NEET Exam: ಇನ್ನಷ್ಟು 'ನೀಟ್' ಆಗಿ ಓದ್ಕೊಳ್ಳಿ, ಮುಂದಕ್ಕೆ ಹೋಯ್ತು ಮಾರ್ಚ್ 12ರ ಪರೀಕ್ಷೆ

NEET ಪರೀಕ್ಷೆ ಬರುತ್ತಿದೆ. ಇನ್ನೂ ಸರಿಯಾಗಿ ತಯಾರಿ ನಡೆಸಿಲ್ಲ ಅಂತ ತಲೆಕೆಡಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್. ಇದನ್ನು ಓದಿದ ಮೇಲೆ ಇನ್ನಷ್ಟು 'ನೀಟ್' ಆಗಿ ಪರೀಕ್ಷೆಗೆ ನೀವು ತಯಾರಾಗಬಹುದು...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್‌ (Covid) ಟೈಮ್‌ನಲ್ಲಿ ಕ್ಲಾಸ್‌ಗೆ (Class) ಹೋಗೋಕೆ ಆಗಿಲ್ಲ, ಮನೆಯಲ್ಲಿ ಸರಿಯಾಗಿ ಓದೋಕೂ ಆಗ್ತಿಲ್ಲ ಅಂತ ಅದೆಷ್ಟೋ ವಿದ್ಯಾರ್ಥಿಗಳು (Students) ಗೊಣಗುತ್ತಾ ಇರುತ್ತಾರೆ. ಮುಖ್ಯವಾಗಿ ಸ್ನಾತಕೋತ್ತರ (PG),  ಸ್ಪರ್ಧಾತ್ಮಕ ಪರೀಕ್ಷೆಗಳನ್ನು (Competitive Exam) ಎದುರಿಸುವ ವಿದ್ಯಾರ್ಥಿಗಳು ಸೂಕ್ತ ತರಬೇತಿ, ಕೋಚಿಂಗ್ (Coaching) ಪಡೆಯಲಾಗದೇ ಮುಂದೆ ಭವಿಷ್ಯ ಹೇಗಪ್ಪಾ? ಎಕ್ಸಾಂ (Exam) ಪಾಸ್ (Pass) ಮಾಡೋದು ಹೇಗಪ್ಪಾ ಅಂತ ಯೋಚಿಸುತ್ತಾ ಇರುತ್ತಾರೆ. ಅಂತವ್ರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ನೀವು ಅಂತಹಾ ವಿದ್ಯಾರ್ಥಿಗಳಾಗಿದ್ರೆ, ನೀಟ್-ಪಿಜಿ (NEET_PG) ಪರೀಕ್ಷೆ ಹೇಗಪ್ಪಾ ಬರೆಯೋದು ಅಂತ ತಲೆ ಕೆಡಿಸಿಕೊಂಡಿದ್ದರೆ ಸ್ವಲ್ಪ ರಿಲ್ಯಾಕ್ಸ್ ಆಗಿ. ಯಾಕೆಂದ್ರೆ ನಿಮಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಅದೇನಪ್ಪಾ ಅಂದ್ರೆ ನೀಟ್ ಪರೀಕ್ಷೆ ಮುಂದಕ್ಕೆ ಹೋಗಿದೆ. ಮುಂಬರುವ ಮಾರ್ಚ್ 12ರಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ ಅಂತ ಎಎನ್ಐ (ANI) ವರದಿ ಮಾಡಿದೆ.

ಮಾರ್ಚ್ 12ಕ್ಕೆ ನಿಗದಿಯಾಗಿದ್ದ ಎಕ್ಸಾಂ

ಮಾರ್ಚ್‌ 12ಕ್ಕೆ ನಿಗದಿಯಾಗಿದ್ದ 2022ರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌)–ಪಿಜಿ ಪರೀಕ್ಷೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ಮುಂದೂಡಿದೆ. 6–8 ವಾರಗಳಿಗೆ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಪರೀಕ್ಷೆಯನ್ನು ನಡೆಸುತ್ತದೆ. ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಿಗೇ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ.

 6ರಿಂದ 8 ವಾರಗಳ ಕಾಲ ಮುಂದೂಡಿಕೆ

ಕೋವಿಡ್‌ ಕಾರಣದಿಂದ ಪರೀಕ್ಷೆ ಮುಂದೂಡಲ್ಪಟ್ಟಿವೆ ಅಂತ ವರದಿ ತಿಳಿಸಿದೆ. ಕೋವಿಡ್ ಮಾರ್ಗಸೂಚಿ ಕಾಪಾಡುವುದು ಸೇರಿದಂತೆ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಿ ಮತ್ತು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರೀಕ್ಷೆ ಆಯೋಜಿಸಲಾಗುವುದು. ಜತೆಗೆ, ಅಭ್ಯರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗೆ ಹೆಚ್ಚುವರಿ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: School: ಮಕ್ಕಳು ಕ್ಲಾಸ್‌ಗೆ ಬರಲು ಪೋಷಕರ ಅನುಮತಿ ಬೇಕೇ ಬೇಕಾ? ಕೇಂದ್ರ ಸರ್ಕಾರ ಹೇಳೋದೇನು?

ಕೋವಿಡ್‌ನಿಂದ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ

ನೀಟ್-ಪಿಜಿ-2022 ಪರೀಕ್ಷೆಯ ದಿನಾಂಕದಲ್ಲಿ ವಿಳಂಬವನ್ನು ಕೋರಿ ವೈದ್ಯಕೀಯ ವಿದ್ಯಾರ್ಥಿಗಳು ಮನವಿ ಸಲ್ಲಿಸುತ್ತಲೇ ಇದ್ದರು. ಹೀಗಾಗಿ ಸೂಕ್ತ ಕಾರಣ ಇರುವುದರಿಂದ ಪರೀಕ್ಷೆ ಮುಂದೂಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2022ರ ಮೇ ತಿಂಗಳ ಒಳಗೆ ಪಿಜಿ ಕೌನ್ಸೆಲಿಂಗ್ ನಡೆಸಲಾಗುತ್ತದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಕೋರಿ ವಿದ್ಯಾರ್ಥಿಗಳು ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಕಡ್ಡಾಯ ಇಂಟರ್ನ್‌ಶಿಪ್‌ನಂತಹ ಹಲವು ಅವಶ್ಯಕತೆಗಳನ್ನು ಅನೇಕ ವಿದ್ಯಾರ್ಥಿಗಳು ಪೂರೈಸದ ಕಾರಣ ಆರು ಮಂದಿ ಎಂಬಿಬಿಎಸ್‌ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಅವರ ಕೋವಿಡ್ ಕರ್ತವ್ಯದಿಂದಾಗಿ ಅನೇಕ ಇಂಟರ್ನ್‌ಶಿಪ್‌ಗಳು ಸ್ಥಗಿತಗೊಂಡಿವೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ನಿಂದಾಗಿ ಇಂಟರ್‌ಶಿಪ್‌  ಅಪೂರ್ಣವಾಗಿದ್ದು,  2021ರಲ್ಲಿ ಪರೀಕ್ಷೆಗಳನ್ನು ನಡೆಸಲು ವಿಳಂಬವಾಯಿತು. ಹೀಗಾಗಿ ಅನೇಕ ಎಬಿಬಿಎಸ್‌ ವಿದ್ಯಾರ್ಥಿಗಳು ತಮ್ಮ ಇಂಟರ್‌ಶಿಪ್ ಅನ್ನು ಇನ್ನೂ ಪೂರ್ಣಗೊಳಿಸಿಲ್ಲ. ಅದನ್ನು ಪೂರ್ಣಗೊಳಿಸದೆ ಅವರು ಈ ವರ್ಷ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುವುದಿಲ್ಲ. ಹೀಗಾಗಿ ಪರೀಕ್ಷೆ ಮುಂದೂಡುವಂತೆ ಕೋರಿದ್ದರು.

ಇದನ್ನೂ ಓದಿ: SSLC Exam Date 2022: ಎಸ್​ಎಸ್​​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

ಮುಂದಿನ ಪರೀಕ್ಷಾ ದಿನಾಂಕ ಯಾವಾಗ?

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಮೂರನೇ ಅಲೆಯ ಅಪಾಯದ ಮುನ್ನೆಚ್ಟರಿಕೆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 6ರಿಂದ 8 ವಾರಗಳ ಕಾಲ ಪರೀಕ್ಷೆ ಮುಂದೂಡಲ್ಪಟ್ಟಿದೆ. ಆದರೆ ದಿನಾಂಕವನ್ನು ಇನ್ನೂ ನಿಗದಿಗೊಳಿಸಿಲ್ಲ. ಹೀಗಾಗಿ  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವೆಬ್‌ಸೈಟ್ - neet.nta.nic.in ಇದರಲ್ಲಿ ಪರಿಶೀಲಿಸಬಹುದಾಗಿದೆ.
Published by:Annappa Achari
First published: