Ghost News: ದೆವ್ವಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್: ಹೆಣ್ಣಿನ ಆತ್ಮ ಕಾಡಿದ್ದು ನಿಜನಾ?

Ghost News: ತಮಿಳುನಾಡಿ(Tamil nadu)ನಲ್ಲಿ ಪೊಲೀಸ್​(Police) ಅಧಿಕಾರಿಯೊಬ್ಬರು ದೆವ್ವಕ್ಕೆ ಹೆದರಿ(Scared) ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. ಕೇಳಲು ವಿಚಿತ್ರ ಅನಿಸಿದರು ಇದು ಸತ್ಯ. ದೆವ್ವದ ಕಾಟಕ್ಕೆ ಹೆದರಿ ಪೊಲೀಸ್​​ ಅಧಿಕಾರಿಯೊಬ್ಬರು ಸೂಸೈಡ್​ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​

ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​

  • Share this:
ಈ ಪ್ರಪಂಚದಲ್ಲಿ ಭೂತ(Demons), ಪ್ರೇತ(Ghosts), ಆತ್ಮಗಳು(Spirits) ಇದೆಯಾ ಎಂಬುದಕ್ಕೆ ಸ್ಟಷ್ಟ ಉತ್ತರ ಸಿಕ್ಕಿಲ್ಲ. ಅನೇಕರು ದೆವ್ವ ಇರೋದು ನಿಜ ಅಂದರೆ, ಮತ್ತೆ ಕೆಲವರು ಅದರ ಅನುಭವವಾಗಿದೆ. ಇತಂಹ ವಿಡಿಯೋಗಳು, ಸುದ್ದಿಗಳು ವೈರಲ್​(Viral) ಆಗುತ್ತಲೆ ಇರುತ್ತವೆ. ಆದರೆ ಇವೆಲ್ಲವನ್ನು ನಂಬಲು ಸಾಧ್ಯವಿಲ್ಲ. ದೇವರು(God) ಇರುವುದು ಎಷ್ಟು ಸತ್ಯನೋ, ದೆವ್ವಗಳು ಇರುವುದು ಅಷ್ಟೇ ಸತ್ಯ ಎಂದು ಹೇಳುತ್ತಾರೆ. ಕೆಲವೊಂದು ಊಹೆ ಮಾಡಿಕೊಳ್ಳದ ಘಟನೆಗಳು ನೋಡಿದರೆ ದೆವ್ವ ಇರುವುದು ಸತ್ಯ ಎನ್ನಿಸುತ್ತದೆ. ಹಲವು ವರ್ಷಗಳ ಹಿಂದೆ ಬೆಂಗಳೂರು ಹೊರವಲಯದ ದೊಡ್ಡ ಆಲದ ಮರ(Large Banyan Tree)ದ ಬಳಿ ದೆವ್ವವಿದೆ ಎಂದು ಸುದ್ದಿಯಾಗಿತ್ತು. ವ್ಯಕ್ತಿಯೊಬ್ಬ ಮರದ ಪಕ್ಕ ಫೋಟೋ(Photo) ತೆಗೆಸಿಕೊಳ್ಳಬೇಕಾದರೆ ಪಕದಲ್ಲಿ ಬಿಳಿಯ ಆಕೃತಿಯೊಂದು ಸೆರೆಯಾಗಿತ್ತು. ಇದು ಸುಳ್ಳು ಎಂದು ಸಾಭೀತಾಗಿತ್ತು. ಆದರೆ ಮನುಷ್ಯನನ್ನು ಈ ದೆವ್ವಗಳ ವಿಚಾರ ಭಯ ಬೀಳಿಸುವಷ್ಟು ಮತ್ತೊಂದು ವಿಚಾರ ಇಲ್ಲ ನೋಡಿ. ಅದು ಎಷ್ಟರ ಮಟ್ಟಿಗೆ ಅಂದರೆ ತಮಿಳುನಾಡಿ(Tamil nadu)ನಲ್ಲಿ ಪೊಲೀಸ್​(Police) ಅಧಿಕಾರಿಯೊಬ್ಬರು ದೆವ್ವಕ್ಕೆ ಹೆದರಿ(Scared) ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. ಕೇಳಲು ವಿಚಿತ್ರ ಅನಿಸಿದರು ಇದು ಸತ್ಯ. ದೆವ್ವದ ಕಾಟಕ್ಕೆ ಹೆದರಿ ಪೊಲೀಸ್​​ ಅಧಿಕಾರಿಯೊಬ್ಬರು ಸೂಸೈಡ್​ ಮಾಡಿಕೊಂಡಿದ್ದಾರೆ. 

ಭೂತಕ್ಕೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ಭೂತಕ್ಕೆ ಹೆದರಿ ತಮ್ಮ ಕ್ವಾರ್ಟರ್ಸ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಲಕುರಿಚಿ ಜಿಲ್ಲೆಯ ಪೆರುಂಬಕ್ಕಂ ಪ್ರದೇಶದವರಾದ ಪ್ರಭಾಕರನ್ (33) ಅವರು ತಮ್ಮ ಪೊಲೀಸ್ ಕ್ವಾರ್ಟರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಡಲೂರು ಸಶಸ್ತ್ರ ಪೊಲೀಸ್‌ನಲ್ಲಿ ಮೊದಲ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿದ ಪ್ರಭಾಕರನ್ ವಿಷ್ಣುಪ್ರಿಯಾ ಅವರನ್ನು ಮದುವೆಯಾಗಿದ್ದರು ಮತ್ತು ಒಬ್ಬ ಮಗ ಮತ್ತು ಮಗಳನ್ನು ಹೊಂದಿದ್ದರು. ಪ್ರಭಾಕರನ್ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ  ಕೂಡ ಪಡೆಯುತ್ತಿದ್ದರು.

ಮಹಿಳೆಯೊಬ್ಬರು ಕತ್ತು ಹಿಸುಕುವ ಕನಸು!

ಕಡಲೂರಿನ ಸಶಸ್ತ್ರ ಪೊಲೀಸ್ ಠಾಣೆಯ ಕ್ವಾರ್ಟರ್ಸ್ ನಲ್ಲಿ ಕುಟುಂಬ ವಾಸವಾಗಿತ್ತು. ಇತ್ತೀಚೆಗೆ, ಪ್ರಭಾಕರನ್ ಅವರು ಕನಸಿನಲ್ಲಿ ಬೆಂಕಿಯಲ್ಲಿ ಸುಟ್ಟ ಮಹಿಳೆಯೊಬ್ಬರು ಕತ್ತು ಹಿಸುಕಲು ಪ್ರಯತ್ನಿಸುತ್ತಿರುವುದನ್ನು ನೋಡುತ್ತಿರುವುದಾಗಿ ಹೇಳಿಕೊಂಡಿದ್ದರಂತೆ. ಪ್ರತಿ ದಿನ ಮಹಿಳೆ ಬಂದು  ನನ್ನನ್ನು ಸಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪ್ರಬಾಕರನ್​ ಹೇಳಿಕೊಂಡಿದ್ದರು. ಪ್ರಭಾಕರನ್ ಕೂಡ ಭವಿಷ್ಯ ಹೇಳುವವರನ್ನು ಸಂಪರ್ಕಿಸಿ ಅವರ ಸಹಾಯ ಕೇಳಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : ನಾಲ್ಕು ಕಿವಿಗಳ ಬೆಕ್ಕನ್ನು ಎಂದಾದರೂ ಕಂಡಿದ್ದೀರಾ? ಇಲ್ಲಿದೆ ನೋಡಿ!

ಪೂಜಾ ಕೊಠಡಿಯಲ್ಲೇ ಇದ್ದ ಪ್ರಭಾಕರನ್​!

15 ದಿನಗಳ ಕಾಲ ಅನಾರೋಗ್ಯ ರಜೆ ಪಡೆದು ಮನೆಯ ಪೂಜಾ ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದರು. ಅವರು ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಮೇಲ್ಪಟ್ಟಾಂಬಕ್ಕಂನಲ್ಲಿ ಸಂಬಂಧಿಕರ ಸಮಾರಂಭದಲ್ಲಿ ಭಾಗವಹಿಸಲು ಕಳುಹಿಸಿದರು. ಅವರ ಪತ್ನಿ ಮನೆಗೆ ಹಿಂತಿರುಗಿದಾಗ ಪ್ರಭಾಕರನ್ ಸೀಲಿಂಗ್‌ಗೆ ನೇಣು ಬಿಗಿದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಕೂಡ್ಲೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ :ಬಾಗಿಲು ತೆಗೆದರೆ ಮೈಮೇಲೇ ಹಾರುತ್ತೆ ದೈತ್ಯ ಜೇಡ, ಗಾಬರಿಬಿದ್ದು ಓಡಿ ಹೋಗ್ತಿದ್ದಾರೆ ಜನ!

ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದ ಮಹಿಳೆ!

ಪ್ರೇತ ಭಯದಿಂದ ಪ್ರಭಾಕರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಡಲೂರು ಹೊಸನಗರ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಭಾಕರನ್ ಅವರು ಯಾವಾಗಲು ದೆವ್ವ ಕಾಟದ ಬಗ್ಗೆ ನಮಗೆ ಹೇಳುತ್ತಿದ್ದರು ಎಂದು ಅವರ ಆಪ್ತ ಸಹೋದ್ಯೋಗಿಗಳು ಹೇಳಿದ್ದಾರೆ. ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ, ಈ ಪ್ರದೇಶದಲ್ಲಿನ ಸಶಸ್ತ್ರ ಪಡೆಗಳ ಕ್ವಾರ್ಟರ್ಸ್‌ನಲ್ಲಿ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಈ ಮಹಿಳೆಯೆ ಪ್ರಭಾಕರನ್​ ಅವರಿಗೆ ಕಾಟ ಕೊಡುತ್ತಿತ್ತು ಅಂತ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
Published by:Vasudeva M
First published: