ಎರಡು ತಿಂಗಳ ಬಳಿಕ ಇಂದಿನಿಂದ ಕಣಿವೆ ರಾಜ್ಯದಲ್ಲಿ ಆರಂಭಗೊಂಡ ಪೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆ

ಕಳೆದ 69 ದಿನಗಳಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆಯನ್ನು ಬಂದ್​ ಮಾಡಲಾಗಿತ್ತು. ಆದರೆ ಈಗ ಕಣಿವೆ ರಾಜ್ಯ ಶೇ 99ರಷ್ಟು ನಿರ್ಬಂಧ ಮುಕ್ತವಾಗಿರಲಿದೆ

Seema.R | news18-kannada
Updated:October 14, 2019, 12:08 PM IST
ಎರಡು ತಿಂಗಳ ಬಳಿಕ ಇಂದಿನಿಂದ ಕಣಿವೆ ರಾಜ್ಯದಲ್ಲಿ ಆರಂಭಗೊಂಡ ಪೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆ
ಜಮ್ಮು-ಕಾಶ್ಮೀರ
  • Share this:
ನವದೆಹಲಿ (ಅ.14)  ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ  ಪೋಸ್ಟ್​ ಪೇಯ್ಡ್ ಮೊಬೈಲ್​ ​ ಸೇವೆ ಇಂದಿನಿಂದ  ಪುನಾರಂಭಗೊಂಡಿದೆ.  ಎರಡು ತಿಂಗಳ ಬಳಿಕ ಇಂದಿನಿಂದ ಕಣಿವೆ ರಾಜ್ಯದಲ್ಲಿ ಸಂಪರ್ಕ ಸೇವೆ ಆರಂಭವಾಗಿದೆ. 

ಜಮ್ಮು ಕಾಶ್ಮೀರದ ಮೇಲೆ ಹೇರಿದ್ದ ನಿರ್ಬಂಧವನ್ನು ನಿಧಾನವಾಗಿ ತೆಗೆಯಲಾಗುತ್ತಿದ್ದು, ಸಹಜ ಸ್ಥಿತಿ ರಾಜ್ಯ ಮರಳುವಂತೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಈ ಸೇವೆಯನ್ನು ಪುನರ್​ ಆರಂಭಿಸಲಾಗುವುದು ಎಂದು ಹೇಳಿದ್ದರು. ಆದರೆ ಇಂಟರ್​ನೆಟ್​ ಸೇವೆಯನ್ನು ಅಳವಡಿಸಲು ಸಮಯಬೇಕಾದ ಹಿನ್ನೆಲೆ ಈ ಸೇವೆಯನ್ನು ಸೋಮವಾರದಿಂದ ಆರಂಭಗೊಳಿಸಲಾಗುವುದು ಎಂದು  ರಾಜ್ಯದ ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ, ರೋಹಿತ್​ ಕನ್ಸಾಲ್​ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಕಳೆದ 69 ದಿನಗಳಿಂದ ಕಣಿವೆ ರಾಜ್ಯದಲ್ಲಿ ಫೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆಯನ್ನು ಬಂದ್​ ಮಾಡಲಾಗಿತ್ತು. ಆದರೆ ಈಗ ಕಣಿವೆ ರಾಜ್ಯ ಶೇ 99ರಷ್ಟು ನಿರ್ಬಂಧ ಮುಕ್ತವಾಗಿರಲಿದೆ ಎಂದರು

ಇದನ್ನು ಓದಿ: ಐತಿಹಾಸಿಕ ದಾಖಲೆ: ಇನ್ಸ್​ಸ್ಟಾಗ್ರಾಂನಲ್ಲಿ 30 ಮಿಲಿಯನ್ ಫಾಲೋವರ್ಸ್ ದಾಟಿದ ಜಾಗತಿಕ ನಾಯಕ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್​ 5ರಂದು ರದ್ದುಗೊಳಿಸಿ, ಈ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಆದಾದ ಬಳಿಕ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಂವಹನ ಸಂಪರ್ಕವನ್ನು ಅಂದಿನಿಂದಲೇ ರದ್ದುಗೊಳಿಸಲಾಗಿದೆ. ರಾಜ್ಯಕ್ಕೆ ವಿಧಿಸಿರುವ ನಿರ್ಬಂಧವನ್ನು ನಿಧಾನವಾಗಿ ತೆಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published:October 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading