ದೆಹಲಿ(ಜು. 19): ಆನೆ (Elephant) ಕೊಂದು ದಂತ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಆರೋಪಿಯನ್ನು ಹಾಸನ ಸಂಸದ ಪ್ರಜ್ವಲ್ ರೇವಣ್ಣ (MP Prajwal Revanna) ರಕ್ಷಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕಿ ಮನೆಕಾ ಗಾಂಧಿ (Maneka Gandhi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರಿಗೆ ಪತ್ರ ಬರೆದಿದ್ದಾರೆ. ತಕ್ಷಣ ಮಧ್ಯಪ್ರವೇಶ ಮಾಡಿ ನಿಷ್ಪಕ್ಷಪಾತವಾದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು, 'ಆನೆ ಸಾಯಿಸಿ ದಂತ ಕದ್ದಿರುವವರ ರಜ್ಷಣೆ ಮಾಡುವಂತೆ ನಾನು ಯಾವುದೇ ಅಧಿಕಾರಿಗೆ ಒತ್ತಡ ಹಾಕಿಲ್ಲ. ಸಾಕ್ಷಿ ಇದ್ದರೆ ಕೊಡಿ' ಎಂದು ಮೇನಕಾ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.
ಪೂರ್ತಿ ಮಾಹಿತಿ ಪಡೆದು ಮಾತನಾಡಿ
ನವದೆಹಲಿಯ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಜ್ವಲ್ ರೇವಣ್ಣ, 'ನಾನು ಹಾಸನದಲ್ಲಿ ಆನೆ ದಂತ ಕಳ್ಳತನಕ್ಕೆ ಸಹಾಯ ಮಾಡಿದ್ದೇನೆ ಎಂದು ಬಿಜೆಪಿಯ ಹಿರಿಯ ನಾಯಕಿ ಹಾಗೂ ಸಂಸದೆ ಮೇನಕಾ ಗಾಂಧಿ ಅವರು ಆರೋಪಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ. ಅವರು ಪೂರ್ತಿ ಮಾಹಿತಿ ಪಡೆದು ಮಾತನಾಡಬೇಕಿತ್ತು. ದಿಶಾ ಸಭೆಯಲ್ಲಿ ಈ ವಿಚಾರದ ಬಗ್ಗೆ ನನ್ನ ಗಮನಕ್ಕೆ ಬಂತು. ಆನೆ ಸಾವನ್ನಪ್ಪಿರುವುದು ನನಗೆ ಗೊತ್ತಿಲ್ಲ. ನಾನು ಯಾವುದೇ ಅಧಿಕಾರಿಗೆ ಒತ್ತಡ ಹಾಕಿಲ್ಲ. ಸಾಕ್ಷಿ ಇದ್ದರೇ ಕೊಡಿ, ನಾನು ತಲೆ ಬಾಗುವೆ ಎಂದಿದ್ದಾರೆ.
ನನ್ನ ಪಾತ್ರ ಏನಿದೆ: ಪ್ರಜ್ವಲ್ ಪ್ರಶ್ನೆ
ಆನೆ ಸಾವನ್ನಪ್ಪಿದರೇ ಅರಣ್ಯ ಇಲಾಖೆ ದೂರು ದಾಖಲು ಮಾಡಬೇಕು ಎಂಬುದು ನಿಯಮ. ಹಾಗಾಗಿ ಆನೆ ದೇಹ ಹಾಸನದಲ್ಲಿ ಸಿಕ್ಕ ಹಿನ್ನಲೆಯಲ್ಲಿ ಹಾಸನದಲ್ಲಿ ದೂರು ದಾಖಲಾಗಿದೆ. ಕದ್ದವರಿಗೆ ನಾನು ಜಾಮೀನಿ ಕೊಡಿಸಿದ್ದೇನೆ ಎಂದು ಮೇನಕಾ ಗಾಂಧಿ ಆರೋಪ ಮಾಡಿದ್ದಾರೆ. ನಾನು ಹೇಗೆ ಜಾಮೀನು ಕೊಡಿಸಲು ಸಾಧ್ಯ? ಜಾಮೀನು ನೀಡುವುದು ನ್ಯಾಯಾಲಯ. ಇದರಲ್ಲಿ ನನ್ನ ಪಾತ್ರ ಏನಿದೆ ಎಂದು ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು.
ಇದನ್ನೂ ಓದಿ: Maharastra Politics: ಮಹಾರಾಷ್ಟ್ರ ರಾಜಕಾರಣಕ್ಕೆ ಮಹಾ ಟ್ವಿಸ್ಟ್, ಉದ್ಧವ್ ಠಾಕ್ರೆ-ದೇವೇಂದ್ರ ಫಡ್ನವೀಸ್ ಮಾತುಕತೆ!
ಡ್ರೈವರ್ ತಪ್ಪಿಗೆ ಮಾಲಿಕನಿಗೆ ಶಿಕ್ಷೆ
ಸಂಸದರೊಬ್ಬರ ಮೇಲೆ ಆರೋಪ ಮಾಡುವಾಗ ಮೇನಕಾ ಗಾಂಧಿ ಅವರಿಗೆ ಪೂರ್ಣ ತಿಳುವಳಿಕೆ ಇರಬೇಕಿತ್ತು. ನಾನು ಕೂಡ ಪತ್ರ ಬರೆಯುತ್ತೇನೆ. ಪ್ರಮಾಣದ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ ದೂರು ದಾಖಲಿಸಿಕೊಂಡಿದೆ. ಹಾಸನದಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದೆ.
ನಾನು ಸಹಾಯ ಮಾಡಿರುವುದಕ್ಕೆ ಏನಾದ್ರು ಸಾಕ್ಷ್ಯ ಇದೆಯಾ? ನಾನು ಅಧಿಕಾರಿಗಳಿಗೆ ಒತ್ತಡ ಹಾಕಿರುವುದು ಸಾಬೀತಾದರೆ ನೀವು ಹೇಳಿದ ಹಾಗೇ ಕೇಳುತ್ತೇನೆ. ದುಡ್ಡಿಗಾಗಿ ಜೆಸಿಬಿ ಡ್ರೈವರ್ ಆನೆ ದೇಹವನ್ನು ಹೂತಿದ್ದಾನೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿ ಅಂತಾ ನಾನೇ ಹೇಳಿದ್ದೇನೆ. ಆದರೆ ಈ ಪ್ರಕರಣದಲ್ಲಿ ಡ್ರೈವರ್ ಮಾಡಿದ ಕೆಲಸಕ್ಕೆ ಮಾಲೀಕರಿಗೆ ತೊಂದರೆ ಕೊಡುತ್ತಿದ್ದಾರೆ.
ಇದನ್ನೂ ಓದಿ: Maneka Gandhi: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೇಕಾ ಗಾಂಧಿ ದೂರು; ಆನೆ ದಂತ ಮಾರಾಟದ ಆರೋಪಿಗಳ ರಕ್ಷಣೆಗೆ ಒತ್ತಡದ ಆರೋಪ
ಅದಕ್ಕಾಗಿ ತನಿಖೆ ಮಾಡಿ ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸಲು ಒತ್ತಾಯಿಸಿದ್ದೇನೆ. ಈ ಬಗ್ಗೆ ಯಾವುದೇ ಅಧಿಕಾರಿಗಳಿಗೆ ಫೋನ್ ಮಾಡಿ ಕೇಳಿ. ಮಾಹಿತಿ ಇಲ್ಲದೇ ಸುಮ್ಮನೆ ಪತ್ರ ಬರೆಯಬಾರದು. ನಾನು ಪ್ರಾಣಿ ಪ್ರೀಯ, ನಾನು ಇದರ ವಿರುದ್ಧ ಇದ್ದೇನೆ ಎಂದು ಪ್ರಜ್ವಲ್ ರೇವಣ್ಣ ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ