Election Results 2021: ಬಂಗಾಳದಲ್ಲಿ ಮುಗ್ಗರಿಸಲಿದೆ ಬಿಜೆಪಿ, ಎರಡಂಕಿಯೂ ದಾಟುವುದಿಲ್ಲ; ನಿಜವಾಯ್ತು ಪ್ರಶಾಂತ್ ಕಿಶೋರ್ ಭವಿಷ್ಯ!

ಇಂದು ಪಶ್ಚಿಮ ಬಂಗಾಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು 294 ವಿಧಾನಸಭಾ ಕ್ಷೇತ್ರಗಳಲ್ಲಿ 204 ಸ್ಥಾನಗಳಲ್ಲಿ ಟಿಎಂಸಿ ಭರ್ಜರಿ ಮುನ್ನಡೆ ಸಾಧಿಸಿ ಜಯದತ್ತ ಮುನ್ನುಗ್ಗುತ್ತಿದೆ. ಆದರೆ ಬಿಜೆಪಿ 84 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿ ತಿಣುಕಾಡುತ್ತಿದೆ.

ಪ್ರಶಾಂತ್​ ಕಿಶೋರ್​.

ಪ್ರಶಾಂತ್​ ಕಿಶೋರ್​.

 • Share this:
  ಕೋಲ್ಕತ್ತಾ (ಮೇ 02); ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎಂಬುದು ಬಿಜೆಪಿ ಪಕ್ಷದ ಬಹುದಿನದ ಕನಸು. ಇದೇ ಕಾರಣಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರು ಕೊರೋನಾ ಭೀತಿಯನ್ನೂ ಲೆಕ್ಕಿಸದೆ ಹತ್ತಾರು ರ್ಯಾಲಿ ನಡೆಸಿದ್ದರು. ಬೃಹತ್ ಚುನಾವಣಾ ಪ್ರಚಾರದ ಮೂಲಕ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದರು. ಆದರೆ, ಇಂದು ಬಂಗಾಳದ ಫಲಿತಾಂಶ ಹೊರಬಿದ್ದಿದ್ದು, ಕೊನೆಗೂ ಬಿಜೆಪಿಗೆ ಮುಖಭಂಗ ಮಾಡುವಲ್ಲಿ ಬಂಗಾಳದ ಮತದಾರ ಯಶಸ್ವಿಯಾಗಿದ್ದಾನೆ. ಆದರೆ, ಕೆಲ ತಿಂಗಳ ಹಿಂದೆಯೇ ರಾಜಕೀಯ ತಜ್ಞ ಪ್ರಶಾಂತ್​ ಕಿಶೋರ್ ಈ ಭವಿಷ್ಯವನ್ನು ನುಡಿದಿದ್ದರು. 2020ರ ಡಿಸೆಂಬರ್ 21 ರಂದು ಮಾತನಾಡಿದ್ದ ಅವರು, " ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡಲಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ನಾನು ಈ ಕ್ಷೇತ್ರ ತ್ಯಜಿಸುತ್ತೇನೆ, ಬರೆದಿಟ್ಟುಕೊಳ್ಳಿ" ಎಂದು ಸವಾಲು ಹಾಕಿದ್ದರು. ಈ ಭವಿಷ್ಯ ಇದೀಗ ನಿಜವಾಗಿದೆ.

  ಅವರು ಈ ಮಾತು ಹೇಳಿ ನಾಲ್ಕು ತಿಂಗಳ ನಂತರ ಅದು ನಿಜವಾಗುತ್ತಿದೆ. ಇಂದು ಪಶ್ಚಿಮ ಬಂಗಾಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು 294 ವಿಧಾನಸಭಾ ಕ್ಷೇತ್ರಗಳಲ್ಲಿ 204 ಸ್ಥಾನಗಳಲ್ಲಿ ಟಿಎಂಸಿ ಭರ್ಜರಿ ಮುನ್ನಡೆ ಸಾಧಿಸಿ ಜಯದತ್ತ ಮುನ್ನುಗ್ಗುತ್ತಿದೆ. ಆದರೆ ಬಿಜೆಪಿ 84 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿ ತಿಣುಕಾಡುತ್ತಿದೆ. ಇನ್ನು ಅಂತಿಮ ಫಲಿತಾಂಶ ಘೋಷಣೆಯಾಗಿಲ್ಲದಿದ್ದರೂ ಈಗಿನ ಟ್ರೆಂಡ್‌ಗಳ ಪ್ರಕಾರ ಬಿಜೆಪಿ 100 ಸ್ಥಾನಗಳಲ್ಲಿ ಗೆಲ್ಲುವುದು ಅಸಾಧ್ಯದ ಮಾತು. ಹಾಗಾಗಿ ಪ್ರಶಾಂತ್ ಕಿಶೋರ್ ನುಡಿದಿದ್ದ ಭವಿಷ್ಯ ನಿಜವಾಗುತ್ತಲಿದೆ.

  ಈ ವರ್ಷದ ಫೆಬ್ರವರಿ 27 ರಂದು ಪ್ರಶಾಂತ್ ಕಿಶೋರ್ ತಮ್ಮ ಮಾತನ್ನು ಪುನರುಚ್ಚರಿಸಿದ್ದರು. "ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಕದನಗಳಲ್ಲಿ ಒಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಇಲ್ಲಿನ ಜನರು ಸರಿಯಾದುದನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸ್ಪಷ್ಟ ಸಂದೇಶವನ್ನು ತಿಳಿಸಲು ಸಜ್ಜಾಗಿದ್ದಾರೆ. ಪಶ್ಚಿಮ ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತಿದೆ. ನನ್ನ ಕೊನೆಯ ಟ್ವೀಟ್‌ನಲ್ಲಿ ಹೇಳಿದ್ದನ್ನು ಮಾಡಲು ಮೇ 2ರವರೆಗೆ ಕಾಯಿರಿ" ಎಂದು ಟ್ವೀಟ್ ಮಾಡಿದ್ದರು.

  ಇದನ್ನೂ ಓದಿ: Nandigram Election Result 2021: ಹಾಲಿ ಸಿಎಂ ಮಮತಾ ಬ್ಯಾನರ್ಜಿಗಿಂತ 34 ಸಾವಿರ ಮತಗಳಿಂದ ಮುಂದಿರುವ ಸುವೇಂದು ಅಧಿಕಾರಿ!

  ಅಲ್ಲದೇ ಇಂಡಿಯಾ ಟುಡೆ ನಿರೂಪಕ ರಾಹುಲ್ ಕುನ್ವಾಲ್‌ಗೆ ಸಂದರ್ಶನ ನೀಡಿದ್ದಾಗ ಅವರು, ಬಿಜೆಪಿ 100 ಸ್ಥಾನಗಳನ್ನು ದಾಟುವುದಿಲ್ಲ ಎಂದು ಅವರು ಮತ್ತೆ ಸವಾಲು ಹಾಕಿದ್ದರು. ರಾಹುಲ್ ಕುನ್ವಾಲ್, “ಇದು ನಿಜವೇ? ಎಂದು ಪದೇ ಪದೇ ಕೇಳಿದ್ದರು. ಒಂದು ವೇಳೆ 100 ದಾಟಿದರೆ ನೀವು ಬೇರೆ ಏನು ಕೆಲಸ ಮಾಡುತ್ತೀರಿ” ಎಂದೆಲ್ಲಾ ಪ್ರಶ್ನಿಸಿದ್ದರು. ಆಗ ಪ್ರಶಾಂತ್ ಕಿಶೋರ್ ಆ ಸಂದರ್ಭ ಬಂದಾಗ ಯೋಚಿಸುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

  ಈಗ ಪ್ರಶಾಂತ್ ಕಿಶೋರ್ ಮಾತು ನಿಜವಾಗುತ್ತಿದ್ದು, ಬಂಗಾಳದಲ್ಲಿ ಬಿಜೆಪಿ 100 ಸ್ಥಾನಗಳನ್ನು ದಾಟಲು ಹೆಣಗಾಡುತ್ತಿದೆ. ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು 200 ಸ್ಥಾನ ಗೆಲ್ಲುತ್ತೇವೆ, ಮುಂದಿನ ಸರ್ಕಾರ ನಮ್ಮದೆ ಎಂಬ ಹೇಳಿಕೆ ನೀಡಿದ್ದರು. ಆದರೆ, ಈ ಎಲ್ಲಾ ಹೇಳಿಕೆಗಳು ಮನ್ನು ಮುಕ್ಕಿದ್ದು, ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಸಿಎಂ ಆಗುವುದು ಖಚಿತವಾಗಿದೆ. ಇನ್ನೊಂದೆಡೆ ಪ್ರಶಾಂತ್ ಕಿಶೋರ್ ಡಿಎಂಕೆ ಪರವಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಡಿಎಂಕೆ ಸಹ ತಮಿಳುನಾಡಿನಲ್ಲಿ ಭರ್ಜರಿ ಜಯಗಳಿಸಿದೆ. ತಮಿಳುನಾಡಿನಲ್ಲೂ ಸಹ ಬಿಜೆಪಿ ಆಢಳಿತರೂಢ ಎಡಿಎಂಕೆ ಜೊತೆಗೆ ಮೈತ್ರಿ ಸಾಧಿಸಿದ್ದು, ಅಲ್ಲೂ ಸಹ ಹೀನಾಯ ಸೋಲನುಭವಿಸಿದೆ.
  Published by:MAshok Kumar
  First published: