Prashant Kishore: ಪಕ್ಷ ಸ್ಥಾಪನೆ ಮುನ್ನ ಬಿಹಾರ ಜನರ ನಾಡಿಮಿಡಿತ ಅರಿಯುವ ಯತ್ನ! 'ಚುನಾವಣಾ ಚಾಣಕ್ಯ'ನ ಪ್ಲಾನ್ ಏನು ಗೊತ್ತಾ?

"ಬಿಹಾರದಲ್ಲಿ ಒಂದು ವರ್ಷ ಕಳೆಯುತ್ತೇನೆ. ಜನರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇನೆ" ಎಂದು ಹೇಳುವ ಮೂಲಕ 'ಚುನಾವಣಾ ತಂತ್ರಜ್ಞ' ಪ್ರಶಾಂತ್ ಕಿಶೋರ್ 'ಜನ್ ಸೂರಾಜ್' ಅಡಿಯಲ್ಲಿ ರಾಜಕೀಯ ಸ್ಥಾಪನೆಯ ತಯಾರಿ ಕೆಲಸಗಳ ಬಗ್ಗೆ ಸುಳಿವು ನೀಡಿದರು. 

'ಚುನಾವಣಾ ಚಾಣಕ್ಯ' ಪ್ರಶಾಂತ್ ಕಿಶೋರ್

'ಚುನಾವಣಾ ಚಾಣಕ್ಯ' ಪ್ರಶಾಂತ್ ಕಿಶೋರ್

  • Share this:
ನವದೆಹಲಿ, ಮೇ 5: ಹೊಸ‌ ರಾಜಕೀಯ ಪಕ್ಷ (New political Party) ಕಟ್ಟುತ್ತಾರೆ ಎಂದು ಹೇಳಲಾಗುತ್ತಿದ್ದ ‘ಚುನಾವಣಾ ತಂತ್ರಜ್ಞ’ ಪ್ರಶಾಂತ್ ಕಿಶೋರ್ (Poll Strategist Prashant Kishore) 'ಎಲ್ಲರ, ನಡುವೆ, ಸಮನ್ವಯತೆ' ಸಾಧಿಸುವ ದೃಷ್ಟಿಯಿಂದ ಬಿಹಾರ ರಾಜ್ಯಾದ್ಯಂತ 'ಜನ್ ಸುರಾಜ್' (Jan Suraaj) ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಪ್ರಶಾಂತ್ ಕಿಶೋರ್, ಕಳೆದ 30 ವರ್ಷಗಳಲ್ಲಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ನಿತೀಶ್ ಕುಮಾರ್ (Nitish Kumar) ಆಳ್ವಿಕೆಯಲ್ಲಿ ಬಿಹಾರವು (Bihar) ಅಭಿವೃದ್ಧಿಯ ಕೊರತೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಸಾರ್ವಜನಿಕರ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ಗಾಂಧಿ ಜಯಂತಿಯಂದು ಪಾದಯಾತ್ರೆ ಆರಂಭ

ಬಿಹಾರದಲ್ಲಿ ಒಂದು ವರ್ಷ ಕಳೆಯುತ್ತೇನೆ. ಜನರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಚುನಾವಣಾ ತಂತ್ರಜ್ಞ 'ಜನ್ ಸೂರಾಜ್' ಅಡಿಯಲ್ಲಿ ರಾಜಕೀಯ ಸ್ಥಾಪನೆಯ ತಯಾರಿ ಕೆಲಸಗಳ ಬಗ್ಗೆ ಸುಳಿವು ನೀಡಿದರು. ಬಿಹಾರದಾದ್ಯಂತ ಕೈಗೊಳ್ಳುವ ಪಾದಯಾತ್ರೆ ವೇಳೆ ಯಾರ ಬೆಂಬಲ ಸಿಗುತ್ತದೆ? ಯಾವ್ಯಾವ ರೀತಿಯ ಬೆಂಬಲ ಸಿಗುತ್ತದೆ ಎಂಬುದನ್ನೂ ಪರಿಕ್ಷೆಗೆ ಒಳಪಡಿಸುವ ಸುಳಿವನ್ನೂ ನೀಡಿದರು.

ಪ್ರಶಾಂತ್ ಕಿಶೋರ್ ಬಹುತೇಕ ಮಹಾತ್ಮ ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2 ರಂದು 3,000 ಕಿಲೋ ಮೀಟರ್ ಪಾದಯಾತ್ರೆ ಆರಂಭಿಸುವ ಸಾಧ್ಯತೆ ಇದೆ. ಪಾದಯಾತ್ರೆ 2023ರ ಮಾರ್ಚ್ ವರೆಗೆ ನಡೆಯುವ ಸಾಧ್ಯತೆ ಇದೆ.

ಬಿಹಾರದ ಅಭಿವೃದ್ಧಿಗೆ ಹೊಸ ಪ್ರಯತ್ನ

ನಾನು ಯಾವುದೇ ರಾಜಕೀಯ ಪಕ್ಷವನ್ನು ಘೋಷಿಸಲು ಹೋಗುವುದಿಲ್ಲ. ಕಳೆದ ಐದು ತಿಂಗಳಲ್ಲಿ ನಾನು 17,000ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದ್ದೇನೆ. ಕಳೆದ ಮೂರು ದಿನಗಳಲ್ಲಿ ನಾನು 150ಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ 17ರಿಂದ 18 ಸಾವಿರ ಜನರನ್ನು ಭೇಟಿ ಮಾಡಿ ಜನ್ ಸೂರಾಜ್ ಕುರಿತು ಚರ್ಚೆ ನಡೆಸುತ್ತೇನೆ ಅಂತ ಅವರು ಹೇಳಿದ್ರು.

ಇದನ್ನೂ ಓದಿ: Modi In Denmark: ಡೆನ್ಮಾರ್ಕ್ ರಾಣಿಯಿಂದ ಮೋದಿಗೆ ರಾಜಾತಿಥ್ಯ, ಇಲ್ಲಿದೆ ಫೋಟೋಸ್

“ಬಿಹಾರ ಹಿಂದುಳಿದ ರಾಜ್ಯವಾಗಿದೆ”

ಕಳೆದ ಮೂರು ದಶಕಗಳಿಂದ ಬಿಹಾರವನ್ನು ಲಾಲು ಮತ್ತು ನಿತೀಶ್ ಆಳ್ವಿಕೆ ನಡೆಸುತ್ತಿದ್ದಾರೆ ಮತ್ತು ಇಬ್ಬರೂ ನಾಯಕರೂ 'ಸಾಮಾಜಿಕ ನ್ಯಾಯ' ಅಥವಾ 'ಅಭಿವೃದ್ಧಿ'ಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಬಿಹಾರವು ಅತ್ಯಂತ ಹಿಂದುಳಿದ ರಾಜ್ಯವಾಗಿದೆ ಎಂಬುದು ಸತ್ಯ. ಆದುದರಿಂದ ಬಿಹಾರದ ಬೆಳವಣಿಗೆಗೆ 'ಹೊಸ ಚಿಂತನೆ ಮತ್ತು ಹೊಸ ಪ್ರಯತ್ನ' ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಚುನಾವಣೆ ಸ್ಪರ್ಧೆಯ ಗುರಿ ಇಲ್ಲ

ಬಿಹಾರದ ಜನ ಹೊಸ ಚಿಂತನೆಯನ್ನು ಅಳವಡಿಸಿಕೊಳ್ಳದಿದ್ದರೆ ರಾಜ್ಯವು ಮುಂದುವರಿಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬಿಹಾರದ ಜನರನ್ನು ಭೇಟಿ ಮಾಡುವುದು ಮತ್ತು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಜನ್ ಸುರಾಜ್ ಉಪಕ್ರಮಕ್ಕೆ ಜನರನ್ನು ಸೇರಿಸುವುದು ನನ್ನ ಗಮನ ಎಂದ ಪ್ರಶಾಂತ್ ಕಿಶೋರ್, ರಾಜಕೀಯವಾಗಿ ಸ್ಪರ್ಧೆ ಮಾಡುವುದು ತಮ್ಮ ಗುರಿ ಎಂಬ ವಿಷಯವನ್ನು ತಳ್ಳಿಹಾಕಿದರು. ಪ್ರಸ್ತುತ ಬಿಹಾರದಲ್ಲಿ ಯಾವುದೇ ಚುನಾವಣೆ ಇಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವುದಿದ್ದರೆ ಚುನಾವಣೆಗೆ ಆರು ತಿಂಗಳ ಮೊದಲು ರಾಜ್ಯಕ್ಕೆ ಬಂದು ಸ್ಪರ್ಧಿಸುತ್ತಿದ್ದೆ ಎಂದು ಹೇಳಿದ್ದಾರೆ.

ನಿತೀಶ್‌ ಕುಮಾರ್‌ ಬಗ್ಗೆ ಕಹಿ ಭಾವನೆಗಳಿಲ್ಲ

ಕಳೆದ 10 ವರ್ಷಗಳಲ್ಲಿ ಜನರು ನನ್ನನ್ನು ಅರ್ಥಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ತಾವು ಜನರ ಗೌರವವನ್ನು ಗೆಲ್ಲುತ್ತೇನೆ.‌ ನನಗೆ ಅವಕಾಶ ನೀಡಿ ಎಂದು ಹೇಳಿದ ಪ್ರಶಾಂತ್ ಕಿಶೋರ್ ಅವರು, ಸಿಎಂ ನಿತೀಶ್ ಕುಮಾರ್ ಅವರೊಂದಿಗಿನ ಸಂಬಂಧದ ಕುರಿತು ಪ್ರತಿಕ್ರಿಯಿಸಿ, 2015ರಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಅವರ ಬಗ್ಗೆ ಯಾವುದೇ ಕಹಿ ಭಾವನೆ ಹೊಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Yogi Adityanath: ಹನುಮ ಜನ್ಮಭೂಮಿ ಅಂಜನಾದ್ರಿಗೆ ಬರ್ತಾರಾ ಯೋಗಿ ಆದಿತ್ಯನಾಥ್? ಹೆಚ್ಚಿದ ಕುತೂಹಲ

“ನಮ್ಮ ನಡುವೆ ತಂದೆ-ಮಗನ ಭಾವನೆ”

ನಿತೀಶ್ ಕುಮಾರ್ ನನ್ನನ್ನು ಭೇಟಿಯಾಗಲು ಕರೆದರೆ ನಾನು ಹೋಗುತ್ತೇನೆ. ಅವರು ಮತ್ತು ನಾನು ಒಟ್ಟಿಗೆ ಇದ್ದಷ್ಟು ದಿನ ನಮ್ಮ ಸಂಬಂಧವು ತಂದೆ ಮತ್ತು ಮಗನಂತೆ ಇತ್ತು, ಆದರೆ ನಾನು ಪ್ರತ್ಯೇಕವಾಗಿ ಯೋಚಿಸಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ಸಿಎಎ ಮತ್ತು ಎನ್‌ಆರ್‌ಸಿ ವಿಷಯದ ಬಗ್ಗೆ ಮೂಡಿದ ಭಿನ್ನಾಭಿಪ್ರಾಯದಿಂದ ಜೆಡಿಯುನಿಂದ ತೆಗೆದುಹಾಕಲಾಗಿದೆ ಎಂದು ವಿವರಿಸಿದರು.
Published by:Annappa Achari
First published: