Praveen Murder: ಪ್ರವೀಣ್ ಹತ್ಯೆ, ಸರ್ಕಾರದಲ್ಲಿ ಗಟ್ಸ್ ಇಲ್ಲ! ಗುಡುಗಿದ ಪ್ರಮೋದ್ ಮುತಾಲಿಕ್

ಈ ಕೌರ್ಯ ಹದ್ದುಬಸ್ತಿನಲ್ಲಿಡೋ ಕಾರ್ಯ ಸರ್ಕಾರ ಕೂಡಲೇ ಮಾಡಬೇಕು. ಇಲ್ಲದೇ ಹೋದಲ್ಲಿ ಇನ್ನೂ ಸಾಕಷ್ಟು ಹಿಂದೂಗಳ ಬಲಿಯಾಗತ್ತೇ ಅನಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ವಿಫಲ ಆಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಧಾರವಾಡ(ಜು.27): ಬಿಜೆಪಿ ಯುವಮುಖಂಡ ಪ್ರವೀಣ ನೆಟ್ಟಾರ್ (Praveen Nettar)  ಹತ್ಯೆ ಹಿಂದೆ ಕೇರಳದ (Kerala) ಮೂಲ ಅಂತಾ ಹೇಳುತ್ತಿದ್ದಾರೆ. ವಾರದ ಹಿಂದೆ ನಡೆದ ಹತ್ಯೆಗೆ ಸೇಡಿಗೆ ಮಾಡಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. ಮುಸ್ಲಿಮರು ಮಾಡಿರೋ ಲಕ್ಷಾಂತರ ಕೊಲೆಗಳಿಗೆ ನಾವು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬನೂ ಮುಸ್ಲಿಂ ಇರಬಾರದು, ಆದರೆ ಆ ಮಾನಸಿಕತೆ ಇರಬಾರದು, ಕೊಲೆಗೆ (Murder) ಕೊಲೆಯೇ ಉತ್ತರ ಅಲ್ಲ. ಆದರೆ ಹಿಂದುಗಳ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ‌ ಮುತಾಲಿಕ (Pramod Muthalik) ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೌರ್ಯ ಹದ್ದುಬಸ್ತಿನಲ್ಲಿಡೋ ಕಾರ್ಯ ಸರ್ಕಾರ ಕೂಡಲೇ ಮಾಡಬೇಕು. ಇಲ್ಲದೇ ಹೋದಲ್ಲಿ ಇನ್ನೂ ಸಾಕಷ್ಟು ಹಿಂದೂಗಳ ಬಲಿಯಾಗತ್ತೇ ಅನಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ವಿಫಲ ಆಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.

ಕೊಲೆ, ಹಲ್ಲೆ, ಗಲಾಟೆಯಾದಾಗ ಉಗ್ರವಾದ ಹೇಳಿಕೆಗಳು ಬರುತ್ತಾವೆ, ಆದರೆ ಮುಂದೆ ಏನು. ಇನ್ನುವರೆಗೆ ಯಾವುದೇ ರೀತಿಯ ಕಠಿಣ ಪ್ರಕ್ರಿಯೆ ನಡೆದಿಲ್ಲ, ಇದೇ ಕಾರಣಕ್ಕೆ ಪ್ರವೀಣ ಹತ್ಯೆ ಆಗಿದೆ. ಇದು ಕಾನೂನು, ಸರ್ಕಾರದ ವೈಫಲ್ಯ. ಬಿಜೆಪಿಗೆ ಹಿಂದೂಗಳ ಸುರಕ್ಷತೆ ಕಾಳಜಿಯಿದ್ದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಮಾಡಬೇಕು.

ಹತ್ಯೆ ಹಿಂದೆ ಕೇರಳದ ಮೂಲ

ಈ ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳುತ್ತಿದ್ದಾರೆ. ವಾರದ ಹಿಂದೆ ನಡೆದ ಹತ್ಯೆಗೆ ಸೇಡಿಗೆ ಮಾಡಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. ಮುಸ್ಲಿಂರು ಮಾಡಿರೋ ಲಕ್ಷಾಂತರ ಕೊಲೆಗಳಿಗೆ ನಾವು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬನೂ ಮುಸ್ಲಿಂ ಇರಬಾರದು. ಆದರೆ ಆ ಮಾನಸಿಕತೆ ಇರಬಾರದು. ಕೊಲೆಗೆ ಕೊಲೆಯೇ ಉತ್ತರ ಅಲ್ಲ, ನ್ಯಾಯಕ್ಕೆ ನ್ಯಾಯಾಲಯ ಇದೆ, ಪೊಲೀಸ್ ಠಾಣೆ ಇದೆ.

ಮುಲ್ಲಾ ಮೌಲ್ವಿಗಳು ಎಸ್‌ಡಿಪಿಐ, ಪಿ‌ಎಫ್‌ಐ ಹದ್ದುಬಸ್ತಿನಲ್ಲಿಡಬೇಕು

ಸಂವಿಧಾನಬದ್ಧವಾದ ಹೋರಾಟಕ್ಕೆ ಅವಕಾಶ ಇದೆ.‌ ಮುಲ್ಲಾ ಮೌಲ್ವಿಗಳು ಎಸ್‌ಡಿಪಿಐ, ಪಿ‌ಎಫ್‌ಐ ಹದ್ದುಬಸ್ತಿನಲ್ಲಿಡಬೇಕು.‌ ಶಾಂತಿ-ಸೌಹಾರ್ದತೆ ಬೇಕಾದರೆ ಹದ್ದುಬಸ್ತಿನಲ್ಲಿಡಿ. ಇಲ್ಲದೇ ಹೋದಲ್ಲಿ ಹಿಂದೂ ಸಮಾಜ ತಿರುಗಿ ಬೀಳುತ್ತದೆ, ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ ಎಂದರು.‌

ಭದ್ರಕೋಟೆಯಲ್ಲೇ ಹೊಕ್ಕು ಹೊಡಿತಾ ಇದಾರೆ

ಹೀಗೆ ಮುಂದುವರೆದರೆ ಸರ್ಕಾರ, ಬಿಜೆಪಿ, ಕಾನೂನು ಏನೂ ಮಾಡಲು ಆಗುವುದಿಲ್ಲ, ಸರ್ಕಾರದ ಹದ್ದಿನ ಕಣ್ಣು ಎಲ್ಲಿದೆ, ಸರ್ಕಾರದ ಬಿಗಿಯಾದ ಕ್ರಮ ಇಲ್ಲ. ಇದೇ ಕಾರಣಕ್ಕೆ ಇದೆಲ್ಲ ಆಗುತ್ತಿದೆ. ಮೋದಿ ಮತ್ತು ಯೋಗಿ ಮಾದರಿಯಲ್ಲಿ ಗಟ್ಸ್ ಇಲ್ಲ. ಆ ಧೈರ್ಯ, ಮಾನಸಿಕತೆ ಇವರಿಗೆ ಇಲ್ಲ, ಆ ನೈತಿಕತೆಯೂ ಇವರಿಗೆ ಇಲ್ಲ.‌ ಎಲ್ಲೋ ಒಂದು ಕಡೆ ಆತಂಕ, ಭಯ ಇದೆ. ಮುಸ್ಲಿಂ ವೋಟ್‌ಗಾಗಿ ಸ್ವಲ್ಪ ಅಲ್ಲಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ, ಶಿವಮೊಗ್ಗ ಬಿಜೆಪಿಯ ಭದ್ರ ಕೋಟೆ.‌ ಅವರ ಭದ್ರಕೋಟೆಯಲ್ಲೇ ಹೊಕ್ಕು ಹೊಡಿತಾ ಇದಾರೆ, ಹಾಗಾದರೆ ಭದ್ರ ಕೋಟೆ ಛಿದ್ರವಾಗುತ್ತಿದೆಯಲ್ಲ.

Praveen Murder: ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ

ಹಿಂದೂಗಳ ಕೊಲೆ‌ಮಾಡಿದರೂ ಏನೂ ಮಾಡಲು ಆಗೋದಿಲ್ಲ ಎಂಬ ಸಂದೇಶ ಕೊಡುತ್ತಿದ್ದಾರೆ, ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡಬೇಕು. ಇಲ್ಲವೇ ಸಿಎಂ ರಾಜೀನಾಮೆ ಕೊಡಬೇಕು. ಇನ್ನೂ ಅದೆಷ್ಟು ಬಲಿ ಕೊಡಬೇಕು ಮಾಡಿದೀರಿ, ಇದಕ್ಕೆ ಬಿಜೆಪಿಯೇ ಕಾರಣ,‌ಬ್ಯಾನ್ ಮಾಡದೇ ಇದ್ದುದ್ದಕ್ಕೆ ಈ ಕೊಲೆ ಅಗಿದೆ.
Published by:Divya D
First published: