ಅಂಚೆ ಕಚೇರಿ ಉಳಿತಾಯ ಯೋಜನೆಗಳು: ತಿಂಗಳಿಗೆ ಕೇವಲ 10 ರೂ. ಹೂಡಿಕೆ ಮಾಡಿದರೂ ಸಿಗುತ್ತೆ ಅತ್ಯುತ್ತಮ ಬಡ್ಡಿದರ

news18
Updated:October 9, 2018, 1:40 PM IST
ಅಂಚೆ ಕಚೇರಿ ಉಳಿತಾಯ ಯೋಜನೆಗಳು: ತಿಂಗಳಿಗೆ ಕೇವಲ 10 ರೂ. ಹೂಡಿಕೆ ಮಾಡಿದರೂ ಸಿಗುತ್ತೆ ಅತ್ಯುತ್ತಮ ಬಡ್ಡಿದರ
  • Advertorial
  • Last Updated: October 9, 2018, 1:40 PM IST
  • Share this:
-ನ್ಯೂಸ್ 18 ಕನ್ನಡ

ಭಾರತೀಯ ಅಂಚೆ ಇಲಾಖೆಯು ಅನೇಕ ವಿಧದ ಉಳಿತಾಯ ಯೋಜನೆಗಳನ್ನು ಪ್ರಸ್ತುತಪಡಿಸುತ್ತಿದೆ. ಕಿಸಾನ್ ಪತ್ರ ಸೇರಿದಂತೆ ಇಂತಹ 8 ವಿವಿಧ ಉಳಿತಾಯ ಸ್ಕೀಂಗಳನ್ನು ಪೋಸ್ಟ್​ ಆಫೀಸ್​ ನೀಡುತ್ತಿದೆ. ಅಂಚೆ ಕಚೇರಿಯ ವೆಬ್​ಸೈಟ್ (indiapost.gov.in) ನಲ್ಲಿ ಈ ಎಲ್ಲ ಯೋಜನೆಗಳಿಗೆ ಅತ್ಯುತ್ತಮ ಬಡ್ಡಿದರವನ್ನು ನೀಡಲಾಗುತ್ತಿದೆ ಎಂದು ಉಲ್ಲೇಖಿಸಿದೆ.

ಪೋಸ್ಟ್​ ಆಫೀಸ್ ಪ್ರಸ್ತುತ ಪಡಿಸುವ ಪ್ರಮುಖ ಉಳಿತಾಯ ಯೋಜನೆಗಳಲ್ಲಿ (1) ಮರುಕಳಿಸುವ ಠೇವಣಿ, (2) ನಿಕ್ಷೇಪ ಖಾತೆ (3) ಕಚೇರಿಯ ಮಾಸಿಕ ಆದಾಯ ಯೋಜನೆ (4) ಹಿರಿಯ ನಾಗರಿಕರು ಉಳಿತಾಯ ಯೋಜನೆ, (5) 15 ವರ್ಷದ ಸಾರ್ವಜನಿಕ ಭವಿಷ್ಯ ನಿಧಿ ಖಾತೆ (6) ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (7) ಕಿಸಾನ್ ವಿಕಾಸ್ ಪತ್ರ (8) ಸುಕನ್ಯಾ ಸಮೃದ್ಧಿ ಖಾತೆಗಳು ಸೇರಿವೆ. ಈ ಖಾತೆದಾರರಿಗೆ ಭಾರತೀಯ ಅಂಚೆ ಇಲಾಖೆಯು ಶೇ. 8.5ರಷ್ಟು ಬಡ್ಡಿದರಗಳನ್ನು ನೀಡಲಾಗುತ್ತದೆ.

1-ಮರುಕಳಿಸುವ ಠೇವಣಿ(RD): ಪೋಸ್ಟ್​ ಆಫೀಸ್​ನ ಮರುಕಳಿಸುವ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 10 ರೂ. ಅನ್ನು ಹೂಡಿಕೆ ಮಾಡಬಹುದು. ಈ ಖಾತೆಯ ಠೇವಣಿದಾರರಿಗೆ ಶೇ.7.3ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಅದೇ ರೀತಿ ಈ ಉಳಿತಾಯ ಯೋಜನೆಯಲ್ಲಿ ಒಂದು ವರ್ಷದ ಬಳಿಕ ಶೇ.50ರಷ್ಟು ಹಣವನ್ನು ಹಿಂಪಡೆಯುವ ಸೌಲಭ್ಯವಿದೆ.

2- ಮಾಸಿಕ ಆದಾಯ ಯೋಜನೆ (MIS): ಈ ಖಾತೆಯನ್ನು ಯಾರು ಬೇಕಾದರೂ ತೆರೆಯಬಹುದು. ಅಲ್ಲದೆ ಇದನ್ನು ಬೇರೆಯವರ ಹೆಸರಿಗೆ ಕೂಡ ವರ್ಗಾಯಿಸಬಹುದು. ಈ ಮಾಸಿಕ ಆದಾಯ ಯೋಜನೆ ಖಾತೆಯಿಂದ ಶೇ.7.3 ರಷ್ಟು ಬಡ್ಡಿದರ ಪಡೆಯಬಹುದು.

3-ಕಿಸಾನ್ ವಿಕಾಸ್ ಪತ್ರ (KVP): ಈ ಖಾತೆಯಲ್ಲಿ ನೀವು ಹೂಡಿದ ಮೊತ್ತವನ್ನು ಎರಡುವರೆ ವರ್ಷಗಳ ಬಳಿಕ ತೆಗೆದುಕೊಳ್ಳಬಹುದು. ಇಲ್ಲಿ ಶೇ.7.7 ರಷ್ಟು ವಾರ್ಷಿಕ ಬಡ್ಡಿದರವನ್ನು ಪಡೆಯುವಿರಿ. 118 ತಿಂಗಳುಗಳ (9ವರ್ಷ 10 ತಿಂಗಳು) ಬಳಿಕ ಇಲ್ಲಿ ನೀವು ಹೂಡಿಕೆ ಮಾಡಿದ ಮೊತ್ತವು ದ್ವಿಗುಣವಾಗುತ್ತದೆ.

4-15 ವರ್ಷದ ಸಾರ್ವಜನಿಕ ಭವಿಷ್ಯ ನಿಧಿ ಖಾತೆ: 100 ರೂಪಾಯಿಯೊಂದಿಗೆ ಈ ಖಾತೆಯನ್ನು ಪ್ರಾರಂಭಿಸಬಹುದು. ಈ ಖಾತೆಯಲ್ಲಿ 1 ಲಕ್ಷ ರೂ. ಹೂಡಿಕೆಯವರೆಗೆ ತೆರಿಗೆ ವಿನಾಯಿತಿಗಳು ಸಿಗುತ್ತದೆ. ಈ ಠೇವಣಿಯ ಮೇಲೆ ಶೇ.8ರಷ್ಟು ಬಡ್ಡಿ ನೀಡಲಾಗುತ್ತದೆ. ಈ ಖಾತೆಯಲ್ಲಿ ವಾರ್ಷಿಕ ಕನಿಷ್ಠ 500 ರೂ.ನಿಂದ ಗರಿಷ್ಠ 1.50 ಲಕ್ಷದವರೆಗೆ ಜಮಾ ಮಾಡಬಹುದು. ಈ ಖಾತೆಯ ಅವಧಿಯು 15 ವರ್ಷಗಳಾಗಿದ್ದು, ಜಂಟಿ ಖಾತೆ ತೆರೆಯುವ ಅವಕಾಶ ಕೂಡ ಇದೆ.5-ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: ಈ ಯೋಜನೆಯಲ್ಲಿ ವಾರ್ಷಿಕ ಶೇ.8 ರಷ್ಟು ಬಡ್ಡಿಯನ್ನು ಪಡೆಯಬಹುದು. 100 ರೂ.ನಿಂದ ಸುಲಭವಾಗಿ ಪ್ರಾರಂಭಿಸಬಹುದಾದ  ಖಾತೆ ಇದಾಗಿದೆ.

6-ಸುಕನ್ಯಾ ಸಮೃದ್ಧಿಯ ಖಾತೆ: ಈ ಖಾತೆಯಲ್ಲಿ ವಾರ್ಷಿಕ 250 ರೂ.ನಿಂದ ಗರಿಷ್ಠ 1,50,000 ರೂಪಾಯಿಗಳಷ್ಟು ಬಂಡವಾಳ ಹೂಡಬಹುದು. ಈ ಖಾತೆಯು ಹೆಣ್ಮಕ್ಕಳು ಹುಟ್ಟಿದ 10 ವರ್ಷಗಳಲ್ಲಿ ತೆರೆಯಬಹುದಾಗಿದ್ದು, ಠೇವಣಿದಾರರಿಗೆ ಶೇ. 8.5 ರಷ್ಟು ಬಡ್ಡಿ ದರಗಳನ್ನು ನೀಡಲಾಗುತ್ತದೆ. ಹಾಗೆಯೇ ಠೇವಣಿದಾರರಿಗೆ 21 ವರ್ಷವಾದ ಬಳಿಕ ಈ ಖಾತೆಯ ಅವಧಿ ಮುಗಿಯುತ್ತದೆ.
First published:October 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ