Superstition Belief: ಗಂಡು ಮಗುವಿಗಾಗಿ ಹೆಣ್ಣಿಗೆ ಹಿಂಸೆ! ಗರ್ಭಿಣಿ ತಲೆಗೆ ಮೊಳೆ ಹೊಡೆದ ಪಾಪಿಗಳು

ಗಂಡು ಮಗುವಾಗುವ ಭರವಸೆಯನ್ನು ನೀಡಿ ಆಕೆಯ ತಲೆಗೆ ಧಾರ್ಮಿಕ ಮುಖಂಡನೊಬ್ಬ (Religious Leader) ಮೊಳೆ ಹೊಡೆದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಪೇಶಾವರ್(ಫೆ.09): ಮೂಢ ನಂಬಿಕೆಗಳು (Superstition Belief) ಮನುಷ್ಯನಿಂದ ಎಂಥಹಾ ಹುಚ್ಚಾಟಗಳನ್ನೂ ಮಾಡಿಸಬಲ್ಲ ಶಕ್ತಿ ಹೊಂದಿವೆ. ಅರ್ಥವೇ ಇಲ್ಲದ ಆಚರಣೆ, ತಿರುಳೇ ಇಲ್ಲದ ಪದ್ಧತಿಗಳನ್ನು ಮೌಢ್ಯಗಳನ್ನು ಕುರುಡಾಗಿ ನಂಬಿ ಅನುಸರಿಸುವವರಿದ್ದಾರೆ. ಜಗತ್ತು ಎಷ್ಟೇ ಮುಂದುವರಿಯಲಿ, ವೈದ್ಯಕೀಯ ಕ್ಷೇತ್ರ,(Medical Field) ತಂತ್ರಜ್ಞಾನ, ಶಿಕ್ಷಣ ಏನೇ ಅಭಿವೃದ್ಧಿಯಾಗಲಿ ಕೆಲವು ಜನರನ್ನೂ, ಮೂಢ ನಂಬಿಕೆಗಳನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಇಂಥಹ ಬಹಳಷ್ಟು ಪದ್ಧತಿಗಳು ಭಾರತೀಯ ಸಮಾಜದಲ್ಲಿ ಹಲವು ಕಡೆ ಆಳವಾಗಿ ಬೇರೂರಿದೆ. ಇದೇನೂ ಹೊಸದಲ್ಲ. ನಿಧಿಗಾಗಿ ಗರ್ಭಿಣಿಯನ್ನು (Pregnant) ಬಲಿ ಕೊಡುವುದು, ಹಸುಗೂಸನ್ನು ಕೊಲೆ ಮಾಡುವಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಪಾಕಿಸ್ತಾನದಲ್ಲಿ (Pakistan) ಇಂಥದ್ದೇ ಒಂದು ಘಟನೆ ವರದಿಯಾಗಿದೆ.

  ಪಾಕಿಸ್ತಾನದ ಗರ್ಭಿಣಿ ಮಹಿಳೆಗೆ ಗಂಡು ಮಗುವಾಗಲಿ ಎಂದು ಆಕೆಯ ತಲೆಗೆ ಮೊಳೆ(Nail) ಹೊಡೆದಿರುವ ಘಟನೆ ನಡೆದಿದೆ. ಆಕೆಗೆ ಗಂಡು ಮಗುವಾಗುವ ಭರವಸೆಯನ್ನು ನೀಡಿ ಆಕೆಯ ತಲೆಗೆ ಧಾರ್ಮಿಕ ಮುಖಂಡನೊಬ್ಬ (Religious Leader) ಮೊಳೆ ಹೊಡೆದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

  ವಿರೋಧವಿದ್ದರೂ ಇನ್ನೂ ಜೀವಂತ ಈ ಕ್ರೂರ ಪದ್ಧತಿಗಳು

  ಇಸ್ಲಾಂ ಧರ್ಮದ ಕೆಲವು ಶಾಲೆಗಳು ಇದನ್ನು ಸಮ್ಮತಿಸದಿದ್ದರೂ ಅವರ ಅಭ್ಯಾಸಗಳು ಅತೀಂದ್ರಿಯ ಸೂಫಿ ಸಿದ್ಧಾಂತದಲ್ಲಿ ಬೇರೂರಿರುವ ಶೋಷಣೆಯನ್ನು ಆಧರಿಸಿವೆ. ಮುಸ್ಲಿಂ ಹೆಚ್ಚಿನ ಸಂಖ್ಯೆಯಲ್ಲಿರುವ ಪಾಕಿಸ್ತಾನದಾದ್ಯಂತ ಇಂಥಹ ಪದ್ಧತಿಗಳು ಬಹಳ ಸಾಮಾನ್ಯವಾಗಿದೆ ಎಂದು ವೈದ್ಯರು(Doctor) ಹೇಳಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಹೆಣ್ಮಕ್ಕಳಿಗಿಂತ ಗಂಡು ಮಕ್ಕಳೇ ಪೋಷಕರಿಗೆ ಆರ್ಥಿಕವಾಗಿ ಹೆಚ್ಚು ಸುರಕ್ಷೆಯನ್ನು ನೀಡಬಲ್ಲರು ಎಂಬ ನಂಬಿಕೆ ಇದೆ. ಪೇಶಾವರದ ವಾಯುವ್ಯ ಪ್ರದೇಶದ ಆಸ್ಪತ್ರೆಗೆ ಬಂದ ಮಹಿಳೆ ತಾವೇ ಮೊಳೆಯನ್ನು ತೆಗೆಯಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗದ ಕಾರಣ ಆಕೆ ಆಸ್ಪತ್ರೆಗೆ ಬಂದಿದ್ದರು ಎಂದು ವೈದ್ಯ ಹೈದರ್ ಖಾನ್ ತಿಳಿಸಿದ್ದಾರೆ.

  ಇದನ್ನೂ ಓದಿ:Dowry Case: "ಅಮ್ಮ ಬೇಗ ಬಾ" ಎನ್ನುತ್ತಲೇ ಪ್ರಾಣ ಬಿಟ್ಟಳು ಮಗಳು! ವರದಕ್ಷಿಣೆಗಾಗಿ ಕೊಂದರಾ ಕಿರಾತಕರು?

  ಈಗಾಗಲೇ ಮೂರು ಜನ ಹೆಣ್ಮಕ್ಕಳು:

  ಆಕೆ ಪ್ರಜ್ಞಾ ಹೀನಳಾಗಿರಲಿಲ್ಲ. ಸಂಪೂರ್ಣ ಪ್ರಜ್ಞೆ ಇತ್ತು, ಆದರೆ ತೀವ್ರ ನೋವಿನಿಂದ(Pain) ಬಳಲುತ್ತಿದ್ದಳು ಎಂದು ಆಕೆಯ ತಲೆಯಿಂದ ಮೊಳೆಯನ್ನು ಹೊರತೆಗೆದ ವೈದ್ಯರು ಹೇಳಿದ್ದಾರೆ. ಈಗಾಗಲೇ ಮೂವರು ಹೆಣ್ಮಕ್ಕಳ ತಾಯಿಯಾಗಿರುವ ಆಕೆ ಈಗ ಮತ್ತೊಮ್ಮೆ ಹೆಣ್ಣುಮಗುವಿಗೆ ತಾಯಿಯಾಗಲಿದ್ದಾರೆ.

  ಎಷ್ಟು ಆಳಕ್ಕೆ ಒಕ್ಕಿತ್ತು ಮೊಳೆ?

  ಎಕ್ಸ್‌ರೇ ತೆಗೆದು ನೋಡಿದಾಗ ಅದರಲ್ಲಿ ಆಕೆಯ ತಲೆಗೆ 2 ಇಂಚಿನ ಅಂದರೆ 5 ಸೆಂಟಿಮೀಟರ್ ಮೊಳೆ ಮಹಿಳೆಯ ಹಣೆಯಲ್ಲಿತ್ತು. ಮೊದಲು ಮಹಿಳೆ ಧಾರ್ಮಿಕ ಮುಖಂಡ ಹೇಳಿದ ಕಾರಣಕ್ಕೆ ತಾನೇ ಮೊಳೆ ಹೊಡೆದುಕೊಂಡೆ ಎಂದಿದ್ದರು. ಆದರೆ ನಂತರ ಅವರು ಸತ್ಯ ತಿಳಿಸಿದ್ದು, ಆತನೇ ತನ್ನ ಹಣೆಗೆ ಮೊಳೆ ಹೊಡೆದಿರುವುದನ್ನು ರಿವೀಲ್ ಮಾಡಿದ್ದಾರೆ. ಪೇಶಾವರ ಪೊಲೀಸರು ಆತನನ್ನು ಪ್ರಶ್ನಿಸುವ ಸಲುವಾಗಿ ಮಹಿಳೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

  ಪೊಲೀಸರು ಹೇಳಿದ್ದಿಷ್ಟು

  ನಾವು ಆಸ್ಪತ್ರೆಯಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ಶೀಘ್ರದಲ್ಲೇ ಮಹಿಳೆಯನ್ನು ತಲುಪುತ್ತೇವೆ ಎಂದು ಎಂದು ನಗರ ಪೊಲೀಸ್ ಮುಖ್ಯಸ್ಥ ಅಬ್ಬಾಸ್ ಅಹ್ಸಾನ್ ತಿಳಿಸಿದ್ದಾರೆ. ಆದರೆ ಈ ಘಟನೆ ಮಾತ್ರ ಬಹಳ ವಿಚಿತ್ರವಾಗಿದ್ದು ಭೀತಿ ಹುಟ್ಟುವಂತಿದೆ.

  ಇದನ್ನೂ ಓದಿ:Double Murder: ಮನೆಯಲ್ಲಿ ಅನ್ನ ತಿಂದವನೇ ದಂಪತಿಯನ್ನು ಕೊಂದಿದ್ದ! ಬಲೆಗೆ ಬಿದ್ದಿದ್ದು ಹೇಗೆ ಹಂತಕ?

  ಇಂಥಹ ಬಹಳಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಇದು ಕೇವಲ ಒಂದು ಧರ್ಮದ ವಿಚಾರವಲ್ಲ. ಹಲವು ಧರ್ಮಗಳಲ್ಲಿ ಈ ರೀತಿ ಮೋಸ ಮಾಡುವ ಕಪಟ ಧಾರ್ಮಿಕ ಮುಖಂಡರು ಇರುತ್ತಾರೆ. ಮಕ್ಕಳಾಗಬೇಕೆಂದು ತಮ್ಮ ಬಳಿ ಬರುವ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರೂ, ಲೈಂಗಿಕವಾಗಿ ಬಳಸಿಕೊಳ್ಳುವಂತಹ ಬಹಳಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ.
  Published by:Latha CG
  First published: