• Home
  • »
  • News
  • »
  • national-international
  • »
  • Navy Day: ನೌಕಾ ದಿನಕ್ಕೆ ಪ್ರಸೂನ್ ಜೋಶಿ ಹೊಸ ಗೀತೆ, 'ಕಾಲ್ ಆಫ್‌ ದಿ ಬ್ಲೂ ವಾಟರ್ಸ್' ಹಾಡಲ್ಲಿ ಸೇನೆ ಗುಣಗಾನ

Navy Day: ನೌಕಾ ದಿನಕ್ಕೆ ಪ್ರಸೂನ್ ಜೋಶಿ ಹೊಸ ಗೀತೆ, 'ಕಾಲ್ ಆಫ್‌ ದಿ ಬ್ಲೂ ವಾಟರ್ಸ್' ಹಾಡಲ್ಲಿ ಸೇನೆ ಗುಣಗಾನ

ಭಾರತೀಯ ನೌಕಾದಿನದಲ್ಲಿ ಯೋಧರ ಸಾಹಸ

ಭಾರತೀಯ ನೌಕಾದಿನದಲ್ಲಿ ಯೋಧರ ಸಾಹಸ

'ಇಂಡಿಯನ್ ನೇವಿ ಆಂಥೆಮ್: ಕಾಲ್ ಆಫ್ ದಿ ಬ್ಲೂ ವಾಟರ್' ಎಂಬ ಶೀರ್ಷಿಕೆಯ ನೌಕಾಪಡೆಯ ಗೀತೆಯನ್ನು ರಚಿಸಲಾಗಿದೆ. ಜನಪ್ರಿಯ ಗೀತರಚನೆಕಾರ ಪ್ರಸೂನ್ ಜೋಶಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗಾಯಕ ಶಂಕರ್ ಮಹಾದೇವನ್ ಧ್ವನಿ ನೀಡಿದ್ದಾರೆ. 

  • Share this:

ವಿಶಾಖಪಟ್ಟಣಂ, ಆಂಧ್ರಪ್ರದೇಶ: ಭಾರತೀಯ ನೌಕಾ ದಿನವನ್ನು (Indian Navy Day) ಇದೇ ಡಿಸೆಂಬರ್ 4ರಂದು ಆಚರಿಸಲಾಯ್ತು. ಈ ವೇಳೆ ಬಾಲಿವುಡ್‌ನ ಖ್ಯಾತ ಗೀತ ರಚನೆಕಾರ ಪ್ರಸೂನ್ ಜೋಶಿ (Bollywood's famous lyricist Prasoon Joshi) ಅವರು ನೌಕಾ ದಿನಕ್ಕಾಗಿ ಹೊಸ ಅಂಥೆಮ್ ಸಾಂಗ್ (New Anthem Song) ಬರೆದಿದ್ದರು. ಅದನ್ನು ಭಾರತೀಯ ನೌಕಾಪಡೆಯ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಅನಾವರಣಗೊಳಿಸಿದರು. 'ಕಾಲ್ ಆಫ್ ದಿ ಬ್ಲೂ ವಾಟರ್ಸ್' (Call of the Blue Waters) ಎಂಬ ಸಾಹಿತ್ಯ ಗೀತೆಯಲ್ಲಿ ಭಾರತೀಯ ನೌಕಾದಳದ ಯೋಧರ ಶೌರ್ಯ ಅನಾವರಣಗೊಂಡಿತ್ತು. ಇನ್ನು ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಿಂದ (Delhi) ಹೊರಗೆ ಭಾರತೀಯ ನೌಕಾ ದಿನವನ್ನು ಆಚರಿಸಲಾಯ್ತು. ಈ ಬಾರಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ (Visakhapatnam) ನೌಕಾ ದಿನ ಆಚರಿಸಲಾಯ್ತು.


ರಾಷ್ಟ್ರಪತಿಯವರಿಂದ ಅಂಥೆಮ್ ಗೀತೆ ಅನಾವರಣ


ಭಾರತೀಯ ನೌಕಾಪಡೆಯ ದಿನದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೌಕಾಪಡೆಯ ಗೀತೆಯನ್ನು ಅನಾವರಣಗೊಳಿಸಿದರು. ಅವರು ಭಾರತೀಯ ಟ್ರೈಫೋರ್ಸ್ ಮುಖ್ಯಸ್ಥರಾಗಿ ನೌಕಾಪಡೆಯ ಗೀತೆಯನ್ನು ಅನಾವರಣ ಮಾಡಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೌಕಾ ಗೀತೆಯನ್ನು ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಪ್ರಸೂನ್ ಜೋಶಿ ಹಾಗೂ ಗಾಯಕ ಶಂಕರ್ ಮಹದೇವನ್ ಭಾಗವಹಿಸಿದ್ದರು.
“ಕಾಲ್ ಆಫ್ ದಿ ಬ್ಲೂ ವಾಟರ್”


'ಇಂಡಿಯನ್ ನೇವಿ ಆಂಥೆಮ್: ಕಾಲ್ ಆಫ್ ದಿ ಬ್ಲೂ ವಾಟರ್' ಎಂಬ ಶೀರ್ಷಿಕೆಯ ನೌಕಾಪಡೆಯ ಗೀತೆಯನ್ನು ರಚಿಸಲಾಗಿದೆ. ಜನಪ್ರಿಯ ಗೀತರಚನೆಕಾರ ಪ್ರಸೂನ್ ಜೋಶಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗಾಯಕ ಶಂಕರ್ ಮಹಾದೇವನ್ ಧ್ವನಿ ನೀಡಿದ್ದಾರೆ. ಸಂಜೀವ್ ಶಿವನ್ ಮತ್ತು ದೀಪ್ಲಿ ಪಿಳ್ಳೈ ಶಿವನ್ ಸಂಗೀತ ನಿರ್ದೇಶನ ಮಾಡಿದ್ದು, ಶಂಕರ್ ಏಸನ್ ಲಾಯ್ ಸಂಗೀತ ಸಂಯೋಜಿಸಿದ್ದಾರೆ. ನೌಕಾಗೀತೆ ಭಾರತದ ರಾಷ್ಟ್ರಪತಿಗಳ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.


ನೌಕಾದಿನದಲ್ಲಿ ರಾಷ್ಟ್ರಪತಿಗಳು


ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಹೋರಾಡಿ ಭಾರತವನ್ನು ಗೆಲ್ಲಿಸಿದ INS ಚಾಪೆಲ್ ಹೀಗಿದೆ ನೋಡಿ


ಮೈನವಿರೇಳಿಸಿದ ಗಾಯನ


ರಾಮಕೃಷ್ಣ ಬೀಚ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ಮತ್ತು ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಕೂಡ ಆಗಿರುವ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ಈ ವೇಳೆ ನೌಕಾಪಡೆಯ ಮುಖ್ಯಸ್ಥರು ಮತ್ತು ಕೇಂದ್ರ ರಕ್ಷಣಾ ರಾಜ್ಯ ಸಚಿವರೊಂದಿಗೆ ನೌಕಾಪಡೆಯ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಹಾಜರಿದ್ದರು. ಖ್ಯಾತ ಗಾಯಕ ಶಂಕರ್ ಮಹದೇವನ್ ಅವರು ಮೈನವಿರೇಳುವಂತೆ ಹಾಡನ್ನು ನಿರೂಪಿಸಿದರು. ಭಾರತೀಯ ನೇವಿ ಬ್ಯಾಂಡ್ ಹಾಡಿಗೆ ವಾದ್ಯ ಬೆಂಬಲವನ್ನು ನೀಡಿತ್ತು.


ರಾಷ್ಟ್ರಪತಿಗಳ ಜೊತೆ ಪ್ರಸೂನ್ ಜೋಶಿ ಮತ್ತಿತರರು


ಇದನ್ನೂ ಓದಿ: ಕಡಲ ಮೇಲೆ ತೇಲುವ ನಗರ! 12 ಫುಟ್​ಬಾಲ್ ಸ್ಟೇಡಿಯಂನಷ್ಟು ದೊಡ್ಡದು INS Vikramaditya


ವಿಡಿಯೋ ಗೀತೆಯಲ್ಲಿ ಏನಿದೆ?


'ಇಂಡಿಯನ್ ನೇವಿ ಆಂಥೆಮ್: ಕಾಲ್ ಆಫ್ ದಿ ಬ್ಲೂ ವಾಟರ್' ಎಂಬ ಶೀರ್ಷಿಕೆಯ ನೌಕಾಪಡೆಯ ಗೀತೆಯಲ್ಲಿ ನೌಕಾಪಡೆ ಯೋಧರ ಶೌರ್ಯ, ಸಾಹಸವನ್ನು ಬಣ್ಣಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನೌಕಾಪಡೆಗೆ ಹೊಸ ಧ್ವಜವನ್ನು ನೀಡಿದಾಗ ಮಾಡಿದ್ದ ಭಾಷಣದ ಒಂದು ಭಾಗವನ್ನು ಈ ವಿಡಿಯೋ ಆರಂಭದಲ್ಲಿ ಬಳಸಿಕೊಳ್ಳಲಾಗಿದೆ.


ಭಾರತೀಯ ನೌಕಾ ದಿನಾಚರಣೆ


'ಅಮರ್ತ್ಯ ವೀರ ಪುತ್ರ, ದೃಢವಾದ ಪ್ರತಿಜ್ಞೆಯನ್ನು ಯೋಚಿಸಿ, ಹೊಗಳಿಕೆಯು ಪುಣ್ಯ ಧರ್ಮ, ಮುಂದುವರಿಯಿರಿ, ಮುಂದುವರಿಯಿರಿ, ಮುಂದೆ ಹೋಗು ಎಂಬ ಪ್ರಧಾನಿಯವರ ಭಾಷಣದ ಸಾಲುಗಳು ಇದರಲ್ಲಿವೆ.  ಒಟ್ಟು 6 ನಿಮಿಷ ಮತ್ತು 41 ಸೆಕೆಂಡ್‌ಗಳ ನೌಕಾಪಡೆಯ ಗೀತೆಯ ವಿಡಿಯೋದಲ್ಲಿ ದೇಶಭಕ್ತಿ ಉಕ್ಕುವಂತೆ ಮಾಡಲಾಗಿದೆ.

Published by:Annappa Achari
First published: