ಸಾರ್ವಭೌಮತ್ವಕ್ಕೆ ಹೋರಾಡುತ್ತಿರುವ ಭಾರತಕ್ಕೆ ನಮ್ಮ ಬೆಂಬಲ ಇದೆ: ಅಮೆರಿಕ

ಭಾರತ ಮತ್ತು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರ 3ನೇ ಸುತ್ತಿನ ಸಭೆ ನಡೆದಿದೆ. ಚೀನಾದಿಂದ ಪ್ರಾದೇಶಿಕವಾಗಿ ಎರಗಿ ಬಂದಿರುವ ಅಪಾಯದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ. ಈ ವೇಳೆ ಉನ್ನತ ಮಟ್ಟದ ಮಿಲಿಟರಿ ಒಪ್ಪಂದ ಕೂಡ ಆಗಿರುವುದು ಗಮನಾರ್ಹ.

ಅಮೆರಿಕ ಮತ್ತು ಭಾರತ ನ ಡುವೆ ಸಚಿವರ ಸಭೆ

ಅಮೆರಿಕ ಮತ್ತು ಭಾರತ ನ ಡುವೆ ಸಚಿವರ ಸಭೆ

 • News18
 • Last Updated :
 • Share this:
  ನವದೆಹಲಿ(ಅ. 27): ಚೀನಾದಿಂದ ಅತೀವ ಭದ್ರತಾ ಅಪಾಯ ಹೊಂದಿರುವ ಭಾರತಕ್ಕೆ ಅಮೆರಿಕ ಇನ್ನಷ್ಟು ದೃಢವಾಗಿ ತನ್ನ ಸಹಾಯಹಸ್ತ ಚಾಚಿದೆ. ಭಾರತಕ್ಕೆ ಎಂಥದ್ದೇ ಅಪಾಯ ಎದುರಾದರೂ ಅಮೆರಿಕ ಜೊತೆಗೆ ನಿಲ್ಲುತ್ತದೆ ಎಂದು ಅಮೆರಿಕದ ವಿದೇಶಾಂಗ ಸಚಿವ (ಸೆಕ್ರೆಟರಿ ಆಫ್ ಸ್ಟೇಟ್) ಮೈಕ್ ಪಾಂಪಿಯೋ ಹೇಳಿದರು. ಭಾರತ ಮತ್ತು ಅಮೆರಿಕ ಮಧ್ಯೆ ರಕ್ಷಣಾ ಮತ್ತು ವಿದೇಶಾಂಗ ಸಚಿವರ ಸಭೆಯಲ್ಲಿ ಪಾಂಪಿಯೋ ಈ ವಾಗ್ದಾನ ನೀಡಿದರು. ಇವತ್ತು ನಡೆದ ಈ 2+2 ಸಭೆಯಲ್ಲಿ ಭಾರತ ಮತ್ತು ಅಮೆರಿಕ ಮಧ್ಯೆ ಐತಿಹಾಸಿಕ ಬಿಇಸಿಎ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಎರಡೂ ಸೇನೆಗಳ ಮಧ್ಯೆ ಅತ್ಯುನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ಜಿಯೋಸ್ಪೇಷಿಯಲ್ ಮ್ಯಾಪ್ ಮತ್ತು ಕ್ಲಾಸಿಫೈಡ್ ಸೆಟಿಲೈಟ್ ಡಾಟಾ ಮೊದಲಾದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ. ಚೀನಾದಿಂದ ತೀವ್ರ ರೀತಿಯಲ್ಲಿ ಅಪಾಯ ಎದುರಿಸುತ್ತಿರುವ ಭಾರತಕ್ಕೆ ಈ ಬೆಳವಣಿಗೆ ಮಹತ್ವದ್ದೆನಿಸಲಿದೆ. ಹಾಗೆಯೇ, ಸೌತ್ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾದ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅಮೆರಿಕಕ್ಕೆ ಭಾರತ ಕೂಡ ನೆರವಾಗಲು ಸಾಧ್ಯವಾಗಬಹುದು.

  ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ, ರಕ್ಷಣಾ ಸಚಿವ ಮಾರ್ಕ್ ಎಸ್ಪೆರ್ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಮೂರನೇ ಆವೃತ್ತಿಯ 2+2 ಡೈಲಾಗ್​ನಲ್ಲಿ ಪಾಲ್ಗೊಂಡರು. “ಇವತ್ತು ಎರಡು ಶ್ರೇಷ್ಠ ಪ್ರಜಾತಂತ್ರ ರಾಷ್ಟ್ರಗಳು ನಿಕಟವಾಗುತ್ತಿವೆ. ಭದ್ರತೆ ಮತ್ತು ಸ್ವಾತಂತ್ರ್ಯಕ್ಕೆ ಅಪಾಯವಾಗಿ ಪರಿಣಮಿಸುತ್ತಿರುವ ಚೀನೀ ಕಮ್ಯೂನಿಸ್ಟ್ ಪಕ್ಷವನ್ನು ಎದಿರುಗೊಳ್ಳಲು ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ನೆಲಸುವಂತೆ ಮಾಡಲು ಹೇಗೆ ಪರಸ್ಪರ ಸಹಕರಿಸುವುದು ಎಂಬ ಕುರಿತು ಸಾಕಷ್ಟು ಚರ್ಚಿಸಿದೆವು” ಎಂದು ಮೈಕ್ ಪಾಂಪಿಯೋ ಹೇಳಿದರು.

  ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ; ಪೇಶಾವರದ ಮದರಸಾವನ್ನು ಸ್ಪೋಟಿಸಿದ ಉಗ್ರರು; 7 ಮಕ್ಕಳ ಸಾವು, 70 ಜನರಿಗೆ ಗಾಯ!

  ಅಮೆರಿಕ-ಭಾರತ ಸಮಗ್ರ ಜಾಗತಿಕ ಕಾರ್ಯತಾಂತ್ರಿಕ ಪಾಲುದಾರಿಕೆಯಿಂದ ಎರಡೂ ದೇಶಗಳ, ಇಂಡೋ-ಪೆಸಿಫಿಕ್ ಪ್ರದೇಶದ ಹಾಗೂ ಇಡೀ ವಿಶ್ವದ ಭದ್ರತೆ ಮತ್ತು ಸಮೃದ್ಧಿಗೆ ಬಹಳ ಮುಖ್ಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಟ್ವೀಟ್ ಕೂಡ ಮಾಡಿದ್ದಾರೆ.

  ಇದಕ್ಕೂ ಮುನ್ನ ಅಮೆರಿಕದಿಂದ ಬಂದಿದ್ದ ಇಬ್ಬರು ಟಾಪ್ ಸಚಿವರನ್ನು ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದು ವಿಶೇಷ. ಲಡಾಖ್​ನಲ್ಲಿ ಚೀನಾದ ಆಕ್ರಮಣಕಾರಿ ವರ್ತನೆ ಸೇರಿದಂತೆ ಬಹಳ ಪ್ರಮುಖವಾಗಿರುವ ವಿಚಾರಗಳು ಮತ್ತು ಸವಾಲುಗಳನ್ನ ಅವರು ಚರ್ಚಿಸಿದರು.
  Published by:Vijayasarthy SN
  First published: