ಗಾಂಧಿ ಕುಟುಂಬದ್ದು ವಂಶಪಾರಂಪರ್ಯ ರಾಜಕಾರಣವಾದರೆ ಸಿಂಧಿಯಾದು ಏನು?; ಬಿಜೆಪಿಗೆ ಪ್ರಶಾಂತ್​​ ಕಿಶೋರ್​​ ಪ್ರಶ್ನೆ

ಕಾಂಗ್ರೆಸ್​ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯೂ ಸಿಂಧಿಯಾರನ್ನು ರಾಜ್ಯಸಭೆಗೆ ಪಕ್ಷದ ಉಮೇದುವಾರರನ್ನು ಆಯ್ಕೆ ಮಾಡಲಿದೆ ಎನ್ನಲಾಗುತ್ತಿದೆ.

ಪ್ರಶಾಂತ್​ ಕಿಶೋರ್​.

ಪ್ರಶಾಂತ್​ ಕಿಶೋರ್​.

 • Share this:
  ನವದೆಹಲಿ(ಮಾ.10): ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ ಜ್ಯೋತಿರಾದಿತ್ಯ ಸಿಂಧಿಯಾ ಈಗ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದ ಸಿಂಧಿಯಾ ಕಾಂಗ್ರೆಸ್​​ ತೊರೆಯುವ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಅದರಂತೆಯೀಗ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸಿಂಧಿಯಾ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಹೀಗೆಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗಲಿರುವ ಬಗ್ಗೆ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ಮುಖ್ಯಸ್ಥ ಮತ್ತು ಚುನಾವಣಾ ಚಾಣಾಕ್ಷ ಪ್ರಶಾಂತ್​​ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ಸಿನದ್ದು ಕುಟುಂಬ ರಾಜಕಾರಣ ಎಂದು ಸದಾ ಟೀಕಿಸುವ ನೀವು ಈಗ ರಾಜ ಮನೆತನದ ಹೆಸರನ್ನೇ ಬಂಡವಾಳ ಮಾಡಿಕೊಂಡ ಸಿಂಧಿಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲವೇ ಎಂದು ಬಿಜೆಪಿಗೆ ಪ್ರಶ್ನಿಸಿದ್ದಾರೆ.

  ಈ ಸಂಬಂಧ ಟ್ವೀಟ್​​ ಮಾಡಿರುವ ಚುನಾವಣಾ ಚಾಣಾಕ್ಷ ಪ್ರಶಾಂತ್​​ ಕಿಶೋರ್​​, ಗಾಂಧಿ ಉಪನಾಮ ಹೊಂದಿರುವ ಸೋನಿಯಾ ಗಾಂಧಿಯದ್ದು ಕುಟುಂಬ ರಾಜಕಾರಣ ಎನ್ನುತ್ತಿದ್ದ ಬಿಜೆಪಿ ಕೂಡ ಇದನ್ನೇ ಮಾಡುತ್ತಿದೆ. "ಸಿಂಧಿಯಾ" ಎಂಬ ಮನೆತನದ ಹೆಸರು ಹೊಂದಿರುವ ಜ್ಯೋತಿರಾದಿತ್ಯರನ್ನು ಜನ ನಾಯಕ ಎಂದು ಬಿಜೆಪಿ ಗುರುತಿಸಿದೆ. ಹೀಗೆ ಗುರುತಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಕುಟುಂಬ ರಾಜಕಾರಣ ಅಲ್ಲವೇ? ಎಂದು ಬಿಜೆಪಿಗೆ ತಪರಾಕಿ ಬಾರಿಸಿದರು.  ಇನ್ನು, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರದ್ದು ಕುಟುಂಬ ರಾಜಕಾರಣವಾದರೆ, ಸಿಂಧಿಯಾರದ್ದು ಏನು? ಎಂದು ಬಿಜೆಪಿಗೆ ಪ್ರಶಾಂತ್​​ ಕಿಶೋರ್​​ ವ್ಯಂಗ್ಯವಾಡಿದ್ದಾರೆ. ಜತೆಗೆ ತಮ್ಮ ಮನೆತನದ ಹೆಸರು ಹೊಂದಿರುವ ಜ್ಯೋತಿರಾದಿತ್ಯ ಸಿಂಧಿಯಾ, ಜನಸಮೂಹ ಸೆಳೆಯ ಬಲ್ಲ ಸಮರ್ಥ ನಾಯಕನಲ್ಲ ಎಂದು ಹೇಳಿದ್ದಾರೆ.

  ಕಾಂಗ್ರೆಸ್​ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯೂ ಸಿಂಧಿಯಾರನ್ನು ರಾಜ್ಯಸಭೆಗೆ ಪಕ್ಷದ ಉಮೇದುವಾರರನ್ನು ಆಯ್ಕೆ ಮಾಡಲಿದೆ ಎನ್ನಲಾಗುತ್ತಿದೆ.

  ಸಿಂಧಿಯಾ ಅವರು ಕಾಂಗ್ರೆಸ್ ತೊರೆದ ಬೆನ್ನಲ್ಲೇ ಮಧ್ಯಪ್ರದೇಶದ 22 ಜನ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ತಮ್ಮ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡಲು ಮುಂದಾಗಿದ್ದಾರೆ.
  First published: