ಗರ್ಭಿಣಿ ಹೊಟ್ಟೆಯಲ್ಲಿತ್ತು 4 ಕೆಜಿ ಗಾಂಜಾ!; ತಪಾಸಣೆ ವೇಳೆ ಬಯಲಾಯ್ತು ಅಚ್ಚರಿಯ ಸತ್ಯ

ನಕಲಿ ಗರ್ಭಿಣಿ ತನ್ನ ಹೊಟ್ಟೆಯಲ್ಲಿ 15 ಪ್ಯಾಕೆಟ್ ಗಾಂಜಾ ಸಾಗಾಟ ಮಾಡುತ್ತಿದ್ದಳು. ಆಕೆಯ ಹೊಟ್ಟೆಯಲ್ಲಿದ್ದ ಮರಿಜುವಾನಾ 4 ಕೆ.ಜಿ. ತೂಗುತ್ತಿತ್ತು. ಆಕೆಯ ಜೊತೆಗಿದ್ದ ಯುವಕ ಲಗೇಜಿನೊಳಗೆ ಇನ್ನಷ್ಟು ಪ್ಯಾಕೇಟ್ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ. ಅವರಿಬ್ಬರನ್ನೂ ಅರ್ಜೆಂಟಿನಾ ಪೊಲೀಸರು ಬಂಧಿಸಿದ್ದಾರೆ.

news18-kannada
Updated:November 15, 2019, 11:43 AM IST
ಗರ್ಭಿಣಿ ಹೊಟ್ಟೆಯಲ್ಲಿತ್ತು 4 ಕೆಜಿ ಗಾಂಜಾ!; ತಪಾಸಣೆ ವೇಳೆ ಬಯಲಾಯ್ತು ಅಚ್ಚರಿಯ ಸತ್ಯ
ನಕಲಿ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಾದಕದ್ರವ್ಯ
  • Share this:
ಕಳ್ಳತನ ಮಾಡುವುದು ಕೂಡ ಒಂದು ಕಲೆ! ಯಾರಿಗೂ ಗೊತ್ತಾಗದಂತೆ ನಾನಾ ಬಗೆಯ ವೇಷ ಧರಿಸಿ, ಏನೇನೋ ಷಡ್ಯಂತ್ರ ಮಾಡಿ ಕಳ್ಳತನ ಮಾಡುವುದು ಸುಲಭವೇನಲ್ಲ. ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡಬೇಕೆಂದರೆ ಅವರು ಅದನ್ನೇ ವೃತ್ತಿಯನ್ನಾಗಿ ತೆಗೆದುಕೊಂಡಿರಬೇಕು, ಮತ್ತು ಆ ವೃತ್ತಿಯಲ್ಲಿ ಸಾಕಷ್ಟು ಪಳಗಿರಬೇಕು. ಈ ರೀತಿ ಪಳಗಿದ್ದ ಮಹಿಳೆಯೊಬ್ಬರು ನಾಜೂಕಾಗಿ ಮಾದಕದ್ರವ್ಯಗಳನ್ನು ಸಾಗಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅರ್ಜೆಂಟಿನಾದ ಮಹಿಳೆ ತಾನು ಗರ್ಭಿಣಿ ಎಂದು ಹೇಳಿಕೊಂಡು ಗಾಂಜಾ​ ಸಾಗಿಸುತ್ತಿದ್ದರು. ಹೊಟ್ಟೆಯಲ್ಲಿ ಗಾಂಜಾವನ್ನು ಬಚ್ಚಿಟ್ಟುಕೊಂಡು ಹೋಗುತ್ತಿದ್ದಾಗ ಅನುಮಾನಗೊಂಡ ಭದ್ರತಾ ಅಧಿಕಾರಿಗಳು ಆಕೆಯನ್ನು ತಡೆದಿದ್ದಾರೆ. ಆಕೆಯನ್ನು ಪರಿಶೀಲನೆ ನಡೆಸಿದಾಗ ಸತ್ಯ ಸಂಗತಿ ಬಯಲಿಗೆ ಬಂದಿದೆ.

ಅಮೆರಿಕ ಹೈಸ್ಕೂಲ್​ನಲ್ಲಿ ಶೂಟೌಟ್; ಹುಟ್ಟುಹಬ್ಬದ ದಿನವೇ ಕ್ಲಾಸ್​ಮೇಟ್​ಗಳನ್ನು ಕೊಂದು, ಗುಂಡು ಹಾರಿಸಿಕೊಂಡ ವಿದ್ಯಾರ್ಥಿ

ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರನ್ನು ಹೆಚ್ಚು ಪರಿಶೀಲನೆಗೆ ಒಡ್ಡುವುದಿಲ್ಲ. ಹೀಗಾಗಿ, ಉಪಾಯ ಮಾಡಿದ್ದ ಆ ಖತರ್ನಾಕ್ ಕಳ್ಳಿ ಗರ್ಭಿಣಿಯಂತೆ ಸೋಗು ಹಾಕಿಕೊಂಡು ಹೊಟ್ಟೆಯ ಮೇಲೆ ಗಾಂಜಾ ಬಚ್ಚಿಟ್ಟುಕೊಂಡು ಅದರ ಮೇಲೆ ಶರ್ಟ್​ ಹಾಕಿಕೊಂಡಿದ್ದಳು. ಆಕೆಯ ಗರ್ಭಿಣಿ ಎಂದು ಹೇಳಿಕೊಂಡಿದ್ದರಿಂದ ಆಕೆಯ ಹೊಟ್ಟೆ ಊದಿಕೊಂಡಿರುವ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ.


ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು, ಮಚ್ಚು; ಪುಡಿರೌಡಿಗಳನ್ನು ಗುರಾಯಿಸಿದ್ದಕ್ಕೆ ಆಸ್ಪತ್ರೆ ಸೇರಿದ ಆಟೋ ಡ್ರೈವರ್

ಉಬ್ಬಿದ ಹೊಟ್ಟೆಯಲ್ಲಿ 15 ಪ್ಯಾಕೆಟ್ ಗಾಂಜಾವನ್ನು ಸಾಗಾಟ ಮಾಡುತ್ತಿದ್ದಳು. ಆಕೆಯ ಹೊಟ್ಟೆಯಲ್ಲಿದ್ದ ಮರಿಜುವಾನಾ 4 ಕೆ.ಜಿ. ತೂಗುತ್ತಿತ್ತು. ಆಕೆಯ ಜೊತೆಗಿದ್ದ ಯುವಕ ಲಗೇಜಿನೊಳಗೆ ಇನ್ನಷ್ಟು ಪ್ಯಾಕೇಟ್ ಗಾಂಜಾ ಸಾಗಾಟ ಮಾಡುತ್ತಿದ್ದ. ಇವರಿಂದ ಒಟ್ಟು 5.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ಅರ್ಜೆಂಟಿನಾದ ಗಡಿಭಾಗದಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದಾಗ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಚೆಕ್​ಪೋಸ್ಟ್​ ಬಳಿ ಬಸ್​ ಅನ್ನು ಅಡ್ಡಗಟ್ಟಿದ ಪೊಲೀಸ್ ಅಧಿಕಾರಿಗಳು ಆಕೆಯನ್ನು ಪರಿಶೀಲಿಸಿದಾಗ ಸ್ಮಗ್ಲಿಂಗ್ ಮಾಡುತ್ತಿದ್ದಿದ್ದು ಬಯಲಾಗಿದೆ.

First published: November 15, 2019, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading