ಬಸ್​ನಲ್ಲಿ ಸತ್ತವನನ್ನು ಕೆಳಗಿಳಿಸಿ ಹೊರಟರು; ಸಹಾಯಕ್ಕೆ ಬಂದ ಪೊಲೀಸರಿಗೆ ಶಹಬ್ಬಾಸ್​ಗಿರಿ

news18
Updated:January 12, 2018, 10:52 AM IST
ಬಸ್​ನಲ್ಲಿ ಸತ್ತವನನ್ನು ಕೆಳಗಿಳಿಸಿ ಹೊರಟರು; ಸಹಾಯಕ್ಕೆ ಬಂದ ಪೊಲೀಸರಿಗೆ ಶಹಬ್ಬಾಸ್​ಗಿರಿ
ತಮಿಳುನಾಡಿನ ಶೂಲಗಿರಿಯಲ್ಲಿ ಸೋದರ ವೀರನ್​ನ ಶವದೊಂದಿಗೆ ರಾಧಾಕೃಷ್ಣ.
news18
Updated: January 12, 2018, 10:52 AM IST
ಆನೇಕಲ್(ಜ. 12): ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೃತಪಟ್ಟ ವ್ಯಕ್ತಿಯೊಬ್ಬನ ದೇಹವನ್ನು ದಾರಿಮಧ್ಯೆದಲ್ಲೇ ಕೆಳಗಿಳಿಸಿ ಕಳುಹಿಸಿದ ಘಟನೆ ವರದಿಯಾಗಿದೆ. ಬಸ್ ಕಂಡಕ್ಟರ್ ತೋರಿದ ಈ ಅಮಾನವೀಯ ವರ್ತನೆಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ವಿರುಪ್ಪುರಂ ಜಿಲ್ಲೆ ಮೂಲದ ವೀರನ್ ಎಂಬುವವರೇ ಮತಪಟ್ಟ ವ್ಯಕ್ತಿ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೀರನ್ ಹಾಗೂ ಅವರ ಸಹೋದರ ರಾಧಾಕೃಷ್ಣ ಇಬ್ಬರೂ ತಮ್ಮ ಊರಾದ ವಿರುಪ್ಪುರಂನ ತಿರುಕ್ಕೋವಿಲೂರು ಗ್ರಾಮಕ್ಕೆ ಹೋಗಲು ತಿರುವಣ್ಣಾಮಲೈ ಮರ್ಗದ ಬಸ್ ಹಿಡಿಯುತ್ತಾರೆ. ಆದರೆ, ತಮಿಳುನಾಡು ಸಾರಿಗೆ ಸಂಸ್ಥೆಯ ಆ ಬಸ್ಸು ಹೊಸೂರು ಸಮೀಪದ ಶೂಲಗಿರಿ ತಲುಪುತ್ತಿರುವಂತೆಯೇ ವೀರನ್ ಅವರು ಅನಾರೋಗ್ಯದಿಂದ ಬಸ್​ನಲ್ಲೇ ಮೃತಪಡುತ್ತಾರೆ. ಬಸ್​ನ ಕಂಡಕ್ಟರ್ ಯಾವುದೇ ಮುಲಾಜಿಲ್ಲದೇ, ಮಾನವೀಯತೆ ಇಲ್ಲದೇ ವೀರನ್​ರ ಮೃತದೇಹ ಹಾಗೂ ಅವರ ಸಹೋದರ ರಾಧಾಕೃಷ್ಣರನ್ನು ಶೂಲಗಿರಿಯಲ್ಲೇ ಕೆಳಗಿಳಿಸಿಬಿಡುತ್ತಾರೆ. ಕೂಲಿ ಕಾರ್ಮಿಕರಾದ ರಾಧಾಕೃಷ್ಣ ಬಳಿ ಊರಿಗೆ ತೆರಳಲು ಹಣವೂ ಇಲ್ಲದ ಸ್ಥಿತಿಯಲ್ಲಿರುತ್ತಾರೆ.

ರಸ್ತೆ ಮಧ್ಯದಲ್ಲಿ ತನ್ನ ಸೋದರನ ಶವದೊಂದಿಗೆ ದಿಕ್ಕುತೋಚದೇ ನಿಂತಿದ್ದ ರಾಧಾಕೃಷ್ಣಗೆ ಶೂಲಗಿರಿಯ ಪೊಲೀಸರು ನೆರವಿಗೆ ಬರುತ್ತಾರೆ. ತಮಿಳುನಾಡಿನ ಈ ಪೊಲೀಸರು 9 ಸಾವಿರ ರೂಪಾಯಿ ಹಣ ನೀಡಿ ಆ್ಯಂಬುಲೆನ್ಸ್ ಮೂಕ ಮೃತದೇಹವನ್ನು ವಿರುಪ್ಪುರಂನ ತಿರುಕ್ಕೋವಿಲೂರು ಗ್ರಾಮಕ್ಕೆ ಸಾಗಿಲು ನೆರವಾಗುತ್ತಾರೆ. ಪೊಲೀಸರ ಈ ಮಾನವೀಯತೆಯ ಕ್ರಮವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
First published:January 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ