ಪ್ರಶಾಂತ್​​​ ಕಿಶೋರ್​​​ ಐ-ಪ್ಯಾಕ್ ಶಕ್ತಿ ಪಡೆಯುವಲ್ಲಿ ಆಪ್​​​ ಸಕ್ಸಸ್​​; ಕೇಜ್ರಿವಾಲ್​​ ಹ್ಯಾಟ್ರಿಕ್​​ ಸಿಎಂ

ಆಪ್​​ ಭರ್ಜರಿ ಗೆಲುವಿನ ಹಿಂದಿನ ಶಕ್ತಿ ಚುನಾವಣಾ ವಿಶ್ಲೇಷಕ ಪ್ರಶಾಂತ್​ ಕಿಶೋರ್ ಕೂಡ ದೆಹಲಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಭಾರತದ ಆತ್ಮ ದೆಹಲಿಯೊಂದಿಗೆ ನಿಂತ ಮತದಾರರಿಗೆ ಧನ್ಯವಾದಗಳು' ಎಂದು ಪ್ರಶಾಂತ್​ ಕಿಶೋರ್​ ಟ್ವೀಟ್​ ಮಾಡಿದ್ದಾರೆ.

ಪ್ರಶಾಂತ್​​ ಕಿಶೋರ್​​, ಸಿಎಂ ಅರವಿಂದ್​​ ಕೇಜ್ರಿವಾಲ್​

ಪ್ರಶಾಂತ್​​ ಕಿಶೋರ್​​, ಸಿಎಂ ಅರವಿಂದ್​​ ಕೇಜ್ರಿವಾಲ್​

 • Share this:
  ನವದೆಹಲಿ(ಫೆ.11): 2019ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆ ಯಶಸ್ಸು ಕಂಡ ಪರಿಣಾಮ, ವೈಎಸ್‍ಆರ್ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಈ ಬೆನ್ನಲ್ಲೇ ಸಿಎಂ ವೈ.ಎಸ್ ಜಗನ್​​​ ಮೋಹನ್​​ ರೆಡ್ಡಿ ಯಶಸ್ಸಿನ ಹಿಂದಿನ ರೂವಾರಿ ಮತ್ತು ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ಮುಖ್ಯಸ್ಥ ಪ್ರಶಾಂತ್​​ ಕಿಶೋರ್​​ ಅವರಿಗೆ ಬೇಡಿಕೆ ಹೆಚ್ಚಾಯ್ತು. ಅದಾದ ನಂತರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳು ನಾಡು ಸಿಎಂ ಪಳನಿ ಸ್ವಾಮಿ ಸೇರಿದಂತೆ ಹಲವು ರಾಜಕೀಯ ದಿಗ್ಗಜರು, ಐ-ಪ್ಯಾಕ್ ಮುಖ್ಯಸ್ಥ ಪ್ರಶಾಂತ್​​ ಕಿಶೋರ್​​ ಹಿಂದೆ ಬಿದ್ದಿದ್ದರು. ಈ ಮಧ್ಯೆ ಖುದ್ದು ಪ್ರಶಾಂತ್​​ ಕಿಶೋರ್​​, ಸಿಎಂ ಅರವಿಂದ್​​ ಕೇಜ್ರಿವಾಲ್​​ ಭೇಟಿಯಾಗಿ ಆಪ್​​ ಗೆಲುವಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್​​ ಪರವಾಗಿ ಕೆಲಸ ಮಾಡಿದ್ದಾರೆ. ಸಿಎಂ ಅರವಿಂದ್​​ ಕೇಜ್ರಿವಾಲ್​​​ ಕೂಡ ಪ್ರಶಾಂತ್​​​ ಕಿಶೋರ್​​​ ಅವರ ಐ-ಪ್ಯಾಕ್ ಶಕ್ತಿ ಪಡೆಯುವಲ್ಲಿ ಸಫಲರಾಗಿದ್ದಾರೆ. ಇದರ ಪರಿಣಾಮ ಅರವಿಂದ್​​​​ ಕೇಜ್ರಿವಾಲ್​ ದೆಹಲಿಯ ಹ್ಯಾಟ್ರಿಕ್​​ ಸಿಎಂ ಆಗಹೊರಟಿದ್ದಾರೆ. ಇದಕ್ಕೆ ಇಡೀ ದೇಶಾದ್ಯಂತ ದೆಹಲಿ ಮುಖ್ಯಮಂತ್ರಿಗೆ ಅಭಿನಂದನೆಗಳ ಮಹಾಫೂರವೇ ಹರಿದು ಬರುತ್ತಿದೆ.

  ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​ ನೇತೃತ್ವದ ಆಪ್​​ ಗೆಲುವಿಗೆ ಹಲವರು ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಕೇರಳ ಸಿಎಂ ಪಿಣರಾಯ್​​ ವಿಜಯ್​​​, ಡಿಎಂಕೆ ಮುಖ್ಯಸ್ಥ ಸ್ಟಾಲಿನ್​​ ಸೇರಿದಂತೆ ಹಲವರು ಕೇಜ್ರಿವಾಲ್​​​ ಗೆಲುವನ್ನು ಸಂಭ್ರಮಿಸಿದ್ಧಾರೆ. ಆದರೀಗ ಆಪ್​​ ಭರ್ಜರಿ ಗೆಲುವಿನ ಹಿಂದಿನ ಶಕ್ತಿ ಚುನಾವಣಾ ವಿಶ್ಲೇಷಕ ಪ್ರಶಾಂತ್​ ಕಿಶೋರ್ ಕೂಡ ದೆಹಲಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಭಾರತದ ಆತ್ಮ ದೆಹಲಿಯೊಂದಿಗೆ ನಿಂತ ಮತದಾರರಿಗೆ ಧನ್ಯವಾದಗಳು' ಎಂದು ಪ್ರಶಾಂತ್​ ಕಿಶೋರ್​ ಟ್ವೀಟ್​ ಮಾಡಿದ್ದಾರೆ.

  ಇತ್ತೀಚೆಗಷ್ಟೇ ಪ್ರಶಾಂತ್​​ ಕಿಶೋರ್​​​ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಹೊರಬಂದರು. ಸಿಎಎ ಮತ್ತು ಎನ್​​ಆರ್​ಸಿ ವಿಚಾರದಲ್ಲಿ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ ಪ್ರಶಾಂತ್​​ ಕಿಶೋರ್​​ರನ್ನು ಜೆಡಿಯು​​ನಿಂದ ನಿತೀಶ್ ಕುಮಾರ್​​​ ಅವರೇ​​​ ಉಚ್ಚಾಟಿಸಿದ್ದರು.

  ಇದನ್ನೂ ಓದಿ: ಅಮಿತ್ ಶಾ - ಅರವಿಂದ ಕೇಜ್ರಿವಾಲ್; ಇಬ್ಬರಲ್ಲಿ ಯಾರು ನಿಜವಾದ ಚಾಣಾಕ್ಯ?

  ಪ್ರಶಾಂತ್ ಕಿಶೋರ್ ಯಾರು?:

  2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್, ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಜೊತೆಗೆ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಇದೇ ಕಾರಣಕ್ಕಾಗಿಯೇ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು.

   

  ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಉತ್ತಮ ತಂತ್ರ ಹೆಣೆದಿದ್ದರು. ಆದ್ದರಿಂದಲೇ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು, ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

  2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

  ಇನ್ನು, ಕಳೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆಯಿಂದ ವೈಎಸ್‍ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿಎಂ ವೈ.ಎಸ್ ಜಗನ್​​​ ಮೋಹನ್​​ ರೆಡ್ಡಿ ಮೊದಲ ಬಾರಿಗೆ ಆಂಧ್ರದ ಸಿಎಂ ಆದರು. ಇದರ ಹಿಂದಿನ ಯಶಸ್ಸಿನ ರೂವಾರಿ ಪ್ರಶಾಂತ್​​ ಕಿಶೋರ್​ ಈಗ ಸಿಎಂ ಮಮತಾ ಬ್ಯಾನರ್ಜಿಗೆ ಕೆಲಸ ಮಾಡುತ್ತಿದ್ಧಾರೆ.
  First published: