Poonam Pandey: ಪೂನಂ ಪಾಂಡೆ ಬಂಧನ; ಗೋವಾದಲ್ಲಿ ಅಸಭ್ಯ ಚಿತ್ರೀಕರಣದ ಆರೋಪ

ಪಂಚತಾರ ಹೋಟೆಲ್​ನಲ್ಲಿ ತಂಗಿದ್ದ ಅವರನ್ನು ಕಲಂಗುಟ್​ ಪೊಲೀಸರು ವಶಕ್ಕೆ ಪಡೆದರು. ಬಳಿಕ ಅವರನ್ನು ಕೆನಕೋನಾ ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೂನಂ ಪಾಂಡೆ

ಪೂನಂ ಪಾಂಡೆ

  • Share this:
    ನವದೆಹಲಿ (ನ.5): ಗೋವಾದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣದ ಜೊತೆಗೆ ಸರ್ಕಾರಿ ಆಸ್ತಿ ಅತಿಕ್ರಮಣ ಮಾಡಿದ ಆರೋಪದ ಮೇಲೆ ನಟಿ ಪೂನಂ ಪಾಂಡೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಗೋವಾದ ಕೆನಕೋನಾ ನಗರದಲ್ಲಿ ಈ ರೀತಿಯ ಅಸಭ್ಯ ವಿಡಿಯೋ ಚಿತ್ರೀಕರಣಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಚಿತ್ರೀಕರಣಕ್ಕೆ ನಟಿ ಸರ್ಕಾರಿ ಯತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಂಡಿದ್ದರು ಎನ್ನಲಾಗಿದೆ. ಉತ್ತರ ಗೋವಾದ ಸಿನ್ಕವೆರಿಮ್​ನಲ್ಲಿ ಪಂಚತಾರ ಹೋಟೆಲ್​ನಲ್ಲಿ ತಂಗಿದ್ದ ಅವರನ್ನು ಕಲಂಗುಟ್​ ಪೊಲೀಸರು ವಶಕ್ಕೆ ಪಡೆದರು. ಬಳಿಕ ಅವರನ್ನು ಕೆನಕೋನಾ ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ. ನಟಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ದಕ್ಷಿಣ ಎಸ್​ಪಿ ಪಂಕಜ್​ ಕುಮಾರ್​ ಸಿಂಗ್​ ತಿಳಿಸಿದ್ದಾರೆ.

    ಇಲ್ಲಿನ ಚಪೊಲಿ ಅಣೆಕಟ್ಟಿನ ಬಳಿ ನಟಿ ಪೂನ ಪಾಂಡೆ ಬುಧವಾರ ಅಸಭ್ಯ ವಿಡಿಯೋ ಚಿತ್ರೀಕರಣ ನಡೆಸಿದ್ದರು ಎಂದು ರಾಜ್ಯ ಜಲ ಸಂಪನ್ಮೂಲ ಇಲಾಖೆ ದೂರು ನೀಡಿತ್ತು. ಅಪರಿಚಿತ ವ್ಯಕ್ತಿಗಳು ತಮ್ಮ ಆಸ್ತಿಯಲ್ಲಿ ಅತಿಕ್ರಮಣ ಪ್ರವೇಶಿಸಿ, ಅಸಭ್ಯ ವಿಡಿಯೋ ಚಿತ್ರೀಕರಿಸಿ, ಪ್ರಸಾರ ಮಾಡಿದೆ ಎಂದು ಜಲಸಂಪನ್ಮೂಲಕ ಇಲಾಖೆ ದೂರು ನೀಡಿತು.

    ಇದನ್ನು ಓದಿ: ಇನ್​ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಬೋಲ್ಡ್​ ಚಿತ್ರಗಳನ್ನು ಹಂಚಿಕೊಂಡ ಪೂನಂ ಪಾಂಡೆ..!

    ಈ ದೂರಿನ ಬಳಿಕ ಗುರುವಾರ ನಗರದ ಜನರು ಕೂಡ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣ ಬಂದ್​ಗೆ ಕರೆ ನೀಡಿದ್ದರು. ನಟಿಗೆ ಈ ರೀತಿ ಚಿತ್ರೀಕರಣ ನಡೆಸಲು ಪೊಲೀಸರೇ ರಕ್ಷಣೆ ನೀಡಿದ್ದಾರೆ ಎಂದು ಕೂಡ ಸ್ಥಳೀಯರು ಆರೋಪಿಸಿದ್ದರು.

    ಪ್ರತಿಭಟನೆ ಬಳಿಕ ಇಲ್ಲಿನ ಪೊಲೀಸ್​ ಇನ್ಸ್​ಪೆಕ್ಟರ್​ ತುಕಾರಂ ಚಾವಣ್​ ಮತ್ತು ಕಾನ್​ಸ್ಟೇಬಲ್​ ಅವರನ್ನು ಅಮಾನತು ಮಾಡಿ ಎಸ್​ಪಿ ಆದೇಶಿಸಿದ್ದಾರೆ. ಪೊಲೀಸ್​ ಅಧಿಕಾರಿಗಳನ್ನು ಏತಕ್ಕಾಗಿ ಅಮಾನತು ಮಾಡಲಾಯಿತು ಎಂಬ ಬಗ್ಗೆ ವಿಚಾರಣೆ ಬಳಿಕ ವಿವರ ಬಹಿರಂಗ ಪಡಿಸಲಾಗುವುದು ಎಂದು ಹೇಳಲಾಗಿದೆ.
    Published by:Seema R
    First published: