Sperm Donation: ಜನಸಂಖ್ಯೆ ಕುಸಿತ, ವೀರ್ಯದಾನ ಮಾಡಿದವರಿಗೆ ಬಂಪರ್ ಆಫರ್ ಘೋಷಣೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗ್ಲೋಬಲ್ ಟೈಮ್ಸ್ ಪ್ರಕಾರ, ಯುನ್ನಾನ್‌ನ ವೀರ್ಯ ಬ್ಯಾಂಕ್ 20 ಮತ್ತು 40 ರ ನಡುವಿನ ವಯಸ್ಸಿನ ದಾನಿಗಳಿಗೆ ವೀರ್ಯಾಣು ದಾನಕ್ಕಾಗಿ ಕರೆ ನೀಡಿದೆ.

  • Trending Desk
  • 3-MIN READ
  • Last Updated :
  • Share this:

    ಚೀನಾದ (China) ಜನಸಂಖ್ಯೆಯು 61 ವರ್ಷಗಳಲ್ಲಿ  (61 Years)ಇದೇ ಮೊದಲ ಬಾರಿಗೆ ಇಳಿಕೆಯಾಗಿದ್ದು ದೇಶದ ವೀರ್ಯ (Sperm) ಬ್ಯಾಂಕ್‌ಗಳು ( Sperm Bank ) ಕಾಲೇಜು ವಿದ್ಯಾರ್ಥಿಗಳು (College Students) ಮತ್ತು ಆರೋಗ್ಯವಂತ ಪುರುಷರಿಗೆ ವೀರ್ಯವನ್ನು ದಾನ (Sperm Donation) ಮಾಡುವಂತೆ ಮನವಿ ಮಾಡುತ್ತಿವೆ. ಜೊತೆಗೆ ದಾನಿಗಳಿಗೆ ಕೆಲವೊಂದು ಆಫರ್‌ಗಳನ್ನು ಪ್ರಾಯೋಜಿಸುತ್ತಿವೆ ಎಂದು ಸೌತ್ ಚೀನಾದ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಚೀನಾದ ಜನಸಂಖ್ಯೆಯು ಇನ್ನಿಲ್ಲದಂತೆ ಕುಸಿತ ಕಂಡಿದ್ದು 2022 ರಲ್ಲಿ 850,000 ರಷ್ಟು ಕಡಿಮೆಯಾಗಿದೆ ಎಂದು ಮಾರ್ನಿಂಗ್ ಪೋಸ್ಟ್ ತಿಳಿಸಿದೆ.


    ರಾಷ್ಟ್ರದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದು ಫಲವತ್ತತೆಗಳನ್ನು ಉತ್ತೇಜಿಸಲು ಬೇರೆ ಬೇರೆ ಪಾಲಿಸಿಗಳನ್ನು, ನೀತಿ ನಿಯಮಗಳನ್ನು ಪರಿಚಯಿಸಲು ಆಡಳಿತ ವರ್ಗವನ್ನು ವಿನಂತಿಸುತ್ತಿದ್ದಾರೆ.


    ವೀರ್ಯ ದಾನ ಮಾಡುವವರಿಗೆ ಆಫರ್‌ಗಳು


    ಇದೆಲ್ಲದರ ನಡುವೆಯೇ ಬೀಜಿಂಗ್ ಮೂಲದ ಲಾಭರಹಿತ ವೀರ್ಯ ಬ್ಯಾಂಕ್, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಆರೋಗ್ಯವಂತ ಪುರುಷರಿಗೆ ವೀರ್ಯ ದಾನ ಮಾಡಲು ಮನವಿ ಮಾಡುವಂತೆ ಸಾಮಾಜಿಕ ತಾಣ ವೈಬೋದಲ್ಲಿ ಪೋಸ್ಟ್ ಹಾಕಿದೆ.


    ಬೀಜಿಂಗ್ ಹಾಗೂ ಟಿಯಾಂಜಿನ್‌ನಲ್ಲಿ ವಿವಾಹಿತ ದಂಪತಿಗಳ ಬಂಜೆತನ ಪ್ರಮಾಣವು 15% ದಷ್ಟಿದೆ ಎಂದು ಉಲ್ಲೇಖಿಸಿರುವ ವರದಿಯು, ವೀರ್ಯ ಸಮಸ್ಯೆಗಳಿಂದಾಗಿ 40% ಬಂಜೆತನ ಸಮಸ್ಯೆ ಎಸ್‌ಸಿಎಂಪಿ ಪ್ರಕಾರ ವೀರ್ಯ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.


    ವೀರ್ಯಾಣು ದೇಣಿಗೆ ಅಗತ್ಯವಿರುವ ದಂಪತಿಗಳು ಎರಡು ವರ್ಷಗಳವರೆಗೆ ಕಾಯಬೇಕಾಗುತ್ತದೆ ಮತ್ತು ಸುಮಾರು 5,000 ಯುವಾನ್ ($732) ಗೆ ಏರಬಹುದಾದ ಪಾವತಿಗಳಿಗೆ ಪ್ರತಿಯಾಗಿ ಕೊಡುಗೆ ನೀಡಲು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಬ್ಯಾಂಕ್ ತಿಳಿಸಿದೆ.


    Population Decline, Bumper Offer Announced for Sperm Donors!
    ಸಾಂಕೇತಿಕ ಚಿತ್ರ


    ದಾನಿಗಳಿಗೆ ಉಚಿತ ಪರೀಕ್ಷೆ


    ಶಾಂಕ್ಸಿ ಪ್ರಾಂತ್ಯದ ಮತ್ತೊಂದು ವೀರ್ಯ ಬ್ಯಾಂಕ್ ದಾನಿಗಳಿಗೆ ಕರೆ ನೀಡಿದೆ. ಈ ಬ್ಯಾಂಕ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದು ಅದ್ಭುತ ಆಫರ್ ಅನ್ನು ನೀಡುತ್ತಿದ್ದು ವೀರ್ಯ ಬ್ಯಾಂಕ್, ದಾನಿಗಳು ವೀರ್ಯ ವಿಶ್ಲೇಷಣೆ, ಕ್ರೋಮೋಸೋಮ್ ಪರೀಕ್ಷೆ ಮತ್ತು ಆನುವಂಶಿಕ ಮತ್ತು ಸಾಂಕ್ರಾಮಿಕ ರೋಗಗಳ ತಪಾಸಣೆ ಸೇರಿದಂತೆ ಉಚಿತ ವೈದ್ಯಕೀಯ ತಪಾಸಣೆಗಳನ್ನು ಹೊಂದಬಹುದು.


    ಶಾಂಡೊಂಗ್ ಪ್ರಾಂತ್ಯದ ವೀರ್ಯ ಬ್ಯಾಂಕ್ ದಾನಿಗಳು ತಮ್ಮ ವೀರ್ಯದ ಮಾದರಿಗಳನ್ನು 10 ವರ್ಷಗಳವರೆಗೆ ಫ್ರೀಜ್ ಮಾಡಬಹುದು ಮತ್ತು ಸಂಗ್ರಹಿಸಬಹುದು ಮತ್ತು ಅಗತ್ಯವಿರುವಾಗ ಆ ಮಾದರಿಗಳನ್ನು ಉಚಿತವಾಗಿ ಬಳಸಬಹುದು ಎಂದು ಹೇಳಿಕೆ ನೀಡಿದೆ. ವಿಭಿನ್ನ ವೀರ್ಯ ಬ್ಯಾಂಕುಗಳು ದಾನಿಗಳಿಗೆ ವಿಭಿನ್ನ ಅವಶ್ಯಕತೆಗಳನ್ನು ಒದಗಿಸುತ್ತಿವೆ.


    ಇದನ್ನೂ ಓದಿ: Sperm Donation Law: ಇನ್ಮುಂದೆ ಮದುವೆಯಾಗಿದ್ರೆ ಮಾತ್ರ ವೀರ್ಯ ದಾನ, ಸಲಿಂಗಿಗಳಿಂದ ಈ ಕ್ರಮಕ್ಕೆ ವಿರೋಧ


    ದಾನಿಗಳಿಗೆ ನಿಯಮ ರೂಪಿಸುತ್ತಿರುವ ವೀರ್ಯ ಬ್ಯಾಂಕ್‌ಗಳು


    ಗ್ಲೋಬಲ್ ಟೈಮ್ಸ್ ಪ್ರಕಾರ, ಯುನ್ನಾನ್‌ನ ವೀರ್ಯ ಬ್ಯಾಂಕ್ 20 ಮತ್ತು 40 ರ ನಡುವಿನ ವಯಸ್ಸಿನ ದಾನಿಗಳಿಗೆ ವೀರ್ಯಾಣು ದಾನಕ್ಕಾಗಿ ಕರೆ ನೀಡಿದೆ.


    ಈ ದಾನಿಗಳು 165 ಸೆಂ.ಮೀ ಗಿಂತ ಹೆಚ್ಚು ಎತ್ತರವಾಗಿರಬೇಕು ಹಾಗೂ ಯಾವುದೇ ಸೋಂಕು ಮತ್ತು ಅನುವಂಶಿಕ ರೋಗಗಳಿಲ್ಲ ಎಂಬ ಅರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಿದೆ.


    ಶಾಂಕ್ಸಿಯಲ್ಲಿರುವ ವೀರ್ಯ ಬ್ಯಾಂಕ್‌ಗಳು ದಾನಿಗಳಿಗಾಗಿ ಕೆಲವೊಂದು ನಿಯಮಗಳನ್ನು ರೂಪಿಸಿದ್ದು ದಾನಿಗಳು ಕನಿಷ್ಠ 168 ಸೆಂ.ಮೀ ಎತ್ತರದವರಾಗಿರಬೇಕು ಹಾಗೂ ಸಂಪೂರ್ಣ ದೇಣಿಗೆಗೆ ಸಹಾಯಧನವಾಗಿ 5,000 ಯುವಾನ್ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.


    ದಾನಿಗಳಿಗೆ ಸಬ್ಸಿಡಿ ಹಾಗೂ ಇನ್ನಿತರ ಕೊಡುಗೆ


    ಶಾಂಘೈನಲ್ಲಿನ ಮತ್ತೊಂದು ವೀರ್ಯ ಬ್ಯಾಂಕ್ 7,000 ಯುವಾನ್ ($1,000) ಅತ್ಯಧಿಕ ಸಬ್ಸಿಡಿಯನ್ನು ದಾನಿಗಳಿಗೆ ನೀಡಿದೆ.




    ಬೀಜಿಂಗ್‌ನಲ್ಲಿರುವ ವೀರ್ಯ ಬ್ಯಾಂಕ್ ಕೆಲವೊಂದು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿದ್ದು, ಬಕ್ಕ ತಲೆಯವರು, ಧೂಮಪಾನಿಗಳು, ಮದ್ಯಪಾನಿಗಳು ಹಾಗೂ ತೀವ್ರ ಸಮೀಪದೃಷ್ಟಿ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ದಾನಿಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ ಎಂದು ವರದಿಯಾಗಿದೆ.

    Published by:Gowtham K
    First published: