Mafia: ಮಾರುವೇಷದಲ್ಲಿ ಹೋಗಿ ಡ್ರಗ್ ಮಾಫಿಯಾ ಬಯಲು ಮಾಡಿದ ಅಧಿಕಾರಿ!

ಡ್ರಗ್​

ಡ್ರಗ್​

ಛತ್ತೀಸ್‌ಗಡದ ಆರೋಗ್ಯ ಕಾರ್ಯದರ್ಶಿ ಯಶ್‌ಪಾಲ್ ಗಾರ್ಗ್ ಎಂಬುವವರು ಇಲ್ಲಿನ ಹಲವು ವೈದ್ಯರು ನೀಡಿದ ದೂರಿನ ಆಧಾರದ ಮೇಲೆ ರೋಗಿಯ ರೂಪದಲ್ಲಿ ಆಸ್ಪತ್ರೆಗೆ ತೆರಳಿ ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

  • Share this:

ಇತ್ತೀಚಿನ ದಿನಗಳಲ್ಲಿ ಡ್ರಗ್ ಮಾಫಿಯಾ  (Drug Mafia) ವೈದ್ಯಕೀಯ ಕ್ಷೇತ್ರದಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ. ಈ ಡ್ರಗ್ ಮಾಫಿಯದಿಂದಾಗಿ ಎಷ್ಟೋ ರೋಗಿಗಳು ತಮ್ಮ ಜೀವವನ್ನೇ ತೆತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಶುಲ್ಕ ಪೀಕುತ್ತಿರುವ ಬಗ್ಗೆ ಜನರೇ ಬೇಸತ್ತಿದ್ದಾರೆ. ಇಂತಹದ್ದೇ ಒಂದು ಮಾಫಿಯಾವನ್ನು ಪತ್ತೆ ಹಚ್ಚಿ ತನಿಖೆಗೆ ಆದೇಶ ನೀಡಲಾಗಿದೆ. ಈ ಘಟನೆ ಛತ್ತೀಸ್‌ಘಡದಲ್ಲಿ ( Chhattisgarh) ನಡೆದಿದೆ. ಇಲ್ಲಿನ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೆಕ್ಟರ್ 32ನಲ್ಲಿ ನಡೆಯುತ್ತಿದ್ದ ಡ್ರಗ್ (Drug) ಅವ್ಯವಹಾರವನ್ನು ಛತ್ತೀಸ್‌ಗಡದ ಆರೋಗ್ಯ ಕಾರ್ಯದರ್ಶಿ ಖುದ್ದಾಗಿ ಭೇದಿಸಿ ತನಿಖೆಗೆ ಆದೇಶಿಸಿದ್ದಾರೆ.


ಪತ್ತೆ ಹಚ್ಚಿದ್ದು ಯಾರು?


ಛತ್ತೀಸ್‌ಗಡದ ಆರೋಗ್ಯ ಕಾರ್ಯದರ್ಶಿ ಯಶ್‌ಪಾಲ್ ಗಾರ್ಗ್ ಎಂಬುವವರು ಇಲ್ಲಿನ ಹಲವು ವೈದ್ಯರು ನೀಡಿದ ದೂರಿನ ಆಧಾರದ ಮೇಲೆ ರೋಗಿಯ ರೂಪದಲ್ಲಿ ಆಸ್ಪತ್ರೆಗೆ ತೆರಳಿ ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


ಹೇಗೆ ಬೇಧಿಸಿದರು?


ಶನಿವಾರ ರಾತ್ರಿ 56 ವರ್ಷದ ವ್ಯಕ್ತಿಯ ರೂಪದಲ್ಲಿ ಹೊಟ್ಟೆನೋವು ಎಂದು ಹೇಳಿ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿದ್ದಾರೆ. ರಾತ್ರಿ 10 ರಿಂದ 11 ಗಂಟೆಯ ನಡುವೆ ತುರ್ತು ವಿಭಾಗದಲ್ಲಿ ಕೆಲವೇ ರೋಗಿಗಳು ಇದ್ದರು.


ಇಲ್ಲಿರುವ ವೈದ್ಯರು ರೋಗಿಯನ್ನು ಯಾವುದೇ ಪರೀಕ್ಷೆಗೆ ಒಳಪಡಿಸದೆ ಔಷಧಿ ಚೀಟಿಗಳನ್ನು ಬರೆದುಕೊಡುತ್ತಿದ್ದರು. ಅದು ರೋಗಿ ಹೇಳಿದ ಖಾಯಿಲೆಯ ಆಧಾರದ ಮೇಲೆ ನೀಡುತ್ತಿದ್ದರೆ ವಿನಃ ಪರೀಕ್ಷೆ ಮಾಡಿಯಲ್ಲ.


ಒಂದೇ ಔಷಧಿ ಮೂರು ಬೆಲೆಗಳಲ್ಲಿ


ಆ ವೈದ್ಯಕೀಯ ಅಧಿಕಾರಿ ಒಬ್ಬ ರೋಗಿಗೆ ಮೆಕೈನ್ ಎಂಬ ಔಷಧಿಯನ್ನು ಪರೀಕ್ಷಿಸದೆ ನೀಡಿದರು. ಈತ ಬರೆದುಕೊಟ್ಟಿರುವ ಔಷಧಿ ಚೀಟಿಯನ್ನು ಮೂರು ಮೆಡಿಕಲ್ ಶಾಪ್‌ಗಳಿಗೆ ತೋರಿಸಲಾಯಿತು.


ಇದನ್ನೂ ಓದಿ: 36 ದಿನಗಳ ಬಳಿಕ ಕೊನೆಗೂ ಅಮೃತ್‌ಪಾಲ್‌ ಸಿಂಗ್‌ನನ್ನು ಹೆಡೆಮುರಿ ಕಟ್ಟಿದ ಪಂಜಾಬ್ ಪೊಲೀಸರು!


ಆದರೆ ಅದೇ ಔಷಧಿ ಮೂರು ಅಂಗಡಿಗಳ ಪೈಕಿ ಒಂದೇ ಒಂದು ಔಷಧಿ ಅಂಗಡಿಯಲ್ಲಿ ಮಾತ್ರ ಸಿಗುತ್ತಿತ್ತು ಮತ್ತು ಅದೇ ಔಷಧಿಯ ಬೇರೆ ಬ್ರಾಂಡ್‌ಗಳು ಬೇರೆ ಬೇರೆ ಬೆಲೆಗಳಲ್ಲಿ ಮಾರಾಟವಾಗುತ್ತಿತ್ತು. ಇದನ್ನು ರೋಗಿಯ ಸೋಗಿನಲ್ಲಿ ತೆರಳಿದ್ದ ಯಶ್‌ಪಾಲ್ ಗಾರ್ಗ್ ಅವರು ಪತ್ತೆ ಹಚ್ಚಿದ್ದಾರೆ.


15 ದಿನದೊಳಗೆ ವರದಿ ಸಲ್ಲಿಸಿ


ಇದೀಗ ಈ ಬಗ್ಗೆ ವೈದ್ಯರು ಮತ್ತು ಮೆಡಿಕಲ್ ಶಾಪ್‌ಗಳಿಗೆ ವಿವರಣೆಯನ್ನು ನೀಡುವಂತೆ ಸೂಚಿಸಲಾಗಿದ್ದು, ಹದಿನೈದು ದಿನದೊಳಗೆ ವರದಿ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಕಾರ್ಯದರ್ಶಿಯವರು ಸದ್ಯ ಮೆಕೈನ್ ಎಂಬ ಔಷಧಿಯ ಬೆಲೆ ವ್ಯತ್ಯಾಸವನ್ನು ಗಮನಿಸಿದ್ದು ವೈದ್ಯರು ಅತ್ಯಂತ ದುಬಾರಿಯಾದ ಈ ಔಷಧಿಯನ್ನು ಯಾಕೆ ಸೂಚಿಸಿದರು ಎಂಬ ಬಗ್ಗೆ ವಿವರಣೆ ನೀಡುವಂತೆ ಹೇಳಿದ್ದಾರೆ. ಮೆಕೈನ್ ಎಂಬ ನಿರ್ದಿಷ್ಟ ಬ್ರಾಂಡ್ ಅನ್ನು ಏಕೆ ಸೂಚಿಸಿದ್ದು? ಇದರ ವೆಚ್ಚವು ಇತರ ಎರಡು ಸಿರಪ್‌ಗಳಿಗಿಂತ ಸುಮಾರು 67% ಹೆಚ್ಚಾಗಿದೆ. ಹೆಚ್ಚಿನ ವೆಚ್ಚದ ಔಷಧಿಯನ್ನು ರೋಗಿಗಳು ಪಡೆಯುವಂತೆ ಒತ್ತಾಯಿಸುವುದು ಸೂಕ್ತವೇ ಎಂದು ಗಾರ್ಗ್ ಪ್ರಶ್ನಿಸಿದರು.


ಶಾಪ್ ತೆರೆಯಲು ಅನುಮತಿಯಿಲ್ಲ


ಇದರ ಜೊತೆಗೆ ಮೆಡಿಕಲ್ ಶಾಪ್‌ನ ಒಪ್ಪಂದದ ಪತ್ರ, ಎಷ್ಟು ವೆಚ್ಚದ ಔಷಧಿಗಳನ್ನು ಖರೀದಿಸಲಾಗಿದೆ. ಬಿಲ್‌ಗಳನ್ನು ರೋಗಿಗಳು ಕೇಳಿದರೆ ಮಾತ್ರ ಏಕೆ ಕೊಡುವುದು.


ಇದನ್ನೂ ಓದಿ: ಮದ್ರಾಸ್‌ ಐಐಟಿಯಲ್ಲಿ ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆ, ಒಂದೇ ವರ್ಷದಲ್ಲಿ ಸಾವು!


ಒಂದೇ ಔಷಧಿಯ ಮೂರು ಬ್ರಾಂಡ್‌ಗಳು ಏಕೆ ಬೇರೆ ಬೇರೆ ಬೆಲೆಯಲ್ಲಿ ಇದೆ ಎಂಬುದನ್ನು ವಿವರಿಸಬೇಕು ಎಂದು ಸಹ ಸೂಚಿಸಿದ್ದು, ಅಲ್ಲಿಯವರೆಗೆ ಶಾಪ್ ತೆರೆಯಲು ಅನುಮತಿಯಿಲ್ಲ ಎಂದಿದ್ದಾರೆ.




ಕ್ಯಾಂಟೀನ್‌ಗೂ ಭೇಟಿ


ಗಾರ್ಗ್ ಅವರು ತುರ್ತು ವಿಭಾಗದ ಬಳಿ ಇರುವ ಕ್ಯಾಂಟೀನ್‌ಗೆ ಭೇಟಿ ನೀಡಿ ಚಹಾ ಕುಡಿದು ಅಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ, ಕ್ಯಾಂಟೀನ್ ಮತ್ತು ಸುತ್ತಮುತ್ತ ಸ್ವಚ್ಛತೆಯಿಲ್ಲದಿರುವುದನ್ನು ಗಮನಿಸಿದ ಅವರು ತಕ್ಷಣವೇ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವಂತೆ ಆದೇಶಿಸಿದರು. ಸಾರ್ವಜನಿಕ ಮಾರ್ಗವು ಖಾಲಿ ಬ್ಲಾಕುಗಳು ಮತ್ತು ರಟ್ಟಿನ ಪೆಟ್ಟಿಗೆಗಳಿಂದ ತುಂಬಿದ್ದು ಸಾರ್ವಜನಿಕರಿಗೆ ಬಳಸಲು ಸಾಧ್ಯವಾಗದ ರೀತಿಯಲ್ಲಿದೆ. ಇವುಗಳನ್ನು ತಕ್ಷಣವೇ ತೆರವುಗೊಳಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಡುವಂತೆ ತಾಕೀತು ಮಾಡಿದರು.

First published: