Mobileನಲ್ಲಿ ಮಾತಾಡ್ರೋ ಮಾತಾಡ್ರಿ! ಇನ್ನು ಡ್ರೈವಿಂಗ್ ಮಾಡುವಾಗಲೂ ಮಾತಾಡಿ, ಯಾಕೆ ಗೊತ್ತಾ?

"ಹೇಯ್ ನಿಲ್ಸಪ್ಪ ಗಾಡೀನಾ. ಡ್ರೈವಿಂಗ್ ಮಾಡ್ವಾಗ ಮೊಬೈಲ್‌ನಲ್ಲಿ ಮಾತಾಡ್ತೀಯಾ, ಇಳಿಯೋ ಕೆಳ್ಗೆ" ಬಹುಶಃ ಇನ್ಮುಂದೆ ಹೀಗಂತ ಟ್ರಾಫಿಕ್ ಪೊಲೀಸರು ನಿಮ್ಮನ್ನು ಕೇಳೋದಿಲ್ಲ. ಯಾಕೆಂದ್ರೆ ಇನ್ಮುಂದೆ ನಿಮಗೆ ಡ್ರೈವಿಂಗ್ ಮಾಡುವಾಗಲೂ ಮೊಬೈಲ್‌ನಲ್ಲಿ ಮಾತನಾಡುವ ಅವಕಾಶ ಸಿಗಲಿದೆ. ಆದರೆ ಅದಕ್ಕೂ ರೂಲ್ಸ್ ಇದೆ. ಅದೇನಪ್ಪಾ ಅಂತ ತಿಳಿದುಕೊಳ್ಳುವುದಕ್ಕೆ ಈ ಸ್ಟೋರಿ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಈಗೆಲ್ಲ ವೆಹಿಕಲ್ (Vehicle) ಓಡಿಸ್ತಾ, ಮೊಬೈಲ್‌ನಲ್ಲಿ (Mobile) ಮಾತಾಡಿದ್ರೆ ಎದುರಿಗೆ ಟ್ರಾಫಿಕ್ ಪೊಲೀಸರು (Traffic Police) ತಡೀತಾರೆ. ಆದ್ರೆ ಇನ್ಮುಂದೆ ವೆಹಿಕಲ್ಸ್ ಓಡಿಸುವಾಗ ನೀವು ಮೊಬೈಲ್ ಯೂಸ್ (Use) ಮಾಡಬಹುದು. ನಿಮ್ಮ ಪ್ರೀತಿ ಪಾತ್ರರ ಜೊತೆ ಮಾತನಾಡುತ್ತಲೋ, ಇಂಪಾರ್ಟೆಂಟ್ ಕಾಲ್(Important Call) ಅಟೆಂಡ್ (Attend)  ಮಾಡುತ್ತಲೋ ನಿಮ್ಮ ಆಫೀಸ್ (Office) ತಲುಪಬಹುದು. ಇನ್ಮುಂದೆ ಟ್ರಾಫಿಕ್ ಪೊಲೀಸರು ಅಡ್ಡ ನಿಂತು ನಿಮ್ಮನ್ನು ತಡೆಯೋದಿಲ್ಲ. ಯಾಕೆಂದ್ರೆ ಡ್ರೈವಿಂಗ್ (Driving) ಮಾಡುತ್ತಲೇ ಮೊಬೈಲ್‌ನಲ್ಲಿ ಮಾತನಾಡುವುದಕ್ಕೆ ಇನ್ಮುಂದೆ ಅವಕಾಶ ಸಿಗಲಿದೆ. ವಾಹನ ಸವಾರರಿಗೆ ಕೇಂದ್ರ ಸರ್ಕಾರ (Central Government) ಒಂದು ಗುಡ್ ನ್ಯೂಸ್ (Good News) ಕೊಟ್ಟಿದೆ. ಆದ್ರೆ ಅದಕ್ಕೆ ಕೆಲವೊಂದು ನಿಯಮಗಳೂ ಇವೆ. ಅವುಗಳನ್ನ ನೀವು ಫಾಲೋ ಮಾಡಲೇ ಬೇಕಾಗಿದೆ.

ಈ ಬಗ್ಗೆ ಕೇಂದ್ರ ಸಚಿವರಿಂದಲೇ ಸ್ಪಷ್ಟನೆ

ವಾಹನ ಚಾಲನೆ ಮಾಡುತ್ತಲೇ ಇನ್ನುಮುಂದೆ ಮೊಬೈಲ್‌ನಲ್ಲಿ ಮಾತನಾಡಲು ಅವಕಾಶ ಸಿಗಲಿದೆ. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರೇ ಖುದ್ದು ಹೇಳಿಕೆ ನೀಡಿದ್ದಾರೆ. ಡ್ರೈವಿಂಗ್ ಮಾಡುವಾಗ ಮೊಬೈಲ್‌ನಲ್ಲೇನೋ ಮಾತನಾಡಬಹುದು. ಆದರೆ ಅದು ಹೇಗೆ ಅಂತ ಸಚಿವರೇ ಹೇಳಿದ್ದಾರೆ.

ಇಯರ್ ಫೋನ್ ಬಳಸಿ ಮಾತನಾಡಲು ಅವಕಾಶ

ಡ್ರೈವಿಂದ್ ಮಾಡುವ ವೇಳೆ ಮೊಬೈಲ್‌ನಲ್ಲಿ ಮಾತನಾಡಲು ಬಯಸಿದರೆ ಇಯರ್‌ಫೋನ್‌ ಬಳಸಲೇ ಬೇಕು. ಇಯರ್ ಫೋನ್ ಅಥವಾ ಬೇರೆ ಯಾವುದೇ ಡಿವೈಸ್‌ ಸಹಾಯದಿಂದ ಮೊಬೈಲ್‌ನಲ್ಲಿ ಮಾತನಾಡಲು ಅವಕಾಶ ಸಿಗಲಿದೆ. ಕೆಲವೇ ದಿನಗಳಲ್ಲಿ ಸಕ್ರಮ ಎನಿಸಲಿದೆ ಎಂಬ ಸುಳಿವನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಕೊಟ್ಟಿದ್ದಾರೆ.

ಇದನ್ನೂ ಓದಿ: Air India-Air Asia ನಡುವೆ ಹೊಸ ಒಪ್ಪಂದ; ಇನ್ಮುಂದೆ ಪ್ರಯಾಣಿಕರಿಗೆ ಯಾವುದೇ ಆತಂಕ- ಚಿಂತೆ ಇಲ್ಲ

ಲೋಕಸಭೆಯಲ್ಲಿ ಸಾರಿಗೆ ಸಚಿವರ ಸ್ಪಷ್ಟನೆ

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈ ವಿಚಾರ ಪ್ರಸ್ತಾಪಿಸಿದ್ದಾರೆ. ವೆಹಿಕಲ್ಸ್ ಓಡಿಸು ಚಾಲಕ ತನ್ನ ಕೈಗಳನ್ನು ಬಳಸದೇ, ಅಂದರೆ ಇತರೇ ಮೊಬೈಲ್ ಡಿವೈಸ್‌ಗಳನ್ನು ಬಳಸಿಕೊಂಡು ಮೊಬೈಲ್‌ನಲ್ಲಿ ಮಾತನಾಡಬಹುದು.

ಈ ವೇಳೆ ಅದನ್ನು ಅಪರಾಧ ಎಂದು ಪರಿಗಣಿಸಲ್ಲ. ಅಂಥ ಪ್ರಕರಣಗಳಲ್ಲಿ ಟ್ರಾಫಿಕ್‌ ಪೊಲೀಸರು ದಂಡ ಕೂಡ ವಿಧಿಸುವಂತಿಲ್ಲ. ಒಂದು ವೇಳೆ ಇಂತಹ ಕೇಸ್‌ಗಳಲ್ಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದರೆ, ಅವರ ವಿರುದ್ಧ ಕೋರ್ಟ್‌ ಮೆಟ್ಟಿಲು ಏರಬಹುದು ಅಂತ ಗಡ್ಕರಿ ಹೇಳಿದ್ದಾರೆ.

ಕೈಯಿಂದ ಮೊಬೈಲ್ ಬಳಸುವಂತೆಯೇ ಇಲ್ಲ!

ಇನ್ನು ಡ್ರೈವಿಂಗ್ ಮಾಡುವಾಗ ಮೊಬೈಲ್‌ನಲ್ಲಿ ಕೈಯಲ್ಲಿ ಹಿಡಿದು ಮಾತನಾಡುವಂತಿಲ್ಲ. ಮೊಬೈಲ್‌ ಅನ್ನು ನೇರವಾಗಿ ಕಿವಿಗೆ ಇಟ್ಟುಕೊಂಡು ಡ್ರೈವಿಂಗ್ ಮಾಡುವುದಕ್ಕೆ ಮುಂದೆಯೂ ಅನುಮತಿ ನೀಡುವುದಿಲ್ಲ.

ಇದನ್ನೂ ಓದಿ: Udta Punjab: ಪಂಜಾಬ್ ಡ್ರಗ್ಸ್ ಮಾಫಿಯಾ.. ಕೆಲ್ಸ ಸಿಗದೇ ಡ್ರಗ್ಸ್​ಗೆ ದಾಸರಾಗ್ತಿದ್ದಾರೆ ಯುವಕರು!

ಮೊಬೈಲ್‌ ಅಥವಾ ಸ್ಮಾರ್ಟ್‌ಫೋನ್‌ಗಳು ದ್ವಿಚಕ್ರ, ತ್ರಿಚಕ್ರ, ಕಾರು, ಲಾರಿ, ಬಸ್‌ಗಳ ಚಾಲಕರ ಜೇಬಿನಲ್ಲಿ ಇರಬೇಕು. ಇಯರ್‌ಫೋನ್‌ ಅಥವಾ ಹ್ಯಾಂಡ್ಸ್‌ಫ್ರೀ ಸಾಧನಗಳನ್ನು ಬಳಸಿಕೊಂಡು ಜೇಬಿನಲ್ಲಿರುವ ಮೊಬೈಲ್‌ ಜತೆಗೆ ಸಂಪರ್ಕ ಸಾಧಿಸಿದ ಬಳಿಕ ಕರೆ ಸ್ವೀಕರಿಸಿ ಮಾತನಾಡಲು ಮಾತ್ರವೇ ಅವಕಾಶ ನೀಡಲಾಗುವುದು ಅಂತ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ಬಗ್ಗೆ ಕೇಂದ್ರದಿಂದ ಶೀಘ್ರವೇ ಆದೇಶ

ಇನ್ನು ಈ ಬಗ್ಗೆ ಶೀಘ್ರವೇ ಅಗತ್ಯವಾದ ತಿದ್ದುಪಡಿಯನ್ನು ಮೋಟಾರು ವಾಹನ ಕಾಯಿದೆಗೆ ತರಲಾಗುವುದು ಅಂತ ಸಚಿವರು ಹೇಳಿದ್ದಾರೆ. ಈ ಸಂಬಂಧ ಸಾರಿಗೆ ಸಚಿವಾಲಯದಲ್ಲಿ ಅಧಿಕಾರಿಗಳು ಸೂಕ್ತ ಕಾನೂನು ಸಿದ್ಧಪಡಿಸುತ್ತಿದ್ದಾರೆ. ಬಳಿಕ ಅದರ ಬಗ್ಗೆ ಚರ್ಚೆ ನಡೆದು, ಮಂಡನೆಯಾಗಲಿದೆ ಎಂದಿದ್ದಾರೆ.  ಎಂದು ಗಡ್ಕರಿ ಅವರ ಕಚೇರಿಯ ಆಪ್ತ ಮೂಲಗಳಿಂದಲೂ ತಿಳಿದುಬಂದಿದೆ.
Published by:Annappa Achari
First published: