Viral News: ರಸ್ತೆಯಲ್ಲಿ ಓಡಾಡುವವರನ್ನು ಅಡ್ಡ ಹಾಕಿ WhatsApp chat ಚೆಕ್ ಮಾಡ್ತಿದಾರೆ ಪೊಲೀಸ್, ಡ್ರಗ್ಸ್ ಪದ ಇದ್ರೆ ಮುಗೀತು ಕತೆ!

Viral News: ಆಟೋ , ಬೈಕ್ ಗಳಲ್ಲಿ ಸಂಚಾರ ಮಾಡುತ್ತಿರುವ ವಾಹನ ಸವಾರರನ್ನು ನಡುರಸ್ತೆಯಲ್ಲಿ ತಡೆದು ನಿಲ್ಲಿಸುತ್ತಿದ್ದಾರೆ.  ಮಾದಕ ವಸ್ತು ನಿಯಂತ್ರಣಕ್ಕಾಗಿ ಸವಾರರ ಫೋನ್ ಪರಿಶೀಲನೆ ನಡೆಸುತ್ತಿದ್ದಾರೆ.

ಸವಾರರನ್ನು ತಡೆದು ಪೊಲೀಸರಿಂದ ಫೋನ್​ ತಪಾಸಣೆ

ಸವಾರರನ್ನು ತಡೆದು ಪೊಲೀಸರಿಂದ ಫೋನ್​ ತಪಾಸಣೆ

  • Share this:
ಸದ್ಯ ಮಾದಕ ವಸ್ತು ಬಳಕೆ ವಿಚಾರ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಡ್ರಗ್​​  ಡೀಲರ್ಸ್(Drug Dealers)​ ಹಾಗೂ ವ್ಯಸನಿಗಳ ಮಧ್ಯೆ ಮಾದಕ ವಸ್ತು ಸೇವನೆ ಬಗ್ಗೆ ವಾಟ್ಸ್​ಆ್ಯಪ್​​(Whatsapp)ಗಳಲ್ಲಿ ಚಾಟ್(Chat) ನಡೆಯುತ್ತಿವೆ ಎನ್ನುವ ಸುದ್ದಿಗಳು ಸಹ ಸಾಕಷ್ಟು ಬಿತ್ತರವಾಗುತ್ತಿವೆ. ಇದರ ನಡುವೆಯೇ ಮಾದಕ ವಸ್ತು ನಿಯಂತ್ರಣ ಸಂಸ್ಥೆ ದೇಶದ ನಾನಾ ಭಾಗಗಳಲ್ಲಿ ದಾಳಿ ನಡೆಸಿ, ಬೃಹತ್ ಡ್ರಗ್ಸ್ ಜಾಲಗಳನ್ನು ಬೇಧಿಸುವಲ್ಲಿ ತೊಡಗಿಕೊಂಡಿದೆ. ಹೀಗಿರುವಾಗಲೇ ಹೈದರಾಬಾದ್(Hyderabad) ಪೊಲೀಸರು(Police) ಮಾದಕವಸ್ತು ನಿಯಂತ್ರಣಕ್ಕೆ ಕಡಿವಾಣ ಹಾಕಲು ತೆಗೆದುಕೊಂಡಿರುವ ಕ್ರಮ(Action)ಗಳ ಬಗ್ಗೆ ಸೋಶಿಯಲ್ ಮೀಡಿಯಾ(Social Media)ದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ. ಡ್ರಗ್ಸ್​ ಕಂಟ್ರೋಲ್​ ಮಾಡುತ್ತೇವೆ ಎಂದು ಹೀಗಾ ಮಾಡುವುದು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. 

ವಾಹನ ಸವಾರರ ತಡೆದು ಚಾಟ್ ಪರಿಶೀಲನೆ

ಹೈದರಾಬಾದ್ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾಗೆ ಡ್ರಗ್ಸ್ ಗಳನ್ನು ಪಾರ್ಸೆಲ್ ಕಳಿಸುತ್ತಿರುವ ವಿಷಯ ತಿಳಿದ NCB ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧನ ಮಾಡಿದ್ರು. ಇದರ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಮಾದಕವಸ್ತು ನಿಯಂತ್ರಣ ಮಾಡಲು, ವಾಹನ ಸವಾರರ ತಪಾಸಣೆಗೆ ಮುಂದಾಗಿದ್ದಾರೆ. ಆಟೋ , ಬೈಕ್ ಗಳಲ್ಲಿ ಸಂಚಾರ ಮಾಡುತ್ತಿರುವ ವಾಹನ ಸವಾರರನ್ನು ನಡುರಸ್ತೆಯಲ್ಲಿ ತಡೆದು ನಿಲ್ಲಿಸುತ್ತಿದ್ದಾರೆ.  ಮಾದಕ ವಸ್ತು ನಿಯಂತ್ರಣಕ್ಕಾಗಿ ಸವಾರರ ಫೋನ್ ಪರಿಶೀಲನೆ ನಡೆಸುತ್ತಿದ್ದಾರೆ. ಫೋನ್ ಚಾಟ್​ನಲ್ಲಿ ಡ್ರಗ್ಸ್ ವ್ಯವಹಾರದ ಕುರಿತು ವಾಹನ ಸವಾರರು ಸಂಭಾಷಣೆ ನಡೆಸಿದ್ದಾರಾ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


ಇದನ್ನು ಓದಿ :ನಾನು ಯಾರಿಗೂ ಡ್ರಗ್ಸ್​ ಪೂರೈಕೆ ಮಾಡಿಲ್ಲ; ಆರೋಪ ನಿರಾಕರಿಸಿದ ನಟಿ ಅನನ್ಯಾ ಪಾಂಡೆ

ಡ್ರಗ್ಸ್ ವಿರುದ್ಧ ಹೈದರಾಬಾದ್ ಪೊಲೀಸರ ಅಭಿಯಾನ

ಹೈದರಾಬಾದ್ ದಕ್ಷಿಣ ವಲಯ ಡಿಸಿಪಿ ಗಜರಾವ್ ಭೂಪಾಲ್ ಪ್ರಕಾರ, ಬಹದ್ದೂರ್‌ಪುರ ಪೊಲೀಸ್ ವ್ಯಾಪ್ತಿಯ ಅಸದ್ಬಾಬಾ ನಗರ ಪ್ರದೇಶದಲ್ಲಿ, 100 ಕ್ಕೂ ಹೆಚ್ಚು ಪೊಲೀಸರು ಮಾದಕ ವಸ್ತು ತಪಾಸಣೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಈವರೆಗೂ 58 ವಾಹನಗಳ ಸವಾರರ ಮೊಬೈಲ್ ಚಾಟ್​​ಗಳನ್ನು ಪರಿಶೀಲನೆ ನಡೆಸಲಾಗಿದೆ. ಅಲ್ಲದೇ ಹತ್ತಕ್ಕೂ ಅಧಿಕ ರೌಡಿಶೀಟರ್​ಗಳನ್ನು ವಶಕ್ಕೆ ಪಡೆದುಕೊಂಡು ಅಪರಾಧ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರಿಕೆಯನ್ನು ನೀಡಲಾಗಿದೆಯಂತೆ. ಇನ್ನು ಕಳೆದ ಎರಡು ತಿಂಗಳಿನಿಂದ ನಾವು ಹೈದರಾಬಾದ್ ಕಮಿಷನರೇಟ್‌ನಲ್ಲಿ ಡ್ರಗ್ಸ್, ಗಾಂಜಾ ವಿರುದ್ಧ ವಿಶೇಷ ಅಭಿಯಾನ ನಡೆಸುತ್ತಿದ್ದೇವೆ ಇದು ನಿಯಮ ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದು ದಕ್ಷಿಣ ವಲಯ ಡಿಸಿಪಿ ಗಜರಾವ್ ಭೂಪಾಲ್ ತಿಳಿಸಿದ್ದಾರೆ.

ಇದನ್ನು ಓದಿ : ಯೂಟ್ಯೂಬ್ ನೋಡಿ ಸ್ವತಃ ತಾನೇ ಹೆರಿಗೆ ಮಾಡಿಕೊಂಡ ಕೇರಳದ ಅಪ್ರಾಪ್ತೆ..!

ಹೈದರಾಬಾದ್ ಪೊಲೀಸರ ನಡೆಗೆ ವ್ಯಾಪಕ ವಿರೋಧ

ಮಾದಕ ವಸ್ತುಗಳ ಬಳಕೆ ನಿಯಂತ್ರಣ ಮಾಡಲು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿದೆ. ಮಾದಕವಸ್ತು ವ್ಯಾಪಾರದ ಜಾಲದಲ್ಲಿ ತೊಡಗಿಕೊಂಡಿರುವವರನ್ನ, ಹಿಡಿದು ಪತ್ತೆಹಚ್ಚುವ ಕೆಲಸಮಾಡಬೇಕಾದ ಪೊಲೀಸರು, ಅಮಾಯಕ ಆಟೋ ಹಾಗೂ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ತಡೆಯುತ್ತಿದ್ದಾರೆ. ಬಳಿವ ಅವರ ಚಾಟ್ ಗಳನ್ನು ಪರಿಶೀಲನೆ ನಡೆಸುತ್ತಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಬಳಕೆದಾರರೊಬ್ಬರು ಬ್ಯಾಂಕ್ ದರೋಡೆ ಅಥವಾ ಹಣಕಾಸು ವಂಚನೆಗಳ ಸಂದರ್ಭದಲ್ಲಿ, ಹೈದರಾಬಾದ್ ಪೊಲೀಸರು ಪ್ರಯಾಣಿಕರನ್ನು ನಿಲ್ಲಿಸಿ ನಿಮ್ಮ ಬಳಿ ಎಷ್ಟು ಕರೆನ್ಸಿ ನೋಟುಗಳು, ಚಿಲ್ಲರ್, ಕ್ರೆಡಿಟ್ ಕಾರ್ಡ್‌ಗಳು ಇವೆ ಎಂದು ಪರಿಶೀಲನೆ ನಡೆಸುವ ಸಂದರ್ಭ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದ ಕಮಿಷನರ್

ವಾಹನ ಸವಾರರ ವಾಹನ ತಡೆದು, ಫೋನ್ ಗಳನ್ನು ವಶಕ್ಕೆ ಪಡೆದುಕೊಂಡು ಡ್ರಗ್ಸ್ ಪದ ಹುಡುಕಾಟ ನಡೆಸುತ್ತಿರುವ ಹೈದ್ರಾಬಾದ್ ಪೊಲೀಸರ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಿದ್ದರೂ ಸಹ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ, ವಿಡಿಯೋ ನೋಡಿ ಪರಿಶೀಲನೆ ನಡೆಸುವುದಾಗಿ ಹೈದರಾಬಾದ್ ಪೊಲೀಸ್ ಕಮಿಷನರ್ ಅಂಜಿನಿ ಕುಮಾರ್ ಹೇಳಿದ್ದಾರೆ.
Published by:Vasudeva M
First published: