ಮುಸ್ಲಿಂಮರು ಹೆಚ್ಚಿರುವ ಕಡೆ ಜನಸಂಖ್ಯೆ ನಿಯಂತ್ರಿಸಲಿದೆ ಅಸ್ಸಾಂ ರಾಜ್ಯದ ‘ಜನಸಂಖ್ಯಾ ಸೇನೆ’

“ಅಸ್ಸಾಂನಲ್ಲಿ 2001 ರಿಂದ 2011 ರ ವರೆಗೆ ಹಿಂದೂ ಜನಸಂಖ್ಯೆಯಲ್ಲಿ ಶೇಕಡಾ 10 ರಷ್ಟು ಏರಿಕೆ ಆಗಿದ್ದರೆ, ಮುಸ್ಲಿಂರಲ್ಲಿ ಅದು ಶೇಕಡಾ 29ರಷ್ಟು ಆಗಿದೆ” ಎಂದು ಮುಖ್ಯಮಂತ್ರಿ ಸರ್ಮಾ ತಿಳಿಸಿದ್ದಾರೆ.

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ

 • Share this:

  ‘ಜನಸಂಖ್ಯಾ ಸೇನೆ’ಯಲ್ಲಿ ಸುಮಾರು 1,000 ಯುವಕರು , ಜನಸಂಖ್ಯಾ ನಿಯಂತ್ರಣ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಜನಸಂಖ್ಯಾ ನಿಯಂತ್ರಕಗಳನ್ನು ಪೂರೈಸುವ ಕೆಲಸಗಳನ್ನು ಮಾಡಲಿದ್ದಾರೆ.


  ಗುವಾಹಟಿ: ಶೀಘ್ರದಲ್ಲೇ ಅಸ್ಸಾಂನ ಮುಸ್ಲಿಂಮರು ಹೆಚ್ಚು ವಾಸ ಮಾಡುವ ಸ್ಥಳಗಳಲ್ಲಿ ಗರ್ಭನಿರೋಧಕಗಳನ್ನು ವಿತರಿಸುವ ಮತ್ತು ಅವರಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕೆಲವಸವನ್ನು ‘ಜನಸಂಖ್ಯಾ ಸೇನೆ’ ಮಾಡಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ ಸೋಮವಾರ ವಿಧಾನಸಭೆಯಲ್ಲಿ ಹೇಳಿದರು.


  ರಾಜ್ಯದ ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿ ಆಗಿರುವ ಜನಸಂಖ್ಯಾ ಸ್ಪೋಟದ ಬಗ್ಗೆ ವಿಧಾನ ಸಭೆಯಲ್ಲಿ ಸರ್ಮಾ ಹೇಳಿದರು.
  “ಚಾರ್ ಚಪೋರಿಯ ಸುಮಾರು 1,000 ಯುವಕರು , ಜನಸಂಖ್ಯಾ ನಿಯಂತ್ರಣ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಜನಸಂಖ್ಯಾ ನಿಯಂತ್ರಕಗಳನ್ನು ಪೂರೈಸುವ ಕೆಲಸಗಳನ್ನು ಮಾಡಲಿದ್ದಾರೆ. ಜನಸಂಖ್ಯಾ ನಿಯಂತ್ರಣ ವಿಧಾನಗಳ ಬಗ್ಗೆ ಜಾಗ್ರತಿ ಮೂಡಿಸುವ ಮತ್ತು ಜನಸಂಖ್ಯಾ ನಿಯಂತ್ರಕಗಳನ್ನು ಪೂರೈಸುವ ಕೆಲಸಗಳನ್ನು ಮಾಡಲು ಆಶಾ ಕಾರ್ಯಕರ್ತೆಯರ ಪ್ರತ್ಯೇಕ ಗುಂಪನ್ನು ರಚಿಸುವ ಯೋಜನೆ ನಮಗಿದೆ” ಎಂದು ಅವರು ಹೇಳಿದರು.


  “ಅಸ್ಸಾಂನಲ್ಲಿ 2001 ರಿಂದ 2011 ರ ವರೆಗೆ ಹಿಂದೂ ಜನಸಂಖ್ಯೆಯಲ್ಲಿ ಶೇಕಡಾ 10 ರಷ್ಟು ಏರಿಕೆ ಆಗಿದ್ದರೆ, ಮುಸ್ಲಿಂರಲ್ಲಿ ಅದು ಶೇಕಡಾ 29ರಷ್ಟು ಆಗಿದೆ” ಎಂದು ಮುಖ್ಯಮಂತ್ರಿ ಸರ್ಮಾ ತಿಳಿಸಿದ್ದಾರೆ.
  “ಹಿಂದೂಗಳ ಜನಸಂಖ್ಯೆ ಕಡಿಮೆ ಇರುವುದರಿಂದ ಅವರ ಜೀವನ ಶೈಲಿ ಉತ್ತಮವಾಗಿದೆ, ಅವರು ವಿಶಾಲ ಮನೆಗಳು, ವಾಹನಗಳನ್ನು ಹೊಂದಿದ್ದು, ಅವರ ಮಕ್ಕಳು ಡಾಕ್ಟರ್ ಹಾಗೂ ಎಂಜಿನಿಯರ್​ಗಳಾಗುತ್ತಿದ್ದಾರೆ” ಎಂದು ಅವರು ಹೇಳಿದರು.


  “ಅತೀ ಜನಸಂಖ್ಯೆಯ ಕಾರಣದಿಂದ, ಪಶ್ಚಿಮ ಮತ್ತು ಮಧ್ಯ ಅಸ್ಸಾಂನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಉತ್ತರ ಅಸ್ಸಾಂನ ಜನರು ಎದುರಿಸುತ್ತಿಲ್ಲ” ಎಂದು ಮುಖ್ಯಮಂತ್ರಿಯವರು ವಿಧಾನ ಸಭೆಯಲ್ಲಿ ತಿಳಿಸಿದರು.
  ಅಸ್ಸಾಂ ಜಾನುವಾರು ಮಸೂದೆಯನ್ನು ಸಮರ್ಥಿಸಿದ ಅವರು, ಅದು ಕಾಸ್ಮೋಪಾಲಿಟನ್ ನಗರಗಳಲ್ಲಿ ಮಾತ್ರ ಗೋಮಾಂಸ ಸೇವನೆಯನ್ನು ತಡೆಯುತ್ತದೆ ಎಂದರು.


  ಅಸ್ಸಾಂ ಮುಖ್ಯಮಂತ್ರಿ, ಮಂಗಳವಾರದಂದು 150 ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಚರ್ಚಿಸಲಿದ್ದಾರೆ.
  ಜನಸಂಖ್ಯಾ ನಿಯಂತ್ರಣದ ಸಂಗತಿಯನ್ನು ರಾಜಕೀಯದಿಂದ ಪ್ರತ್ಯೇಕವಾಗಿ ಇಡಬೇಕು ಎಂದು ಹೇಳಿರುವ ಸರ್ಮಾ, ರಾಜ್ಯದ ಮುಸ್ಲಿಂಮರ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಣಕ್ಕೆ ಒತ್ತು ನೀಡುವುದು, ಬಾಲ್ಯವಿವಾಹವನ್ನು ನಿಲ್ಲಿಸುವುದು ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವುದು ಮುಂತಾದ ವಾಸ್ತವಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಸ್ಲಿಂ ಬಹು ಸಂಖ್ಯಾತ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚು ಸ್ಪಷ್ಟವಾಗಿದೆ ಎಂದರು.


  “ಇತ್ತೀಚಿನ ದಿನಗಳಲ್ಲಿ ವಾಸಿಸಲು ಜಾಗ ಸಾಲದೆ, ಅನೇಕರು ಖಾಲಿ ಭೂಮಿಗೆ ,ಅದರಲ್ಲೂ ಮುಖ್ಯವಾಗಿ ಅರಣ್ಯ ಪ್ರದೇಶಗಳಿಗೆ ಹೋಗುತ್ತಾರೆ. ಅದರ ಪರಿಣಾಮವಾಗಿ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮುದಾಯದವರು ಕೇರಳಕ್ಕೆ ವಲಸೆ ಹೋಗುವುದು ಕೂಡ ಹೆಚ್ಚಾಗುತ್ತಿವೆ ಮತ್ತು ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ”.


  ಇದನ್ನೂ ಓದಿ: Karnataka 2nd PU Results Today: ಇಂದು ಸಂಜೆ 4.30ಕ್ಕೆ ಪಿಯು ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

  “ಕೆಳ ಮತ್ತು ಮಧ್ಯ ಅಸ್ಸಾಂನಲ್ಲಿ ಸಮುದಾಯದ ಒಳಗೆ ಸಾಮಾಜಿಕ ಸಮಸ್ಯೆಯೂ ಇದೆ, ಆದರೆ ನಾವು ಬಡವರನ್ನು ದೂರಲಾಗದು.ಶೇಕಡಾ 5 ರಿಂದ 6 ರಷ್ಟು ಜನಸಂಖ್ಯಾ ಹೆಚ್ಚಳ ಕಡಿಮೆ ಆದರೆ , ಆಗ ಯಾವ ಸಮಸ್ಯೆಯೂ ಇರುವುದಿಲ್ಲ” ಎಂದು ಅವರು ಹೇಳಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: