• Home
  • »
  • News
  • »
  • national-international
  • »
  • West Bengal: ಅಪ್ರಾಪ್ತೆಯ ಮದುವೆಗೆ ಪೋಷಕರ ಸಿದ್ಧತೆ: 'ಅವಾಜ್' ಹಾಕಿ ಮದುವೆ ನಿಲ್ಲಿಸಿದ ಸಹಪಾಠಿಗಳು!

West Bengal: ಅಪ್ರಾಪ್ತೆಯ ಮದುವೆಗೆ ಪೋಷಕರ ಸಿದ್ಧತೆ: 'ಅವಾಜ್' ಹಾಕಿ ಮದುವೆ ನಿಲ್ಲಿಸಿದ ಸಹಪಾಠಿಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಪ್ರಾಪ್ತ ವಯಸ್ಸಿನ ಹುಡುಗಿಯ ಮದುವೆಯನ್ನು ನಿಲ್ಲಿಸಿ ಮರಳಿ ಶಾಲೆಗೆ ಬರುವಂತೆ ಮಾಡಿ ಶಾಲಾಮುಖ್ಯೋಪಾದ್ಯಾಯರಿಂದ ಮೆಚ್ಚುಗೆಯನ್ನು ಪಡೆದ ಕ್ಲಾಸ್​ಮೇಟ್ಸ್​. ಈ ಘಟನೆ ಪಶ್ಮಿಮ ಬಂಗಾಳದಲ್ಲಿ ನಡೆದಿದೆ.

  • Share this:

    ಕಷ್ಟಕಾಲದಲ್ಲಿ ಯಾರು ಸಹಾಯಕ್ಕೆ ಬರುತ್ತಾನೋ ಅವನೇ ನಿಜವಾದ ಸ್ನೇಹಿತ (Friends) ಎಂಬ ಮಾತಿದೆ. ಈ ಮಾತಿಗೆ ನಿಜವೆಂಬಂತೆ ಪಶ್ಚಿಮಬಂಗಾಳದಲ್ಲೊಂದು (West Bengal) ಘಟನೆ ನಡೆದಿದೆ. ಅದೇನೆಂದರೆ ಪಶ್ಚಿಮಬಂಗಾಳದಲ್ಲಿ ಒಂದು ಶಾಲಾ ಹುಡುಗಿಗೆ ಮದುವೆ (Marriage) ಮಾಡುವುದಾಗಿ ಮನೆಯವರು ನಿರ್ಧರಿಸಿದ್ದರು. ಅದೇ ರೀತಿ ಆ ಹುಡುಗಿ ಕೂಡ ಬಹಳ ದಿನದಿಂದ ಶಾಲೆಗೆ ಬರದೇ ಇರುವ ಕಾರಣ ಆಕೆಯ ಕ್ಲಾಸ್​ಮೇಟ್ಸ್​ (Classmates) ಅವಳ ಮನೆಗೆ ಹೋಗಿ ಅವಳನ್ನು ಶಾಲೆಗೆ ಕಳುಹಿಸಬೇಕೆಂದು ಧ್ವನಿ ಎತ್ತಿದ್ದಾರೆ. ನಂತರ ಈ ಕಾರಣದಿಂದ ಪ್ರತಿಭಟನೆಯೂ ನಡೆದಿದೆ. ಶಾಲಾ ಶಿಕ್ಷಕವೃಂದದವರು ವಿದ್ಯಾರ್ಥಿಗಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಮೇಲೆ ಏನೆಲ್ಲಾ ಆಯ್ತು ಎಂಬುದರ ಮಾಹಿತಿ ಇಲ್ಲಿದೆ.


    18 ವರ್ಷಕ್ಕಿಂತ ಕೆಳಗಿನವರಿಗೆ ಮದುವೆ ಮಾಡಬಾರದು ಎಂದು ಕಾನೂನು ಹೇಳಿದೆ. ಆದರೆ ಇದನ್ನು ಮೀರಿಯೂ ಕೆಲವೊಂದು ಪ್ರದೇಶದಲ್ಲಿ ಮದುವೆ ಮಾಡುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಸಿಕ್ಕಿಬಿದ್ದು ಶಿಕ್ಷೆಯನ್ನು ಅನುಭವಿಸಿದ ಘಟನೆಗಳು ಇದೆ. ಆದರೆ ಇಲ್ಲೊಂದು ಕಡೆಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಗೆ ಮದುವೆಯನ್ನು ಮಾಡುವುದೆಂದು ಮನೆಯವರು ನಿರ್ಧರಿಸಿದಾಗ ಕ್ಲಾಸ್​ಮೇಟ್ಸ್​​​ ಹೋಗಿ ಮದುವೆಯನ್ನು ನಿಲ್ಲಿಸಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದಾದ್ರೂ ಏನೆಂಬುದನ್ನು ತಿಳಿಬೇಕಾದ್ರೆ ಕೆಳಗಿನದನ್ನು ಓದಿ.


    ಹುಡುಗಿಯ ಮನೆಮುಂದೆ ಧಾವಿಸಿದ ಕ್ಲಾಸ್​ಮೇಟ್ಸ್​​


    ಪಶ್ಮಿಮ ಬಂಗಾಳದ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ತಮ್ಮ ಸಹಪಾಠಿ ಕಳೆದೊಂದು ವಾರದಿಂದ ಶಾಲೆಗೆ ಬಾರದಿರುವುದನ್ನು ಗಮನಿಸಿದ್ದಾರೆ. ಇದರ ಬಗ್ಗೆ ವಿದ್ಯಾರ್ಥಿಗಳು ಕೆಲವರಲ್ಲಿ ಮಾಹಿತಿಯನ್ನು ಪಡೆದು ಆಕೆಯ ಮದುವೆ ನಿಶ್ಚಯವಾಗಿದೆ ಎಂದು ತಿಳಿದರು, ನಂತರ ವಿದ್ಯಾರ್ಥಿಗಳು ಆಕೆಯ ಮನೆಗೆ ಧಾವಿಸಿ ಆಕೆಯನ್ನು ಶಾಲೆಗೆ ಬರುವಂತೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.


    ಇದನ್ನೂ ಓದಿ: ಫಿಫಾ ವಿಶ್ವಕಪ್‌ ನಾಚಿಸುವಂತೆ ಭಾರತದಲ್ಲೇ ನಡೆಯುತ್ತೆ ಫುಟ್ಬಾಲ್ ಪಂದ್ಯ! ಪ್ರಧಾನಿ ನರೇಂದ್ರ ಮೋದಿ ಭರವಸೆ


    ಮನೆಯ ಹಿಂಬಾಗಿಲಿನಿಂದ ಹುಡುಗಿಯನ್ನು ತಪ್ಪಿಸಿದ ಮನೆಯವರು


    ಈ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಬಂದು ಹುಡುಗಿಯ ಕ್ಲಾಸ್​ಮೇಟ್ಸ್​ ಧ್ವನಿಯೆತ್ತಿದಾಗ ಅದನ್ನು ಗಮನಿಸಿ ಮನೆಯವರು ಅವಳನ್ನು ಮನೆಯ ಹಿಂಬಾಗಿಲಿನಿಂದ ವರನ ಮನೆಗೆ ಕಳುಹಿಸಿದ್ದಾರೆ.


    ವರನ ಮನೆಯ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ


    ಹಿಂಬಾಗಿಲಿನಿಂದ ವರನ ಮನೆಗೆ ಕಳುಹಿಸಿದ ವಿಷಯ ತಿಳಿದ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಅಳಿಯನ ಮನೆಗೆ ತೆರಳಿ ಒಂದು ವೇಳೆ ನೀವು ಕಳುಹಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ತೊಂದರೆಯನ್ನು ತಪ್ಪಿಸುವ ಕಾರಣದಿಂದ, ವರನ ಮನೆಯವರು ಅವಳನ್ನು ಅಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಲದೆ ನೆರೆದಿದ್ದ ವಿದ್ಯಾರ್ಥಿಗಳ ಕೈಗೆ ಅವಳನ್ನು ಒಪ್ಪಿಸಿದರು, ನಂತರ ಆ ವಿಸ್ಯಾರ್ಥಿಗಳು ಅವಳನ್ನು ತಮ್ಮ ಶಾಲೆಗೆ ಕರೆದೊಯ್ದರು.


    ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರಿಂದ ಮೆಚ್ಚುಗೆಯ ಮಾತು


    ಶಾಲೆಯ ಮುಖ್ಯೋಪಾಧ್ಯಾಯ ಆಗಿದ್ದಂತಹ ಸುರೇಶ್ ಚಂದ್ರ ಪಾಡಿಯಾ ಅವರು ವಿದ್ಯಾರ್ಥಿಗಳ ಧೈರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿಗಳು ವಿನಂತಿ ಮಾಡಿದ್ರಿಂದ ಮಾತ್ರ ಮದುವೆಯನ್ನು ತಪ್ಪಿಸಲಾಯಿತು ಎಂದು ಹೇಳಿದರು.


    ಮದುವೆ ಬಗ್ಗೆ ಮನೆಯವರ ಭರವಸೆ


    ಶಾಲೆ ಇರುವ ಕೇಶ್‌ಪುರ್ ಬ್ಲಾಕ್‌ನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ದೀಪಕ್ ಕುಮಾರ್ ಘೋಷ್, ಆಕೆಗೆ 18 ವರ್ಷ ತುಂಬುವ ಮೊದಲು ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಆಕೆಯ ಮನೆಯವರು ಭರವಸೆ ನೀಡಿದ್ದಾರೆ ಎಂದು
    ಹೇಳಿದರು.


    ಆಕೆಯ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದರಿಂದ ಈ ಮದುವೆ ತೀರ್ಮಾನವನ್ನು ಕೈಗೊಂಡಿದ್ದಾರೆ. ಇಲ್ಲದಿದ್ದರೆ ಶಾಲೆಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ಇದು ಪಶ್ಚಿಮ ಬಂಗಾಳದಲ್ಲಿ ಶನಿವಾರದಂದು ನಡೆದಿರುವ ಘಟನೆಯಾಗಿದೆ.

    Published by:Prajwal B
    First published: