ಆನ್​ಲೈನ್ ಕ್ಲಾಸ್ ನಡೆಯುತ್ತಿರುವಾಗ ಶಿಕ್ಷಕಿಗೆ ಪಾರ್ನ್​ ವಿಡಿಯೋ ಕುಳುಹಿಸಿದ ವಿದ್ಯಾರ್ಥಿನಿ: ಮುಂದೇನಾಯ್ತು?

ಆನ್​ಲೈನ್​ ತರಗತಿ ನಡೆಯುತ್ತಿದ್ದ ವೇಳೆ 10ನೇ ತರಗತಿಯಲ್ಲಿ ವಿದ್ಯಾರ್ಥಿನಿಯರು ಟೀಚರ್ ವಿರುದ್ಧ ಅಸಭ್ಯ ಭಾಷೆಯನ್ನು ಪ್ರಯೋಗಿಸಿ ಜೊತೆಗೆ ಅಶ್ಲೀಲ ಮೆಸೇಜ್ ಹಾಗೂ ಪಾರ್ನ್ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಮಾರಕ ಕೊರೋನಾ ವೈರಸ್ ಕಾರಣದಿಂದಾಗಿ ದೇಶದಲ್ಲಿ ಶಾಲೆಗಳು ಬಂದ್ ಆಗಿವೆ. ಕೆಲವು ರಾಜ್ಯಗಳಲ್ಲಿ ಮಾತ್ರ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಶಿಕ್ಷಣದಿಂದ ಮಕ್ಕಳು ವಂಚಿತರಾಗ ಬಾರದೆಂಬ ಕಾರಣಕ್ಕೆ ಆನ್​ಲೈನ್​ನಲ್ಲಿ ಪಾಠವನ್ನು ಹೇಳಿಕೊಡಲಾಗುತ್ತಿದೆ. ಆದರೆ, ಆನ್​ಲೈನ್​ ಕ್ಲಾಸ್​ನಲ್ಲಿ ಅನೇಕ ಯಡವಟ್ಟುಗಳು ನಡೆಯುತ್ತಲೇ ಇವೆ. ಇದಕ್ಕೆ ಉತ್ತರ ಪ್ರದೇಶದ ಗ್ರಾಮವೊಂದು ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಆಜಂಗಡ್​ನಲ್ಲಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಆನ್​ಲೈನ್ ಕ್ಲಾಸ್ ನಡೆಯುತ್ತಿರುವಾಗ ವಿದ್ಯಾರ್ಥಿನಿಯರು ಶಿಕ್ಷಕಿಗೆ ಪಾರ್ನ್​ ವಿಡಿಯೋ ಕಳುಹಿಸಿದ ಘಟನೆ ನಡೆದಿದೆ.

  ಆನ್​ಲೈನ್​ ತರಗತಿ ನಡೆಯುತ್ತಿದ್ದ ವೇಳೆ 10ನೇ ತರಗತಿಯಲ್ಲಿ ವಿದ್ಯಾರ್ಥಿನಿಯರು ಟೀಚರ್ ವಿರುದ್ಧ ಅಸಭ್ಯ ಭಾಷೆಯನ್ನು ಪ್ರಯೋಗಿಸಿ ಜೊತೆಗೆ ಅಶ್ಲೀಲ ಮೆಸೇಜ್ ಹಾಗೂ ಪಾರ್ನ್ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.

  ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ

  ಉ. ಪ್ರದೇಶದ ಆಜಂಗಡ್​ನಲ್ಲಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಆನ್​ಲೈನ್​ ತರಗತಿಗೆ ಇಬ್ಬರು ವಿದ್ಯಾರ್ಥಿಗಳು ಗೈರಾಗಿದ್ದರು. ಆದರೆ, ಗೈರಾದವರ ಪರಿಚಯ ನೀಡಿ ಈ ವಿದ್ಯಾರ್ಥಿನಿಯರು 12ನೇ ತರಗತಿಯ ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿದ್ದರು ಎನ್ನಲಾಗಿದೆ.

  ಘಟನೆಯ ಕುರಿತು ಮಾಹಿತಿ ನೀಡಿರುವ ಆಜಂಗಡ್ ಪೋಲೀಸ್ ಅಧಿಕಾರಿ ತ್ರಿವೇಣಿ ಸಿಂಗ್, "ನಗರದ ಒಂದು ಖಾಸಗಿ ಶಾಲೆಯ ಪ್ರಾಂಶುಪಾಲರು ಹಾಗೂ ಟೀಚರ್ ಪೋಲೀಸ್ ಠಾಣೆಗೆ ಬಂದು ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶಿಕ್ಷಕಿ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಾಟ್ಸ್​ಆ್ಯಪ್ ಮೂಲಕ ಇಂಗ್ಲಿಷ್ ಕ್ಲಾಸ್ ತೆತೆಗೆದುಕೊಳ್ಳುತ್ತಿದ್ದ ವೇಳೆ ಇಬ್ಬರು ವಿದ್ಯಾರ್ಥಿನಿಯರು ಶಿಕ್ಷಕಿಗೆ ವೈಯಕ್ತಿಕ ಸಂದೇಶ ಕಳುಹಿಸಿ ಗ್ರೂಪ್​ನಲ್ಲಿ ಸೇರಿಸಲು ಕೇಳಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.

  ಶಿಕ್ಷಕಿ ತನ್ನ ದೂರಿನಲ್ಲಿ, "ಅವರಿಗೆ ಸಹಾಯ ಮಾಡಿದಾಗ, ಅವರಲ್ಲಿ ಓರ್ವ ವಿದ್ಯಾರ್ಥಿನಿ ನನಗೆ ಅಸಭ್ಯ ಸಂದೇಶ ಕಳುಹಿಸಿದರೆ, ಇನ್ನೊಬ್ಬ ವಿದ್ಯಾರ್ಥಿನಿ ಅಶ್ಲೀಲ ಕ್ಲಿಪ್ ಕಳುಹಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಬಳಿಕ ಇಬ್ಬರೂ ಒಟ್ಟಿಗೆ ಸೇರಿ ಅಶ್ಲೀಲ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಬಳಿಕ ಶಿಕ್ಷಕಿ ಪ್ರಾಂಶುಪಾಲರಿಗೆ ಈ ಘಟನೆಯನ್ನು ವಿವರಿಸಿದ್ದು, ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ‌.

  ಲವ್​ ಜಿಹಾದ್​ ಟೀಕೆಗೆ ಗುರಿಯಾಗಿತ್ತು ವಿಚ್ಛೇದನಕ್ಕೆ ಮುಂದಾಗಿರುವ ಐಎಎಸ್​ ಟಾಪರ್​ ಟೀನಾ ಡಾಬಿ ಮದುವೆ

  ಬಳಿಕ ಘಟನೆಯ ಕುರಿತು ಮಾಹಿತಿ ನೀಡಿರುವ ಆಡಳಿತ ಮಂಡಳಿ, ಇಬ್ಬರೂ ವಿದ್ಯಾರ್ಥಿನಿಯರ ಪೋಷಕರನ್ನು ಶಾಲೆಗೇ ಕರೆಯಿಸಿ ವಿಚಾರಣೆ ನಡೆಸಲಾಗಿದ್ದು, ವಿದ್ಯಾರ್ಥಿನಿಯರು ಕಳೆದ 15 ದಿನಗಳಿಂದ ನಗರದಲ್ಲಿಯೇ ಇಲ್ಲ ಹಾಗೂ ಅವರ ಬಳಿ ಮೊಬೈಲ್ ಕೂಡ ಇಲ್ಲ ಎಂದು ಹೇಳಿದ್ದಾರೆ.

  ತನಿಖೆಯ ಬಳಿಕ ಮಾಹಿತಿ ನೀಡಿರುವ SP, "ಈ ವಿದ್ಯಾರ್ಥಿನಿಯರು ಅದೇ ಶಾಲೆಯವರು ಎಂದು ತಿಳಿದು ಬಂದಿದೆ. ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಬಳಿಕ ಅವರನ್ನು ಬಾಲ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
  Published by:Vinay Bhat
  First published: