• Home
  • »
  • News
  • »
  • national-international
  • »
  • Prachanda: ನೇಪಾಳ ಗೆದ್ದ ಪ್ರಚಂಡ, ಹೊಸ ಪ್ರಧಾನಿಯಾಗಿ ಆಯ್ಕೆ

Prachanda: ನೇಪಾಳ ಗೆದ್ದ ಪ್ರಚಂಡ, ಹೊಸ ಪ್ರಧಾನಿಯಾಗಿ ಆಯ್ಕೆ

ಪ್ರಚಂಡ

ಪ್ರಚಂಡ

ಕಳೆದ ತಿಂಗಳು ನೇಪಾಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರೆತಿರಲಿಲ್ಲ. ನೇಪಾಳಿ ಕಾಂಗ್ರೆಸ್ 89 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

  • News18 Kannada
  • 5-MIN READ
  • Last Updated :
  • New Delhi, India
  • Share this:

    ನೇಪಾಳದ ಹೊಸ ಪ್ರಧಾನಮಂತ್ರಿಯಾಗಿ ಪ್ರಚಂಡ (Prachanda) ಎಂದೇ ಕರೆಸಿಕೊಳ್ಳುವ ಪುಷ್ಪ ಕಮಲ್ ದಹಲ್ (Maoist chief Pushpa Kamal Dahal) ಆಯ್ಕೆಯಾಗಿದ್ದಾರೆ. ಪ್ರಚಂಡ ಅವರು 275 ಸದಸ್ಯರ ಸದನದಲ್ಲಿ 170 ಸಂಸದರ ಬೆಂಬಲವನ್ನು ಅವರು ಪ್ರತಿಪಾದಿಸಿದ್ದಾರೆ. ಅಲ್ಲದೇ ಆರು ಪಕ್ಷಗಳ ಮತ್ತು ನಾಲ್ಕು ಸ್ವತಂತ್ರರ ಸದಸ್ಯರ - ಬೆಂಬಲವನ್ನು ಅವರು ಗಳಿಸಿದ್ದಾರೆ. ಕಳೆದ ತಿಂಗಳು ನೇಪಾಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರೆತಿರಲಿಲ್ಲ. ನೇಪಾಳಿ ಕಾಂಗ್ರೆಸ್ 89 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ CPN-UML ಮತ್ತು CPN-MC ಕ್ರಮವಾಗಿ 78 ಮತ್ತು 32 ಸ್ಥಾನಗಳನ್ನು ಪಡೆದುಕೊಂಡಿದ್ದವು.


    ಪ್ರಚಂಡ ಅವರು ಸದ್ಯದಲ್ಲೇ ನೇಪಾಳ ರಾಷ್ಟ್ರಪತಿ ಬಿಧ್ಯಾ ದೇವಿ ಭಂಡಾರಿಯವರ ಬಳಿಗೆ ತೆರಳಿ ಪ್ರಧಾನಿ ಹುದ್ದೆಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಚಂಡ 2025 ರವರೆಗೆ ಅಧಿಕಾರದ ಗದ್ದುಗೆಯಲ್ಲಿ ಇರಲಿದ್ದಾರೆ ಎಂದು ನೇಪಾಳದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


    ನೇಪಾಳ ಅಧ್ಯಕ್ಷರ ಕಚೇರಿಯಿಂದ ಅಧಿಕೃತ ಹೇಳಿಕೆ
    ಸಂವಿಧಾನದ 76(2)ನೇ ವಿಧಿಯ ಪ್ರಕಾರ ಪ್ರಚಂಡ ನೇಪಾಳದ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದಾರೆ ಎಂದು ಅಧ್ಯಕ್ಷರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.


    ಇದನ್ನೂ ಓದಿ: Covid Alert: ಈ ದೇಶಗಳಲ್ಲಿ ಹೆಚ್ಚುತ್ತಿವೆ ಕೊರೊನಾ ಪ್ರಕರಣಗಳು: ಇಲ್ಲಿಗೆ ಹೋಗದೆ ಇರೋದೆ ಒಳ್ಳೆಯದು


    ಸೋಮವಾರ  ಮೂರನೇ ಬಾರಿಗೆ ಅಧಿಕಾರ ಸ್ವೀಕಾರ!
    ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಪ್ರಚಂಡ ಅವರು ಸೋಮವಾರ ನೇಪಾಳ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


    ಈ ಹಿಂದೆ ಪ್ರಧಾನಿಯಾಗಿದ್ದ ಶೇರ್ ಬಹದ್ದೂರ್ ದೇವುಬಾ
    ಶೇರ್ ಬಹದ್ದೂರ್ ದೇವುಬಾ ಅವರು ನೇಪಾಳದ ಹಿಂದಿನ ಪ್ರಧಾನಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದರು. ಐದನೇ ಬಾರಿ ಅವರು ನೇಪಾಳದ ಪ್ರಧಾನಮಂತ್ರಿ ಹುದ್ದೆಗೆ ಏರಿದ್ದರು. ಜೂನ್ 2017 ರಿಂದ ಫೆಬ್ರವರಿ 2018, ಜೂನ್ 2004 ರಿಂದ ಫೆಬ್ರವರಿ 2005, ಜುಲೈ 2001 ರಿಂದ ಅಕ್ಟೋಬರ್ 2002 ಮತ್ತು ಸೆಪ್ಟೆಂಬರ್ 1995 ರಿಂದ ಮಾರ್ಚ್ 1997 ರ ವರೆಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು.


    68 ವರ್ಷದ ಪ್ರಚಂಡ ಮುಂದೇನು ಮಾಡಲಿದ್ದಾರೆ?
    ಪ್ರಚಂಡ ಮತ್ತು ಅವರ ಮುಖ್ಯ ಬೆಂಬಲಿಗ ಕೆ.ಪಿ. ಶರ್ಮಾ ಓಲಿ ಈ ಹಿಂದೆ ಪ್ರಾದೇಶಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ವಿವಾದಗಳನ್ನು ಸೃಷ್ಟಿಸಿದ್ದರು. ಸದ್ಯ 68 ವರ್ಷ ವಯಸ್ಸಿನ ಪ್ರಚಂಡ ನೇಪಾಳ ಪ್ರಧಾನಿಯಾಗಿರುವುದು ಭಾರತಕ್ಕೆ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಕಾದುನೋಡಬೇಕಿದೆ.


    ಈ ಪಕ್ಷಗಳ ಬೆಂಬಲ ಪ್ರಚಂಡ ಪ್ರಧಾನಿಯಾಗಲು ಕಾರಣ!
    ಪ್ರಚಂಡ 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 169 ಶಾಸಕರ ಬೆಂಬಲವನ್ನು ಹೊಂದಿದ್ದಾರೆ. ಇದರಲ್ಲಿ ಸಿಪಿಎನ್-ಯುಎಂಎಲ್ 78, ಸಿಪಿಎನ್-ಎಂಸಿ 32, ಆರ್‌ಎಸ್‌ಪಿ 20, ಆರ್‌ಪಿಪಿ 14, ಜೆಎಸ್‌ಪಿ 12, ಜನಮತ್ 6, ನಾಗರಿಕ್ ಉನ್ಮುಕ್ತಿ ಪಾರ್ಟಿ 4 ಮತ್ತು ಮೂರು ಸ್ವತಂತ್ರ ಶಾಸಕರು ಅವರನ್ನು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ.


    ಇದನ್ನೂ ಓದಿ: Big News: ಇನ್ಮುಂದೆ ವಿದೇಶಕ್ಕೆ ಹೋಗಲು ಪಾಸ್​ಪೋರ್ಟ್​ ಬೇಡ, ಆಧಾರ್ ಕಾರ್ಡ್ ಸಾಕಂತೆ!


    ಹಿಂದಿನಿಂದಲೂ ಚೀನಾದ ಪರವೇ ಒಲವು ಹೊಂದಿರುವ ಪ್ರಚಂಡ
    ಮೂರನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ನೇಮಕವಾಗುತ್ತಿರುವ ಪ್ರಚಂಡ ಈ ಹಿಂದಿನಿಂದಲೂ ಚೀನಾ ಪರ ನಿಂತಿದ್ದಾರೆ. 1950 ರ ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದವು ಎರಡು ದೇಶಗಳ ನಡುವಿನ ವಿಶೇಷ ಸಂಬಂಧಗಳ ತಳಹದಿಯನ್ನು ರೂಪಿಸುತ್ತದೆ.


    ಅಭಿವೃದ್ಧಿಯಾಗುವುದೇ ಭಾರತ-ಚೀನಾ ಸಂಬಂಧ?
    ಆದರೆ ಸದ್ಯ ನೇಪಾಳದಲ್ಲಿ ಬದಲಾದ ಸನ್ನಿವೇಶದ ಆಧಾರದ ಮೇಲೆ ಅವರು ಭಾರತದ ಜೊತೆ ಯಾವ ರೀತಿ ವ್ಯವಹರಿಸುತ್ತಾರೆ ಎಂದು ಕಾದುನೋಡಬೇಕಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು