ಗೋವಾದಲ್ಲಿ ನಗ್ನ ಕೂಟ ಆಯೋಜನೆಯ ಪೋಸ್ಟರ್​ ಹಂಚಿಕೆ; ತನಿಖೆ ಆರಂಭಿಸಿದ ಪೊಲೀಸರು

ಉತ್ತರ ಗೋವಾ ಜಿಲ್ಲೆಯ ಮೂರು ರಸ್ತೆಯಲ್ಲಿ ನಗ್ನ ಕೂಟವನ್ನು ಆಯೋಜಿಸಲಾಗಿದೆ. 10ರಿಂದ 15 ವಿದೇಶಿ ಹುಡುಗಿಯರು ಮತ್ತು 10ಕ್ಕೂ ಹೆಚ್ಚು ಭಾರತೀಯ ಯುವತಿಯರು ನಗ್ನ ಕೂಟದ ಭಾಗವಾಗಲಿದ್ದಾರೆ ಎಂದು ಪೋಸ್ಟರ್​ನಲ್ಲಿ ತಿಳಿಸಲಾಗಿತ್ತು.

HR Ramesh | news18-kannada
Updated:September 24, 2019, 7:05 AM IST
ಗೋವಾದಲ್ಲಿ ನಗ್ನ ಕೂಟ ಆಯೋಜನೆಯ ಪೋಸ್ಟರ್​ ಹಂಚಿಕೆ; ತನಿಖೆ ಆರಂಭಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
  • Share this:
ಪಣಜಿ(ಸೆ.24): ಉತ್ತರ ಗೋವಾದಲ್ಲಿ ನಗ್ನ ಕೂಟ (ನ್ಯೂಡ್​ ಪಾರ್ಟಿ) ಆಯೋಜಿಸಲಾಗಿದೆ ಎಂಬ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಘಟನೆ ಸಂಬಂಧ ಗೋವಾ ಪೊಲೀಸರು ಸೋಮವಾರ ತನಿಖೆ ಆರಂಭಿಸಿದ್ದಾರೆ.

ಪ್ರೈವೇಟ್​ ಗೋವಾ ಪಾರ್ಟಿಯ ಪೋಸ್ಟರ್​ ಬಿಡುಗಡೆ ಮಾಡಿದವರ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಅಲ್ಲದೇ, ರಾಜ್ಯದಲ್ಲಿ ಯಾವುದೇ ರೀತಿಯ ನಗ್ನ ಕೂಟ ಆಯೋಜನೆಗೆ  ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಗೋವಾ ಬೀಚ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಕಾಮುಕ..!


ಪೋಸ್ಟರ್​ ಸಂಬಂಧಿಸಿದಂತೆ ಮಾತನಾಡಿರುವ ಗೋವಾ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಮಾ ಕೌಟಿನಾಹೊ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಪ್ರವಾಸೋದ್ಯಮ ಸಚಿವ ಮನೋಹರ್ ಆಜ್​ಗೋನ್ಕರ್​ ಈ ವಿಚಾರವಾಗಿ ತುರ್ತಾಗಿ ಮಧ್ಯಪ್ರವೇಶಿಸಿ, ಇಂತಹ ಕೂಟಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

First published:September 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading