Afghanistan Crisis: ತಾಲಿಬಾನಿಗರಿಂದ ಜೀವ ಭಯ: ಅಫ್ಘಾನಿಸ್ತಾನ ತೊರೆದ ಪಾಪ್ ತಾರೆ ಅರ್ಯಾನ ಸಯೀದ್

Aryana Saeed: ತಾಲಿಬಾನರನ್ನು ಧಿಕ್ಕರಿಸಿದ ಅನೇಕ ಪ್ರಮುಖ ವ್ಯಕ್ತಿಗಳು ಮತ್ತು ಕಳೆದ 20 ವರ್ಷಗಳಲ್ಲಿ ತಮ್ಮದೇ ಹಾದಿಯಲ್ಲಿರುವವರು ಜೀವಭಯದಿಂದ ಇತರ ದೇಶಗಳಿಗೆ ತೆರಳುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

    ದಶಕಗಳ ಹಿಂದಿನ ತಾಲಿಬಾನ್ ಅಟ್ಟಹಾಸ ಅಫ್ಘಾನಿಸ್ತಾನದಲ್ಲಿ ಪುನಃ ಸ್ಥಾಪಿಸಲು ತಾಲಿಬಾನಿಗಳು ಎಲ್ಲ ರೀತಿಯಲ್ಲೂ ಸಿದ್ಧರಾಗುತ್ತಿದ್ದಾರೆ. ಅಂದರೆ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್‍ಗಳು ತಮ್ಮ ಹಿಡಿತ ಬಿಗಿಗೊಳಿಸಿದ್ದಾರೆ. ಹೀಗಾಗಿ ದಂಗೆಕೋರರ ಹಿಡಿತದಿಂದ ತಪ್ಪಿಸಿಕೊಳ್ಳಲು ಕಾಯುತ್ತಿದ್ದಾರೆ. ಲಕ್ಷಾಂತರ ಮಂದಿ ಎಲ್ಲಿಯೂ ಹೋಗಲಾಗದೆ ಇರುವ ಸ್ಥಳದಲ್ಲೇ ಮುಂದಿನ ಜೀವನ ನೆನೆದು ಬಿಕ್ಕುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ತಾಲಿಬಾನಿಗಳ ಆಡಳಿತಕ್ಕೆ ಹೆದರಿ ಮುಂದಿನ ಜೀವನಕ್ಕಾಗಿ ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಯುಎಸ್, ಯುಕೆ, ಭಾರತ ಮತ್ತು ಇತರ ದೇಶಗಳು ತಮ್ಮದೇ ದೇಶವಾಸಿಗಳನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವುದನ್ನು ಮುಂದುವರಿಸುತ್ತಿದ್ದಂತೆ, ತಾಲಿಬಾನರನ್ನು ಧಿಕ್ಕರಿಸಿದ ಅನೇಕ ಪ್ರಮುಖ ವ್ಯಕ್ತಿಗಳು ಮತ್ತು ಕಳೆದ 20 ವರ್ಷಗಳಲ್ಲಿ ತಮ್ಮದೇ ಹಾದಿಯಲ್ಲಿರುವವರು ಜೀವಭಯದಿಂದ ಇತರ ದೇಶಗಳಿಗೆ ತೆರಳುತ್ತಿದ್ದಾರೆ.


    ಈ ಪರಿಸ್ಥಿತಿ ಅಪ್ಘಾನಿಸ್ತಾನದ ಅತಿದೊಡ್ಡ ಪಾಪ್ ಗಾಯಕಿ ಅರ್ಯಾನ ಸಯೀದ್ ಅವರಿಗೂ ಹೊರತಾಗಿಲ್ಲ. ಅವರು ಇತ್ತೀಚೆಗೆ ಅಮೆರಿಕದ ವಿಮಾನದಲ್ಲಿ ಕಾಬೂಲ್‌ನಿಂದ ಸ್ಥಳಾಂತರಗೊಂಡಿದ್ದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಈ ವೇಳೆ ಭಾವನಾತ್ಮಕ ಬರವಣಿಗೆಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.


    ಅಂದರೆ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆಯೇ ತಮ್ಮ ಪತಿಯೊಂದಿಗೆ ಆರ್ಯಾನ ಸಯೀದ್ ದೇಶ ತೊರೆದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಬರೆದ ತಮ್ಮ ಪೋಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿರುವ ತಮ್ಮ ದೇಶವಾಸಿಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಪ್ರಾರ್ಥಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು 'ಮಾತೃಭೂಮಿ ತೊರೆಯುವ ಕೊನೆಯ ಸೈನಿಕ' ಎಂದು ಹೇಳಿದ್ದೆ. ಈ ಮಾತು ಇದೀಗ ಕುತೂಹಲಕಾರಿಯಾಗಿ, ನಿಜವಾಯಿತು ಎಂದಿದ್ದಾರೆ.


    ಇದನ್ನೂ ಓದಿ: ಇಂದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ 145 ಮಂದಿ; ಈವರೆಗೆ 537 ಜನರ ಆಗಮನ

    "ದೇಶದಲ್ಲಾದ ಭಯಾನಕ ಬದಲಾವಣೆಯ ಪರಿಣಾಮವಾಗಿ ಕನಿಷ್ಠ ನನ್ನ ಪ್ರೀತಿಯ ಜನರು ಆತ್ಮಾಹುತಿ ಬಾಂಬರ್‌ಗಳು ಮತ್ತು ಸ್ಫೋಟಗಳ ಭಯವಿಲ್ಲದೆ ಶಾಂತಿಯುತ ಜೀವನ ಪ್ರಾರಂಭಿಸಲು ಸಾಧ್ಯವಾಗಲಿ ಎಂದು ನಾನು ದೇವರಲ್ಲಿ ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ನನ್ನ ಹೃದಯ, ನನ್ನ ಪ್ರಾರ್ಥನೆ ಮತ್ತು ನನ್ನ ಆಲೋಚನೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಅಫ್ಘಾನಿಸ್ತಾನದಲ್ಲಿ ನನ್ನ ಇರುವಿಕೆಯ ಬಗ್ಗೆ ಕಾಳಜಿ ಹೊಂದಿ ಶುಭ ಹಾರೈಸಿದ್ದ ಮತ್ತು ಪ್ರಾರ್ಥನೆ ಮಾಡಿದ್ದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಾನು ದೋಹಾ, ಕತಾರ್‌ಗೆ ಬಂದಿದ್ದೇನೆ ಮತ್ತು ನಾನು ಇಸ್ತಾಂಬುಲ್‍ನಲ್ಲಿನ ಮನೆಗೆ ಮರಳಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.


    ಇದನ್ನೂ ಓದಿ: Petrol Price Today: ಇಂದು ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್​-ಡೀಸೆಲ್ ಬೆಲೆ

    ನಾನು ಮನೆಗೆ ಬಂದ ನಂತರ ಮತ್ತು ನನ್ನ ಮನಸ್ಸು ಹಾಗೂ ಭಾವನೆಗಳು ಅಪನಂಬಿಕೆ ಮತ್ತು ಆಘಾತದ ಪ್ರಪಂಚದಿಂದ ಸಹಜ ಸ್ಥಿತಿಗೆ ಮರಳಿದ ನಂತರ, ನಿಮ್ಮೊಂದಿಗೆ ಹಂಚಿಕೊಳ್ಳಲು ನನ್ನ ಬಳಿ ಅನೇಕ ಕಥೆಗಳಿವೆ!! ಸದ್ಯಕ್ಕೆ, ದಯವಿಟ್ಟು ಸುರಕ್ಷಿತವಾಗಿರಿ ಮತ್ತು ದಯವಿಟ್ಟು ಒಗ್ಗಟ್ಟಾಗಿರಿ! xoxo -ಆರ್ಯಾನ ಎಂದು ಪೋಸ್ಟ್ ಮಾಡಿದ್ದಾರೆ.


    ನಂತರದ ಪೋಸ್ಟ್‌ನಲ್ಲಿ, ಪಾಪ್ ಗಾಯಕಿ ನಾಲ್ಕು ದಿನಗಳ ಪ್ರಯಾಣದ ನಂತರ ಯುಎಸ್‍ಗೆ ಬಂದಿರುವುದನ್ನು ಹಂಚಿಕೊಂಡರು. ಅವರು ತಮ್ಮ ಆಲೋಚನೆಗಳನ್ನು ತಪ್ಪಿಸಿಕೊಂಡರೂ ಅಸಂಖ್ಯಾತರು ಇತರರು ನರಕದಲ್ಲಿ ಇರುವುದನ್ನು ನೆನೆಸಿಕೊಂಡಿದ್ದಾರೆ ಮತ್ತು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದಾರೆ.

    Published by:Sharath Sharma Kalagaru
    First published: