Monkey Pox: ಮಂಕಿಪಾಕ್ಸ್​ನಿಂದ ಬಳಲುತ್ತಿದ್ದ ಗರ್ಭಿಣಿಗೆ ಆರೋಗ್ಯವಂತ ಮಗು ಜನನ

ಅಮೆರಿಕಾದಲ್ಲಿ ಮಂಕಿಪಾಕ್ಸ್ ವೈರಸ್ ಸೋಂಕಿಗೆ ಒಳಗಾಗಿದ್ದ ಗರ್ಭಿಣಿಯೊಬ್ಬರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಮಹಿಳೆ ಮತ್ತು ಮಗು ಇಬ್ಬರೂ 'ಆರೋಗ್ಯವಾಗಿದ್ದಾರೆ' ಎಂದು ಸಿಡಿಸಿ ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಕಿಪಾಕ್ಸ್ (Monkey Pox) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದೇಶದೆಲ್ಲೆಡೆ ಆತಂಕ ಹೆಚ್ಚಾಗುತ್ತಿದೆ. ಭಾರತದಲ್ಲಿ ಈಗಾಗಲೇ 4 ಮಂಕಿಪಾಕ್ಸ್ ಕೇಸ್ ಇರೋದು ದೃಢಪಟ್ಟಿದೆ. 3 ಕೇಸ್ ಕೇರಳದಲ್ಲಿ ದೃಢಪಟ್ಟಿವೆ. ಕೇರಳದ (Kerala) ಕೆಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಕೇಸ್ ದೃಢ ಪಟ್ಟಿದ್ದು, ಅಲ್ಲೂ ಆತಂಕ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ  (Utter Pradesh) ಮೂವರಿಗೆ ಸೋಂಕು ತಗುಲಿರಬಹುದ ಎಂದು ಶಂಕಿಸಲಾಗಿದೆ. ಅಮೆರಿಕಾದಲ್ಲಿ (America) ಮಂಕಿಪಾಕ್ಸ್ ವೈರಸ್ ಸೋಂಕಿಗೆ ಒಳಗಾಗಿದ್ದ ಗರ್ಭಿಣಿಯೊಬ್ಬರು (Pregnant Woman) ಆರೋಗ್ಯವಂತ ಮಗುವಿಗೆ (Healthy Baby) ಜನ್ಮ ನೀಡಿದ್ದಾರೆ. ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಮಹಿಳೆ ಮತ್ತು ಮಗು ಇಬ್ಬರೂ 'ಆರೋಗ್ಯವಾಗಿದ್ದಾರೆ' ಎಂದು ಸಿಡಿಸಿ ವರದಿ ಮಾಡಿದೆ.

ಗರ್ಭಿಣಿಯಾಗಿದ್ದಾಗ ತಗುಲಿದ್ದ ಮಂಕಿಪಾಕ್ಸ್ ಸೋಂಕು
ಅಮೆರಿಕಾದಲ್ಲಿ ಮಹಿಳೆಯೊಬ್ಬರು ಗರ್ಭಿಣೆಯಾಗಿದ್ದಾಗ ಅವರಿಗೆ ಮಂಕಿಪಾಕ್ಸ್ ಸೋಂಕು ತಗುಲಿದೆ. ಅವರಿಗೆ ಹೆರಿಗೆ ಸಮಯ ಬಂದರೂ ಮಂಕಿಪಾಕ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಇಂದು ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಅಧಿಕಾರಿಗಳ ಪ್ರಕಾರ, ಮಗುವನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಮಹಿಳೆ ಮತ್ತು ಮಗು ಇಬ್ಬರೂ 'ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದೆ.

ಡಾ. ಬ್ರೆಟ್ ಪೀಟರ್ಸನ್ ಹೇಳಿದ್ದೇನು?
"ಆ ನವಜಾತ ಶಿಶುವಿಗೆ ರೋಗ ನಿರೋಧಕ ಔಷಧಿ ಹಾಕಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿ, ಆರೋಗ್ಯವಾಗಿ ಇದ್ದಾರೆ ಎಂದು" ಸಿಡಿಸಿ ಯ ಡಾ ಬ್ರೆಟ್ ಪೀಟರ್ಸನ್ ಹೇಳಿದ್ದಾರೆ.

ಹಿಂದಿನ ಪ್ರಕರಣದಲ್ಲಿ ಗರ್ಭದಲ್ಲಿದ್ದ ಮಗುವಿಗೆ ಸೋಂಕು
ಅಮೆರಿಕಾದಲ್ಲಿ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಗರ್ಭಿಣಿ ಮಹಿಳೆಗೆ ಸೋಂಕು ತಗುಲಿದ್ದಾಗ, ಮಗುವಿಗೂ ಸೋಂಕು ಹರಡಿತ್ತು. ಆದ್ರೆ ಈ ಬಾರಿ ಆ ರೀತಿ ಆಗಿಲ್ಲ. ಸಿಡಿಸಿ ಮಾಹಿತಿಯ ಪ್ರಕಾರ, ಗರ್ಭಿಣಿ ಮಹಿಳೆಯರಲ್ಲಿ ತೀವ್ರ ಪರಿಣಾಮಗಳಿಗೆ ಕಾರಣವಾಗುವ ಮಂಕಿಪಾಕ್ಸ್‍ನ ಆವರ್ತನವು ಸೀಮಿತವಾಗಿದೆ.  ಅದನ್ನು ನಿರ್ಣಯಿಸುವುದು ಸಹ ಒಂದು ಸವಾಲಾಗಿ ಉಳಿದಿದೆಯಂತೆ.

ಇದನ್ನೂ ಓದಿ: Monkeypox: ಉತ್ತರ ಪ್ರದೇಶದಲ್ಲಿ 2 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ವರದಿ: ಹೆಚ್ಚಾದ ಆತಂಕ, ತೀವ್ರ ಕಟ್ಟೆಚ್ಚರ!

ಮಗುವಿಗೆ ಇಮ್ಯೂನ್ ಗ್ಲೋಬಿನ್ ನೀಡಲಾಗಿದೆ
ಈಗ ಜನಿಸಿರುವ ಮಗುವಿಗೆ ಇಮ್ಯೂನ್ ಗ್ಲೋಬ್ಯುಲಿನ್ ಇನ್ಫ್ಯೂಷನ್ ನೀಡಲಾಗಿದೆ ಎಂದು ಸಿಡಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ಏಕಾಏಕಿ ರೋಗ ನಿರೋಧಕ ಗ್ಲೋಬಿನ್ ಅನ್ನು ಪ್ರತಿಕಾಯ ಚಿಕಿತ್ಸೆಯಾಗಿ ನೀಡಲು ಆಹಾರ ಮತ್ತು ಔಷಧ ಆಡಳಿತವು ಅನುಮೋದನೆ ನೀಡಿದೆ ಎಂದು ತಿಳಿಸಿದೆ.

ಅಮೆರಿಕಾದಲ್ಲಿ ಮಕ್ಕಳಿಗೆ ಮಂಕಿಪಾಕ್ಸ್
ಅಮೆರಿಕಾದಲ್ಲಿ 2 ಮಕ್ಕಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತು ಬಿಕ್ಕಟ್ಟು ಎಂದು ಘೋಷಿಸಿದೆ. ಗರ್ಭಿಣಿಯರು ಮಂಕಿಪಾಕ್ಸ್​ನಿಂದ 'ತೀವ್ರ ಪರಿಣಾಮಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ' ಎಂದು ಸಿಡಿಸಿ ಮೊದಲೇ ಎಚ್ಚರಿಸಿತ್ತು.

ಇದನ್ನೂ ಓದಿ: Monkeypox: ಮಕ್ಕಳನ್ನೂ ಕಾಡುತ್ತಿದೆ ಮಂಕಿಪಾಕ್ಸ್, ಅಂಬೆಗಾಲಿಡುವ ಮಗುವಲ್ಲೂ ಪತ್ತೆಯಾಯ್ತು ಸೋಂಕು!

ಭಾರತದಲ್ಲಿ ಮಂಕಿಪಾಕ್ಸ್ ಕೇಸ್‍ಗಳು
ಇಲ್ಲಿಯವರೆಗೆ, ಭಾರತದಲ್ಲಿ 4 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ. ದೆಹಲಿಯಲ್ಲಿ ಒಂದು ಮತ್ತು ಕೇರಳದಲ್ಲಿ ಮೂರು. ಈ ಬಗ್ಗೆ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ ವಿಕೆ ಪಾಲ್, ಈಗ ಭಾರತದಲ್ಲಿ 4 ಮಂಗನ ಕಾಯಿಲೆ ಪ್ರಕರಣಗಳಿವೆ. ಕೆಲವು ವಾರಗಳ ಹಿಂದೆಯೇ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. 15 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ಆತಂಕ ಪಡುವ ಅಗತ್ಯವಿಲ್ಲ. ಯಾರಿಗಾದರೂ ಮಂಕಿಪಾಕ್ಸ್‍ನ ಲಕ್ಷಣಗಳು ಕಂಡುಬಂದರೆ, ಮರೆಮಾಚದೇ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.
Published by:Savitha Savitha
First published: