• Home
  • »
  • News
  • »
  • national-international
  • »
  • Pope Francis: ಉಕ್ರೇನ್ ಜನತೆಯ ಸ್ಥಿತಿ ನೆನೆದು ಕಣ್ಣೀರಾದ ಪೋಪ್ ಫ್ರಾನ್ಸಿಸ್, ಎಲ್ಲರಿಗೂ ಒಂದು ವಿಶೇಷ ಮನವಿ ಮಾಡಿದ ಧರ್ಮಗುರು

Pope Francis: ಉಕ್ರೇನ್ ಜನತೆಯ ಸ್ಥಿತಿ ನೆನೆದು ಕಣ್ಣೀರಾದ ಪೋಪ್ ಫ್ರಾನ್ಸಿಸ್, ಎಲ್ಲರಿಗೂ ಒಂದು ವಿಶೇಷ ಮನವಿ ಮಾಡಿದ ಧರ್ಮಗುರು

ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್

ಉಕ್ರೇನ್ ಜನತೆಯ ಬಗ್ಗೆ ಮಾತನಾಡುವಾಗ ಪೋಪ್ ಅವರ ಧ್ವನಿಯು ನಡುಗಲಾರಂಭಿಸಿತು ಹಾಗೂ 30 ಸೆಕೆಂಡ್‌ಗಳ ಕಾಲ ಪೋಪ್ ಮಾತನಾಡದೇ ಹಾಗೆಯೇ ನಿಂತಿದ್ದರು.

  • Share this:

ರಷ್ಯಾದ (Russia) ನಿರಂತರ ಕ್ಷಿಪಣಿ ದಾಳಿಗಳಿಂದ ಹೈರಾಣಾಗಿರುವ ಉಕ್ರೇನ್ (Ukraine) ಹಾಗೂ ಉಕ್ರೇನ್ ಜನತೆ ಇನ್ನೂ ಕೂಡ ಯುದ್ಧದ ಭೀಕರ ಪರಿಣಾಮಗಳ ನಡುವೆ ಬದುಕಲು ಹೆಣಗಾಡುತ್ತಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ (Pope Francis) ತಿಳಿಸಿದ್ದಾರೆ. ರೋಮ್‌ನಲ್ಲಿ ವರ್ಜಿನ್ ಮೇರಿ (Virgin Mary) ಪ್ರತಿಮೆಯನ್ನು ಪೂಜಿಸಲು ವಾರ್ಷಿಕ ಕ್ರಿಸ್ಮಸ್ (Christmas) ಭೇಟಿಯ ಸಂದರ್ಭದಲ್ಲಿ ಪೋಪ್ ಭಾವೋದ್ರೇಕರಾಗಿದ್ದು, ಉಕ್ರೇನ್ ನಾಗರಿಕರ ದುಃಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.


ಉಕ್ರೇನ್ ಜನತೆಯ ಸ್ಥಿತಿಗೆ ಮರುಗಿದ ಪೋಪ್ ಫ್ರಾನ್ಸಿಸ್


ಉಕ್ರೇನ್ ಜನತೆಯ ಬಗ್ಗೆ ಮಾತನಾಡುವಾಗ ಪೋಪ್ ಅವರ ಧ್ವನಿಯು ನಡುಗಲಾರಂಭಿಸಿತು ಹಾಗೂ 30 ಸೆಕೆಂಡ್‌ಗಳ ಕಾಲ ಪೋಪ್ ಮಾತನಾಡದೇ ಹಾಗೆಯೇ ನಿಂತಿದ್ದರು. ಪ್ರಾರ್ಥನೆಯನ್ನು ಮತ್ತೆ ಆರಂಭಿಸಿದಾಗ ಅವರ ಧ್ವನಿ ಗದ್ಗದಿತವಾಗಿತ್ತು ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ.


ಇನ್‌ಸ್ಟಾದಲ್ಲಿ ಎಬಿಸಿ ನ್ಯೂಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಪೋಪ್ ಫ್ರಾನ್ಸಿಸ್ ತನ್ನ ಸುತ್ತ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಅವರು ದಿಢೀರ್ ಕಣ್ಣೀರು ಹಾಕಿದರು ಹಾಗೂ ಭಾವುಕರಾದರು. ಅವರನ್ನು ಸುತ್ತುವರಿದಿದ್ದ ಜನರು ಪೋಪ್‌ರನ್ನು ಶ್ಲಾಘಿಸಿದ್ದು, ಮಾತನ್ನು ಮುಂದುವರಿಸುವಂತೆ ಆಗ್ರಹಿಸಿದ್ದು ವಿಡಿಯೋದಲ್ಲಿ ಕಂಡುಬಂದಿದೆ.


ಉಕ್ರೇನ್ ದಾಳಿಯನ್ನು ನಾಜಿ ಕಾರ್ಯಾಚರಣೆಗೆ ಹೋಲಿಸಿದ ಪೋಪ್


ಫೆಬ್ರವರಿಯಲ್ಲಿ ರಷ್ಯಾ ತನ್ನ ಆಕ್ರಮಣವನ್ನು ಪ್ರಾರಂಭಿಸಿದ ನಂತರ, ಪೋಫ್ ಫ್ರಾನ್ಸಿಸ್ ತಮ್ಮ ಎಲ್ಲಾ ಸಾರ್ವಜನಿಕ ಭಾಷಣಗಳಲ್ಲಿ ಉಕ್ರೇನ್ ಅನ್ನು ಉಲ್ಲೇಖಿಸಿದ್ದು, ಮಾಸ್ಕೋವನ್ನು ಹೆಚ್ಚು ಟೀಕಿಸಿದ್ದಾರೆ ಎಂಬುದು ವರದಿಯಾಗಿದೆ.


Why did the armored Russian air force fail in Ukraine and What lessons should the Indian Air Force learn stg asp
ರಷ್ಯಾದ ವಾಯುಪಡೆ


ಉಕ್ರೇನ್‌ನ ಯುದ್ಧವನ್ನು ನಾಜಿ ಕಾರ್ಯಾಚರಣೆಗೆ ಹೋಲಿಸಿದ ಪೋಪ್, ನಾಜಿ ಯುದ್ಧವು ಹೆಚ್ಚಾಗಿ ಯಹೂದಿಗಳ ಬಲಿ ಪಡೆದುಕೊಂಡಿದ್ದು ಎರಡನೇ ಮಹಾಯುದ್ಧದ ಮೊದಲ ವರ್ಷಗಳಲ್ಲಿ ಸುಮಾರು ಎರಡು ಮಿಲಿಯನ್ ಜನರನ್ನು ಹತ್ಯೆಗೈದಿತು ಎಂದು ತಿಳಿಸಿದ್ದಾರೆ.


ಪೋಪ್ ಕಣ್ಣೀರಿಗೆ ಕಾಮೆಂಟ್‌ ಮಾಡಿರುವ ಬಳಕೆದಾರರು


ಇನ್‌ಸ್ಟಾದಲ್ಲಿ ವಿಡಿಯೋ ವೀಕ್ಷಿಸಿದ ಹಲವಾರು ಬಳಕೆದಾರರು ಕಾಮೆಂಟ್‌ಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಪೋಪ್ ಕಣ್ಣೀರು ಹಾಕಿರುವುದಕ್ಕೆ ಸಂದೇಹ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಉಕ್ರೇನ್ ಜನರ ಶಾಂತಿಗಾಗಿ ಪ್ರಾರ್ಥನೆಯ ಕಾಮೆಂಟ್‌ಗಳನ್ನು ಬರೆದುಕೊಂಡಿದ್ದಾರೆ.


ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರೆ ಇನ್ನೊಬ್ಬ ಬಳಕೆದಾರರು ಭಗವಂತನಿಗೆ ಸೇವೆ ಸಲ್ಲಿಸುವ ವಾಗ್ದಾನಗೈದಿರುವ ವ್ಯಕ್ತಿಯ ಪ್ರಾಮಾಣಿಕ ಪ್ರಾರ್ಥನೆಯನ್ನು ನೋಡುವುದು ಕಣ್ಣುಗಳಿಗೆ ಸುಂದರಮಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಪೋಪ್ ನಿಜವಾಗಿಯೂ ಕಣ್ಣೀರು ಹಾಕಿರುವುದು ನಿಜವೇ ಎಂದು ಇನ್ನೊಬ್ಬ ಬಳಕೆದಾರರು ಸಂದೇಹ ವ್ಯಕ್ತಪಡಿಸಿದ್ದಾರೆ.


ಉಕ್ರೇನ್ ಜನತೆಗಾಗಿ ಪ್ರಾರ್ಥಿಸಿ; ಪೋಪ್ ಮನವಿ


ಫ್ರಾನ್ಸಿಸ್ ಅವರ ಮಾತುಗಳನ್ನು ಅಸೋಸಿಯೇಟೆಡ್ ಪ್ರೆಸ್ ಇದ್ದಂತೆಯೇ ವ್ಯಾಖ್ಯಾನಿಸಿದ್ದು, ಉಕ್ರೇನಿಯನ್ ಜನರ ವಂದನೆಗಳನ್ನು ನಿಮಗೆ ಅರ್ಪಿಸಲು ನಾನು ಬಯಸುತ್ತೇನೆ ಎಂದು ಪೋಪ್ ಹೇಳಿದ್ದಾರೆ. ದೀರ್ಘ ವಿರಾಮದ ನಂತರ ಮಾತನ್ನು ಮುಂದುವರಿಸಿದ ಪೋಪ್, ಉಕ್ರೇನಿಯನ್ ಜನರ ಶಾಂತಿಗಾಗಿ ನಾವು ದೀರ್ಘಕಾಲದಿಂದ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇವೆ.


Russia vs Ukraine war 440 dead bodies mass grave found in Recaptured City Izium
ಸಾಂದರ್ಭಿಕ ಚಿತ್ರ


ಇದೀಗ ಅಲ್ಲಿನ ಪುಟ್ಟ ಮಕ್ಕಳು, ತಾಯಂದಿರು, ವೃದ್ಧರು, ತಂದೆಯರು ಹಾಗೂ ಹುತಾತ್ಮ ನಾಡಿನ ಯುವಕರ ಮನವಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಬೇಕಾಗಿದ್ದು ಅವರೆಲ್ಲರೂ ತೀವ್ರವಾದ ಯಾತನೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.


ನೆಟ್ಟಿಗರ ಕಣ್ಣು ತೇವ ಮಾಡಿದ ದೃಶ್ಯ


ಕಠಿಣ ಚಳಿಗಾಲದ ಆರಂಭದಲ್ಲಿ ಉಕ್ರೇನ್ ಜನತೆ ಸರಿಯಾದ ವಿದ್ಯುತ್ ಹಾಗೂ ನೀರಿಲ್ಲದೆ ಹಪಹಪಿಸುತ್ತಿದ್ದಾರೆ. ಲಕ್ಷಾಂತರ ಜನರು ದಿಕ್ಕಿಲ್ಲದೆ ಕಂಗಾಲಾಗಿದ್ದಾರೆ. ಜಾಗತಿಕ ಟೀಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆಯೇ ವ್ಲಾಡಿಮಿರ್ ಪುಟಿನ್ ದಾಳಿಯನ್ನು ಮುಂದುವರಿಸುವುದಾಗಿ ಪ್ರತಿಜ್ಞೆಗೈದಿದ್ದಾರೆ.


ಇದನ್ನೂ ಓದಿ: Ukriane Crisis: ರಷ್ಯಾ-ಉಕ್ರೇನ್ ಯುದ್ಧದಲ್ಲಿ ದುರ್ಘಟನೆ ಸಂಭವಿಸಿದರೆ ಮಧ್ಯ ಪ್ರವೇಶಿಸುತ್ತಾ ಅಮೆರಿಕಾ?


ಪವರ್ ಕಟ್ ಸಮಯದಲ್ಲಿ ವೈದ್ಯರುಗಳು ಮಗುವೊಂದಕ್ಕೆ ತೆರೆದ ಹೃದಯದ ಶಸ್ತ್ರಕ್ರಿಯೆಯನ್ನು ಮಾಡುತ್ತಿರುವ ವಿಡಿಯೋವು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಹನಿಗಣ್ಣಾಗಿಸಿದೆ. ಉಕ್ರೇನ್ ನೆಲದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದೆ. ಪೋಪ್ ಫ್ರಾನ್ಸಿಸ್ ಭಾವೋದ್ವೇಗದಿಂದ ಹೊರಬಂದಂತೆ ತೋರುತ್ತಿದೆ ಎಂದು ಪತ್ರಕರ್ತರೊಬ್ಬರು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೋಪ್, ಹೌದು... ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಅಗಾಧವಾದ ಸಂಕಟ ಹಾಗೂ ನೋವಿನ ಪ್ರತೀಕವಾಗಿದ್ದು ಮಾನವೀಯತೆಯ ಸೋಲಾಗಿದೆ ಎಂದು ತಿಳಿಸಿದ್ದಾರೆ.

Published by:Soumya KN
First published: