ಪಾಕಿಸ್ತಾನ ರಾಜಕೀಯದಲ್ಲಿ ಏನಾಗ್ತಿದೆ..? Imran Khan ಹಂಗಾಮಿ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದೇಕೆ?

Political Crisis in Pakistan: ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಹಂಗಾಮಿ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

  • Share this:
ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ (Political Crisis in Pakistan) ಮಧ್ಯೆ, ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ (former chief justice Gulzar Ahmed) ಅವರನ್ನು ಉಸ್ತುವಾರಿ ಪ್ರಧಾನಿ ಹುದ್ದೆಗೆ ಹಾಲಿ ಪ್ರಧಾನಿ ಇಮ್ರಾನ್ ಖಾನ್ (Pakistan Prime Minister Imran Khan) ಸೋಮವಾರ ನಾಮನಿರ್ದೇಶನ ಮಾಡಿದ್ದಾರೆ.  ಮಾಜಿ ಮಾಹಿತಿ ಸಚಿವ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಹಿರಿಯ ನಾಯಕ ಫವಾದ್ ಚೌಧರಿ ಅವರು ಪಕ್ಷದ ಕೋರ್ ಕಮಿಟಿಯ ಅನುಮೋದನೆಯ ನಂತರ ಪ್ರಧಾನಿ ಈ ನಿರ್ಧಾರವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಧ್ಯಕ್ಷ ಆರಿಫ್ ಅಲ್ವಿ ಅವರು ಸೋಮವಾರ ಪ್ರಧಾನಿ ಇಮ್ರಾನ್​​ ಖಾನ್ ಮತ್ತು ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರಿಗೆ ಹಂಗಾಮಿ ಪ್ರಧಾನಿ ನೇಮಕಕ್ಕೆ ಸಲಹೆಗಳನ್ನು ಕೋರಿ ಪತ್ರಗಳನ್ನು ಕಳುಹಿಸಿದ ನಂತರ ಈ ಪ್ರಕಟಣೆ ಬಂದಿದೆ.

ಹಂಗಾಮಿ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ

ಅಧ್ಯಕ್ಷರ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಪಿಟಿಐ ಕೋರ್ ಕಮಿಟಿಯ ಸಮಾಲೋಚನೆ ಮತ್ತು ಅನುಮೋದನೆಯ ನಂತರ, ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಹಂಗಾಮಿ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಚೌಧರಿ ಹೇಳಿದರು.  ಸಂಸತ್ತಿನ ವಿಸರ್ಜನೆಯ ಮೂರು ದಿನಗಳೊಳಗೆ ನೇಮಕಾತಿಯನ್ನು ಒಪ್ಪದಿದ್ದರೆ, ನಿರ್ಗಮಿತ ವಿಧಾನಸಭೆಯ ಎಂಟು ಸದಸ್ಯರನ್ನು ಒಳಗೊಂಡ ಸ್ಪೀಕರ್ ರಚಿಸುವ ಸಮಿತಿಗೆ ತಲಾ ಇಬ್ಬರು ನಾಮನಿರ್ದೇಶಿತರನ್ನು ಕಳುಹಿಸಬೇಕು ಎಂದು ಅಧ್ಯಕ್ಷ ಅಲ್ವಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Gorakhpur: ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ದೇವಸ್ಥಾನ ಪ್ರವೇಶಕ್ಕೆ ಯತ್ನ, ಇಬ್ಬರು ಪೊಲೀಸರ ಮೇಲೆ ಹಲ್ಲೆ

ನಿರ್ಗಮಿತ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಹಂಗಾಮಿ ಪ್ರಧಾನಿಯನ್ನು ನೇಮಿಸಲು ಸಂವಿಧಾನವು ಅಧ್ಯಕ್ಷರಿಗೆ ಅಧಿಕಾರ ನೀಡಿದೆ ಎಂದು ಅಧ್ಯಕ್ಷರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.  ಪಾಕಿಸ್ತಾನದ ಸಂವಿಧಾನದ 224-A(1) ವಿಧಿಯ ಅಡಿಯಲ್ಲಿ, ದೇಶದಲ್ಲಿ ಚುನಾವಣೆಗಳನ್ನು ಆಯೋಜಿಸಲು ಉಸ್ತುವಾರಿ ಸರ್ಕಾರವನ್ನು ಸ್ಥಾಪಿಸಲಾಗಿದೆ. ಹಂಗಾಮಿ ಪ್ರಧಾನಿ ನೇಮಕವಾಗುವವರೆಗೆ ಖಾನ್ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಯಾರು ಈ ಗುಲ್ಜಾರ್ ಅಹ್ಮದ್?

1957 ರಲ್ಲಿ ಜನಿಸಿದ ನ್ಯಾಯಮೂರ್ತಿ ಅಹ್ಮದ್ ಅವರು ಡಿಸೆಂಬರ್, 2019 ರಿಂದ ಫೆಬ್ರವರಿ 2022 ರಲ್ಲಿ ನಿವೃತ್ತರಾಗುವವರೆಗೆ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಪನಾಮ ಪೇಪರ್ಸ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿದ ಐವರು ನ್ಯಾಯಾಧೀಶರ ಪೀಠದ ಭಾಗವಾಗಿದ್ದರು. ಸರ್ಕಾರಗಳು ಮತ್ತು ಅಧಿಕಾರಶಾಹಿಗಳ ವಿರುದ್ಧ ಅವರ ಬಲವಾದ ತೀರ್ಪುಗಳಿಂದ ಖ್ಯಾತಿ ಗಳಿಸಿದ್ದಾರೆ. ಜಸ್ಟಿಸ್ ಅಹ್ಮದ್ ಅವರು ವಾಯುವ್ಯ ಪಾಕಿಸ್ತಾನದಲ್ಲಿ ಜನಸಮೂಹದಿಂದ ಧ್ವಂಸಗೊಂಡ ದೇವಾಲಯವನ್ನು ಪುನರ್ನಿರ್ಮಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಕಳೆದ ವರ್ಷ ದೀಪಾವಳಿ ಹಬ್ಬವನ್ನು ಆಚರಿಸಲು ಮತ್ತು ಹಿಂದೂ ಸಮುದಾಯದ ಸದಸ್ಯರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಪುನರ್​​ ನಿರ್ಮಿಸಲಾದ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.

ಅವಿಶ್ವಾಸ ನಿರ್ಣಯದಿಂದ ಬಚಾವ್​ ಆಗಿರುವ ಇಮ್ರಾನ್​ ಖಾನ್​

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಭವಿಷ್ಯದ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾಗಲೇ, ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಭಾನುವಾರ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದಾರೆ. ಅಲ್ಲಿಗೆ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ಇಮ್ರಾನ್​ ಖಾನ್​​ ಬಚಾವ್​ ಆಗಿ ಪ್ರಧಾನಿ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ. ಅವಿಶ್ವಾಸ ನಿರ್ಣಯ ಸಂವಿಧಾನದ 5 ನೇ ವಿಧಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಸದನವನ್ನು ‘ಕಾನೂನುಬಾಹಿರ’ ಎಂದು ಕರೆದು ಕಲಾಪವನ್ನು ಮುಂದೂಡಿದರು. ಸ್ಪೀಕರ್ ಅಸದ್ ಕೈಸರ್ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ನಂತರ ಉಪ ಸ್ಪೀಕರ್​​ ಸೂರಿ ನಿರ್ಣಾಯಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.
Published by:Kavya V
First published: