗುವುದು ಸಂಗ್ರಹಿಸಿದ ಹಣವನ್ನು 48ಗಂಟೆಯೊಳಗೆ ಬ್ಯಾಂಕ್​ಗಳಲ್ಲಿ ಜಮಾ ಮಾಡಲಾಗುವುದು. ಇಂದಿನಿಂದ ಅಂದರೆ ಜ .15ರಿಂದ ಈ ಅಭಿಯಾನ ಆರಂಭವಾಗಿದ್ದು ಫೆ. 27ರವರೆಗೆ ನಡೆಸಲಾಗುವುದು ಎಂದರು.


  ತೆರಿಗೆ ವಿನಾಯಿತಿ


  ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆ. ಈಗಾಗಲೇ ಕೇಂದ್ರ ಸರ್ಕಾರ ಈ ಕುರಿತು ತಿಳಿಸಿದೆ, ಟ್ರಸ್ಟ್​ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್​ 80 ಜೆ ಅಡಿಯಲ್ಲಿ ದೇಣಿಗೆ ನೀಡುವವರಿಗೆ 2020-21ನೇ ಸಾಲಿನ ತೆರಿಗೆ ವಿನಾಯಿತಿ ಪಡೆಯಲಿದ್ದಾರೆ.

  Published by:Seema R
  First published: