• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಛತ್ತಿಸ್​ಗಡದಲ್ಲಿ Covid ಬಗ್ಗೆ ಲಾಠಿ ಹಿಡಿದು ಎಚ್ಚರಿಕೆ ನೀಡ್ತಿದ್ದಾರೆ ಗರ್ಭಿಣಿ ಪೋಲೀಸ್ ಅಧಿಕಾರಿ, Photo Viral

ಛತ್ತಿಸ್​ಗಡದಲ್ಲಿ Covid ಬಗ್ಗೆ ಲಾಠಿ ಹಿಡಿದು ಎಚ್ಚರಿಕೆ ನೀಡ್ತಿದ್ದಾರೆ ಗರ್ಭಿಣಿ ಪೋಲೀಸ್ ಅಧಿಕಾರಿ, Photo Viral

ಡಿಎಸ್​ಪಿ ಶಿಲ್ಪಾ ಸಾಹು

ಡಿಎಸ್​ಪಿ ಶಿಲ್ಪಾ ಸಾಹು

ಛತ್ತೀಸ್‌ಗಢದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಸಾಹು ಅವರು ಲಾಕ್‌ಡೌನ್‌ ಕಠಿಣ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡುತ್ತಾ ಮಾತನಾಡುತ್ತಿರುವ ವಿಡಿಯೋ ಈಗ ಎಲ್ಲೆಡೆ ಸುದ್ದಿ ಮಾಡಿದೆ. ಇನ್ನೂ ಗರ್ಭಿಣಿ ಶಿಲ್ಪಾ ಸಾಹು ಅವರೊಟ್ಟಿಗೆ ಇನ್ನಿಬ್ಬರು ಅಧಿಕಾರಿಗಳು ಸಹ ಜೊತೆಗಿದ್ದಾರೆ.

ಮುಂದೆ ಓದಿ ...
  • Share this:

Covid Effects: ದೇಶಾದ್ಯಂತ ಕೊರೋನಾ ಎರಡನೇ ಅಲೆ ಭಯಂಕರವಾಗಿ ಹರಡುತ್ತಿದೆ. ಈಗಾಗಲೇ ಎಲ್ಲಾ ಕಡೆಯಲ್ಲೂ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ. ಅದರಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಎಲ್ಲಾ ಕೊರೋನಾ ವಾರಿಯರ್ಸ್ ತಮ್ಮ ಬದುಕನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಮುಖ್ಯವಾಗಿ ಮಹಿಳಾ ಅಧಿಕಾರಿಗಳು ತಮ್ಮ ಕುಟುಂಬವನ್ನು ಬದಿಗಿಟ್ಟು, ಮೊದಲು ದೇಶ ನಂತರ ನನ್ನ ಮನೆ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ. ಈ ಮಾತಿಗೆ ಪೂರಕವೆನ್ನುವಂತಹ ಘಟನೆಯೊಂದು ಛತ್ತೀಸ್‌ಗಢದಲ್ಲಿ ನಡೆದಿದೆ.


ಛತ್ತೀಸ್‌ಗಢದಲ್ಲಿ ಡಿಎಸ್ಪಿ ಶಿಲ್ಪಾ ಸಾಹು ತಾವು ಗರ್ಭಿಣಿಯಾಗಿದ್ದರೂ ಮಾಸ್ಕ್ ಧರಿಸಿ ಸುಡು ಸುಡು ಬಿಸಿಲಿನಲ್ಲಿ ನಿಂತು ಲಾಟಿ ಹಿಡಿದು ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಪಾಲಿಸದವರಿಗೆ Covid 19 ನಿಯಮ ಪಾಲಿಸುವಂತೆ ತಿಳಿ ಹೇಳುತ್ತಿದ್ದಾರೆ. ಸದ್ಯ ಲಾಕ್‌ಡೌನ್‌ ಜಾರಿಯಲ್ಲಿದ್ದು, ಜನರು ಅನವಶ್ಯಕವಾಗಿ ಹೊರಗೆ ಬಾರದಂತೆ ತಡೆಯಲು ಸ್ವತಃ ಡಿಎಸ್ಪಿಯವರೇ ಫೀಲ್ಡಿಗಿಳಿದಿದ್ದಾರೆ. ಸದ್ಯ ಶಿಲ್ಪಾ ಸಾಹು ಅವರ ಈ ಫೋಟೋ ಮತ್ತು ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.


ಛತ್ತೀಸ್‌ಗಢದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಸಾಹು ಅವರು ಲಾಕ್‌ಡೌನ್‌ ಕಠಿಣ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡುತ್ತಾ ಮಾತನಾಡುತ್ತಿರುವ ವಿಡಿಯೋ ಈಗ ಎಲ್ಲೆಡೆ ಸುದ್ದಿ ಮಾಡಿದೆ. ಇನ್ನೂ ಗರ್ಭಿಣಿ ಶಿಲ್ಪಾ ಸಾಹು ಅವರೊಟ್ಟಿಗೆ ಇನ್ನಿಬ್ಬರು ಅಧಿಕಾರಿಗಳು ಸಹ ಜೊತೆಗಿದ್ದಾರೆ.


ನೆತ್ತಿ ಸುಡುವ ಬಿಸಿನಲಿನ ನಡುವೆ ಮಾಸ್ಕ್ ಧರಿಸಿ ತನ್ನ ತಂಡದೊಂದಿಗೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿರುವ ಗರ್ಭಿಣಿ ಅಧಿಕಾರಿಯ ಈ ಫೋಟೋ ಇನ್ನಾದರೂ ಜನ ಸಾಮಾನ್ಯರ ಮನಸ್ಸಲ್ಲಿ ಬದಲಾವಣೆ ತರುವುದೇ ಎನ್ನುವ ಆಶಯ ಎಲ್ಲೆಡೆ ವ್ಯಕ್ತವಾಗಿದೆ. ಮಾವೋವಾದಿಗಳ ಪ್ರಾಬಲ್ಯವಿರುವ ಬಸ್ತಾರ್‌ನ ದಂತೇವಾಡಾದಲ್ಲಿ ಸಾಹು ಅವರನ್ನು ಪೋಸ್ಟ್ ಮಾಡಲಾಗಿದೆ. ಶಿಲ್ಪಾ ಅವರು ಇಂತಹ ಸೂಕ್ಷ್ಮ ಸ್ಥಿತಿಯಲ್ಲಿ ವಿಶ್ರಮಿಸುವುದನ್ನು ಬಿಟ್ಟು, ಕೊರೊನಾದ ಭೀಕರತೆಯನ್ನು ಹಿಮ್ಮೆಟ್ಟಿ ನಿಂತು ಕಾರ್ಯ ನಿರ್ವಹಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. ಅಲ್ಲದೇ ಶಿಲ್ಪಾ ಅವರ ದೃಢ ನಿರ್ಧಾರಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.


'ಶಿಲ್ಪಾ ಸಾಹು ಅವರು ಗರ್ಭಿಣಿಯಾಗಿದ್ದರೂ ಸಹ ಸುಡುವ ಬಿಸಿಲಿನಲ್ಲಿ ನಿಂತು ತಮ್ಮ ತಂಡದ ಜೊತೆಗೆ ಈ ಸಂಕಷ್ಟದ ಸಮಯದಲ್ಲಿ ಶ್ರಮಿಸುತ್ತಿದ್ದಾರೆ. ಸಮಚಿತ್ತರಾಗಿ ಜನರಲ್ಲಿ ಲಾಕ್‌ಡೌನ್‌ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ನಿಯಮ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ' ಎಂದು ಹೆಚ್ಚುವರಿ ಸಾರಿಗೆ ಆಯುಕ್ತರಾದ ದೀಪಂಶು ಕಬ್ರಾ ಅವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.


ಪೊಲೀಸ್ ಅಧಿಕಾರಿಯ ಧೈರ್ಯ ಮತ್ತು ಕಠಿಣ ಪರಿಶ್ರಮದ ಬಗ್ಗೆ ಇಂಟರ್ನೆಟ್‌ನಲ್ಲಿ ಪ್ರಶಂಸೆಗಳು ಹರಿದಾಡುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಜನರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.


'ಈ ತುರ್ತು ಸಮಯದಲ್ಲಿ ಶ್ರದ್ಧೆಯಿಂದ ಕೆಲಸ ನಿರ್ವಹಿಸುತ್ತಿರುವ ಯಾವುದೇ ಕ್ಷೇತ್ರದ ಎಲ್ಲಾ ಅಧಿಕಾರಿಗಳು, ಉದ್ಯೋಗಿಗಳಿಗೆ ನಮ್ಮ ನಮನಗಳು' ಎಂದು ಒಬ್ಬರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಸೀಮಾ ಯಾದವ್ ಎನ್ನುವ ಇನ್ನೊಬ್ಬ ಯುವತಿ 'ಶಿಲ್ಪಾ ಮೇಡಂ ನಮ್ಮೆಲ್ಲರಿಗೂ ಆದರ್ಶ ಪ್ರಾಯರು' ಎಂದು ದೀಪಾಂಶು ಅವರ ಟ್ವೀಟನ್ನು ರೀಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು 'ಸಲ್ಯೂಟ್ ಶಿಲ್ಪಾ ಮೇಡಂ' ಎಂದು ಮನದ ಮಾತು ಹಂಚಿಕೊಂಡಿದ್ದಾರೆ.


ಇನ್ನೂ ಕೆಲವು ಟ್ವಿಟ್ಟರ್ ಬಳಕೆದಾರರು 'ಶಿಲ್ಪಾ ಮೇಡಂ ನೀವು ಈ ಸಂದರ್ಭದಲ್ಲಿ ಕಷ್ಟಪಡಬೇಡಿ, ವಿಶ್ರಮಿಸಿ' ಎಂದು ತಮ್ಮ ಕಾಳಜಿಯನ್ನು ತೋರಿದ್ದಾರೆ. ಈ ನಿಟ್ಟಿನಲ್ಲಿ ಆಶಿಶ್ ದುಬೆ ಎನ್ನುವ ಟ್ವಿಟ್ಟರ್ ಬಳಕೆದಾರರು 'ಸರ್, ನಿಮ್ಮಲ್ಲಿ ಒಂದು ವಿನಂತಿ. ದಯವಿಟ್ಟು ಅವರಿಗೆ ವಿಶ್ರಾಂತಿ ನೀಡಿ, ಅವರನ್ನು ಮತ್ತು ಮಗುವನ್ನು ನೋಡಿಕೊಳ್ಳಲು ಮನೆಗೆ ಕಳುಹಿಸಿ ಅವರಿಗೆ ವಿಶ್ರಾಂತಿ ಬೇಕು' ಎಂದು ಹೇಳಿದ್ದಾರೆ. ಇದರ ಜೊತೆಗೆ ರೋಫಿ ಬಿಹಾರಿ ಎನ್ನುವ ಇನ್ನೊಬ್ಬ ಬಳಕೆದಾರರು 'ನನಗನ್ನಿಸುತ್ತೆ ಈ ಸಮಯದಲ್ಲಿ ಇದರ ಅವಶ್ಯಕತೆ ಇಲ್ಲ. ಅವರು ವಿಶ್ರಾಂತಿ ತೆಗೆದುಕೊಳ್ಳುವುದು ತಾಯಿ ಮತ್ತು ಮಗು ಇಬ್ಬರ ದೃಷ್ಟಿಯಿಂದಲೂ ಒಳ್ಳೆಯದು' ಎಂದು ತಿಳಿಸಿದ್ದಾರೆ.


ಇದೇ ಸಮಯದಲ್ಲಿ ಕಬ್ರ ಅವರು ಕೂಡ ತಮ್ಮ ಮುಂದಿನ ಟ್ವೀಟ್‌ನಲ್ಲಿ ಜನರು ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಮನೆಯಲ್ಲಿ ಇರಬೇಕೆಂದು ಮನವಿ ಮಾಡಿದ್ದಾರೆ.


ಛತ್ತೀಸ್‌ಗಢ ಈಗ ಕೊರೊನಾ ನಿಯಮ ಬಿಗಿಗೊಳಿಸಿದ್ದು, ವಾಯು ಸಾರಿಗೆ, ರಸ್ತೆ ಸಾರಿಗೆ ಮತ್ತು ರೈಲು ಸಾರಿಗೆ ಮೂಲಕ ಬರುವ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಅಲ್ಲದೇ ಈ ರಾಜ್ಯದಲ್ಲಿ ಈಗಾಗಲೇ ಆಕ್ಸಿಜನ್ ಮತ್ತು ರೆಮ್ಡೆವಿಸ್ ಕೊರತೆಯುಂಟಾಗಿದ್ದು, 2.25 ಸೋಂಕಿತರಿದ್ದು, 1,993 ಜನ ಕಳೆದ ತಿಂಗಳು ಸಾವನ್ನಪ್ಪಿದ್ದಾರೆ.

Published by:Soumya KN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು