ನಮಗೆ ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ ಇನ್ನಷ್ಟು ಅವಹೇಳನಕಾರಿಯಾಗಿದೆ; ಸುಪ್ರೀಂಕೋರ್ಟ್

ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ನಂಬಿದ್ದರೇ, ಈ ಎಚ್ಚರಿಕೆಯ ಉದ್ದೇಶವಾದರೂ ಏನು ಎಂದು ನ್ಯಾಯಮೂರ್ತಿ ಮಿಶ್ರಾ ಪ್ರಶ್ನಿಸಿದರು. ಭೂಷಣ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್​ ಹೇಳಿಕೆಯೊಂದನ್ನು ನ್ಯಾ.ಮಿಶ್ರಾ ಉಲ್ಲೇಖಿಸಿದರು. ಅವರು ಸಲ್ಲಿಸಿರುವ ಅಫಿಡವಿಡ್​ಅನ್ನು ಒಮ್ಮೆ ಓದಿ. ಅದರಲ್ಲಿ ಅವರು ಸುಪ್ರೀಂಕೋರ್ಟ್ ಕುಸಿದಿದೆ ಎಂದು ಹೇಳಿದ್ದಾರೆ. ಇದು ಆಕ್ಷೇಪಾರ್ಹವಲ್ಲವೇ? ಎಂದರು.

ವಕೀಲ ಪ್ರಶಾಂತ್ ಭೂಷಣ್

ವಕೀಲ ಪ್ರಶಾಂತ್ ಭೂಷಣ್

 • Share this:
  ನವದೆಹಲಿ; ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.‌ಎ. ಬೊಬ್ಡೆ ಮತ್ತು ಸುಪ್ರೀಂ ಕೋರ್ಟ್‌ಗೆ ಬಗ್ಗೆ ಮಾಡಿದ್ದ ಟ್ವೀಟ್‌ ವಿಷಯವಾಗಿ ಕ್ಷಮೆ ಕೋರಲು ನಿರಾಕರಿಸಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಎಚ್ಚರಿಕೆಯೊಂದಿಗೆ ಬಿಡಬೇಕು ಎಂದು ಸರ್ಕಾರದ ಉನ್ನತ ವಕೀಲ ಕೆ.ಕೆ.ವೇಣುಗೋಪಾಲ್ ಹೇಳಿದ್ದಾರೆ.

  ದಯವಿಟ್ಟು ಭವಿಷ್ಯದಲ್ಲಿ ಇದನ್ನು ಪುನಾರಾವರ್ತಿಸದಂತೆ ಅವರಿಗೆ ಎಚ್ಚರಿಕೆ ನೀಡಿ, ಬಿಟ್ಟುಬಿಡಿ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಇಂದು ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ.

  ಪ್ರಶಾಂತ್ ಭೂಷಣ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಲು ಯೋಚಿಸಲು 30 ನಿಮಿಷಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್​ ನೀಡಿತ್ತು. ಪ್ರಕರಣದ ವಿಚಾರಣೆ ಆರಂಭವಾದಾಗ ನ್ಯಾಯಪೀಠ, ನಾವು ಏನು ಮಾಡಬೇಕು ಎಂಬುದನ್ನು ನಮಗೆ ಹೇಳಿ. ಬೇರೊಂದು ಹೇಳಿಕೆಯನ್ನು ನಾವು ನಿರೀಕ್ಷೆ ಮಾಡಬಹುದೇ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್​ ಅವರನ್ನು ಕೇಳಿತು.

  ಅದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ವಕೀಲ ವೇಣುಗೋಪಾಲ್, ಉನ್ನತ ನ್ಯಾಯಾಲಯದ ಭ್ರಷ್ಟಾಚಾರದ ವಿಷಯವಾಗಿ ಹಲವು ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳು ಟೀಕೆ ಮಾಡಿದ್ದಾರೆ. ಈ ವಿಷಯದಲ್ಲಿ ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ನೀಡಬಹುದು. ಆದರೆ, ಶಿಕ್ಷೆಯ ಅಗತ್ಯವಿಲ್ಲ ಎಂದು ಹೇಳಿದರು.

  ಟ್ವೀಟ್​ಗಳನ್ನು ಹಿಂಪಡೆದು ತಮ್ಮ ಹೇಳಿಕೆಗೆ ಕ್ಷಮೆ ಕೋರಲು ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್ ಮೂರು ದಿನಗಳ ಕಾಲಾವಕಾಶ ನೀಡಿತ್ತು.

  ಸೋಮವಾರ, ಭೂಷಣ್ ಅವರು ಉನ್ನತ ನ್ಯಾಯಾಲಯ ನೀಡಿದ್ದ ಮೂರು ದಿನಗಳ ಸಮಯದ ನಂತರ ತಮ್ಮ ಟ್ವೀಟ್‌ಗಳನ್ನು ಹಿಂತೆಗೆದುಕೊಳ್ಳಲು ಅಥವಾ ಕ್ಷಮೆಯಾಚಿಸಲು ನಿರಾಕರಿಸಿದ್ದರು. ಟ್ವೀಟ್ ಮೂಲಕ ನಾನು ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಅಭಿವ್ಯಕ್ತಗೊಳಿಸಿದ್ದೇನೆ. ಸಾರ್ವಜನಿಕವಾಗಿ ನಾನು ವ್ಯಕ್ತಪಡಿಸಿರುವ ಅಭಿಪ್ರಾಯವು ನಾಗರಿಕನಾಗಿ ಮತ್ತು ಕೋರ್ಟಿನ ನಿಷ್ಠಾವಂತ ಅಧಿಕಾರಿಯಾಗಿರುವುದಕ್ಕೆ ಪೂರಕವಾದ ಕಟ್ಟುಪಾಡುಗಳಾಗಿವೆ. ಆದ್ದರಿಂದ, ನ್ಯಾಯಸಮ್ಮತವಾದ ಅಭಿವ್ಯಕ್ತಿಗೆ ಷರತ್ತುಬದ್ಧವಾಗಿ ಅಥವಾ ಬೇಷರತ್ ಆಗಿ ಕ್ಷಮೆ ಕೋರುವುದು ಅಪ್ರಾಮಾಣಿಕ ನಡೆಯಾಗುತ್ತದೆ. ನ್ಯಾಯಾಲಯ ಹೇಳಿದಂತೆ ಪ್ರಾಮಾಣಿಕವಾಗಿಯೇ ಕ್ಷಮೆ ಕೋರಬೇಕು. ಪ್ರಾಮಾಣಿಕವಾಗಿ ನಾನು ಹೇಳಿಕೆ ನೀಡಿದ್ದು ಸಂತ್ಯಾಂಶವನ್ನು ಒಳಗೊಂಡ ಮಾಹಿತಿ ಮೂಲಕ ಮನವಿ ಮಾಡಿದ್ದೇ. ಆದರೆ, ಅದನ್ನು ಕೋರ್ಟ್ ಪರಿಗಣಿಸಿಲ್ಲ ಎಂದು ಭೂಷಣ್ ಹೇಳಿದ್ದರು.

  ಅಟಾರ್ನಿ ಜನರಲ್ ವೇಣುಗೋಪಾಲ್ ಸಲಹೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು, ಆದರೆ, ಅವರು (ಪ್ರಶಾಂತ್ ಭೂಷಣ್) ಮಾಡಿದ್ದು ತಪ್ಪು ಎಂದು ಅವರು ಯೋಚಿಸುವುದಿಲ್ಲ. ಅವರು ಕ್ಷಮೆಯಾಚನೆಯನ್ನು ಸಲ್ಲಿಸಲಿಲ್ಲ. ಜನರು ತಪ್ಪುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಉತ್ತಮವಾದ ತಪ್ಪುಗಳನ್ನೂ ಸಹ ಮಾಡಲಾಗುತ್ತದೆ. ಆದರೆ ಅವರು ತಪ್ಪು ಮಾಡಿದಾಗಲೂ ಅದರ ಬಗ್ಗೆ ಯೋಚಿಸುವುದಿಲ್ಲ. ಯಾರಾದರೂ ಏನಾದರೂ ತಪ್ಪು ಮಾಡಿ, ಅದರ ಬಗ್ಗೆ ಯೋಚಿಸದಿದ್ದಾಗ ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದರು.

  ಇದನ್ನು ಓದಿ: ಕ್ಷಮೆ ಕೇಳುವುದಿಲ್ಲ, ಶಿಕ್ಷೆಯನ್ನು ಸ್ವೀಕರಿಸಲು ಸಂತೋಷದಿಂದ ಕಾಯುತ್ತಿದ್ದೇನೆ; ಪ್ರಶಾಂತ್ ಭೂಷಣ್

  ಇದಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್ ಅವರು, ಇಬ್ಬರು ಸಿಬಿಐ ಅಧಿಕಾರಿಗಳ ಸಂಘರ್ಷದಲ್ಲಿ ನಾನು ಪ್ರಶಾಂತ್ ಭೂಷಣ್ ವಿರುದ್ಧ ನಿಂದನೆ ಅರ್ಜಿ ದಾಖಲಿಸಿದ್ದೆ. ನಾನು ದಾಖಲೆಗಳನ್ನು ತಿರುಚಿದ್ದೇನೆ ಎಂದು ಅವರು ಹೇಳಿದ್ದರು. ಆದರೆ, ಈ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದರು. ಬಳಿಕ ನಾನು ನನ್ನ ಅರ್ಜಿ ಹಿಂಪಡೆದೆ. ಈ ಪ್ರಕರಣದಲ್ಲೂ ಅವರ ವಾಕ್​ಸ್ವಾತಂತ್ರದ ಬಗ್ಗೆ ಹೇಳಿದಾಗ ನಾವು ಸಂವಿಧಾನ ಅನುಸರಿಸಬೇಕಾಗುತ್ತದೆ ಎಂದು ತಿಳಿಸಿದರು.

  ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ನಂಬಿದ್ದರೇ, ಈ ಎಚ್ಚರಿಕೆಯ ಉದ್ದೇಶವಾದರೂ ಏನು ಎಂದು ನ್ಯಾಯಮೂರ್ತಿ ಮಿಶ್ರಾ ಪ್ರಶ್ನಿಸಿದರು. ಭೂಷಣ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್​ ಹೇಳಿಕೆಯೊಂದನ್ನು ನ್ಯಾ.ಮಿಶ್ರಾ ಉಲ್ಲೇಖಿಸಿದರು. ಅವರು ಸಲ್ಲಿಸಿರುವ ಅಫಿಡವಿಡ್​ಅನ್ನು ಒಮ್ಮೆ ಓದಿ. ಅದರಲ್ಲಿ ಅವರು ಸುಪ್ರೀಂಕೋರ್ಟ್ ಕುಸಿದಿದೆ ಎಂದು ಹೇಳಿದ್ದಾರೆ. ಇದು ಆಕ್ಷೇಪಾರ್ಹವಲ್ಲವೇ? ಎಂದರು.
  Published by:HR Ramesh
  First published: