ಪೋಲೆಂಡ್​ನ ಓಲ್ಗಾ ಟೊಕಾರ್ಚುಕ್ ಮತ್ತು ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

ಕಳೆದ ವರ್ಷ ಸ್ವೀಡನ್ ಅಕಾಡೆಮಿಯಲ್ಲಿ ಲೈಂಗಿಕ ಹಗರಣ ನಡೆದ ಹಿನ್ನೆಲೆಯಲ್ಲಿ ಆ ವರ್ಷದ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಈ ವರ್ಷ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ಇಬ್ಬರಿಗೆ ನೊಬೆಲ್ ಸಾಹಿತ್ಯ ಪಾರಿತೋಷಕ ಕೊಡಮಾಡಲಾಗಿದೆ.

news18
Updated:October 10, 2019, 7:38 PM IST
ಪೋಲೆಂಡ್​ನ ಓಲ್ಗಾ ಟೊಕಾರ್ಚುಕ್ ಮತ್ತು ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
ಓಲ್ಗಾ ಟೊಕಾರ್ಚುಕ್ ಮತ್ತು ಪೀಟರ್ ಹ್ಯಾಂಡ್ಕೆ
  • News18
  • Last Updated: October 10, 2019, 7:38 PM IST
  • Share this:
ಸ್ವೀಡನ್(ಅ. 10): ವೈದ್ಯವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಭಾಗದಲ್ಲಿ ತಲಾ ಮೂವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಇವತ್ತು ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಪೋಲೆಂಡ್​ನ ಓಲ್ಗಾ ಟೊಕಾರ್ಚುಕ್ ಮತ್ತು ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆ ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ. ಪೋಲೆಂಡ್​ನ ಬರಹಗಾರ್ತಿಗೆ 2018ರ ಸಾಲಿನ ಪ್ರಶಸ್ತಿ ಸಂದಾಯವಾದರೆ, ಆಸ್ಟ್ರಿಯಾದ ಸಾಹಿತಿಗೆ ಈ ವರ್ಷದ ಸಾಲಿನ ಪ್ರಶಸ್ತಿ ಲಭಿಸಿದೆ.

2018ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನ ಕಳೆದ ವರ್ಷವೇ ಪ್ರಕಟಿಸಬೇಕಿತ್ತಾದರೂ ಪ್ರಶಸ್ತಿ ನೀಡುವ ಸ್ವೀಡಿಷ್ ಅಕಾಡೆಮಿಯಲ್ಲಿ ಲೈಂಗಿಕ ಹಗರಣ ತಲೆದೋರಿದ್ದರಿಂದ ಮುಂದಕ್ಕೆ ಹಾಕಲಾಗಿತ್ತು. ಹಾಗಾಗಿ, ಕಳೆದ ವರ್ಷದ್ದೂ ಸೇರಿ ಈ ವರ್ಷ ಎರಡು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇಬ್ಬರಿಗೂ  ಪ್ರಶಸ್ತಿ ಜೊತೆಗೆ ತಲಾ 8.28 ಲಕ್ಷ ಯೂರೋ (ಸುಮಾರು 6.5 ಕೋಟಿ ರೂಪಾಯಿ) ಮೊತ್ತದ ಚೆಕ್ ನೀಡಲಾಗಿದೆ.

ಇದನ್ನೂ ಓದಿ: ಭೌತಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ 2019ರ ಸಾಲಿನ ನೊಬೆಲ್ ಪ್ರಶಸ್ತಿ

ಹ್ಯಾಂಡ್ಕೆ ಸಂವೇದನಶೀಲತೆ:

ಆಸ್ಟ್ರಿಯಾ ದೇಶದ ಜರ್ಮನ್ ಭಾಷಾ ಸಾಹಿತಿಯಾದ ಪೀಟರ್ ಹ್ಯಾಂಡ್ಕೆ ಅವರ ಬರಹಗಳಲ್ಲಿ ಸೂಕ್ಷ್ಮ ಸಂವೇದನೆಯೇ ಪ್ರಮುಖ ಅಂಶವಾಗಿದೆ. ತಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಮಾನವನ ಅನುಭವ ಮತ್ತು ಅನುಭೂತಿಯನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಡುತ್ತಾರೆ. 1942ರಲ್ಲಿ ಜನಸಿದ ಹ್ಯಾಂಡ್ಕೆ ಅವರು 1966ರಲ್ಲಿ ತಮ್ಮ ಮೊದಲ ಕಾದಂಬರಿ ಬರೆದು ಪ್ರಕಟಿಸಿದ್ದರು. ಹಿಂದಿನ ಯುಗೋಸ್ಲಾವಿಯಾ ಯುದ್ಧದ ಅನುಭವಗಳನ್ನು ಅವರು ತಮ್ಮ ಕೆಲ ಸಾಹಿತ್ಯದಲ್ಲಿ ಜೀವಂತವಾಗಿ ತುಂಬಿದ್ದಾರೆ.

ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಯೂರೋಪ್​ನ ಅತ್ಯಂತ ಪ್ರಭಾವಿ ಬರಹಗಾರರಲ್ಲಿ ಹಂಡ್ಕೆ ಅವರು ಪ್ರಮುಖರು. ಅವರ ಬರಹಗಳಲ್ಲಿ ಹುಡುಕಾಟದ ತುಡಿತವಿರುತ್ತದೆ. ಹೊಸ ಸಾಹಿತ್ಯಕ ಅಭಿವ್ಯಕ್ತಿಗಳ ಮೂಲಕ ತಮ್ಮ ಹುಡುಕಾಟಕ್ಕೆ ಜೀವ ತುಂಬುತ್ತಾರೆ ಎಂದು ಸ್ವೀಡಿಶ್ ಅಕಾಡೆಮಿ ಹಂಡ್ಕೆಯವರಿಗೆ ಪ್ರಶಸ್ತಿ ನೀಡುವ ಕಾರಣ ತಿಳಿಸಿದೆ.

ಇದನ್ನೂ ಓದಿ: ವೈದ್ಯಕೀಯ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೋಬೆಲ್ ಪ್ರಶಸ್ತಿಸೀಮೋಲಂಘನೆ ಮಾಡುವ ಓಲ್ಗಾ ಬರಹಗಳು:

ಇನ್ನು, 2018ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದಿರುವ ಪೋಲೆಂಡ್ ದೇಶದ ಬರಹಗಾರ್ತಿ ಓಲ್ಗಾ ಟೊಕಾರ್ಚುಕ್ ಅವರು ತಮ್ಮ ತಲೆಮಾರಿನ ಅತ್ಯಂತ ಪ್ರತಿಭಾನ್ವಿತ ಸಾಹಿತಿಗಳಲ್ಲೊಬ್ಬರೆನಿಸಿದ್ದಾರೆ. ಅವರ ಅನೇಕ ಪುಸ್ತಕಗಳು ವಿಶ್ವದ ಬೆಸ್ಟ್ ಸೆಲ್ಲರ್ ಎನಿಸಿವೆ. ಎಡಪಂಥೀಯ ವಿಚಾರಧಾರೆಗೆ ಸಾಮೀಪ್ಯವಿರುವ 57 ವರ್ಷದ ಟೊಕಾರ್ಚುಕ್ ಅವರು ಪೋಲೆಂಡ್​ನ ಬಲಪಂಥೀಯ ಸರ್ಕಾರದ ನಿರ್ಧಾರಗಳನ್ನ ಬಹಿರಂಗವಾಗಿ ಪ್ರಶ್ನೆ ಮಾಡುವ ಛಾತಿ ಹೊಂದಿದ್ದಾರೆ. ಪೋಲೆಂಡ್ ದೇಶ ಮುಕ್ತವಾಗಿಲ್ಲ, ಹಿಂದಿನ ರೀತಿಯಲ್ಲಿ ಸಹಿಷ್ಣುತೆ ಉಳಿದಿಲ್ಲ ಎಂದು ಗಟ್ಟಿಯಾಗಿ ಅವರು ಧ್ವನಿ ಎತ್ತಬಲ್ಲವರಾಗಿದ್ದಾರೆ.

ಇವರಿಗೆ ನೊಬೆಲ್ ಪ್ರಶಸ್ತಿ ನೀಡಲು ಅಕಾಡೆಮಿ ನೀಡಿದ ಕಾರಣ ಹೀಗಿದೆ: “ಇವರು ವಾಸ್ತವ ನೆಲೆಗಟ್ಟು ಸಾರ್ವಕಾಲಿಕವಾದುದು ಎಂಬುದನ್ನು ಒಪ್ಪುವುದಿಲ್ಲ. ಸಾಂಸ್ಕೃತಿಕ ವೈರುದ್ಧ್ಯಗಳ ನಡುವಿನ ಸಂಘರ್ಷವನ್ನು ತನ್ನ ಕಾದಂಬರಿಗಳಲ್ಲಿ ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಉದಾಹರಣೆಗೆ, ಪ್ರಕೃತಿ ಮತ್ತು ಸಂಸ್ಕೃತಿ; ತರ್ಕ ಮತ್ತು ಮೌಢ್ಯ; ಪುರುಷ ಮತ್ತು ಮಹಿಳೆ; ದೇಶೀ ಮತ್ತು ಪರಕೀಯತೆ ಇತ್ಯಾದಿ ವೈರುದ್ಧ್ಯಗಳನ್ನ ಸೂಕ್ಷ್ಮವಾಗಿ ಬಿಡಿಸುತ್ತಾರೆ”.

ಗಡಿ ದಾಟಿ ಹೋದವರ ಬದುಕಿನ ಹಂದರವನ್ನು ಇವರು ತಮ್ಮ ಅನೇಕ ಸಾಹಿತ್ಯಗಳಲ್ಲಿ ಬಹಳ ಸಂವೇದನಶೀಲತೆಯಿಂದ ಅನಾವರಣಗೊಳಿಸಿದ್ದಾರೆ. ಇವರ ಅನೇಕ ಸಾಹಿತ್ಯಗಳಿಗೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

(ಎಎಫ್​ಪಿ ಸುದ್ದಿ ಸಂಸ್ಥೆ ವರದಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 10, 2019, 7:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading