ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಗರ್ಭಿಣಿಯರಿಗೆ ವೇತನ ಸಹಿತ ರಜೆ ಸೇರಿ ಹಲವು ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ, ಹಲವು ದೇಶಗಳಲ್ಲಿ ಗರ್ಭಿಣಿಯರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. ಅಲ್ಲದೆ, ಕೊರೋನಾ ಸಾಂಕ್ರಾಮಿಕದಿಂದ ಮಹಿಳೆಯರು ಇನ್ನೂ ಹೆಚ್ಚಿನ ಸಂಕಷ್ಟಕ್ಕೀಡಾಗಿರುತ್ತಾರೆ. ಬಡತನದಿಂದ ಪಾರಾಗಲು ಕಷ್ಟ ಪಡುತ್ತಾರೆ. ಈ ಬಗ್ಗೆ ವಿಶ್ವಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಹೇಳಿದ್ದಾರೆ. ಗರ್ಭಿಣಿಯಾಗಿದ್ದಕ್ಕಾಗಿ ಉದ್ಯೋಗಸ್ಥ ಮಹಿಳೆಯರನ್ನು ಕೆಲಸದಿಂದ ವಜಾ ಮಾಡುವ ಸುಮಾರು 40 ದೇಶಗಳು ಇನ್ನೂ ಇವೆ ಎಂದು ವಿಶ್ವಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞೆ ಕಾರ್ಮೆನ್ ರೇಯ್ನ್‌ಹಾರ್ಟ್ ಚರ್ಚೆಯಲ್ಲಿ ಹೇಳಿದ್ದಾರೆ.
ಕೊರೋನಾ ಸಾಂಕ್ರಾಮಿಕದ ಬಗ್ಗೆ ಚರ್ಚೆಯಲ್ಲಿ ಅವರು ಈ ವಿಚಾರ ಮಾತನಾಡಿದ್ದಾರೆ. ಸಾಂಕ್ರಾಮಿಕ ರೋಗ ಬಂದಾಗಿನಿಂದ ಮಹಿಳೆಯರಿಗೆ ಬಡತನದಿಂದ ಪಾರಾಗುವುದು ಹೇಗೆ ಕಷ್ಟವಾಗುತ್ತಿದೆ ಎಂಬುದರ ಕುರಿತು ಅವರು ಈ ವೇಳೆ ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯತಂತ್ರ ಮತ್ತು ನೀತಿಯ ನಿರ್ದೇಶಕಿ ಸೆಲಾ ಪಜಾರ್‌ಬಾಸಿಯೊಗ್ಲು ಅವರೊಂದಿಗೆ ಬ್ಲೂಮ್‌ಬರ್ಗ್ ಟಿವಿಯ ಸಂವಾದದಲ್ಲಿ ರೇಯ್ನ್‌ಹಾರ್ಟ್ ಈ ಮಾತುಗಳನ್ನು ಹೇಳಿದರು.
ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಕುಸಿತವು “ಬಹಳ ಹಿಂಜರಿತ” ವಾಗಿದೆ. ಇದರಿಂದ ಮಹಿಳೆಯರು ಮತ್ತು ಯುವತಿಯರಂತಹ ದುರ್ಬಲ ವರ್ಗದವರಿಗೆ ಅತ್ಯಂತ ಕಠಿಣವಾದದ್ದಾಗಿರುತ್ತದೆ ಎಂದು ಕಾರ್ಮೆನ್ ರೇಯ್ನ್‌ಹಾರ್ಟ್ ಬ್ಲೂಮ್‌ಬರ್ಗ್‌ಗೆ ಹೇಳಿದರು.
ಮಂಗಳೂರು: ತುಳುನಾಡಿನ ದೈವಗಳ ಹೆಸರಲ್ಲಿ ಸ್ಟೇಟಸ್ ಹಾಕಿದ್ರೆ ಕಾನೂನು ಹೋರಾಟದ ಎಚ್ಚರಿಕೆ
"ನಾವು ಶಾಲಾ ಶಿಕ್ಷಣದಲ್ಲಿ ದೊಡ್ಡ ಹಿನ್ನಡೆಗಳನ್ನು ನೋಡುತ್ತಿದ್ದೇವೆ. ಬಾಲಕಿಯರನ್ನು ಶಾಲೆ ಬಿಡಿಸಿ ಹೊರಗೆ ಕರೆದೊಯ್ಯಲಾಗುವುದಿಲ್ಲ," ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಾತನಾಡುತ್ತಾ ರೇಯ್ನ್‌ಹಾರ್ಟ್ ಹೇಳಿದರು. ಕಳೆದ ವರ್ಷಾಂತ್ಯದ ವರದಿಯನ್ನು ಉಲ್ಲೇಖಿಸಿದ ಅವರು, ಎರಡು ದಶಕಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ತೀವ್ರ ಬಡತನ ಪ್ರಮಾಣವು ಹೆಚ್ಚಾಗಲಿದೆ. ಈ ಪೈಕಿ, ಬಡತನಕ್ಕೆ ಹೊಸದಾಗಿ ಕಾಲಿಟ್ಟ ವರ್ಗದಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಾಗಲಿದೆ ಎಂದೂ ವಿಶ್ವಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಹೇಳಿದರು.
"ನಮ್ಮ ಕಣ್ಗಾವಲು, ಸಾಲ ನೀಡುವಲ್ಲಿ, ನಮ್ಮ ವಿಶ್ಲೇಷಣಾತ್ಮಕ ಕೆಲಸದಲ್ಲಿ ಮತ್ತು ನಮ್ಮ ಸಾಮರ್ಥ್ಯ ಅಭಿವೃದ್ಧಿಯಲ್ಲಿದ್ದು ನಾವು ಅದಕ್ಕೆ ಒತ್ತು ನೀಡುತ್ತಿದ್ದೇವೆ'' ಎಂದು ಅವರು ಹೇಳಿದರು. "ನಮ್ಮ ಬಜೆಟ್‌ಗಳು, ಮಹಿಳೆಯರ ಸ್ನೇಹಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಯಾಕೆಂದರೆ, ಈ ಅನೌಪಚಾರಿಕ ವಲಯದಲ್ಲಿ ಅನೇಕ ಮಹಿಳಾ ಉದ್ಯೋಗಿಗಳು ಇದ್ದಾರೆ. ಹೀಗಾಗಿ, ನೀತಿಗಳು ಈ ಪ್ರಮುಖ ಚಟುವಟಿಕೆಗಳನ್ನು ಗುರಿಯಾಗಿರಿಸಿಕೊಳ್ಳಬೇಕು. ಈ ವಲಯದಲ್ಲಿ ಮಹಿಳೆಯರು ಹೆಚ್ಚಿನ ಹೊರೆ ಹೊತ್ತುಕೊಳ್ಳುತ್ತಾರೆ'' ಎಂದು ಪಜಾರ್‌ಬಾಸಿಯೊಗ್ಲು ಹೇಳಿದರು.
ಪಜರ್‌ಬಾಸಿಯೊಗ್ಲು ಮತ್ತು ರೇಯ್ನ್‌ಹಾರ್ಟ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ದೇಶಗಳಲ್ಲಿ ಮತ್ತು ಗಡಿಯುದ್ದಕ್ಕೂ ಹೆಚ್ಚುತ್ತಿರುವ ಅಸಮಾನತೆಯನ್ನು ಪರಿಹರಿಸಲು ಸಹಾಯ ಮಾಡಲು ಹಣಕಾಸು ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆ ಬೇಕು ಎಂದು ಅವರಿಬ್ಬರೂ ವಾದಿಸಿದ್ದಾರೆ.
ಸಾಂಕ್ರಾಮಿಕ ರೋಗವು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಅನೇಕ ದೇಶಗಳಲ್ಲಿ ಲಿಂಗ ಅಸಮಾನತೆಯೂ ಜಾಸ್ತಿಯಾಗುತ್ತಿದೆ. ವಿಶ್ವಬ್ಯಾಂಕ್ ಪ್ರಕಾರ, ಮಹಿಳೆಯರು ಸರಾಸರಿ ಪುರುಷರು ಹೊಂದಿರುವ ಕಾನೂನು ಹಕ್ಕುಗಳ ಮುಕ್ಕಾಲು ಭಾಗವನ್ನು ಮಾತ್ರ ಹೊಂದಿದ್ದಾರೆ. ಕೆಲವು ದೇಶಗಳಲ್ಲಿ ಕಾನೂನುಗಳು ಸುಧಾರಿಸಿದ್ದರೂ, ಅನೇಕ ರಾಷ್ಟ್ರಗಳಲ್ಲಿ ಮಹಿಳೆಯರು ಪುರುಷ ಗಾರ್ಡಿಯನ್‌ಗಳಿಲ್ಲದೆ ಪ್ರಯಾಣದ ನಿರ್ಬಂಧಗಳನ್ನು ಒಳಗೊಂಡಂತೆ ಆರ್ಥಿಕ ಅವಕಾಶಗಳ ಮೇಲೆ ಕಾನೂನು ಮಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಐಎಂಎಫ್‌ನ ಪಜರ್‌ಬಾಸಿಯೊಗ್ಲು ಅವರು “ನೀತಿಗಳಲ್ಲಿ ಮಹಿಳೆಯರ ದೃಷ್ಟಿಯಿಂದ ನೋಡುವುದು'' ಬಹಳ ಮುಖ್ಯ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ