Prashant Kishor: ಬಿಜೆಪಿ ಶಕ್ತಿ ಬಗ್ಗೆ ತಿಳಿಯದಿರುವುದೇ ರಾಹುಲ್​ ಗಾಂಧಿ ಸಮಸ್ಯೆ; ಪ್ರಶಾಂತ್​ ಕಿಶೋರ್​

ನೀವು ಮೋದಿ ಶಕ್ತಿಯನ್ನು ಪರೀಕ್ಷಿಸಿ, ಅರ್ಥಮಾಡಿಕೊಳ್ಳಿ. ಅದನ್ನು ಅರಿಯದಿದ್ದರೆ, ಅವರನ್ನು ಸೋಲಿಸಲು ಎಂದಿಗೂ ಪ್ರತಿತಂತ್ರ ಹೂಡಲು ಸಾಧ್ಯವಾಗುವುದಿಲ್ಲ

ಪ್ರಶಾಂತ್ ಕಿಶೋರ್.

ಪ್ರಶಾಂತ್ ಕಿಶೋರ್.

  • Share this:
    ಗೋವಾ (ಅ. 28): ಮುಂದಿನ ಹಲವು ದಶಕಗಳ ಕಾಲ ಬಿಜೆಪಿ (BJP) ದೇಶದ ರಾಜಕೀಯದಲ್ಲಿಯೇ ಅಧಿಕಾರದಲ್ಲಿ ಇರಲಿದೆ. ಅದು ತೆರೆಮರೆಗೆ ಸರಿಯುವುದಿಲ್ಲ, ರಾಜಕೀಯ ಕೇಂದ್ರ ಬಿಂದುವಾಗಿಯೇ ಇರಲಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ (Congress Leader Rahul Gandhi) ಈ ಸತ್ಯ ಗೊತ್ತಾಗುತ್ತಿಲ್ಲ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್​ ಕಿಶೋರ್ ತಿಳಿಸಿದ್ದಾರೆ. ಪ್ರಶಾಂತ್​ ಕಿಶೋರ್​ ಅವರ ಈ ಮಾತಿನ ​​ಈ ಸತ್ಯಗಳು ಗಾಂಧಿ ಕುಟುಂಬ (Gandhi Family) ಮತ್ತು ಕಾಂಗ್ರೆಸ್​ನ (Congress party) ವರ್ಚಸ್ಸು ಕುಗ್ಗುವಿಕೆಗೆ ಮತ್ತಷ್ಟು ನಾಂದಿ ಹಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತೃಣಮೂಲ ಕಾಂಗ್ರೆಸ್ (TMC)​ ಮೆಂಟರ್​ ಆಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಪ್ರಶಾಂತ್​ ಕಿಶೋರ್ (Prashant Kishor)​ ಗೋವಾದಲ್ಲಿ ಮಾಧ್ಯಮ ಸಂವಾದದಲ್ಲಿ ಈ ಸತ್ಯಗಳನ್ನು ಹೊರಗೆಡುವಿದ್ದಾರೆ.

    ಮುಂದಿನ ದಶಕಗಳ ಕಾಲ ದೇಶದ ರಾಜಕೀಯದಲ್ಲಿ ಬಿಜೆಪಿ

    ಭಾರತದ ರಾಜಕೀಯದಲ್ಲಿ ಇನ್ನು ಹಲವು ದಶಕಗಳ ಕಾಲ ಬಿಜೆಪಿ ಅಧಿಕಾರ ಮುಂದುವರೆಯಲಿದ್ದು,  ಕೇಂದ್ರ ಬಿಂದುವಾಗಿ ಪಕ್ಷ  ಇರಲಿದೆ. ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ, ಬಿಜೆಪಿ ಭಾರತದ ರಾಜಕೀಯ ಪ್ರಮುಖ ಪಕ್ಷವಾಗಿ ಹೊರ ಹೊಮ್ಮಲಿದೆ. ಹೇಗೆಂದರೆ ಸ್ವಾಂತಂತ್ರ್ಯದ ಬಳಿಕ  40 ವರ್ಷಗಳ ಕಾಲ ಭಾರತದ ರಾಜಕೀಯದಲ್ಲಿ ಕಾಂಗ್ರೆಸ್​ ಸಾಧಿಸಿದ ಹಿಡಿತದಂತೆ ಬಿಜೆಪಿ ಕೂಡ ಮುಂದಿನ ದಶಕಗಳ ಕಾಲ ತನ್ನ ಪ್ರಾಬಲ್ಯ ಮೆರೆಯಲಿದೆ. ಭಾರತದಲ್ಲಿ ಒಂದು ಸಲ ಶೇ 30 ರಷ್ಟು ಮತವನ್ನು ಪಡೆದರೆ ಸಾಕು, ಅಂತಹ ಪಕ್ಷಗಳು ರಾಜಕೀಯ ಪುಟದಿಂದ, ಜನರ ಮನಸ್ಸಿನಿಂದ ಅಷ್ಟು ಬೇಗ ಹೊರ ಹೋಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

    ಜನರ ಮನಸ್ಸಿಂದ ದೂರವಾಗುವ ಮಾತಿಲ್ಲ

    ಬಿಜೆಪಿ ಕೆಲವು ನೀತಿಗಳ ಬಗ್ಗೆಗ್ಗೆ ಜನರು ಕೋಪಗೊಂಡಿದ್ದಾರೆ ಎಂಬ ಮಾತ್ರಕ್ಕೆ ಬಿಜೆಪಿ ರಾಜಕೀಯದಿಂದ ಹೊರ ಗುಳಿಯಲಿದೆ ಎಂಬ ಬಲೆಗೆ ಎಂದಿಗೂ ಸಿಲುಕಬೇಡಿ. ಜನರ ಅಸಮಾಧಾನದಿಂದ ಮೋದಿ ಅವರು ಅಧಿಕಾರ ಕಳೆದುಕೊಳ್ಳಬಹುದು ಆದರೆ, ಬಿಜೆಪಿ ರಾಜಕೀಯ ಅಸ್ತಿತ್ವದಲ್ಲಿ ಇರಲಿದೆ. ರಾಹುಲ್​ ಗಾಂಧಿ ಸಮಸ್ಯೆ ಕೂಡ ಅಲ್ಲೇ ಇದೆ. ಅವರು ಕೂಡ ಜನರು ನರೇಂದ್ರ ಮೋದಿಯವರನ್ನು ದೂರ ತಳ್ಳುತ್ತಾರೆ. ಅವರ ಬಗ್ಗೆ ಜನರಿಗೆ ಕೋಪ ಇದೆ ಎಂದು ಕೊಂಡಿದ್ದಾರೆ. ಆದರೆ, ಆ ರೀತಿ ಎಂದಿಗೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

    ಮೋದಿ ಶಕ್ತಿ ಅರಿಯಿರಿ

    ನೀವು ಅವರ (ಮೋದಿ) ಶಕ್ತಿಯನ್ನು ಪರೀಕ್ಷಿಸಿ, ಅರ್ಥಮಾಡಿಕೊಳ್ಳಿ. ಅದನ್ನು ಅರಿಯದಿದ್ದರೆ, ಅವರನ್ನು ಸೋಲಿಸಲು ಎಂದಿಗೂ ಪ್ರತಿತಂತ್ರ ಹೂಡಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

    ಇದನ್ನು ಓದಿ: Goa Election: ಇಂದು ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ

    ಇದೇ ವೇಳೆ ಕಾಂಗ್ರೆಸ್​ನಲ್ಲಿ ಆಡಳವಾಗಿ ಬೇರೂರಿರುವ ಸಮಸ್ಯೆ ಎಚ್ಚರಿಕೆವಹಿಸುವಂತೆ ಸೂಚಿಸಿದರು. ಇದೇ ವೇಳೆ ದುರದೃಷ್ಟವಶಾತ್ ಆಳವಾಗಿ ಬೇರೂರಿರುವ ಸಮಸ್ಯೆಗಳು ಮತ್ತು ರಚನಾತ್ಮಕ ದೌರ್ಬಲ್ಯಕ್ಕೆ ಯಾವುದೇ ತ್ವರಿತ ಪರಿಹಾರಗಳಿಲ್ಲ ಎಂದು ತಿಳಿಸಿದರು
    ಹೆಚ್ಚಿನ ಜನರು ಅವರ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಲು ಜನಪ್ರಿಯತೆಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ವ್ಯಯಿಸುತ್ತಿಲ್ಲ. ಈ ತಿಳಿದಿದ್ದರೆ ಮಾತ್ರ, ಇದಕ್ಕೆ ಪ್ರತಿತಂತ್ರ ಹೂಡಬಹುದು ಎಂದರು.

    ಇದನ್ನು ಓದಿ: Shocking News: ಯೂಟ್ಯೂಬ್ ನೋಡಿ ಸ್ವತಃ ತಾನೇ ಹೆರಿಗೆ ಮಾಡಿಕೊಂಡ ಕೇರಳದ ಅಪ್ರಾಪ್ತೆ..!

    ಏಪ್ರಿಲ್-ಮೇ ಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಅಭೂತಪೂರ್ವ ಗೆಲುವಿನ ಬಳಿಕ ಜುಲೈನಲ್ಲಿ ಪ್ರಶಾಂತ್​​​ ಕಿಶೋರ್ ಅವರು ಕಾಂಗ್ರೆಸ್​ ನಾಯಕರ ಭೇಟಿ ನಡೆಸಿದ್ದರು. ಆದರೆ, ಮುಂದಿನ ಐದು ಚುನಾವಣೆಗಳಿಂದ ಪ್ರಶಾಂತ್​ ಕಿಶೋರ್​ ದೂರ ಇರಲು ನಿರ್ಧರಿಸಿದ್ದು, 2023ರ ದೇಶದ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದ್ದಾರೆ.

    2014ರಲ್ಲಿ ಪ್ರಧಾನಿ ಮೋದಿಗೆ ಅಭೂತ ಪೂರ್ವ ಗೆಲುವು ತಂದುಕೊಡುವಲ್ಲಿ ಪ್ರಶಾಂತ್​ ಕಿಶೋರ್ ಪಾತ್ರ ಬಹಳ ದೊಡ್ಡದು.
    Published by:Seema R
    First published: