ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಪ್ರಾಥಮಿಕ ತನಿಖೆಗೆ ಹೈಕೋರ್ಟ್​ ಆದೇಶ

news18
Updated:August 24, 2018, 12:58 PM IST
ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಪ್ರಾಥಮಿಕ ತನಿಖೆಗೆ ಹೈಕೋರ್ಟ್​ ಆದೇಶ
news18
Updated: August 24, 2018, 12:58 PM IST
ನ್ಯೂಸ್ 18 ಕನ್ನಡ

ಚೆನ್ನೈ (ಆಗಸ್ಟ್ 24): ಹೆದ್ದಾರಿ ಯೋಜನೆ ಗುತ್ತಿಗೆ ಹಂಚಿಕೆಯಲ್ಲಿ ರಾಜ್ಯ ಸರ್ಕಾರ  ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷ ಡಿಎಂಕೆ ದೂರಿನ ಅನ್ವಯ ಮುಖ್ಯಮಂತ್ರಿ ಇ.ಪಳನಿಸ್ವಾಮಿ ವಿರುದ್ಧ ಪ್ರಾಥಮಿಕ ತನಿಖೆಗೆ ಮದ್ರಾಸ್ ಹೈಕೋರ್ಟ್​ ಶುಕ್ರವಾರ ಆದೇಶ ನೀಡಿದೆ.Chief Minister E Palaniswami

ಬಹುಕೋಟಿಯ ಹೆದ್ದಾರಿ ಗುತ್ತಿಗೆಯನ್ನು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಸಂಬಂಧಿಕರಿಗೆ ನೀಡಲಾಗಿದೆ  ಎಂದು ಆರೋಪಿಸಿ ಡಿಎಂಕೆ ಪಕ್ಷ ಕಳೆದ ಜೂನ್​ನಲ್ಲಿ ಜಾಗೃತಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಡಿವಿಎಸಿ) ದೂರು ದಾಖಲಿಸಿತ್ತು. ಆದರೆ, ಪ್ರಕರಣದ ತನಿಖೆಯನ್ನು ಆರಂಭಿಸಿರಲಿಲ್ಲ.

ಡಿವಿಎಸಿಯಲ್ಲಿ ಸಲ್ಲಿಸಿರುವ ದೂರಿನ ಅನ್ವಯ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ಅರ್ಜಿದಾರ ಆರ್.ಎಸ್. ಭಾರತಿ "ಪಳನಿಸ್ವಾಮಿ ಸಾರ್ವಜನಿಕ ಸೇವಕರಾಗಿ, ಚಂದ್ರಕಾಂತ್ ರಾಮಲಿಂಗಂ, ಪಿ.ಸುಬ್ರಹ್ಮಣಿಯಂ, ಪಿ. ನಾಗರಾಜನ್, ಜೆ.ಸೇಕರ್@ ಸೇರಕ್ ರೆಡ್ಡಿ ಮತ್ತು ಕಂಪನಿ, ಎಂ/ಎಸ್.ರಾಮಲಿಂಗಂ ಆ್ಯಂಡ್ ಕಂಪನಿ, ಎಸ್​ಪಿಕೆ ಆ್ಯನ್ ಕಂಪನಿ ಎಕ್ಸ್​ಪ್ರೆಸ್​ ವೇ ಪ್ರೈವೇಟ್ ಲಿ., ಮತ್ತು ಬಾಲಾಜಿ ಟೋಲ್ ವೇ (ಮಧುರೈ) ಪ್ರೈವೇಟ್ ಲಿ. ಅವರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಪಳನಿಸ್ವಾಮಿ ಅವರು 2011ರಿಂದ 2016ರವರೆಗೆ ಹೆದ್ದಾರಿ ಸಚಿವರಾಗಿದ್ದರು. ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನದ ನಂತರ ಮುಖ್ಯಮಂತ್ರಿಯಾದರು. ರಸ್ತೆ ನಿರ್ಮಾಣದ ಸರ್ಕಾರಿ ಗುತ್ತಿಗೆ ಎಲ್ಲವನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡರು," ಎಂದು ಆರೋಪಿದ್ದಾರೆ.

ಕಳೆದ ಜುಲೈನಲ್ಲಿ ಆದಾಯ ತೆರಿಗೆ ಇಲಾಖೆ ಗುತ್ತಿಗೆದಾರರ ಮೇಲೆ ನಡೆಸಿದ ದಾಳಿಯಲ್ಲಿ ಎಸ್​ಪಿಕೆ ಆ್ಯಂಡ್ ಕೋ ಎಕ್ಸ್​ಪ್ರೆಸ್​ ವೇ ಪ್ರೈವೇಟ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ನಾಗರಾಜನ್​ ಸೆಯ್ಯಾದುರೈ ಅವರ ಮೇಲೂ ದಾಳಿ ಆಗಿತ್ತು. ಈತನಿಗೂ ಮುಖ್ಯಮಂತ್ರಿಗೂ ಸಂಬಂಧವಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಸೆಯ್ಯಾದುರೈನಿಂದ ಐಟಿ ಅಧಿಕಾರಿಗಳು, 170 ಕೋಟಿ ಲೆಕ್ಕವಿಲ್ಲದ ಹಣ ಮತ್ತು 100 ಬೆಲೆಬಾಳುವ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಡಿಎಂಕೆ ಪಕ್ಷ ಮುಖ್ಯಮಂತ್ರಿ ಪಳನಿಸ್ವಾಮಿ ರಾಜೀನಾಮೆಗೆ ಆಗ್ರಹಿಸಿದ್ದರು.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ