ಬಾಯ್ಬಿಟ್ಟರೆ ವಿವಾದ ಸೃಷ್ಟಿಸುವ ಪ್ರಗ್ಯಾರಿಂದ ಫಲಿತಾಂಶದವರೆಗೂ ಮೌನವ್ರತದ ಪ್ರತಿಜ್ಞೆ

ಕ್ಷೇತ್ರದಲ್ಲಿ  ಗೆಲುವಿನ ಉತ್ಸಾಹದಲ್ಲಿರುವ ಪ್ರಗ್ಯಾ ಇಂದಿನಿಂದ ಮೂರು ದಿನಗಳ ಕಾಲ ಮೌನ ಪ್ರತಿಜ್ಞೆ ಕೈಗೊಂಡಿರುವ ಪ್ರಗ್ಯಾ ಸರಿಯಾಗಿ ಫಲಿತಾಂಶದ ದಿನದಂದು ವೃತ ಮುಗಿಸಲಿದ್ದಾರೆ.

Seema.R | news18
Updated:May 20, 2019, 7:04 PM IST
ಬಾಯ್ಬಿಟ್ಟರೆ ವಿವಾದ ಸೃಷ್ಟಿಸುವ ಪ್ರಗ್ಯಾರಿಂದ ಫಲಿತಾಂಶದವರೆಗೂ ಮೌನವ್ರತದ ಪ್ರತಿಜ್ಞೆ
ಪ್ರಗ್ಯಾ ಸಿಂಗ್ ಠಾಕೂರ್
  • News18
  • Last Updated: May 20, 2019, 7:04 PM IST
  • Share this:
ನವದೆಹಲಿ (ಮೇ.20): ಚುನಾವಣಾ ಪ್ರಚಾರದಲ್ಲಿ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವೇ ಸುದ್ದಿಯಾಗಿದ್ದ ಭೋಪಾಲ್​ ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್ ಫಲಿತಾಂಶದವರೆಗೂ ಮೌನ ವ್ರತ ಆಚರಿಸಲು ಮುಂದಾಗಿದ್ದಾರೆ.

ನಾಥುರಾಮ್​ ಗೋಡ್ಸೆ ಒಬ್ಬ ದೇಶಭಕ್ತ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಪ್ರಗ್ಯಾ ಇಂದು ಮತ್ತೊಮ್ಮೆ ಕ್ಷಮೆಯಾಚಿಸಿ ಟ್ವೀಟ್​ ಮಾಡಿದ್ದು, ಇಂದಿನಿಂದ ಮೌನ ವ್ರತ ಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ.

ಚುನಾವಣೆಯ ಬಳಿಕ ಇದು ಪ್ರತಿಫಲನ ಪಡೆಯುವ ಸಮಯ. ನನ್ನ ಮಾತುಗಳಿಂದ ಕೆಲವರ ಭಾವನೆಗಳಿಗೆ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಮೂರು ದಿನಗಳ ಕಾಲ ನಾನು ಕಠಿಣ ಮೌನಕ್ಕೆ ಶರಣಾಗುತ್ತಿದ್ದೇನೆ ಎಂದಿದ್ದಾರೆ.

ಕ್ಷೇತ್ರದಲ್ಲಿ ಗೆಲುವಿನ ಉತ್ಸಾಹದಲ್ಲಿರುವ ಪ್ರಗ್ಯಾ ಇಂದಿನಿಂದ ಮೂರು ದಿನಗಳ ಕಾಲ ಮೌನವ್ರತ ಪ್ರತಿಜ್ಞೆ ಕೈಗೊಂಡಿದ್ದು, ಫಲಿತಾಂಶದ ದಿನದಂದು ವ್ರತ ಮುಗಿಸಲಿದ್ದಾರೆ.

ಮಧ್ಯಪ್ರದೇಶದ ಅಗರ್ ಮಾಲವಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಪ್ರಗ್ಯಾ ಸಿಂಗ್, “ನಾಥುರಾಮ್ ಗೋಡ್ಸೆ ಒಬ್ಬ ದೇಶಭಕ್ತರಾಗಿದ್ದವರು, ಮುಂದೆಯೂ ಅವರು ದೇಶಭಕ್ತರೇ. ಅವರನ್ನು ಭಯೋತ್ಪಾದಕ ಎಂದು ಕರೆಯುವವರು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಇಂಥವರಿಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಗ್ಯಾ ಸಿಂಗ್ ಅವರ ಈ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ. ನಾವು ಇದನ್ನು ಖಂಡಿಸುತ್ತೇವೆ. ಈ ಬಗ್ಗೆ ಆಕೆಯಲ್ಲಿ ಸ್ಪಷ್ಟನೆ ಕೇಳುತ್ತೇವೆ. ಅವರು ಈ ಹೇಳಿಕೆಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ತಿಳಿಸಿದ್ದರು. ತಮ್ಮ ಹೇಳಿಕೆಗೆ ಸ್ವಪಕ್ಷದಿಂದಲೇ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಸಾಧ್ವಿ ಪ್ರಗ್ಯಾ ಸಿಂಗ್ ಅವರು ಮಧ್ಯಪ್ರದೇಶ ಘಟಕದ ಬಿಜೆಪಿಗೆ ಕ್ಷಮೆ ಯಾಚಿಸಿ ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿತ್ತು.

ಇದನ್ನು ಓದಿ: Bhopal Lok Sabha Exit Poll 2019: ಕಟ್ಟರ್​ v/s ಮೃದು ಹಿಂದುತ್ವ: ಭೋಪಾಲ್​ನ ಧರ್ಮಯುದ್ಧದಲ್ಲಿ ಯಾರಿಗೆ ಸಿಗಲಿದೆ ಜಯ?ಪ್ರಧಾನಿ ಮೋದಿ ಕೂಡ ಪ್ರಗ್ಯಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದರು. “ಬಾಪುವನ್ನು ಅವಮಾನಗೊಳಿಸಿದರೆ ನಾನು ಎಂದು ಕ್ಷಮಿಸುವುದಿಲ್ಲ “ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದರು.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'

First published: May 20, 2019, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading