Justin Bieber: ಭಾರತಕ್ಕೆ ಬರಲಿದ್ದಾರಂತೆ ಪಾಪ್ ಸ್ಟಾರ್ ಜಸ್ಟಿನ್ ಬೈಬರ್! ಯಾವಾಗ ಎಲ್ಲಿ ಗೊತ್ತಾ?

ಪಾಪ್ ಸ್ಟಾರ್ ಜಸ್ಟಿನ್ ಬೈಬರ್

ಪಾಪ್ ಸ್ಟಾರ್ ಜಸ್ಟಿನ್ ಬೈಬರ್

ಅಕ್ಟೋಬರ್ 18 ರಂದು ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಜಸ್ಟೀನ್ ಬೈಬರ್ ನೋಡಲು ಈಗಾಗ್ಲೇ ಅಭಿಮಾನಿಗಳು ಕಾದು ಕುಳಿತಿದ್ದು, ಅಕ್ಟೋಬರ್ ತಿಂಗಳನ್ನು ಎದುರು ನೋಡುತ್ತಿದ್ದಾರೆ.

  • Share this:

ಪಾಪ್ ತಾರೆ (Pop Star) ಗ್ಲೋಬಲ್ ಸಿಂಗಿಂಗ್ ಸೆನ್ಸೇಷನ್ ಜಸ್ಟಿನ್ ಬೈಬರ್ (Justin Bieber) ಹೆಸರು ಕೇಳಿದ್ರೆ ಸಾಕು ಇಂದಿನ ಯುವ ಪೀಳಿಗೆ ಹುಚ್ಚೆದ್ದು ಕುಣಿಯುತ್ತದೆ. ತನ್ನ ಕಂಠದಿಂದಲೇ ಮೋಡಿ ಮಾಡಿರುವ ಕೆನಡಾದ ಜನಪ್ರಿಯ ಗಾಯಕ (Popular Singer) ಜಸ್ಟೀನ್ ಬೈಬರ್ ಗಾಯನಕ್ಕೆ ಯುವ ಪೀಳಿಗೆ ಮನಸೋತಿದೆ. 2008ರ ಕಾಲಘಟ್ಟದಲ್ಲಿ ಸಂಗೀತಕ್ಕೆ (Singing) ಹೊಸ ಅಯಾಮ ನೀಡಿರುವ ಖ್ಯಾತ ಗಾಯಕ ಜಸ್ಟಿನ್ ಬೈಬರ್ ಭಾರತಕ್ಕೆ ಶೀಘ್ರದಲ್ಲಿಯೇ ಆಗಮಿಸಲಿದ್ದಾರೆ. ಹೌದು, ಬೇಬಿ, ಸ್ವಾರಿ, ಘೋಸ್ಟ್, ಲೋನ್ಲಿ ಹಾಡುಗಳಿಗೆ ಹೆಸರುವಾಸಿಯಾದ ಜಸ್ಟಿನ್ ಬೈಬರ್ ಸುಮಾರು 5 ವರ್ಷಗಳ ನಂತರ ಸಂಗೀತ ಕಾರ್ಯಕ್ರಮ ನೀಡಲು ಭಾರತಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ.


ಜಸ್ಟೀನ್ ವರ್ಲ್ಡ್ ಟೂರ್‌ನ ಭಾಗವಾಗಿ ಅಕ್ಟೋಬರ್ 18 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಬಗ್ಗೆ ಮಂಗಳವಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ. ಅಕ್ಟೋಬರ್ 18 ರಂದು ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಜಸ್ಟೀನ್ ಬೈಬರ್ ನೋಡಲು ಈಗಾಗ್ಲೇ ಅಭಿಮಾನಿಗಳು ಕಾದು ಕುಳಿತಿದ್ದು, ಅಕ್ಟೋಬರ್ ತಿಂಗಳನ್ನು ಎದುರು ನೋಡುತ್ತಿದ್ದಾರೆ.


2ನೇ ಬಾರಿಗೆ ಭಾರತಕ್ಕೆ ಬರುತ್ತಿರುವ ಮ್ಯಾಜಿಕಲ್ ಸಿಂಗರ್
ಜಸ್ಟಿನ್ ಭಾರತದಲ್ಲಿ ನೀಡಲಿರುವ ಎರಡನೇ ಕಾರ್ಯಕ್ರಮವಾಗಿದೆ. ಭಾರತದಲ್ಲಿ 2017ರಲ್ಲಿ ವಿಶ್ವ ಪ್ರವಾಸದ ಭಾಗವಾಗಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಹಾಡಿನ ಝಲಕ್ ಅನ್ನು ಪ್ರದರ್ಶಿಸಿದ್ದರು. ಈ ಕಾರ್ಯಕ್ರಮದಲ್ಲಿ 40,000ಕ್ಕೂ ಸಂಗೀತ ಪ್ರಿಯರು ಮತ್ತು ಹೆಚ್ಚು ಅಭಿಮಾನಿಗಳು ನೆರೆದಿದ್ದರು. ಅಲ್ಲದೇ ಈ ಈವೆಂಟ್ ನಲ್ಲಿ ಆಲಿಯಾ ಭಟ್, ಶ್ವೇತಾ ಬಚ್ಚನ್ ನಂದಾ, ಜಾಕ್ವೆಲಿನ್ ಫರ್ನಾಂಡೀಸ್, ಬಿಪಾಶಾ ಬಸು, ಹುಮಾ ಖುರೇಷಿ, ಸೋಫಿ ಚೌದ್ರಿ, ಕನಿಕಾ ಕಪೂರ್, ಭೂಮಿ ಪೆಡ್ನೇಕರ್, ಅಯಾನ್ ಮುಖರ್ಜಿ, ಪೂಜಾ ಹೆಗ್ಡೆ ಮುಂತಾದ ಗಣ್ಯರು ಸಹ ಭಾಗವಹಿಸಿದ್ದರು. ಪ್ರಸ್ತುತ ಇದಾದ 5 ವರ್ಷಗಳ ಬಳಿಕ ಕೆನಾಡದ ಗಾಯಕ ಮತ್ತೆ ಭಾರತದಲ್ಲಿ ತನ್ನ ಸಂಗೀತ ಮಾಂತ್ರಿಕತೆಯನ್ನು ಪ್ರದರ್ಶಿಸಲು ಬರುತ್ತಿದ್ದಾರೆ.


ಇದನ್ನೂ ಓದಿ :  Kangana Ranaut: ನನ್ನ ಫ್ರೆಂಡ್ಸ್ ಆಗುವ ಯೋಗ್ಯತೆ ಬಾಲಿವುಡ್ಗಿಲ್ಲ! ಹೀಗೆಂದಿದ್ದೇಕೆ ಕ್ವೀನ್ ಕಂಗನಾ?


ಬಿಲ್ಬೋರ್ಡ್ ಪ್ರಕಾರ, ಜಸ್ಟೀನ್ ಸಂಗೀತ ಕಾರ್ಯಕ್ರಮವನ್ನು AEG ಪ್ರೆಸೆಂಟ್ಸ್ ಮತ್ತು ಭಾರತೀಯ ಮನರಂಜನಾ ಟಿಕೆಟಿಂಗ್ ವೇದಿಕೆ ಬುಕ್ ಮೈಶೋ ಸಹ-ಪ್ರಚಾರ ಮಾಡುತ್ತಿದೆ ಎನ್ನಲಾಗಿದೆ. ಅಕ್ಟೋಬರ್ 18 ರಂದು ಜರುಗಲಿರುವ ಕಾರ್ಯಕ್ರಮದ ಟಿಕೆಟ್ಬುಕ್ ಮೈಶೋ ನಲ್ಲಿ ಜೂನ್ 2 ರಂದು ಪೂರ್ವ-ಮಾರಾಟವಾಗಲಿದೆ ಮತ್ತು ಜೂನ್ 4 ರಂದು ಟಿಕೆಟ್ ಸೇಲ್ ನಡೆಯಲಿದೆ. ಬುಕ್‌ಮೈಶೋ ಜಸ್ಟಿನ್ ಅವರ ಭಾರತ ಭೇಟಿಗಾಗಿ ಸುಮಾರು 43,000 ಟಿಕೆಟ್‌ಗಳನ್ನು ನೀಡುತ್ತಿದೆ ಮತ್ತು ಟಿಕೆಟ್‌ಗಳ ಬೆಲೆ ₹4,000 ಆಗಿರುತ್ತವೆ ಎಂದು ವರದಿಗಳು ಹೇಳಿವೆ.


ಜಸ್ಟಿನ್ ಬೈಬರ್ ವಿಶ್ವ ಪ್ರವಾಸ
ಜಸ್ಟೀಸ್ ವರ್ಲ್ಡ್ ಟೂರ್ ಮೇ 2022 ರಿಂದ ಮಾರ್ಚ್ 2023ರವರೆಗೆ ಹಮ್ಮಿಕೊಳ್ಳಲಾಗಿದ್ದು, 30ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿ ತಮ್ಮ ಸಂಗೀತದ ಸಿಹಿಯನ್ನು ಹಂಚಲಿದ್ದಾರೆ. 125ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಲು ಜಸ್ಟೀನ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಸ್ಟಿನ್ ಅವರ ಪ್ರವಾಸಕ್ಕಾಗಿ 1.3 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.


ವರದಿಯ ಪ್ರಕಾರ, ಬೈಬರ್ ಅವರ ವಿಶ್ವ ಪ್ರವಾಸವು ಮೆಕ್ಸಿಕೋದಲ್ಲಿ ಪ್ರಾರಂಭವಾಗುತ್ತದೆ, ಆಗಸ್ಟ್‌ನಲ್ಲಿ ಪ್ರದರ್ಶನಗಳಿಗಾಗಿ ಸ್ಕ್ಯಾಂಡಿನೇವಿಯಾಕ್ಕೆ ತಲುಪಲಿದೆ. ಮತ್ತು ಮೊದಲು ಇಟಲಿಯಲ್ಲಿ ನಿಲ್ಲುತ್ತದೆ. ತದನಂತರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ದಕ್ಷಿಣ ಅಮೇರಿಕಾ, ದಕ್ಷಿಣ ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕೆ ತೆರಳಲಿದ್ದಾರೆ. 2022 ರ ಪ್ರವಾಸವು ಏಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಮುಕ್ತಾಯಗೊಳ್ಳಲಿದೆ.


ಇದನ್ನೂ ಓದಿ :  Mahesh Babu: 'ಪ್ರಿನ್ಸ್' ಮಹೇಶ್ ಬಾಬು ಅವರ ಪುತ್ರಿಯ ಬೆಸ್ಟ್ ಫ್ರೆಂಡ್ ಇವರೇ ಅಂತೆ!


ಜಸ್ಟೀನ್ 2023ರ ಆರಂಭದಲ್ಲಿ ಯುಕೆ ಮತ್ತು ಯುರೋಪ್‌ನಲ್ಲಿ ಪ್ರದರ್ಶನ ನೀಡಲು ನಿರ್ಧರಿಸಿದ್ದಾರೆ. ದುಬೈ, ಬಹ್ರೇನ್, ಸಿಡ್ನಿ, ನವದೆಹಲಿ, ಮನಿಲಾ, ಆಮ್‌ಸ್ಟರ್‌ಡ್ಯಾಮ್, ಲಂಡನ್ ಮತ್ತು ಡಬ್ಲಿನ್‌ಗೆ ಹೆಚ್ಚುವರಿ ಸಂಗೀತ ಈವೆಂಟ್ ದಿನಾಂಕಗಳನ್ನು ಘೋಷಿಸಲಾಗಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು