Post-Mortem: ಕೇಂದ್ರ ಸರಕಾರದ ಮರಣೋತ್ತರ ಪರೀಕ್ಷೆಯ ಹೊಸ ನಿಯಮದಿಂದ ಇಕ್ಕಟ್ಟಿಗೆ ಸಿಲುಕಿರುವ ಬೆಂಗಳೂರಿನ ಆಸ್ಪತ್ರೆಗಳು..

ಈ ಹೊಸ ಕಾನೂನು ತನ್ನದೇ ಆದ ಸವಾಲುಗಳನ್ನು ಹೊಂದಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನರಹತ್ಯೆ, ಆತ್ಮಹತ್ಯೆ, ಅತ್ಯಾಚಾರ, ಶಂಕಿತ ದುಷ್ಕೃತ್ಯ ಮತ್ತು ಕೊಳೆತ ದೇಹದ ಮರಣೋತ್ತರ ಪರೀಕ್ಷೆಯನ್ನು (Postmortem Test) ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಹೊರತುಪಡಿಸಿ ಸೂರ್ಯಾಸ್ತದ ನಂತರ ನಡೆಸಬಾರದು ಎಂಬ ಕೇಂದ್ರ ಸರಕಾರದ ನವೆಂಬರ್ 15ರ ಜ್ಞಾಪಕ ಪತ್ರವು ಇದೀಗ ಬೆಂಗಳೂರಿನ ಆಸ್ಪತ್ರೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.2003ರಿಂದಲೂ ಸೂರ್ಯಾಸ್ತದ (Sunset) ನಂತರವೂ ಈ ವಿಭಾಗಗಳಲ್ಲಿ ಮರಣೋತ್ತರ ಪರೀಕ್ಷೆಗಳನ್ನು ಕೈಗೊಳ್ಳುತ್ತಿದ್ದ ಹಲವಾರು ಆಸ್ಪತ್ರೆಗಳು ಈ ಕುರಿತು ಸ್ಪಷ್ಟತೆಗಾಗಿ ಕಾಯುತ್ತಿದ್ದು, ಕಾನೂನು ಹಾಗೂ ಸುವ್ಯವಸ್ಥೆಯ ಸಮಯದಲ್ಲಿ ಮಾತ್ರವೇ ಈ ವಿಭಾಗಗಳ ಮರಣೋತ್ತರ ಪರೀಕ್ಷೆ ಹೇಗೆ ನಡೆಸುವುದು ಎಂದು ವೈದ್ಯರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ 3,500 ಮರಣೋತ್ತರ ಪರೀಕ್ಷೆಗಳನ್ನು ನಡೆಸುವ ವಿಕ್ಟೋರಿಯಾ ಆಸ್ಪತ್ರೆಯು (Victoria Hosiptal) ಆ ಪ್ರದೇಶದ ಉಪ ಪೊಲೀಸ್ ಆಯುಕ್ತರಿಂದ ಇನ್ನು ಮುಂದೆ ಕಾನೂನು ಹಾಗೂ ಸುವ್ಯವಸ್ಥೆಯ ಪರಿಸ್ಥಿತಿ ಇದೆಯೇ ಎಂಬುದರ ಕುರಿತು ಪತ್ರ ಸ್ವೀಕರಿಸಿದ ನಂತರವೇ ಮುಂದುವರಿಯಲಾಗುವುದು ಎಂದು ತಿಳಿಸಿದ್ದು, ಬೌರಿಂಗ್ ಆಸ್ಪತ್ರೆ ಇಂತಹ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ತಿಳಿಸಿದೆ. ಈ ಹೊಸ ಕಾನೂನು ತನ್ನದೇ ಆದ ಸವಾಲುಗಳನ್ನು ಹೊಂದಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆ ಏನು?

ಕೇಂದ್ರ ಆರೋಗ್ಯ ಸಚಿವಾಲಯದ ಆದೇಶವನ್ನು ಅನುಸರಿಸುವಲ್ಲಿ ಉಂಟಾಗಿರುವ ತೊಂದರೆ ವಿವರಿಸಿದ ವಿಕ್ಟೋರಿಯಾ ಆಸ್ಪತ್ರೆಯ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸುವ ವೈದ್ಯರು ಈ ಕುರಿತು ಮಾತನಾಡಿದ್ದು, ನಾವು ಜೈಲು ಮರಣದಂತಹ ಹಲವಾರು ಪ್ರಕರಣಗಳನ್ನು ಸ್ವೀಕರಿಸುತ್ತೇವೆ. ಈ ಸಮಯದಲ್ಲಿ ನ್ಯಾಯಾಧೀಶರು ತಡವಾಗಿ ಬರುತ್ತಾರೆ. ಹಾಗಾಗಿ ಸಂಜೆ 5ರ ನಂತರವೇ ನಾವು ಮೃತದೇಹ ಪಡೆದುಕೊಳ್ಳುತ್ತೇವೆ. ಸೂರ್ಯಾಸ್ತದ ಮೊದಲು ಮರಣೋತ್ತರ ಪರೀಕ್ಷೆಯನ್ನು ನಾವು ಹೇಗೆ ಕೈಗೊಳ್ಳಲು ಸಾಧ್ಯ..? ಎಂದು ಪ್ರಶ್ನಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ವೈಜ್ಞಾನಿಕ ಪರೀಕ್ಷೆಯ ಪ್ರಭಾರಿ ಎಚ್‌ಒಡಿ ಡಾ. ಎಸ್. ವೆಂಕಟರಾಘವ್ ಸಮಸ್ಯೆಯ ಇನ್ನೊಂದು ಭಾಗವನ್ನು ಬಹಿರಂಗಡಪಡಿಸಿದ್ದು, ಕೊಲೆ ಪ್ರಕರಣಗಳಲ್ಲಿ ನಮ್ಮ ಸುರಕ್ಷತೆಗಾಗಿ ನಾವು ಸಂಬಂಧಪಟ್ಟ ಉಪ ಪೊಲೀಸ್ ಆಯುಕ್ತರಿಂದ (ಡಿಸಿಪಿ) ಪತ್ರ ಸ್ವೀಕರಿಸುತ್ತಿದ್ದೆವು. ಆದರೀಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಏಕೆಂದರೆ ಜ್ಞಾಪನಾ ಪತ್ರದಲ್ಲಿ ತಿಳಿಸಿರುವಂತೆ ಆತ್ಮಹತ್ಯೆ ಪ್ರಕರಣಗಳಲ್ಲಿ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆ ನಡೆಸಬಾರದು ಎಂದು ತಿಳಿಸಿದ್ದಾರೆ. ನಾವು ಗೃಹ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆಯಬೇಕಾಗಿದ್ದು, ಮರಣೋತ್ತರ ಪರೀಕ್ಷೆ ಮಾಡುವಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅರ್ಹತೆ ಇದೆಯೇ ಎಂಬುದನ್ನು ಯಾರು ನಿರ್ಧರಿಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯನ್ನು ಹಗಲಿನಲ್ಲಿ ನಡೆಸಿದರೆ ಉಂಟಾಗುವ ಸಮಸ್ಯೆಗಳೇನು?

ಇನ್ನು ಈ ಕುರಿತು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ರೋಗಿಯೊಬ್ಬರ ಮೊದಲ ಶವಪರೀಕ್ಷೆ ನಡೆಸಿದ ವೈದ್ಯರಾದ ಡಾ.ದಿನೇಶ್ ರಾವ್, ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸುವಂತೆ ದಿನದ ಯಾವುದೇ ಸಮಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಬೆಳ್ಳಿಯ ಕಾಲ್ಗೆಜ್ಜೆಗಾಗಿ ಮಹಿಳೆಯರ ಪಾದವೇ ಕಟ್; ರಾಜಸ್ಥಾನದಲ್ಲೊಬ್ಬ ಸೈಕೋ ಆರೋಪಿ

ತೆರೆದ ಶವಾಗಾರದಲ್ಲಿ ಹಾಗೂ ನೈಸರ್ಗಿಕ ಬೆಳಕಿನಲ್ಲಿ ಕೊಳೆತ ದೇಹದ ಮರಣೋತ್ತರ ಪರೀಕ್ಷೆ ನಡೆಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ಹಗಲು ಸಮಯದಲ್ಲಿ ನೊಣಗಳ ಕಾಟ ಇರುತ್ತದೆ. ಅದನ್ನು ನಿಯಂತ್ರಿಸುವುದು ಹೇಗೆ? ಅದೇ ರೀತಿ ಶವಾಗಾರದಲ್ಲಿ ಸಂಪನ್ಮೂಲಗಳು ಹಾಗೂ ಕೆಲವೊಂದು ಸೌಲಭ್ಯಗಳಲ್ಲಿ ಕೊರತೆ ಇದೆ. ಇದನ್ನು ಪರಿಹರಿಸುವುದು ಹೇಗೆ? ಸರಕಾರದ ಆದೇಶವು ಸರಿಯಾಗಿದ್ದರೂ ಶವಪರೀಕ್ಷೆಯನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ಮಾಡಲು ಏಕೆ ಅನುಮತಿ ಇಲ್ಲ ಎಂಬುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ದಿನೇಶ್ ತಿಳಿಸಿದ್ದಾರೆ.

ತೆರೆದ ಶವಾಗಾರದದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಎಲ್ಲಾ ಆಸ್ಪತ್ರೆಗಳಿಗೆ ಏಕೆ ಸಾಧ್ಯವಿಲ್ಲ?

ಸರಕಾರಿ ವೈದ್ಯಕೀಯ ಕಾಲೇಜುಗಳ ಶವಾಗಾರಗಳು ಹವಾನಿಯಂತ್ರಿತವಾಗಿಲ್ಲದ ಕಾರಣ ದಿನೇಶ್‌ ಹೇಳಿರುವ ಮಾತುಗಳಲ್ಲಿ ಹುರುಳಿದೆ. ವಿಕ್ಟೋರಿಯಾ ಆಸ್ಪತ್ರೆಯ ವೈಜ್ಞಾನಿಕ ಪರೀಕ್ಷೆ ನಡೆಸುವ ವೈದ್ಯರು ಕೊಳೆತ ಶವವು ವಾಸನೆಯನ್ನುಂಟು ಮಾಡುವುದರಿಂದ ಮರಣೋತ್ತರ ಪರೀಕ್ಷೆಯನ್ನು ತೆರೆದ ಶವಾಗಾರದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನು ಓದಿ: ಕತ್ತುಹಿಸುಕಿ ವಿವಾಹಿತ ಮಹಿಳೆಯ ಕೊಲೆ ಶಂಕೆ; ಗಂಡನಿಗಾಗಿ ಬಲೆ ಬೀಸಿರುವ ಪೊಲೀಸರು

ಇದಕ್ಕೆ ಪ್ರತಿಕ್ರಿಯೆ ನೀಡಿದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವೈಜ್ಞಾನಿಕ ಪರೀಕ್ಷೆ ವಿಭಾಗದ ಎಚ್‌ಒಡಿ ಸತೀಶ್ ಹೇಳುವಂತೆ, ಕಡಿಮೆ ಸಿಬ್ಬಂದಿಗಳಿರುವ ಆಸ್ಪತ್ರೆಗಳಲ್ಲಿ ಈ ಕಾನೂನು ಸಹಾಯಕವಾಗುತ್ತದೆ ಎಂದು ತಿಳಿಸಿದ್ದಾರೆ.

ಶವದ ಮಾದರಿಗಳನ್ನು ಸಂಗ್ರಹಿಸಲು ಬಾಟಲಿ, ಉಗುರುಗಳನ್ನು ತೆಗೆಯಲು ಕಟ್ಟರ್‌ಗಳು ಮೊದಲಾದ ಸಾಮಾಗ್ರಿಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ಮಧ್ಯರಾತ್ರಿ 1 ಗಂಟೆಯ ನಂತರ ಹುಡುಕಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಕಾರಣದಿಂದಲೇ ಅದೆಷ್ಟೋ ಕಸ್ಟಡಿಗೊಳಪಟ್ಟ ಸಾವಿನ ಪ್ರಕರಣಗಳನ್ನು ತಿರಸ್ಕರಿಸಿದ್ದೇವೆ ಎಂದು ತಿಳಿಸಿದ್ದಾರೆ.
Published by:Sharath Sharma Kalagaru
First published: