HOME » NEWS » National-international » PORN STAR MIA KHALIFA TROLLED OVER EXTENDED HER SUPPORT TO DELHI FARMERS PROTEST SESR

ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಟ್ರೋಲಿಗೆ ಒಳಗಾದ ಅಮೆರಿಕ ಮಾಜಿ ನೀಲಿ ಚಿತ್ರತಾರೆ

ರೈತರ ಪ್ರತಿಭಟನೆಗೆ ಮಿಯಾ ಖಲೀಫ್​ ಬೆಂಬಲ ವ್ಯಕ್ತಪಡಿಸಿ ಟ್ವೀಟ್​ ಮಾಡುತ್ತಿದ್ದಂತೆ ಅವರನ್ನು ಟ್ವಿಟಿಗರು ಟ್ರೋಲ್​ ಮಾಡಿದ್ದಾರೆ.

news18-kannada
Updated:February 3, 2021, 3:58 PM IST
ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಟ್ರೋಲಿಗೆ ಒಳಗಾದ ಅಮೆರಿಕ ಮಾಜಿ ನೀಲಿ ಚಿತ್ರತಾರೆ
ಮಿಯಾ ಖಲೀಫ್
  • Share this:
ಕೃಷಿ ಮಸೂದೆ ವಿರೋಧಿಸಿ ದೆಹಲಿಯ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗಿದೆ. ಟ್ರಂಪ್​ ವಿರುದ್ಧ ಧ್ವನಿ ಎತ್ತಿ ಗಮನಸೆಳೆದಿದ್ದ ಗ್ರೆಟಾ ಥನ್​ಬರ್ಗ್​ ಸೇರಿದಂತೆ ಹಲವರು ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಟ್ವೀಟ್​ ಮಾಡುತ್ತಿದ್ದಾರೆ. ಇದೀಗ ಅಮೆರಿಕದ ನೀಲಿ ಚಿತ್ರತಾರೆ ಮಿಯಾ ಖಲೀಫಾ ಕೂಡ ಕೃಷಿಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್​ ಮಾಡಿ ಗಮನ ಸೆಳೆದಿದ್ದಾರೆ. ಅಮೆರಿಕದ ಮಾಜಿ ನೀಲಿ ಚಿತ್ರತಾರೆ ಮಿಯಾ, ದೆಹಲಿಯಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಯುತ್ತಿದೆ. ದೆಹಲಿ ಸುತ್ತಮುತ್ತ ಇಂಟರ್​ನೆಟ್​ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ರೈತರ ಪ್ರತಿಭಟನೆ ಚಿತ್ರ ಹಂಚಿಕೊಂಡಿದ್ದು, ರೈತ ಪ್ರತಿಭಟನೆ ಹ್ಯಾಷ್​ಟ್ಯಾಗ್​ ಅಡಿ ಪೋಸ್ಟ್​ ಮಾಡಿದ್ದಾರೆ.

ಟ್ರೋಲಿಗೆ ಒಳಗಾದ ನಟಿ

ರೈತರ ಪ್ರತಿಭಟನೆಗೆ ಮಿಯಾ ಖಲೀಫ್​ ಬೆಂಬಲ ವ್ಯಕ್ತಪಡಿಸಿ ಟ್ವೀಟ್​ ಮಾಡುತ್ತಿದ್ದಂತೆ ಅವರನ್ನು ಟ್ವಿಟಿಗರು ಟ್ರೋಲ್​ ಮಾಡಿದ್ದಾರೆ. ಪೈಯ್ಡ್​ನಟಿಯಾಗಿರುವ ಮಿಯಾ ಅನೇಕ ನಿರ್ದೇಶಕರ ಕಾಸ್ಟಿಂಗ್​ ಕೌಚ್​ ಕೂಡ ಆಗಿದ್ದಾರೆ. ಅವರಿಗೆ ರೈತರ ಪ್ರತಿಭಟನೆ ಏನೆಂಬುದು ಗೊತ್ತೆ. ಈ ಕಾನೂನಿನ ಬಗ್ಗೆ ಅರಿವಿದೆಯೇ ಎಂದು ಪ್ರಶ್ನಿಸಲಾಗಿದೆ. ಈ ಹಿಂದೆ ಹಿಜ್ಬಾ ಧರಿಸುವ ಮೂಲಕ ಕೂಡ ಇಸ್ಲಾಮಿಕ್​ ಧರ್ಮಕ್ಕೆ ಧಕ್ಕೆ ತಂದಿದ್ದಾರೆ ಎಂಬ ಕೆಂಗಣ್ಣಿಗೆ ಈಕೆ ಗುರಿಯಾಗಿದ್ದರು. ಅಲ್ಲದೇ, ಆನ್​ಲೈನ್​ ಮೂಲಕವೂ ಈಕೆಗೆ ಕೊಲೆ ಬೆದರಿಕೆಗಳು ಬಂದಿದ್ದವು.ಅಂತರಾಷ್ಟ್ರೀಯ ಪಾಪ್​ ತಾರೆಯಾಗಿರುವ ರಿಹಾನ್ನಾ ಕೂಡ ಮಂಗಳವಾರ ಈ ಪ್ರತಿಭಟನೆ ಕುರಿತು ಧ್ವನಿ ಎತ್ತಿದ್ದಾರೆ. ದೆಹಲಿಯ ಹೊರವಲಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು ನಾವು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.


ರಿಹಾನ್ನಾ ಟ್ವೀಟ್​ ಮಾಡಿದ ಕೆಲವೇ ಗಂಟೆಗಳ ಬಳಿಕ ಹವಾಮಾನ ಕಾರ್ಯಕರ್ತೆಯಾಗಿ ಜಗತ್ತನ್ನು ಸೆಳೆದಿರುವ ನೊಬೆಲ್​ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಗ್ರೆಟಾ ಥನ್​ಬರ್ಗ್​ ಕೂಡ ಈ ಬಗ್ಗೆ ಟ್ವೀಟ್​ ಮೂಲಕ ರೈತರ ಪ್ರತಿಭಟನೆ ಒಗ್ಗಟ್ಟಿನಿಂದ ನಿಲ್ಲುವುದಾಗಿ ತಿಳಿಸಿದ್ದಾರೆ.ಅಮೆರಿಕದ ಉಪಾಧ್ಯಕ್ಷ ಕಮಲಾ ಹ್ಯಾರಿಸ್​ ಸೋದರ ಸೊಸೆ, ಲೇಖಕಿಯಾಗಿರುವ ಮೀನಾ ಕೂಡ ಈ ಕುರಿತು ಮಾತನಾಡಿದ್ದು, ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ಬದ ಮೇಲೆ ದಾಳಿ ನಡೆದು ತಿಂಗಳು ಕಳೆದಿಲ್ಲ. ಅತಿ ಹೆಚ್ಚಿನ ಜನಸಂಖ್ಯೆಯ ಪ್ರಜಾಪ್ರಭುತ್ವವೊಂದು ಆಕ್ರಮಣಕ್ಕೆ ಒಳಗಾಗಿದೆ, ಭಾರತದಲ್ಲಿ ರೈತರು ಮತ್ತು ಪೊಲೀಸರ ನಡುವಿನ ಪ್ರತಿಭಟನೆಯಿಂದ ಇಂಟರ್​ನೆಟ್​ ಸ್ಥಗಿತಗೊಳಿಸಿದ ಕ್ರಮಕ್ಕೆ ಆಕ್ರೋಶಗೊಳ್ಳಬೇಕು ಎಂದಿದ್ದಾರೆ.
Published by: Seema R
First published: February 3, 2021, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories