ತೆಲಂಗಾಣ ಅತ್ಯಾಚಾರಿಗಳ ಎನ್​ಕೌಂಟರ್ ಪ್ರಕರಣ​; ಸೋಮವಾರ ತುರ್ತು ವಿಚಾರಣೆ ಘೋಷಿಸಿದ ಹೈಕೋರ್ಟ್

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ ಶನಿವಾರ ಸಂಜೆಯ ಒಳಗಾಗಿ ಆರೋಪಿಗಳ ಶವ ಪರೀಕ್ಷೆ ನಡೆಸಬೇಕು ಹಾಗೂ ಇದರ ವಿಡಿಯೋವನ್ನು ನ್ಯಾಯಾಲಯದ ರಿಜಿಸ್ಟ್ರಾರ್ಗೆ ಸಲ್ಲಿಸಬೇಕು ಎಂದು ತಿಳಿಸಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಬೆಳಗ್ಗೆ ನಡೆಸಲಿದೆ ಎಂದು ತಿಳಿದು ಬಂದಿದೆ.

news18-kannada
Updated:December 7, 2019, 9:56 AM IST
ತೆಲಂಗಾಣ ಅತ್ಯಾಚಾರಿಗಳ ಎನ್​ಕೌಂಟರ್ ಪ್ರಕರಣ​; ಸೋಮವಾರ ತುರ್ತು ವಿಚಾರಣೆ ಘೋಷಿಸಿದ ಹೈಕೋರ್ಟ್
ಅತ್ಯಾಚಾರ ಆರೋಪಿಗಳ ಎನ್​ಕೌಂಟರ್ ನಡೆದ ಸ್ಥಳ
  • Share this:
ನವ ದೆಹಲಿ (ಡಿಸೆಂಬರ್ 07); ಶುಕ್ರವಾರ ಪೊಲೀಸರ ಗುಂಡಿಗೆ ಬಲಿಯಾದ ಪಶುವೈದ್ಯೆ ಅತ್ಯಾಚಾರಿಗಳ ಮೃತದೇಹವನ್ನು ಶನಿವಾರದ ಸಂಜೆಯ ಒಳಗಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕು ಹಾಗೂ ಇದನ್ನು ವಿಡಿಯೋ ರೆಕಾರ್ಡ್ ಮಾಡಿ ತೆಲಂಗಾಣ ಹೈಕೋರ್ಟ್ ರಿಜಿಸ್ಟರ್​ಗೆ ನೀಡಬೇಕು. ಈ ಪ್ರಕಣದ ಕುರಿತು ಸೋಮವಾರ ತುರ್ತು ವಿಚಾರಣೆ ಇದೆ ಎಂದು ಸೈಬರಾಬಾದ್ ಪೊಲೀಸರಿಗೆ ಹೈಕೋರ್ಟ್​ ದ್ವಿಸದಸ್ಯ ಪೀಠ ಖಡಕ್ ಸೂಚನೆ ನೀಡಿದೆ.

ಪೊಲೀಸರ ಗುಂಡಿಗೆ ಬಲಿಯಾದ ನಾಲ್ಕೂ ಜನ ಆರೋಪಿಗಳ ಶವವನ್ನು ಸೈಬರಾಬಾದ್ ಜಿಲ್ಲಾ ಆಸ್ಪತ್ರೆಯ ಶವಾಗಾರಾದಲ್ಲಿ ಸಂರಕ್ಷಿಸಲಾಗಿದೆ. ಅಲ್ಲದೆ, ಈ ದೇಹಗಳ ಮರಣೋತ್ತರ ಪರೀಕ್ಷೆಯನ್ನು ಸೋಮವಾರ ನಡೆಸಲು ಜಿಲ್ಲಾ ಪೊಲೀಸ್ ಅಧಿಕಾರಿಗಳು ನಿಶ್ವಯಿಸಿದ್ದರು.

ಆದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ ಶನಿವಾರ ಸಂಜೆಯ ಒಳಗಾಗಿ ಆರೋಪಿಗಳ ಶವ ಪರೀಕ್ಷೆ ನಡೆಸಬೇಕು ಹಾಗೂ ಇದರ ವಿಡಿಯೋವನ್ನು ನ್ಯಾಯಾಲಯದ ರಿಜಿಸ್ಟ್ರಾರ್ಗೆ ಸಲ್ಲಿಸಬೇಕು ಎಂದು ತಿಳಿಸಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಬೆಳಗ್ಗೆ ನಡೆಸಲಿದೆ ಎಂದು ತಿಳಿದು ಬಂದಿದೆ.

ನವೆಂಬರ್ 27 ರಂದು ನಾಲ್ಕು ಜನ ಕಾಮುಕರು ತೆಲಂಗಾಣದಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಘಟನೆ ಸಂಭವಿಸಿ ಕೇವಲ ಒಂದು ವಾರದಲ್ಲಿ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ಆತ್ಮರಕ್ಷಣೆ ಹೆಸರಿನಲ್ಲಿ ಶುಕ್ರವಾರ ಗುಂಡಿಟ್ಟು ಹತ್ಯೆ ಮಾಡಿದ್ದರು. ಪೊಲೀಸರ ಈ ಕಾರ್ಯಾಚರಣೆಗೆ ದೇಶದಾದ್ಯಂತ ಜನ ಮೆಚ್ಚು ಸೂಚಿಸಿದ್ದರೂ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಅಲ್ಲದೆ, ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುವ ಸಲುವಾಗಿ ಮಾನವ ಹಕ್ಕುಗಳ ಆಯೋಗ ವಿಶೇಷ ಅಧಿಕಾರಿಗಳ ತಂಡವನ್ನು ಸೋಮವಾರ ತೆಲಂಗಾಣಕ್ಕೆ ಕಳುಹಿಸಲಿದೆ ಎಂಬ ಮಾಹಿತಿಯೂ ಸಹ ಇದೀಗ ಲಭ್ಯವಾಗುತ್ತಿದೆ.

ಇದನ್ನೂ ಓದಿ : ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪ್ರಕರಣ; ಆಸ್ಪತ್ರೆಯಲ್ಲೇ ದುರಂತ ಅಂತ್ಯ ಕಂಡ ಯುವತಿ
First published:December 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ