Turkey Earthquake: ಟರ್ಕಿಯಲ್ಲಿ ಪ್ರಬಲ ಭೂಕಂಪ, 7.9 ತೀವ್ರತೆ ದಾಖಲು, ಧರೆಗುರುಳಿದ ಕಟ್ಟಡಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ7.9 ಎಂದು ಅಳೆಯಲಾಗಿದೆ. ಭೂಕಂಪದ ನಂತರ, ಟರ್ಕಿ ಮತ್ತು ಸಿರಿಯಾದಲ್ಲಿ ಹೆಚ್ಚಿನ ಹಾನಿಯ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

  • Share this:

ಇಸ್ತಾಂಬುಲ್( ಫೆ.06): ಟರ್ಕಿಯ (Turkey) ನೂರ್ಡಗಿಯಿಂದ ಪೂರ್ವಕ್ಕೆ 23 ಕಿಮೀ ದೂರದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ (Earthquake) ತೀವ್ರತೆಯನ್ನು 7.8 ಎಂದು ಅಳೆಯಲಾಗಿದೆ. ದಕ್ಷಿಣ ಟರ್ಕಿಯಲ್ಲಿ ಈ ಭೂಕಂಪ ಸಂಭವಿಸಿದೆ. ಈ ಕುರಿತು ಮಾಹಿತಿ ನೀಡಿರುವ ಯುಎಸ್ ಜಿಯೋಲಾಜಿಕಲ್ ಸರ್ವೀಸ್, ಸೋಮವಾರ ದಕ್ಷಿಣ ಟರ್ಕಿಯ ಗಾಜಿಯಾಂಟೆಪ್ ಬಳಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಟರ್ಕಿಯ ಪೂರ್ವಕ್ಕೆ 26 ಕಿಮೀ ದೂರದಲ್ಲಿರುವ ನೂರ್ದಾ ಇದರ ಕೇಂದ್ರವಾಗಿದೆ. ಈ ಪ್ರದೇಶವು ಗಾಜಿಯಾಂಟೆಪ್ ಸಮೀಪದಲ್ಲಿದೆ. ಈ ಪ್ರದೇಶದ ಜನಸಂಖ್ಯೆ ಸುಮಾರು 20 ಲಕ್ಷ, ಅದರಲ್ಲಿ 5 ಲಕ್ಷ ಸಿರಿಯನ್ ನಿರಾಶ್ರಿತರು ಇದ್ದಾರೆ. ಭೂಕಂಪನದಿಂದ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗುವ ಆತಂಕವಿದೆ.


ಭೂಕಂಪವು ಸ್ಥಳೀಯ ಕಾಲಮಾನ ಮುಂಜಾನೆ 04:17ಕ್ಕೆ (0117 GMT) ಸುಮಾರು 17.9 ಕಿ.ಮೀ ಆಳದಲ್ಲಿ ಸಂಭವಿಸಿದೆ. ಸರ್ಕಾರದ ವಿಪತ್ತು ನಿರ್ವಹಣಾ ಸಂಸ್ಥೆ AFAD ಪ್ರಕಾರ, ಭೂಕಂಪದ ತೀವ್ರತೆ 7.4 ಆಗಿತ್ತು. ಎಎಫ್‌ಪಿ ವರದಿಗಾರರ ಪ್ರಕಾರ, ಲೆಬನಾನ್, ಸಿರಿಯಾ ಮತ್ತು ಸೈಪ್ರಸ್‌ನಲ್ಲಿಯೂ ನಡುಕ ಸಂಭವಿಸಿದೆ. ಟರ್ಕಿಯ ಅಧಿಕಾರಿಗಳು ಇನ್ನೂ ಯಾವುದೇ ಸಾವುನೋವುಗಳು ಅಥವಾ ಗಾಯಗಳನ್ನು ವರದಿ ಮಾಡಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳು ದೇಶದ ಆಗ್ನೇಯ ಭಾಗದ ಹಲವಾರು ನಗರಗಳಲ್ಲಿ ನಾಶವಾದ ಕಟ್ಟಡಗಳನ್ನು ತೋರಿಸಿದೆ.


ಇದನ್ನೂ ಓದಿ: Heart Problem: ಹೃದಯ ವೈಫಲ್ಯ ಹೆಚ್ಚುತ್ತಿರೋದೇಕೆ? ಹಾರ್ಟ್‌ ಬಗ್ಗೆಯೂ ಇರಲಿ ಕೊಂಚ ಕೇರ್



ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. 1999 ರಲ್ಲಿ 7.4 ತೀವ್ರತೆಯ ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಡ್ಯೂಜ್ ಒಂದಾಗಿದೆ. ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ವ್ಯಾಪಕವಾದ ಕಟ್ಟಡಗಳನ್ನು ನಿರ್ಮಿಸಿ ಪರಿಣಾಮ ಇಸ್ತಾನ್‌ಬು್ಲ್​ನಲ್ಲಿ ದೊಡ್ಡ ಭೂಕಂಪವು ಧ್ವಂಸಗೊಳಿಸಬಹುದು ಎಂದು ತಜ್ಞರು ಬಹಳ ಹಿಂದೆಯೇ ಎಚ್ಚರಿಸಿದ್ದಾರೆ. ಜನವರಿ 2020 ರಲ್ಲಿ, ಎಲಾಜಿಗ್ 6.8 ತೀವ್ರತೆಯ ಭೂಕಂಪಕ್ಕೆ ತುತ್ತಾಗಿತ್ತು, ಇದರಲ್ಲಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಅಲ್ಲದೇ ಆ ವರ್ಷದ ಅಕ್ಟೋಬರ್‌ನಲ್ಲಿ, ಏಜಿಯನ್ ಸಮುದ್ರದಲ್ಲಿ 7.0 ತೀವ್ರತೆಯ ಭೂಕಂಪವು ಸಂಭವಿಸಿತು, 114 ಮಂದಿ ಸಾವನ್ನಪ್ಪಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.


ಇದನ್ನೂ ಓದಿ: Earthquake: ವಿಜಯಪುರ ಜಿಲ್ಲೆಯಲ್ಲಿ ಎರಡು ಬಾರಿ ಭೂಕಂಪನದ ಅನುಭವ


ಭೂಕಂಪಗಳು ಏಕೆ ಸಂಭವಿಸುತ್ತವೆ?


ಭೂಕಂಪಗಳು ಬಹುತೇಕವಾಗಿ ಭೂವೈಜ್ಞಾನಿಕ ದೋಷಗಳ (ಭೂಸ್ತರದ ಅಖಂಡತೆಗೆ ಉಂಟಾಗಿರುವ ಊನ) ಛಿದ್ರವಾಗುವಿಕೆಯಿಂದಾಗಿ ಉಂಟಾಗುತ್ತವೆಯಾದರೂ, ಜ್ವಾಲಾಮುಖಿಯ ಚಟುವಟಿಕೆ, ಭೂಕುಸಿತಗಳು, ಗಣಿಯಲ್ಲಿನ ಸ್ಫೋಟಗಳು ಹಾಗೂ ಪರಮಾಣು ಪರೀಕ್ಷಾ ಪ್ರಯೋಗಗಳಿಂದಲೂ ಅವು ಸಂಭವಿಸಲು ಸಾಧ್ಯವಿದೆ.




ಭೂಕಂಪವೊಂದರ ಆರಂಭಿಕ ಛಿದ್ರವಾಗುವಿಕೆಯ ಬಿಂದುವನ್ನು ಅದರ ಕೇಂದ್ರಸ್ಥಾನ ಅಥವಾ ಅಡಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಅಡಿಯ ಕೇಂದ್ರಕ್ಕೆ ನೇರವಾಗಿ ಮೇಲ್ಭಾಗದಲ್ಲಿರುವ, ನೆಲದ ಮಟ್ಟದಲ್ಲಿನ ಬಿಂದುವನ್ನು ಅಧಿಕೇಂದ್ರ ಎಂದು ಕರೆಯಲಾಗುತ್ತದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು