• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Operation: ಆಪರೇಷನ್ ವೇಳೆ ಹೋಯ್ತು ಕರೆಂಟ್! ತ್ರೀ ಈಡಿಯಟ್ಸ್ ಸಿನಿಮಾ ಮಾದರಿಯಲ್ಲಿ ಜೀವ ಉಳಿಸಿದ ವೈದ್ಯರ ತಂಡ

Operation: ಆಪರೇಷನ್ ವೇಳೆ ಹೋಯ್ತು ಕರೆಂಟ್! ತ್ರೀ ಈಡಿಯಟ್ಸ್ ಸಿನಿಮಾ ಮಾದರಿಯಲ್ಲಿ ಜೀವ ಉಳಿಸಿದ ವೈದ್ಯರ ತಂಡ

ಮೊಬೈಲ್ ಟಾರ್ಚ್​ ಬೆಳಕಲ್ಲಿ ಶಸ್ತ್ರಚಿಕಿತ್ಸೆ

ಮೊಬೈಲ್ ಟಾರ್ಚ್​ ಬೆಳಕಲ್ಲಿ ಶಸ್ತ್ರಚಿಕಿತ್ಸೆ

ಮೊಬೈಲ್ ಟಾರ್ಚ್​ ಬಳಸಿ ಆಪರೇಷನ್​ ಮುಂದುವರಿಸುವ ಮುನ್ನ ಭಾರಿ ಚರ್ಚೆ ನಡೆಸಲಾಗಿದೆ. ಏಕೆಂದರೆ ಸಿನಿಮಾ ಬೇರೆ, ನಿಜ ಜೀವನ ಬೇರೆ. ಆದರೂ ಅನಿವಾರ್ಯವಾಗಿ ಸಿನಿಮಾದಂತೆ ಮೊಬೈಲ್ ಟಾರ್ಚ್ ಬಳಸಿ ವೈದ್ಯರ ತಂಡ 41 ವರ್ಷದ ಮಹಿಳೆಯ ಜೀವವನ್ನು ಉಳಿಸಿದೆ.

 • Local18
 • 2-MIN READ
 • Last Updated :
 • Share this:

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಧಾನಿ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ (Calcutta Medical College) ಮಂಗಳವಾರ ಭಾರೀ ಅಗ್ನಿ ಅವಘಡ ಸಂಭವಿಸಿ ಇಡೀ ಆಸ್ಪತ್ರೆ ಕತ್ತಲಾಗಿತ್ತು. ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿದ್ದ ಲೈಟ್​ಗಳೆಲ್ಲಾ ಹಾರಿ ಹೋಗಿ ಕತ್ತಲು ಕವಿದಿತ್ತು. ಇದೇ ಸಂದರ್ಭದಲ್ಲಿ ಆಪರೇಷನ್ ಥಿಯೇಟರ್‌ನಲ್ಲೂ ಲೈಟ್​ಗಳೆಲ್ಲಾ ಹಾರಿ ಹೋಗಿವೆ. ಅಲ್ಲಿ ರೋಗಿಯೊಬ್ಬನಿಗೆ ಮೂತ್ರಪಿಂಡದಲ್ಲಿದ್ದ ಗಡ್ಡೆಯನ್ನು (Tumor in the patient's kidney) ತೆಗೆಯಲು ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಆರಂಭಿಸಿತ್ತು. ಆದರೂ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆತನ ಜೀವ ಉಳಿಸಲಾಗಿದೆ.


ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಿದ್ಯುತ್ ಕಟ್


ಆಪರೇಷನ್​ ನಡೆಯುವ ವೇಳೆ ಗುಡುಗು ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಡೀ ಆಸ್ಪತ್ರೆಯಲ್ಲಿ ಕರೆಂಟ್ ಹೋಗಿದೆ. ಕಟ್ಟಡದ ಕೊಠಡಿಯಿಂದ ಹೊಗೆ ಬರಲಾರಂಭಿಸಿದೆ. ಸುರಕ್ಷತೆ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಆಪರೇಟಿಂಗ್ ಟೇಬಲ್ ಮೇಲೆ ಪ್ರಜ್ಞಾಹೀನ ರೋಗಿಯನ್ನು ಏನು ಮಾಡಬೇಕೆಂದು ವೈದ್ಯರು ಚಿಂತೆಗೀಡಾಗಿದ್ದಾರೆ. ಅದರಲ್ಲೂ ಲೈಟ್​ಗಳಯ ಯಾವಾಗ ಹಿಂತಿರುಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ.


ತ್ರೀ ಈಡಿಯಟ್ಸ್​ ಸಿನಿಮಾ ಕ್ಲೈಮ್ಯಾಕ್ಸ್​ ಸೀನ್ ರಿಪೀಟ್​


ಆ ಅಪಾಯದ ಕ್ಷಣದಲ್ಲಿ ಥಟ್ಟನೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್ ನೆನಪಾಗುವಂತೆ ಮಾಡಿದೆ. ತ್ರೀ ಈಡಿಯಟ್​ ಸಿನಿಮಾದಲ್ಲಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿದ್ಯುತ್ ಕಡಿತದ ಸಂದರ್ಭದಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯೊಂದಿಗೆ ಗರ್ಭಿಣಿಗೆ ಹೆರಿಗೆ ಮಾಡಿಸುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮಕ್ಕಳು ಮತ್ತು ತಾಯಿ ಇಬ್ಬರ ಜೀವವನ್ನು ಉಳಿಸುತ್ತಾರೆ. ಇಲ್ಲೂ ಅದೇ ರೀತಿ ಸೀನ್ ರಿಪೀಟ್ ಆಗಿದೆ.


ಇದನ್ನೂ ಓದಿ: Exam Results: ಜೈಲಿನಲ್ಲಿದ್ದ 50 ವರ್ಷದ ಕೈದಿ ರಾಜ್ಯಕ್ಕೇ ಟಾಪರ್​! 600ಕ್ಕೆ 503 ಅಂಕ ಪಡೆದ ಕೊಲೆ ಆರೋಪಿ


ಅನಿವಾರ್ಯವಾಗಿ ಮೊಬೈಲ್ ಟಾರ್ಚ್​ ಬಳಸಿ ಆಪರೇಷನ್​


ಮೊಬೈಲ್ ಟಾರ್ಚ್​ ಬಳಸಿ ಆಪರೇಷನ್​ ಮುಂದುವರಿಸುವ ಮುನ್ನ ಭಾರಿ ಚರ್ಚೆ ನಡೆಸಲಾಗಿದೆ. ಏಕೆಂದರೆ ಸಿನಿಮಾ ಬೇರೆ, ನಿಜ ಜೀವನ ಬೇರೆ. ಆದರೂ ಅನಿವಾರ್ಯವಾಗಿ ಸಿನಿಮಾದಂತೆ ಮೊಬೈಲ್ ಟಾರ್ಚ್ ಬಳಸಿ ವೈದ್ಯರ ತಂಡ 41 ವರ್ಷದ ಮಹಿಳೆಯ ಜೀವವನ್ನು ಉಳಿಸಿದೆ.


" ನಾವು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಪರೇಷನ್ ಪ್ರಾರಂಭಿಸಿದ್ದೆವು. ಮೂತ್ರಪಿಂಡದ ಜೊತೆಗೆ ಗೆಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ನಾವು ಬಹುತೇಕ ಆಪರೇಷನ್​ ಮುಗಿಸಿದ್ದೆವು, ಆದರೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿಯಿಂದಾಗಿ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡಿತು. ರೋಗಿಯನ್ನು ಆ ಸ್ಥಿತಿಯಲ್ಲಿ ಬಿಡುವಂತಿರಲಿಲ್ಲ. ಹಾಗಾಗಿ ಆತುರದ ನಿರ್ಧಾರ ಕೈಗೊಳ್ಳಲಾಯಿತು. ಉಳಿದ 45 ನಿಮಿಷಗಳ ಶಸ್ತ್ರಚಿಕಿತ್ಸೆಯನ್ನು ಮೊಬೈಲ್ ಬೆಳಕಿನಲ್ಲೇ ಮಾಡಬೇಕಾಯಿತು. ಈ ಅನುಭವ ಹಿಂದೆಂದೂ ಆಗಿರಲಿಲ್ಲ! ರೋಗಿ ಈಗ ಆರೋಗ್ಯವಾಗಿದ್ದಾರೆ " ಎಂದು ವೈದ್ಯ ಸುನಿರ್ಮಲ್ ಚೌಧರಿ ತಿಳಿಸಿದ್ದಾರೆ.
ಯಶಸ್ವಿಯಾದ ಶಸ್ತ್ರ ಚಿಕಿತ್ಸೆ


" ಮೊದಲಿಗೆ ನಾನು ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲು ಯೋಚಿಸಿದೆ. ಆದರೆ ಅದನ್ನು ಹೊಗೆಯಾಡುತ್ತಿರುವ ಆಸ್ಪತ್ರೆ ಕಾರಿಡಾರ್‌ಗಳಲ್ಲಿ ಹೇಗೆ ಮಾಡುವುದು ಎನ್ನುವ ಯೋಚನೆ ಬಂದಿತು. ಕೊನೆಗೆ ಮೊಬೈಲ್ ಫೋನ್​ನ ಫ್ಲ್ಯಾಶ್ ಲೈಟ್ ಆನ್ ಮಾಡಿ ಸರ್ಜರಿ ಮಾಡಲು ನಿರ್ಧರಿಸಿದೆ" ಎಂದು ಚೌದರಿ ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜು ಮೂಲಗಳ ಪ್ರಕಾರ, ನಿಗದಿತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಒಳ್ಳೆ ನಿರ್ಧಾರ


ಈ ಬಗ್ಗೆಕೋಲ್ಕತ್ತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೂಪರ್ ಸ್ಪೆಷಲಿಸ್ಟ್ ಡಾಕ್ಟರ್ ಅಂಜನ್​ ಅಧಿಕಾರಿ ಮಾತನಾಡಿ" ರೋಗಿಗಳನ್ನು ಶಸ್ತ್ರಚಿಕಿತ್ಸೆಯ ಮಧ್ಯದಲ್ಲಿ ಬಿಡಲಾಗುವುದಿಲ್ಲ, ನಮ್ಮ ಆಸ್ಪತ್ರೆಯ ನುರಿತ ವೈದ್ಯರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ರೋಗಿಯನ್ನು ಬದುಕಿಸಿದ್ದಾರೆ. ನಾವು ಇಂತಹದ್ದನ್ನು ಪ್ರೋತ್ಸಾಹಿಸುತ್ತೇವೆ" ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Madhya Pradesh: ಈ ಸಸ್ಯವೇ ಆದಿವಾಸಿಗಳ ಜೀವನೋಪಾಯ, ಪ್ರವಾಹದ ಮಧ್ಯೆ ಜೀವನ ಕಟ್ಟಿಕೊಂಡವರ ಕಥೆ!


ಬೆಂಕಿ ಅವಘಡದಿಂದ ಯಾವುದೇ ಹಾನಿ ಸಂಭವಿಸಿಲ್ಲ

top videos


  ಮಾಧ್ಯಮಗಳ ವರದಿ ಪ್ರಕಾರ, ಬೆಂಕಿಯಿಂದಾಗಿ ಆಸ್ಪತ್ರೆಯ ಆಸ್ತಿಪಾಸ್ತಿಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ. ಅಲ್ಲದೆ ಯಾರಿಗೂ ಗಾಯಗಳಾಗಿಲ್ಲ. ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ತಿಳಿದ ತಕ್ಷಣ ಮೂರು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ಕೆಲವು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು.

  First published: