Bihar Politics: ಮತ್ತೆ ಒಂದಾಗ್ತಾರಾ ಸಿಎಂ ನಿತೀಶ್ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್?

Bihar Politics: ಪವನ್ ವರ್ಮಾ ಅವರು ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್ ಅವರನ್ನು ಪಾಟ್ನಾದ ಸಿಎಂ ಭವನದಲ್ಲಿ ಭೇಟಿ ಮಾಡಿದ್ದಾರೆ. ಉಭಯ ನಾಯಕರ ಈ ಭೇಟಿ ಬಿಹಾರ ರಾಜಕೀಯಕ್ಕೆ ಅತ್ಯಂತ ಮಹತ್ವದ್ದಾಗಿದೆ.

ನಿತೀಶ್ ಕುಮಾರ್ ಭೇಟಿಯಾದ ಪ್ರಶಾಂತ್ ಕಿಶೋರ್

ನಿತೀಶ್ ಕುಮಾರ್ ಭೇಟಿಯಾದ ಪ್ರಶಾಂತ್ ಕಿಶೋರ್

  • Share this:
ಪಾಟ್ನಾ(ಸೆ.14): ಬಿಹಾರದ ರಾಜಕೀಯ (Bihar Poltics) ವಲಯದಿಂದ ಮಹತ್ವದ ಸುದ್ದಿಯೊಂದು ಬಯಲಾಗಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಪ್ರಶಾಂತ್ ಕಿಶೋರ್ ಸಿಎಂ ನಿತೀಶ್ ಕುಮಾರ್ (CM Nitish Kumar) ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರೂ 'ಏಕ್ ಅಣ್ಣಾ ಮಾರ್ಗ್' ಅಂದರೆ ಪಾಟ್ನಾದ ಸಿಎಂ ಹೌಸ್ ನಲ್ಲಿ ಭೇಟಿಯಾಗಿದ್ದಾರೆ. ಚುನಾವಣಾ ತಂತ್ರಗಾರ ಎಂದೇ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್ (Prashant Kishor) ಬಿಹಾರದಲ್ಲಿ ಜನ್ ಸೂರಜ್ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆಯವರೆಗೂ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ಮತ್ತು ಅವರ ನೀತಿಗಳ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಮಹಾಘಟಬಂಧನ್ ಸರ್ಕಾರ ರಚನೆಯಾದ ನಂತರ ಬಿಹಾರದಲ್ಲಿ ರಾಜಕೀಯ ಸಮೀಕರಣವು ಬದಲಾಗಲಾರಂಭಿಸಿದೆ.

ಬಿಜೆಪಿ ಜೊತೆ ಹೋಗಿದ್ದರಿಂದ ನಿತೀಶ್ ಕುಮಾರ್ ಅವರಿಂದ ದೂರವಾದ ನಾಯಕರೆಲ್ಲಾ ಈಗ ಮತ್ತೆ ನಿತೀಶ್ ಕುಮಾರ್ ಅವರನ್ನು ಸೇರುತ್ತಿದ್ದಾರೆ. ಹೀಗಿರುವಾಗಲೇ ಪ್ರಶಾಂತ್ ಕಿಶೋರ್ ಅವರು ಸಂಜೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಬಿಹಾರದ ರಾಜಕೀಯದಲ್ಲಿ ತಮ್ಮತನ ಹುಡುಕುತ್ತಿರುವ ಪ್ರಶಾಂತ್ ಕಿಶೋರ್ ಮತ್ತೆ ನಿತೀಶ್ ಕುಮಾರ್ ಗೆ ಚುನಾವಣಾ ರಣತಂತ್ರ ರೂಪಿಸಬಹುದೇ ಎಂಬ ಚರ್ಚೆ ಬಿಹಾರದಲ್ಲಿ ಶುರುವಾಗಿದ್ದು, ಪವನ್ ವರ್ಮಾ ಪಾಟ್ನಾ ತಲುಪುತ್ತಿದ್ದಂತೆ ಮತ್ತೆ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ್ ಪರ ಕೆಲಸ ಮಾಡಬಹುದು ಎನ್ನಲಾಗಿದೆ.

ಇದನ್ನೂ ಓದಿ: CBI Raid: ಲಾಲು ಪ್ರಸಾದ್ ಯಾದವ್​ಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಸಿಬಿಐ ದಾಳಿ

ಸಿಎಂ ನಿವಾಸದಲ್ಲಿ ಭೇಟಿ

ಪವನ್ ವರ್ಮಾ ಪಾಟ್ನಾಕ್ಕೆ ಬಂದಿದ್ದಾಗ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿದ್ದರು. ಈ ಇಬ್ಬರು ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ನಂತರ ಪವನ್ ವರ್ಮಾ ಮತ್ತು ಪ್ರಶಾಂತ್ ಕಿಶೋರ್ ಒಟ್ಟಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಮಂಗಳವಾರ ಸಂಜೆ ಮುಖ್ಯಮಂತ್ರಿಗಳ ನಿವಾಸದಲ್ಲಿ ನಿತೀಶ್ ಕುಮಾರ್ ಅವರು ಪ್ರಶಾಂತ್ ಕಿಶೋರ್, ಪವನ್ ವರ್ಮಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬಿಹಾರದ ರಾಜಕೀಯ ಪರಿಸ್ಥಿತಿಯ ಜತೆಗೆ ದೇಶಾದ್ಯಂತ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ನಿತೀಶ್‌ ಕುಮಾರ್‌ ಅಭಿಯಾನದ ಕುರಿತು ಮೂವರು ನಾಯಕರ ನಡುವೆ ಗಂಭೀರ ಮಾತುಕತೆ ನಡೆದಿದೆ ಎನ್ನಲಾಗಿದೆ.

ನಿತೀಶ್ ಕುಮಾರ್ ಅವರು ಪವನ್ ವರ್ಮಾ ಮತ್ತು ಪ್ರಶಾಂತ್ ಕಿಶೋರ್ ಅವರ ಸಹಾಯದಿಂದ ದೇಶಾದ್ಯಂತ ವಿರೋಧ ಪಡೆಗಳನ್ನು ಒಗ್ಗೂಡಿಸುತ್ತಾರೆ ಎಂದು ಹೇಳಲಾಗಿದೆ, ಆದರೆ ಎಲ್ಲರೂ ಈ ವಿಷಯದಲ್ಲಿ ಬಹಿರಂಗವಾಗಿ ಏನನ್ನೂ ಮಾತನಾಡುತ್ತಿಲ್ಲ. ಸದ್ಯ, ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಜನ್ ಸೂರಜ್ ಅಭಿಯಾನ ನಡೆಸುತ್ತಿದ್ದು, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಿಂದ ಪಾದಯಾತ್ರೆ ಆರಂಭಿಸಲಿದ್ದಾರೆ.

ಇದನ್ನೂ ಓದಿ: Canada Parliament: ಕೆನಡಾ ಪಾರ್ಲಿಮೆಂಟ್​ನಲ್ಲಿ ಕಸ್ತೂರಿ ಕನ್ನಡ! ಇದು ಭಾವುಕ ಕ್ಷಣ

ಪಿಕೆ ಮತ್ತೆ ಜೆಡಿಯುಗೆ

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್ ಭೇಟಿಯ ನಂತರ, ಪಿಕೆ ಜೆಡಿಯುಗೆ ಮರು ಪ್ರವೇಶಿಸಬಹುದು. ವಾಸ್ತವವಾಗಿ, ಜೆಡಿಯು ಮಾಜಿ ಸಂಸದ ಆರ್‌ಸಿಪಿ ಸಿಂಗ್‌ನಿಂದಾಗಿ ಪ್ರಶಾಂತ್ ಕಿಶೋರ್ ಜೆಡಿಯುನಿಂದ ಹೊರಗಿದ್ದರು, ಆದರೆ ಆರ್‌ಸಿಪಿ ಸಿಂಗ್ ಜೆಡಿಯುನಿಂದ ಹೊರಬಂದ ನಂತರ ಮತ್ತೊಮ್ಮೆ ಪ್ರಶಾಂತ್ ಕಿಶೋರ್ ಜೆಡಿಯು ಜೊತೆ ಬರಬಹುದು ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
Published by:Precilla Olivia Dias
First published: