ಪೋಲಾಂಡ್: ಹೆಣ್ಣಿಗೆ ತಾಯ್ತನ ಒಂದು ದೊಡ್ಡ ವರದಾನ. ತನ್ನ ಹೊಟ್ಟೆಯೊಳಗೆ ಮತ್ತೊಂದು ಜೀವವನ್ನು ಹೊತ್ತು, ಹೆತ್ತು, ಜೀವಕೊಟ್ಟು ಭೂಮಿಗೆ ತರುತ್ತಾಳೆ. ಹೆಣ್ಣು ಸಾಮಾನ್ಯವಾಗಿ ಏಕಕಾಲದಲ್ಲಿ ಒಂದು ಮಗುವಿಗೆ ಜನ್ಮ ನೀಡುವುದು ಸಹಜ.
ಕೆಲವೊಮ್ಮೆ ಏಕಕಾಲದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಆದರೆ ಕೆಲವೊಂದು ಅಚ್ಚರಿ ಘಟನೆಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು, ಒಂಬತ್ತು ಹೀಗೆ ಹಲವು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ ಅನೇಕ ಘಟನೆಗಳು ನಡೆದಿವೆ.
ಇದನ್ನೂ ಓದಿ: Relationship Tips: ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಿದರೂ ಲಾಭವಿದ್ಯಂತೆ! ಅವು ಏನು ಅಂತ ಗೊತ್ತಾದ್ರೆ ಆಶ್ಚರ್ಯಪಡ್ತೀರಿ!
5 ಮಕ್ಕಳಿಗೆ ಜನ್ಮ ನೀಡಿದ ಏಳು ಮಕ್ಕಳ ತಾಯಿ
ಹೀಗೆ ಏಕಕಾಲದಲ್ಲಿ ಐದು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿದ ಘಟನೆ ಪೋಲೆಂಡ್‌ನಲ್ಲಿ ನಡೆದಿದೆ. ದಕ್ಷಿಣ ಪೋಲೆಂಡ್‌ನ ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಇಂತದ್ದೊಂದು ಅಚ್ಚರಿ ಪವಾಡದಂತಹ ಘಟನೆ ನಡೆದಿದ್ದು, ಏಳು ಮಕ್ಕಳ ತಾಯಿ ಪ್ರಸ್ತುತ ಮತ್ತೆ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಏಳು ಮಕ್ಕಳನ್ನು ಹೊಂದಿರುವ 37 ವರ್ಷದ ಡೊಮಿನಿಕಾ ಕ್ಲಾರ್ಕ್ ಎಂಬ ಮಹಿಳೆ ಎಂಟನೇ ಮಗುವನ್ನು ಬಯಸಿ ಗರ್ಭವತಿಯಾಗಿದ್ದರು. ಆದರೆ ಅವರು ಬಯಸಿದ್ದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಪಡೆದಿದ್ದಾರೆ. ಸದ್ಯ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಇದೀಗ ಒಮ್ಮಲೇ ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ.
ಎರಡು ಗಂಡು.. ಮೂರು ಹೆಣ್ಣು ಶಿಶುಗಳು ಜನನ
ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಧಾರಣೆಯ 28ನೇ ವಾರದಲ್ಲಿ ಭಾನುವಾರ ಸಿಸೇರಿಯನ್ ಮಾಡುವ ಮೂಲಕ ಐದು ಮಕ್ಕಳನ್ನು ಹೆರಿಗೆ ಮಾಡಿಸಿದ್ದಾರೆ. ಈ ಐದು ಮಕ್ಕಳಲ್ಲಿ ಎರಡು ಗಂಡು ಮತ್ತು ಮೂರು ಹೆಣ್ಣು ಶಿಶುಗಳು ಜನಿಸಿದ್ದಾರೆ. ಈ ಮಕ್ಕಳಿಗೆ ಅರಿಯಾನಾ ಡೈಸಿ, ಚಾರ್ಲ್ಸ್ ಪ್ಯಾಟ್ರಿಕ್, ಎಲಿಜಬೆತ್ ಮೇ, ಇವಾಂಜೆಲಿನ್ ರೋಸ್ ಮತ್ತು ಹೆನ್ರಿ ಜೇಮ್ಸ್ ಎಂದು ನಾಮಕರಣ ಸಹ ಮಾಡಲಾಗಿದೆ.
ಅವಧಿಪೂರ್ವವಾಗಿ ಜನಿಸಿದ ಈ ಮಕ್ಕಳು ಕೊಂಚ ಉಸಿರಾಟದ ತೊಂದರೆ ಹೊಂದಿದ್ದು, ಚಿಕಿತ್ಸೆ ಪಡೆಯುತ್ತಿವೆ. ಅದನ್ನು ಹೊರತುಪಡಿಸಿ ಐದು ಶಿಶುಗಳೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸದ್ಯ ಶಿಶುಗಳು 710-1,400 ಗ್ರಾಂ (25-49 ಔನ್ಸ್,) ತೂಕ ಹೊಂದಿದ್ದು, ಇನ್‌ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದೆ ಎಂದು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥ ರಿಸ್ಜಾರ್ಡ್ ಲಾಟರ್‌ಬಾಚ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಡೊಮಿನಿಕಾ ಕ್ಲಾರ್ಕ್ ಪತಿ ವಿನ್ಸ್ "ನಾವು ಎಂಟನೇ ಮಗುವಿನ ನಿರೀಕ್ಷೆಯಲ್ಲಿದ್ದೆವು, ಆದರೆ ದೇವರು ನಮಗೆ ಹೆಚ್ಚಿನ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ" ಎಂದು ವಿನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Biggest Egg: ಅಬ್ಬಬ್ಬಬ್ಬಬ್ಬಾ ಇಷ್ಟು ದೊಡ್ಡ ಇರುತ್ತಾ ಕೋಳಿ ಮೊಟ್ಟೆ? ನೋಡಿದ್ರೆ ಆಶ್ಚರ್ಯಪಡುತ್ತೀರಿ
ಪವಾಡ ಎಂದು ಕರೆದ ತಾಯಿ
ತಾಯಿ ಡೊಮಿನಿಕಾ ಕ್ಲಾರ್ಕ್ ಕೂಡ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ತನ್ನ ಗರ್ಭಾವಸ್ಥೆಯನ್ನು ಪವಾಡ ಎಂದು ಕರೆದಿದ್ದಾರೆ. 52 ಮಿಲಿಯನ್‌ಗೆ ಒಂದು ಪ್ರಕರಣದಲ್ಲಿ ಐದು ಮಕ್ಕಳಿಗೆ ಜನ್ಮ ನೀಡುವ ಘಟನೆ ನಡೆಯುತ್ತದೆ. ಗಣಿತಶಾಸ್ತ್ರಜ್ಞನಾಗಿ, ನಾನು ಈ ರೀತಿಯ ಅಂಕಿಅಂಶಗಳನ್ನು ಇಷ್ಟಪಡುತ್ತೇನೆ ಎಂದು ಕ್ಲಾರ್ಕ್ ಹೇಳಿದ್ದಾರೆ. ಮನೆಯಲ್ಲಿ ಹನ್ನೆರೆಡು ಮಕ್ಕಳು ಇರೋದು ನಮಗೆ ಹಲವು ಪ್ರಯೋಜನಗಳನ್ನು ನೀಡಬಹುದು. ಲಾಟರಿ ಗೆಲ್ಲುವ ಅವಕಾಶ ಕೂಡ ನಮಗೆ ಹೆಚ್ಚಿರುತ್ತದೆ ಎಂದು ನಗೆಚಟಾಕಿ ಹಾರಿಸಿದ್ದಾರೆ.
ಈ ಹಿಂದೆಯೂ ನಡೆದಿದ್ದ ಇಂತಹ ಘಟನೆಗಳು
ಹಿಂದೆ ಕೂಡ ಈ ರೀತಿಯ ಕೆಲ ಘಟನೆಗಳು ನಡೆದಿವೆ. ಕಳೆದ ಎರಡು ವರ್ಷಗಳ ಹಿಂದೆ ಪಶ್ಚಿಮ ಆಫ್ರಿಕಾದ 25 ವರ್ಷದ ಮಹಿಳೆ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ್ದರು.
ಇದರಲ್ಲಿ ಐದು ಮಕ್ಕಳು ಹೆಣ್ಣಾಗಿದ್ದು, ನಾಲ್ಕು ಮಕ್ಕಳು ಗಂಡಾಗಿದ್ದವು. ಕಳೆದ ವರ್ಷ ರಾಜಸ್ಥಾನದ ಕರೌಲಿ ಜಿಲ್ಲಾ ಆಸ್ಪತ್ರೆಯಲ್ಲಿ ಐದು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿದ್ದರು. ಆದರೆ ಇದರಲ್ಲಿ ಮೂರು ನವಜಾತ ಶಿಶುಗಳು ಸಾವನ್ನಪ್ಪಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ